Just In
Don't Miss
- News
Budget 2023: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಶುಭ ಸುದ್ದಿ
- Movies
"ಕಾಂತಾರ' ಯಾಕೆ ಆಸ್ಕರ್ಗೆ ನಾಮಿನೇಟ್ ಆಗ್ಲಿಲ್ಲ ಗೊತ್ತಾ? ಸೀಕ್ವೆಲ್ಗೆ ಪ್ರಶಸ್ತಿ ಗ್ಯಾರೆಂಟಿ": ವಿಜಯ್ ಕಿರಗಂದೂರ್
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏರಿಯಾ 404; ಫೇಸ್‌ಬುಕ್ ಸಿಕ್ರೇಟ್ ಲ್ಯಾಬ್ ಬಗ್ಗೆ ನಿಮಗೆಷ್ಟು ಗೊತ್ತು?
ಫೇಸ್‌ಬುಕ್‌ನ 10 ವರ್ಷಗಳ ಅಭಿವೃದ್ದಿ ನೋಡೋದಾದ್ರೆ ಡ್ರೋನ್, ಫೇಸ್‌ಬುಕ್ ಉಪಗ್ರಹ, ಲೇಸರ್ಸ್, ಟೆಲಿಕಾಂ ಇನ್‌ಫ್ರಾಸ್ಟ್ರಕ್ಚರ್, ವಿಆರ್ ಹೆಡ್‌ಸೆಟ್ಸ್ ಮತ್ತು ಹೆಚ್ಚಿನ ರಿಯಾಲಿಟಿ ಯಂತ್ರಾಂಶವನ್ನು ಸಹ ಒಳಗೊಂಡಿದೆ. ಈ ಎಲ್ಲಾ ಅಭಿವೃದ್ದಿಗಳು ನಡೆದಿರುವುದು ಫೇಸ್‌ಬುಕ್ ಏರಿಯಾ 404 ಪ್ರದೇಶದಲ್ಲಿ.
ಫೇಸ್‌ಬುಕ್ ಬಗೆಗಿನ ಇನ್ನೊಂದು ವಿಶೇಷ ಎಂದರೆ ಫೇಸ್‌ಬುಕ್ ಕಂಪನಿ ಸಿಇಓ 'ಮಾರ್ಕ್ ಜುಕರ್‌ಬರ್ಗ್'ಗೆ ಏರಿಯಾ 404 ಗೆ ಹೋಗಲು ಆಕ್ಸೆಸ್ ಇಲ್ಲಾ. ಫೇಸ್‌ಬುಕ್‌ನ ಎಲ್ಲಾ ಹೊಸ ಹೊಸ ಐಡಿಯಾಗಳು ರಿಯಾಲಿಟಿಯಾಗಲು ಕಾರಣವಾಗಿರುವ ಏರಿಯಾ 404 ಬಗ್ಗೆ ಸಿಕ್ರೇಟ್ ಮಾಹಿತಿಗಳನ್ನು, ಚಿತ್ರಗಳನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ.
ಅನಾವಶ್ಯಕ ಫೇಸ್‌ಬುಕ್ ಖಾತೆಗಳನ್ನು ಡಿಲೀಟ್ ಮಾಡುವುದು ಹೇಗೆ?

ಏರಿಯಾ 404
ಏರಿಯಾ 404 ಪ್ರದೇಶವು ಫೇಸ್‌ಬುಕ್‌ನ ಕ್ಯಾಲಿಪೋರ್ನಿಯಾ ಹೆಡ್‌ಕ್ವಾಟ್ರಸ್‌ನ ಮೆನ್ಲೊ ಪಾರ್ಕ್ ಬಿಲ್ಡಿಂಗ್‌ನ ಒಂದನೇ ಫ್ಲೋರ್‌ನಲ್ಲಿದೆ. ಹೆಚ್ಚಿನ ಸುರಕ್ಷತೆ ಹೊಂದಿರುವ ಈ ರೂಮ್ ಅತಿ ಹೆಚ್ಚಿನ ಬೆಲೆಯ ಮತ್ತು ಅತಿ ಅಪಾಯಕರವಾದ ವಸ್ತುಗಳಿಂದ ಕೂಡಿದೆ.

ಏರಿಯಾ 404
ವಿಶೇಷ ಅಂದ್ರೆ ಈ ರೂಮ್‌ಗೆ ಕೇವಲ ಫೇಸ್‌ಬುಕ್‌ನ ಉದ್ಯೋಗಿಗಳು ಅಧಿಕಾರ ಪಡೆದಿರುವವರು ಮಾತ್ರ ವಿಶೇಷ ತರಬೇತಿ ಪಡೆದು ಹೋಗುತ್ತಾರೆ. ಕೇವಲ 10 ಉದ್ಯೋಗಿಗಳು ಮಾತ್ರ ಈ ರೂಮ್ ಒಳಗೆ ಹೋಗುತ್ತಾರೆ.
ಮೆನ್ಲೊ ಪಾರ್ಕ್
ಮೆನ್ಲೊ ಪಾರ್ಕ್‌ನಲ್ಲಿ ನಿರ್ಮಿಸಲಾಗಿರುವ ಏರಿಯಾ 404 22,000 ಚದರ ಅಡಿ ಇದ್ದು, ಈ ಪ್ರದೇಶದಲ್ಲಿ ಎಲ್ಲಾ ಸಾಮಾಜಿಕ ನೆಟ್‌ವರ್ಕ್‌ಗಳಿಗೆ ಉತ್ತಮ ಸ್ಥಳ ಕಲ್ಪಿಸಿಕೊಡುವುದಾಗಿದೆ. ಹೆಚ್ಚಿನದಾಗಿ ಭೌತಿಕ ವಸ್ತುಗಳನ್ನು ಇಲ್ಲಿ ನಿರ್ಮಿಸಲಾಗುತ್ತದೆ. 9 ತಿಂಗಳಿಂದ ನಡೆಯುತ್ತಿದ್ದ ನಿರ್ಮಾಣ ಕಳೆದ ಜುಲೈ ತಿಂಗಳಲ್ಲಿ ಪೂರ್ಣಗೊಂಡಿದೆ.

ಫೇಸ್‌ಬುಕ್ ಏರಿಯಾ 404 ಸೈನ್ಸ್ ಲ್ಯಾಬೋರೇಟರಿ ಪ್ರಾಜೆಕ್ಟ್ ಅರೆಸ್
ಚಿತ್ರದಲ್ಲಿ ಕಾಣುತ್ತಿರುವ ಪ್ರದೇಶವು ಪ್ರಾಜೆಕ್ಟ್ ಅರೆಸ್ ಆಗಿದ್ದು, ಫೇಸ್‌ಬುಕ್ ಕನೆಕ್ಟಿವಿಟಿ ಲ್ಯಾಬ್. ಭಾರಿ ರಚನೆಯ ದಿಕ್ಸೂಚಕ ಆಂಟೆನಾಗಳನ್ನು ಹೊಂದಿದೆ. ವೈರ್‌ಲೆಸ್ ಆಧಾರಿತ ಸ್ಟೇಷನ್ ಆಗಿರುವ ಪ್ರಾಜೆಕ್ಟ್ ಅರೆಸ್ ಒಂದೇ ಸಮಯದಲ್ಲಿ 24 ಕ್ಲೈಟ್‌ಗಳಿಗೆ ಸೇವೆ ನೀಡಬಲ್ಲದು.

ಪ್ರಾಜೆಕ್ಟ್ ಅಕ್ವಿಲ
ಭೂಮಿಯಿಂದ ಲೇಸೆರ್ ಲಿಂಕ್ ಮೂಲಕ 4G ಸಿಗ್ನಲ್ ಇಂಟರ್ನೆಟ್ ನೀಡುವ ಡ್ರೋನ್ ಪ್ರಾಜೆಕ್ಟ್ ಅಕ್ವಿಲ.

9 ಅಕ್ಸಿಸ್ ನಿಖರತೆಯ ಕಟ್ಟಿಂಗ್
ಫೇಸ್‌ಬುಕ್‌ನ 9 ಅಕ್ಸಿಸ್ ಕಟ್ಟಿಂಗ್ ಗಿರಣಿ ಸುತ್ತಿನ ಲೇಥ್ ಆಗಿದ್ದು, ಕಾಂಪ್ಲೆಕ್ಟ್ ಭಾಗಗಳನ್ನು ಕತ್ತರಿಸಲು ಇದನ್ನು ಬಳಸಲಾಗುತ್ತದೆ. ಇದು ಅಧಿಕ ಮಟ್ಟದ ನಿಖರತೆ ಹೊಂದಿದೆ.

ವರ್ಟಿಕಲ್ ಮಿಲ್ಲಿಂಗ್ ಮಷಿನ್
ವರ್ಟಿಕಲ್ ಮಿಲ್ಲಿಂಗ್ ಮಷಿನ್ ಶೀರ್ಘವಾಗಿ ಪ್ರಾಜೆಕ್ಟ್‌ಗಳಿಗೆ ಪ್ರೋಟೋಟೈಪ್ ಮಾದರಿಗಳನ್ನು ಉತ್ಪಾದಿಸುತ್ತದೆ. ಫೇಸ್‌ಬುಕ್‌ನ ಟೆಲಿಗ್ರಾಫ್ ಸಂವಹನ ವ್ಯವಸ್ಥೆಗೆ ಇದನ್ನು ಬಳಸಲಾಗುತ್ತದೆ.

ದಿ ಎಲೆಕ್ಟ್ರಾನಿಕ್ ಮೈಕ್ರೋಸ್ಕೋಪ್
ಎಲೆಕ್ಟ್ರಾನಿಕ್ ಮೈಕ್ರೋಸ್ಕೋಪ್ ಮತ್ತು ಸಿಟಿ ಸ್ಕ್ಯಾನರ್‌ಗಳು ಅನುತ್ತೀರ್ಣಗೊಂಡ ಘಟಕಗಳ ಬಗ್ಗೆ ತೀಕ್ಷ್ಣ ದೃಶ್ಯ ನೀಡುತ್ತದೆ. ಪರಿಶೀಲನೆಗಾಗಿ 3D ಎಕ್ಷರೇ ಇಮೇಜಸ್‌ಗಳನ್ನು ಜೆನೆರೇಟ್ ಮಾಡುತ್ತದೆ.

ಸೆಲ್ಯುಲಾರ್ ಎಕ್ವಿಪ್‌ಮೆಂಟ್
ಫೇಸ್‌ಬುಕ್ ಏರಿಯಾ 404 ನಲ್ಲಿ ಬಳಕೆದಾರರ ಅನುಕೂಲಕ್ಕಾಗಿ ಉತ್ತಮ ನೆಟ್‌ವರ್ಕ್ ಕವರೇಜ್ ನೀಡುವ ಸೆಲ್ಯುಲಾರ್ ಎಕ್ವಿಪ್‌ಮೆಂಟ್ ಅನ್ನು ಇನ್‌ಸ್ಟಾಲ್ ಮಾಡಿದೆ.

ಲೇಸರ್ ಕಂಮ್ಯುನಿಕೇಷನ್
ಗಾಳಿಯ ಮುಖಾಂತರ ಅತಿ ವೇಗದ ಸಂವಹನ ಡಾಟಾ ಪಡೆಯಲು ಫೇಸ್‌ಬುಕ್ ಲೇಸರ್ ಲೈಟ್ ಅನ್ನು ಡಿಟೆಕ್ಟರ್ ಆಗಿ ಬಳಸಿಕೊಳ್ಳುತ್ತದೆ. ಇದು ಲೇಸರ್ ಲೈಟ್ ಅನ್ನು ಬಳಸಿಕೊಳ್ಳುವುದರಿಂದ ರೇಡಿಯೋ ಸ್ಪೆಕ್ಟ್ರಂ ಲೈಸೆನ್ಸ್ ಅನ್ನು ಬೇಡುವುದಿಲ್ಲ. ಇದು ಅತಿ ಕಡಿಮೆ ಬೆಲೆಯಾಗಿದ್ದು, ಸಂಯೋಜಿಸಲು ಸುಲಭವಾಗಿದೆ.

ಗಿಜ್‌ಬಾಟ್

ಓದಿರಿ ಗಿಜ್‌ಬಾಟ್ ಲೇಖನಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470