Subscribe to Gizbot

ವಿಶ್ವ ಅಂತ್ಯವಾದಾಗ ಹೀಗೆಲ್ಲಾ ಸಂಭವಿಸುತ್ತದಂತೆ!

Written By:

ನಮ್ಮ ವಿಶ್ವವು ಎಂದಾದರೂ ಒಂದು ದಿನ ಅಂತ್ಯ ಕಾಣುತ್ತದೆ. ಆದರೆ ಭೂಮಿಯ ಅಂತ್ಯವಾಗುತ್ತಿದ್ದಂತೆ ಕೆಲವೊಂದು ವಿಚಿತ್ರ ಘಟನೆಗಳು ನಡೆಯುವ ಸಾಧ್ಯತೆ ಇರುತ್ತದೆ. ನಕ್ಷತ್ರಗಳು ಕಾಣದಿರುವುದು, ಸೂರ್ಯನು ಕಪ್ಪಾಗಿ ಕಾಣುವುದು, ವಿಚಿತ್ರ ನಕ್ಷತ್ರಗಳು, ನ್ಯೂಕ್ಲಿಯನ್ಸ್ ಕ್ಷಯ, ವಿಶ್ವವನ್ನು ಆಳಲಿರುವ ಕಪ್ಪು ರಂಧ್ರಗಳು ಹೀಗೆ ವಿಶ್ವದ ಅಂತ್ಯದೊಂದಿಗೆ ಹೊಸ ಹೊಸ ಬದಲಾವಣೆಗಳಿಗೆ ಕಾರಣವಾಗಲಿವೆ.

ಇದನ್ನೂ ಓದಿರಿ: ವಿಜ್ಞಾನದ ಮಾತು: ಸಿನಿಮಾಗಳಲ್ಲಿ ತೋರಿಸುವುದೆಲ್ಲಾ ನಿಜವಲ್ಲವಂತೆ!

ಇಂದಿನ ಲೇಖನದಲ್ಲಿ ಇಂತಹುದೇ ಕೆಲವೊಂದು ಅಂಶಗಳನ್ನು ನಾವು ನಿಮ್ಮ ಮುಂದೆ ಪ್ರಸ್ತುತಪಡಿಸಲಿದ್ದು ಕೆಳಗಿನ ಸ್ಲೈಡರ್ ಈ ಅಂಶಗಳನ್ನು ವಿಶದವಾಗಿ ವಿವರಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭೂಮಿಯಿಂದ ನಕ್ಷತ್ರಗಳ ಕಣ್ಮರೆ

#1

150 ಬಿಲಿಯನ್ ವರ್ಷಗಳಲ್ಲಿ, ಭೂಮಿಯಿಂದ ರಾತ್ರಿಯ ಆಗಸ ವಿಭಿನ್ನವಾಗಿ ಕಾಣಲಿದೆ. ವಿಶ್ವವು ಅಂತ್ಯಗೊಳ್ಳುತ್ತಿದ್ದಂತೆ, ಬೆಳಕಿಗಿಂತಲೂ ಅತಿ ವೇಗದಲ್ಲಿ ಬಾಹ್ಯಾಕಾಶವು ವೇಗವಾಗಿ ವಿಸ್ತಾರಗೊಳ್ಳುತ್ತದೆ. ಬಾಹ್ಯಾಕಾಶ ವಿಶಾಲಗೊಳ್ಳುತ್ತಿದ್ದಂತೆ ಕಾಸ್ಮೊಲೊಜಿಕಲ್ ಹಾರಿಜನ್ ಅಸ್ತಿತ್ವಕ್ಕೆ ಬರುತ್ತದೆ. ಈ ವಾತಾವರಣದಲ್ಲಿರುವ ನಕ್ಷತ್ರಗಳನ್ನು ಮಾತ್ರವೇ ನಿಮಗೆ 150 ಬಿಲಿಯನ್ ವರ್ಷಗಳಲ್ಲಿ ಕಾಣಬಹುದಾಗಿದೆ.

ಸೂರ್ಯನು ಕಪ್ಪು ಕುಬ್ಜತಾರರೆಯಾಗುತ್ತಾನೆ

#2

ನಮ್ಮ ವಿಶ್ವವು ವಿವಿಧ ಬಗೆಯ ನಕ್ಷತ್ರಗಳನ್ನು ಹೊಂದಿದೆ. ಕೆಂಪು ಕುಬ್ಜ ತಂಪಾದ ನಕ್ಷತ್ರಗಳು ಇದು ಕೆಂಪು ಬೆಳಕನ್ನು ಬೀರುತ್ತವೆ ಇದೆಲ್ಲವೂ ಹೆಚ್ಚು ಸಾಮಾನ್ಯ ಎಂದೆನಿಸಿದೆ. ಶ್ವೇತ ಕುಬ್ಜಗಳೂ ವಿಶ್ವವನ್ನು ಆವರಿಸಿಕೊಂಡಿವೆ. ಮೃತ ನಕ್ಷತ್ರಗಳ ನಾಕ್ಷತ್ರಿಕ ಅವಶೇಷಗಳು ಇವುಗಳಾಗಿದ್ದು ಕ್ವಾಂಟಮ್ ಪ್ರಭಾವಗಳು ಒಟ್ಟುಗೂಡಿ ಮಾಡಿದ ಅವನತಿ ಎಂದೇ ಇದನ್ನು ಕರೆಯಲಾಗಿದೆ.

ವಿಚಿತ್ರ ನಕ್ಷತ್ರಗಳು

#3

ಸೂರ್ಯನು ಕಪ್ಪು ಕುಬ್ಜ ತಾರೆಯಾಗಿ ಮಾರ್ಪಡುವಾಗ ನಾಕ್ಷತ್ರಿಕ ವಿಕಸನ ಅಂತ್ಯವಾಗುತ್ತದೆ. ಯಾವುದೇ ಹೊಸ ನಕ್ಷತ್ರಗಳು ರಚನೆಯಾಗುವುದಿಲ್ಲ. ಬ್ರಹ್ಮಾಂಡವು ನಕ್ಷತ್ರಗಳ ಶೀತ ಅವಶೇಷಗಳಿಂದ ಭರ್ತಿಗೊಳ್ಳುತ್ತವೆ. ಇದು ಕೆಲವೊಂದು ಅಸಂಬದ್ಧ ನಕ್ಷತ್ರಗಳ ಅಭಿವೃದ್ಧಿಯ ಆರಂಭಕ್ಕೆ ಅನುಮತಿಯನ್ನು ನೀಡುತ್ತದೆ.

ನ್ಯೂಕ್ಲಿಯನ್ಸ್ ಕ್ಷಯ

#4

ಪ್ರೋಟಾನ್ ಕ್ಷಯವು ಬ್ರಹ್ಮಾಂಡದ ಅಂತ್ಯದಲ್ಲಿ ಉಂಟಾಗುತ್ತದೆ. ಮುಕ್ತ ನ್ಯೂಟ್ರನ್‌ಗಳು 10 ನಿಮಿಷಗಳ ಅವಧಿಯಲ್ಲಿ ಕ್ಷಯಗೊಳ್ಳುತ್ತವೆ.

ಬ್ರಹ್ಮಾಂಡವನ್ನು ಆಳಲಿರುವ ಕಪ್ಪು ಕುಳಿಗಳು

#5

ನ್ಯೂಕ್ಲನ್ಸ್ ಮರೆಯಾದಂತೆ, ಕಪ್ಪು ಕುಳಿಗಳು 1040 ವರ್ಷಗಳಿಂದ ವಿಶ್ವವನ್ನು ಆಳಲು ಆರಂಭಿಸುತ್ತವೆ. ಕಾಲ ಕ್ರಮದಲ್ಲಿ ಇವುಗಳೂ ನಶಿಸಿ ಹೋಗುತ್ತವೆ ಎಂಬುದು ಸ್ಟೀವನ್ ಹಾಕಿಂಗ್ ಸಾಧಿಸಿರುವ ಅಂಶವಾಗಿದೆ.

ಆಟಮ್ ರಚನೆ

#6

ನಮ್ಮ ಬ್ರಹ್ಮಾಂಡವು ಚದುರಿದ ಉಪಪರಮಾಣು ಕಣಗಳಾಗಿ ಮಾರ್ಪಟ್ಟ ನಂತರ, ಇದರ ಬಗ್ಗೆ ಸಾಕಷ್ಟು ಮಾತನಾಡಲು ನಮಗೆ ಸಾಧ್ಯವಿಲ್ಲ. ಆದರೆ ಜೀವನವು ಅತ್ಯಂತ ಸಾಧ್ಯತೆ ಸ್ಥಳಗಳಲ್ಲಿ ಹೊರಬರಬಹುದು.

ಪ್ರತಿಯೊಂದು ಸಂಭವಿಸುತ್ತದೆ

#7

ಕಪ್ಪು ಕುಳಿಯ ಯುಗವು ಅಂತ್ಯವಾಗುತ್ತಿದ್ದಂತೆ ಕೆಲವೇ ಕೆಲವು ಅಂಶಗಳು ಈ ವಿಶ್ವದಲ್ಲಿ ಉಳಿಯುತ್ತವೆ. ಮುಖ್ಯವಾಗಿ ಉಪಪರಮಾಣು ಕಣಗಳು ಮತ್ತು ಉಳಿದ ಪಾಸಿಟ್ರೋನಿಯಮ್ ಪರಮಾಣುಗಳು ಪ್ರಸರಿಸುತ್ತವೆ.

ಮ್ಯಾಕ್ರೊ ಫಿಸಿಕ್ಸ್‌ಗಳಿಲ್ಲ

#8

ಈ ಸಮಯದಲ್ಲಿ ಬ್ರಹ್ಮಾಂಡವು ಗರಿಷ್ಟ ಜಡೋಷ್ಣ ಸ್ಥಿತಿಯನ್ನು ತಲುಪಿದಾಗ ಇದು ಶಕ್ತಿಯ ಮತ್ತು ಉಪಪರಮಾಣು ಕಣಗಳ ಸ್ಥಿತಿಯನ್ನು ತಲುಪುತ್ತವೆ. ಇದರ ನಂತರ ಕಪ್ಪಉ ಕುಳಿ ಯುಗ ಆರಂಭಗೊಳ್ಳುತ್ತದೆ. ನಕ್ಷತ್ರಗಳು ಈ ಸಮಯದಲ್ಲಿ ರಚನೆಯಾಗುವುದಿಲ್ಲ.

ಊಹೆಗೂ ನಿಲುಕದ್ದು ಸಂಭವಿಸಬಹುದು

#9

ಇದುವರೆಗೆ ವಿಶ್ವದ ಅಂತ್ಯಕ್ಕೆ ನಮ್ಮ ಪ್ರಯಾಣವು ಉತ್ಸಾಹವಿಲ್ಲದ ಮತ್ತು ಖಿನ್ನತೆ ಘಟನೆಗಳ ಸರಣಿಯಾಗಿರುತ್ತವೆ. ಬ್ರಹ್ಮಾಂಡವು ಒಮ್ಮೆ ಕೊನೆಯಾಗಿ ನಂತರ ಹೊಸ ಯುಗದ ಆರಂಭ ಇಲ್ಲಿ ಉಂಟಾಗುತ್ತದೆ ಎಂಬುದು ಪರಿಣಿತರ ಮಾತಾಗಿದೆ.

ಯಾದೃಚ್ಛಿಕ ಕ್ವಾಂಟಮ್ ಟ್ಯೂನಲಿಂಗ್ ಆರಂಭವಾಗಬಹುದು

#10

ಸಾಕಷ್ಟು ಹೆಚ್ಚಿನ ಸಮಯದಲ್ಲಿ, ವಿಶ್ವವು ನಿಷ್ಕ್ರಿಯಗೊಳ್ಳುತ್ತದೆ. ಅದರೆ ಕಾಣಸಿಗುವ ಜೀವನಕ್ಕೆ ಅವಕಾಶವಿದೆ. ನಿಷೇಧಿತ ಶಕ್ತಿ ಸ್ಥಿತಿಯಾಗಿ ಇದು ಮಾರ್ಪಡುತ್ತದೆ. ನಕ್ಷತ್ರಗಳಲ್ಲಿ ಈ ಪ್ರಕ್ರಿಯೆ ಈಗಾಗಲೇ ಸಂಭವಿಸಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಈ ವಿಷಯಗಳನ್ನು ಗೂಗಲ್ ಮಾಡಲು ನಿಮಗೆ ಗಟ್ಟಿ ಗುಂಡಿಗೆ ಬೇಕು!
ಪ್ರಪಂಚದ ಟಾಪ್‌ 10 ಅಪಾಯಕಾರಿ ಹ್ಯಾಕರ್‌ಗಳು ಯಾರು ಗೊತ್ತೇ?
ಮಂಗಳ ಗ್ರಹದಲ್ಲಿ ಏಲಿಯನ್ ಪಳೆಯುಳಿಕೆ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
One of the most accepted models of the end of the universe is eternal expansion and eventual death by entropy.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot