Home
ಸುದ್ದಿಜಾಲ

ಗ್ರಾಹಕರಿಗೆ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡ ಜಿಯೋ!!

ಜಾಹೀರಾತು ವಲಯದ ಕಾವಲು ನಾಯಿಯಂತಿರುವ ಜಾಹಿರಾತು ನಿಯಂತ್ರಕ ಸಂಸ್ಥೆ 'ಎಎಸ್ಸಿಐ' ಈ ವರ್ಷದ ಜೂನ್ ತಿಂಗಳಲ್ಲಿ 208 ಜಾಹಿರಾತುಗಳಿಗೆ ಸಂಬಂಧಿಸಿದ ದೂರುಗಳನ್ನು ತನಿಖೆ ಮಾಡಿದೆ. ಇದರಲ್ಲಿ ರಿಲಯನ್ಸ್ ಜಿಯೋ, ಸ್ಪೈಸ್ ಜೆಟ್ ಕಂಪೆನಿಗಳ ಜಾಹಿರಾತು ಸೇರಿದಂತೆ ಒಟ್ಟು 179 ಜಾಹೀರಾತುಗಳು ಗ್ರಾಹಕರ ಹಾದಿ ತಪ್ಪಿಸುತ್ತಿದೆ ಎಂದು ತಿಳಿದುಬಂದಿದೆ.

ಗ್ರಾಹಕರ ದೂರನ್ನು ಆಧರಿಸಿ ತನಿಖೆ ನಡೆಸಿರುವ ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ (ಎಎಸ್‌ಸಿಐ) ಒಟ್ಟು 145 ಜಾಹೀರಾತ್ತುಗಳ ಪೈಕಿ 89 ಜಾಹೀರಾತನ್ನು ಆಕ್ಷೇಪಾರ್ಹವೆಂದು ಹೇಳಿದೆ. 208 ಜಾಹಿರಾತು ಕುರಿತ ದೂರು ಸ್ವೀಕರಿಸುತ್ತಿದ್ದಂತೆ ಅದರಲ್ಲಿ 63ಜಾಹೀರಾತು ತಯಾರಕರು ತಮ್ಮ ತಪ್ಪನ್ನು ತಕ್ಷಣ ತಿದ್ದಿಕೊಳ್ಳುವ ಖಾತ್ರಿ ನೀಡಿದ್ದಾರೆ.

ಗ್ರಾಹಕರಿಗೆ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡ ಜಿಯೋ!!

ಇನ್ನು ವಿಶ್ವದ ಅತಿದೊಡ್ಡ 4G ಎಲ್‌ಟಿಇ ನೆಟ್‌ವರ್ಕ್ ಎಂದು ಜಾಹಿರಾತು ನೀಡಿರುವ ಜಿಯೋ ಕೂಡ ಹಾದಿ ತಪ್ಪಿಸುವಂತಿದೆ ಎಂದು ಹೇಳಲಾಗಿದೆ. ರಿಲಯನ್ಸ್ ಜಿಯೋ ಇನ್ಫೋಕಾಮ್ ಜಾಹೀರಾತಿನಲ್ಲಿ ವಿಶ್ವದ ಅತ್ಯುತ್ತಮ ಹಾಗೂ ಅತಿ ದೊಡ್ಡ ನೆಟ್‌ವರ್ಕ್ ಎಂದು ತೋರಿಸುವ ಮೂಲಕ ಜನರನ್ನು ಗೊಂದಲಕ್ಕೀಡುಮಾಡುತ್ತಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

ರಿಲಾಯನ್ಸ್ ಜಿಯೋ ಬಳಕೆಯಲ್ಲಿರುವ ಮಾಹಿತಿಯನ್ನು ಮಾತ್ರ ಉಲ್ಲೇಖಿಸಿದೆ. ಡೇಟಾ ಬಳಕೆ ಆಧಾರದ ಮೇಲೆ ಜಿಯೋ ತನ್ನನ್ನು ವಿಶ್ವದ ಅತ್ಯುತ್ತಮ ಹಾಗೂ ಅತಿ ದೊಡ್ಡ ನೆಟ್‌ವರ್ಕ್ ಎಂದು ತೊರಿಸುತ್ತಿದೆ. ಆದರೆ, ನೆಟ್ವರ್ಕ್ ವ್ಯಾಪ್ತಿ ಮತ್ತು ಮೂಲಭೂತ ಸೌಕರ್ಯಗಳಿಲ್ಲವೆಂದು ಸೂಚಿಸುತ್ತದೆ. ಇದು ಖಮಡಿತವಾಗಿಯೂ ಜನರನ್ನು ಗೊಂದಲಕ್ಕೀಡುಮಾಡುತ್ತಿದೆ ಎಂದು ಹೇಳಿದೆ.

ಗ್ರಾಹಕರಿಗೆ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡ ಜಿಯೋ!!

ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ ಪಟ್ಟಿ ಮಾಡಿರುವ ಗ್ರಾಹಕರ ಹಾದಿ ತಪ್ಪಿಸುತ್ತಿರುವ ಜಾಹಿರಾತುಗಳಲ್ಲಿ ಯಾತ್ರಾ.ಕಾಮ್, ಮಿಂತ್ರ, ಪೆಕ್ಸಿಕೋ ಹೆಚ್‌ಯುಎಲ್ ಸೇರಿದಂತೆ 25 ಜಾಹೀರಾತುಗಳು ಆರೋಗ್ಯ ವಿಭಾಗಕ್ಕೆ ಸೇರಿದ್ದರೆ, 27 ಶಿಕ್ಷಣ ವಲಯ, 15 ಆಹಾರ ಕ್ಷೇತ್ರ, ಐದು ಪರ್ಸನಲ್ ಕೇರ್ ಇನ್ನೂ 17 ಇನ್ನಿತರ ವಲಯಗಳಿಗೆ ಸಂಬಂಧಿಸಿವೆ.

ಓದಿರಿ: ವಿಶ್ವ ವಿಜ್ಞಾನಕ್ಕೆ ನಿಗೂಢವಾಗಿರುವ ಭಾರತದ ಐದು ವಿಚಿತ್ರ ಸ್ಥಳಗಳು!!

Best Mobiles in India

English summary
It noted that out of the 208 advertisements, the advertisers promptly ensured corrective action in 63 of them as soon as the complaints were received. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+