ಏಷ್ಯಾನೆಟ್‌ ಕೊಡುಗೆ : 100 ಚಾನೆಲ್‌ಗಳಿಗೆ ತಿಂಗಳ ಶುಲ್ಕ 150ರೂ. ಮಾತ್ರ!

|

ಭಾರತೀಯ ಟೆಲಿವಿ‍ಷನ್ ವಲಯದಲ್ಲಿ ಟ್ರಾಯ್ ನಿಯಮ ಹಲವು ಬದಲಾವಣೆಗಳಿಗೆ ನಾಂದಿ ಹಾಡಿತ್ತು. ಟಿವಿ ಚಾನೆಲ್ ಪೂರೈಕೆದಾರ ಸಂಸ್ಥೆಗಳು ಭಿನ್ನ ಭಿನ್ನ ಬೆಲೆಯ ಚಾನೆಲ್‌ ಪ್ಲ್ಯಾಕ್‌ಗಳನ್ನು ಗ್ರಾಹಕರಿಗೆ ಪರಿಚಯಿಸಿದವು. ಬಹುತೇಕ ಪೂರೈಕೆದಾರರು 200ರೂ.ಗಳ ಒಳಗೆ ಗ್ರಾಹಕರಿಗೆ ಅವರ ಪ್ರಾದೇಶಿಕ ಭಾಷೆಯ ಚಾನೆಲ್‌ಗಳ ಪ್ಯಾಕ್‌ ಆಯ್ಕೆ ಪ್ರಕಟಿಸಿದವು. ಅದೇ ಹಾದಿಯಲ್ಲಿ ಈಗ ಏಷ್ಯಾನೆಟ್‌ ಕೇಬಲ್ ಟಿವಿ ಪೂರೈಕೆ ಸಂಸ್ಥೆಯು ಹೊಸ ಕೊಡುಗೆ ಘೋಷಿಸಿದೆ.

ಏಷ್ಯಾನೆಟ್‌

ಹೌದು, ಏಪ್ಯಾನೆಟ್‌ ಕೇಬಲ್ ಟಿವಿ ಚಾನೆಲ್‌ ಪೂರೈಕೆ ಸಂಸ್ಥೆಯು ಇದೀಗ ಹೊಸ ಆಫರ್ ತಿಳಿಸಿದ್ದು, ತಿಂಗಳಿಗೆ ಕೇವಲ 150ರೂ.ಗಳಿಗೆ(GST ಸೇರಿ) 100 ಚಾನೆಲ್‌ಗಳನ್ನು ನೀಡಲಿದೆ. ಈ ಕೊಡುಗೆಯಲ್ಲಿ ಏಷ್ಯಾನೆಟ್‌ ಹೊಸ ಗ್ರಾಹಕರಿಗೆ ಉಚಿತವಾಗಿ ಸೆಟ್‌ಟಾಪ್‌ ಬಾಕ್ಸ್(STB) ಸಹ ಒದಗಿಸಲಿದೆ. ಪೂರೈಕೆ ಮಾಡುವ 100 ಚಾನೆಲ್‌ಗಳಲ್ಲಿ 83 FTA ಚಾನೆಲ್‌ಗಳು, 17 ಪೇ ಚಾನೆಲ್ಸ್‌ಗಳು ಸೇರಿವೆ. ಹಾಗಾದರೇ ಏಷ್ಯಾನೆಟ್‌ ಸಂಸ್ಥೆಯ ಈ ಕೊಡುಗೆಯ ಕುರಿತು ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಯಾವ ಚಾನೆಲ್‌ಗಳು

ಯಾವ ಚಾನೆಲ್‌ಗಳು

ಏಷ್ಯಾನೆಟ್‌ ಕೇಬಲ್ ಟಿವಿ 100 ಚಾನೆಲ್‌ಗಳ ಪ್ಯಾಕ್‌ 83 FTA ಚಾನೆಲ್‌ಗಳು ಮತ್ತು 17 ಪೇ ಚಾನೆಲ್‌ಗಳನ್ನು ಒಳಗೊಂಡಿರುತ್ತದೆ. ಎರಡನೆಯದು ಏಷ್ಯನೆಟ್, ಸೂರ್ಯ, ಜೀ ಕೇರಳಂ, ಫ್ಲವರ್ಸ್‌, ಸೂರ್ಯ ಮೂವಿಸ್‌, ಏಷ್ಯಾನೆಟ್ ಮೂವಿಸ್‌, ಏಷ್ಯಾನೆಟ್ ಪ್ಲಸ್, ಸೂರ್ಯ ಮ್ಯೂಸಿಕ್, ಸೂರ್ಯ ಕಾಮಿಡಿ ಚಾನೆಲ್ಸ್‌ಗಳು ಇರುತ್ತವೆ. ಹಾಗೆಯೆ ಪೇ ಚಾನಲ್ ಪಟ್ಟಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 2, ಕೊಚು ಟಿವಿ(Kochu TV), ಸ್ಟಾರ್ ಸ್ಪೋರ್ಟ್ಸ್ ಫಸ್ಟ್, ಎನ್‌ಜಿಸಿ, ಎನ್‌ಜಿಸಿ ವೈಲ್ಡ್, ಸ್ಟಾರ್ ಸ್ಪೋರ್ಟ್ಸ್ 3 ಮತ್ತು ನ್ಯೂಸ್ 18 ಮಲಯಾಳಂ ಕೂಡ ಸೇರಿವೆ.

ಕೊಡುಗೆ ಎಲ್ಲಿ ಲಭ್ಯ

ಕೊಡುಗೆ ಎಲ್ಲಿ ಲಭ್ಯ

ಏಷ್ಯಾನೆಟ್ ಕೇಬಲ್ ಟಿವಿ ಚಾನೆಲ್ಸ್‌ ಪೂರೈಕೆ ಸಂಸ್ಥೆಯ ಈ ಕೊಡುಗೆಯು ಸದ್ಯ ಕೇರಳದ ರಾಜ್ಯದಲ್ಲಿ ಅನ್ವಯವಾಗಲಿದೆ. ಈ ವಿಶೇಷ ಆಫರ್ ಇದೇ ಡಿಸೆಂಬರ್ 31, 2019ರಂದು ಕೊನೆಯಾಗಲಿದೆ. ಹೊಸ ಕನೆಕ್ಷನ್ ಪಡೆದುಕೊಳ್ಳುವ ಗ್ರಾಹಕರು 999ರೂ.ಗಳನ್ನು ಠೇವಣಿ ಪಾವತಿಸಿ ಈ ಯೋಜನೆ ಪಡೆಯಬಹುದು ಹಾಗೂ ಮೂರು ವರ್ಷಗಳ ನಂತರ ಠೇವಣಿ ಹಿಂದಿರುಗಿಸಲಾಗುತ್ತದೆ ಎಂದು ಏಷ್ಯಾನೆಟ್ ಸಂಸ್ಥೆಯು ತಿಳಿಸಿದೆ.

ಕೊಡುಗೆ ಮುಗಿದ ಬಳಿಕ

ಕೊಡುಗೆ ಮುಗಿದ ಬಳಿಕ

ಇದೇ ಡಿಸೆಂಬರ್ 31, 2019ರಂದು ಏಷ್ಯಾನೆಟ್‌ 150ರೂ. ಪ್ಯಾಕ್‌ ಕೊಡುಗೆಯು ಮುಕ್ತಾಯವಾಗಲಿದ್ದು, ಆ ಬಳಿಕ ಸಾಮಾನ್ಯ ಚಾನೆಲ್‌ ರೇಟ್‌ ಅನ್ವಯವಾಗಲಿದೆ. ಹಾಗೆಯೇ ಗ್ರಾಹಕರು ಹೆಚ್ಚುವರಿ ಚಾನೆಲ್‌ಗಳನ್ನು ಪಡೆದುಕೊಂಡರೇ ಶುಲ್ಕದಲ್ಲಿ ಏರಿಕೆಯಾಗಲಿದೆ ಎಂದು ಏಷ್ಯಾನೆಟ್ ತಿಳಿಸಿದೆ.

ಮ್ಯಾಜಿಕ್ ಸೆಟ್-ಟಾಪ್ ಬಾಕ್ಸ್

ಮ್ಯಾಜಿಕ್ ಸೆಟ್-ಟಾಪ್ ಬಾಕ್ಸ್

ಹಾಗೆಯೇ ಇದರೊಂದಿಗೆ ಏಷ್ಯಾನೆಟ್ ಹೊಸದಾಗಿ ಸ್ಮಾರ್ಟ್ ಮ್ಯಾಜಿಕ್ ಸೆಟ್-ಟಾಪ್ ಬಾಕ್ಸ್ ಅನ್ನು ಆಯ್ದ ನಗರಗಳಲ್ಲಿ ಪರಿಚಯಿಸಿದ್ದು, ಇದು ಆಂಡ್ರಾಯ್ಡ್ ಟಿವಿ ಆಧಾರಿತವಾಗಿದೆ. ಸಂಸ್ಥೆಯು ಇದನ್ನು ಕೆಲವು ಆಯ್ದ ಪ್ರಮುಖ ನಗರಗಳಲ್ಲಿ ಆರಂಭಿಕ ಕೊಡುಗೆಯಾಗಿ 3,999 ರೂ.ಗಳಿಗೆ ನೀಡುತ್ತಿದೆ. ಆಂಡ್ರಾಯ್ಡ್ ಟಿವಿ ಪ್ಲಾಟ್‌ಫಾರ್ಮ್ ಬಳಕೆದಾರರಿಗೆ 5000 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳು ಮತ್ತು ಗೇಮ್ಸ್‌ಗಳನ್ನು ಲಭ್ಯವಾಗಲಿವೆ. ಏಷ್ಯಾನೆಟ್ ಈ ಸೇವೆಯು ಕೇಬಲ್ ಟಿವಿ ಮತ್ತು OTT ಒಂದಾಗಿ ಸಂಯೋಜಿಸುತ್ತದೆ.

ಇತರೆ ಸೆಟ್‌ಟಾಪ್‌ಗಳು

ಇತರೆ ಸೆಟ್‌ಟಾಪ್‌ಗಳು

ಏಷ್ಯಾನೆಟ್ ಈ ಸ್ಮಾರ್ಟ್ ಮ್ಯಾಜಿಕ್ ಸೆಟ್‌ಟಾಪ್ ಬಾಕ್ಸ್ ಆಂಡ್ರಾಯ್ಡ್ ಟಿವಿ 8.0 ಓಎಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಯೂಟ್ಯೂಬ್, ಹಾಟ್‌ಸ್ಟಾರ್ ಸೇರಿದಂತೆ ಅಗತ್ಯ ವಿಡಿಯೊ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ಗಳು ಪ್ರಿ-ಇನ್‌ಸ್ಟಾಲ್‌ ಪಡೆದಿವೆ. ಈ ಸೆಟ್-ಟಾಪ್ ಬಾಕ್ಸ್‌ ಆದಾಗ್ಯೂ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್ ಮತ್ತು ಡಿಶ್ ಎಸ್‌ಎಂಆರ್‌ಟಿ ಹಬ್‌ಗಳಿಗೆ ಹೋಲಿಸಿದರೆ ಏಷ್ಯಾನೆಟ್ ಸ್ಮಾರ್ಟ್ ಮ್ಯಾಜಿಕ್ ಬಾಕ್ಸ್‌ನ ಬೆಲೆ ಹೆಚ್ಚಾಗಿದೆ ಎನ್ನಬಹುದು.

Best Mobiles in India

English summary
Asianet is offering a free Set-Top Box and 100 channels. For this, customers will have to pay just Rs 150 per month. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X