Subscribe to Gizbot

ದಕ್ಷಿಣ ಭಾರತದ ಅಚ್ಚರಿಯನ್ನು ಸ್ಪೇಸ್‌ನಿಂದ ಕಂಡ ಗಗನಯಾತ್ರಿ

Written By:

ಭಾರತವನ್ನು ಆಕಾಶದಿಂದ ನೋಡುವ ಭಾಗ್ಯ ಕೇವಲ ವಿಮಾನಗಳಲ್ಲಿ ಸಂಚಾರ ಮಾಡುವವರಿಗೆ ಮಾತ್ರ ಅಂತ ಬಹುಸಂಖ್ಯಾತರು ಅಂದುಕೊಂಡಿದ್ದಾರೆ. ಆದರೆ ನೈಜವಾಗಿ ಎಲ್ಲರೂ ನೋಡಲು ಸಾಧ್ಯವಿಲ್ಲ ಎಂಬುದು ತಿಳಿದಿರುವ ವಿಷಯ. ಆದ್ರೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಟ್ವಿಟರ್ ಹಾಗೂ ದಿನನಿತ್ಯ ಇಂಟರ್ನೆಟ್‌ ಮುಂದೆ ಕುಳಿತು ಮಾಹಿತಿ ಹುಡುಕಾಡುವವರಿಗಂತೂ ಖಂಡಿತ ಸಾಧ್ಯ.

ಓದಿರಿ: ಬಾಹ್ಯಾಕಾಶದಿಂದ ಸಿನಿಮಾ ಶೂಟ್‌ : ಪೆಪ್ಸಿಯಿಂದ ಬಿಡುಗಡೆ

ನಾಸಾದ ಹಿರಿಯ ಗಗನಯಾತ್ರಿ 'ಸ್ಕಾಟ್‌ ಕೆಲ್ಲಿ'ಯವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ದಕ್ಷಿಣ ಭಾರತದ ಕೆಲವು ಆಶ್ಚರ್ಯಕರ ಫೋಟೋಗಳನ್ನು ತೆಗೆದು ಟ್ವೀಟ್‌ ಮಾಡಿದ್ದಾರೆ. ಹೊಸ ವರ್ಷದ ಗುಂಗಿನಲ್ಲಿರುವವರಿಗೆ ಇದು ಒಂದು ರೀತಿಯ ಹೊಸ ವರ್ಷದ ಉಡುಗೊರೆಯೇ ಹೌದು. ಯಾಕೆ ಅಂತಿರಾ ? ಒಮ್ಮೆ ಈ ಸ್ಲೈಡರ್‌ಗಳ ಛಾಯಾಚಿತ್ರಗಳು ಮತ್ತು ಮಾಹಿತಿ ನೋಡಿ ಉತ್ತರ ನಿಮಗೆ ತಿಳಿಯುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಕಾಟ್‌ ಕೆಲ್ಲಿಯವರ ಟ್ವೀಟ್‌

ದಕ್ಷಿಣ ಭಾರತದ ಆಶ್ಚರ್ಯಕರ ಚಿತ್ರ

ಸ್ಕಾಟ್‌ ಕೆಲ್ಲಿಯವರು ಸ್ಪೇಸ್‌ನಿಂದ ದಕ್ಷಿಣ ಭಾರತದ ಛಾಯಾಚಿತ್ರ ತೆಗೆದು " ದಕ್ಷಿಣ ಭಾರತದ ಸುಂದರವಾದ ಅಪರೂಪ ಒಳನೋಟ" ಎಂದು ಟ್ವೀಟ್‌ ಮಾಡಿದ್ದಾರೆ.

ಸ್ಕಾಟ್‌ ಕೆಲ್ಲಿಯವರ ಟ್ವೀಟ್‌

ದಕ್ಷಿಣ ಭಾರತದ ಆಶ್ಚರ್ಯಕರ ಚಿತ್ರ

ಸ್ಕಾಟ್‌ ಕೆಲ್ಲಿಯವರು ಟ್ವೀಟ್‌ ಮಾಡಿರುವ ದಕ್ಷಿಣ ಭಾರತದ ಮರಳು ಮತ್ತು ಹಸಿರು ಪ್ರದೇಶದ ಫೋಟೋ.

 ಸ್ಕಾಟ್‌ ಕೆಲ್ಲಿಯವರ ಟ್ವೀಟ್‌

ದಕ್ಷಿಣ ಭಾರತದ ಆಶ್ಚರ್ಯಕರ ಚಿತ್ರ

ದಕ್ಷಿಣ ಭಾರತದ ತುದಿಯಲ್ಲಿನ ನೀಲಿ ಬಣ್ಣದಲ್ಲಿರುವ ನೀರಿನ ಫೋಟೋ.

ಸ್ಕಾಟ್‌ ಕೆಲ್ಲಿ

ಸ್ಕಾಟ್‌ ಕೆಲ್ಲಿ -ಗಗನಯಾತ್ರಿ

ಸ್ಕಾಟ್‌ ಕೆಲ್ಲಿಯವರು ನಾಸಾದ ಹಿರಿಯ ಗಗನಯಾತ್ರಿಯಾಗಿದ್ದು, ಕಳೆದ ಮಾರ್ಚ್‌ ತಿಂಗಳಿನಿಂದಲೂ ಸಹ ಅಂತರರಾಷ್ಟ್ರೀಯ ಸ್ಪೇಸ್‌ ಕೇಂದ್ರದಲ್ಲಿದ್ದಾರೆ. ಮೊಟ್ಟ ಮೊದಲ ಬಾರಿಗೆ ಹೆಚ್ಚು ದಿನಗಳು ಸ್ಪೇಸ್‌ ಸ್ಟೇಷನ್‌ನಲ್ಲಿರುವ ಮೊದಲ ಗಗನಯಾತ್ರಿ ಇವರಾಗಿದ್ದು, ಈಗಾಗಲೇ 280 ದಿನಗಳನ್ನು ಅಲ್ಲಿ ಕಳೆದಿದ್ದಾರೆ.

283 ನೇ ದಿನ

ಸ್ಕಾಟ್‌ ಕೆಲ್ಲಿಯವರ ಟ್ವೀಟ್‌

ಸ್ಕಾಟ್‌ ಕೆಲ್ಲಿಯವರು ಸ್ಪೇಸ್‌ನಲ್ಲಿದ್ದ 283 ನೇ ದಿನ ಅವರ ಸ್ಪೇಸ್‌ ಆಫೀಸ್‌ನಿಂದ ಛಾಯಾಚಿತ್ರ ತೆಗೆದು ಟ್ವೀಟ್‌ ಮಾಡಿದ ಫೋಟೋ.

ಆಫ್ರಿಕಾದ ಭೂಪ್ರದೇಶದ ಬಣ್ಣದ ಚಿತ್ತಾರ

ಸ್ಕಾಟ್‌ ಕೆಲ್ಲಿಯವರ ಟ್ವೀಟ್‌

ಆಫ್ರಿಕಾದ ಭೂಪ್ರದೇಶದ ಬಣ್ಣದ ಚಿತ್ತಾರವನ್ನು ನಾನು ಯಾವಾಗಲು ಲೆಕ್ಕ ಮಾಡಬಹುದು ಎಂದು ಫೋಟೋ ತೆಗೆದು ಟ್ವೀಟ್‌ ಮಾಡಿರುವುದು.

282 ನೇ ದಿನ

ಸ್ಕಾಟ್‌ ಕೆಲ್ಲಿಯವರ ಟ್ವೀಟ್‌

282 ನೇ ದಿನ ಸೂಯೇಜ್‌ ನೆರಳುಗೆರೆ ಮತ್ತು ಸೂರ್ಯಾಸ್ತದ ಸಮಯದ ಭವ್ಯವಾದ ಫೋಟೋ ಟ್ವೀಟ್‌ ಮಾಡಿರುವುದು.

281 ನೇ ದಿನ

ಸ್ಕಾಟ್‌ ಕೆಲ್ಲಿಯವರ ಟ್ವೀಟ್‌

281 ನೇ ದಿನ ಸ್ಕಾಟ್‌ ಕೆಲ್ಲಿಯವರು ಒಂಟಿಯಾದ ಚಂದ್ರನು ಕೆಂಪು ಬಣ್ಣದಲ್ಲಿ ಮುಳುಗುತ್ತಿರುವ ಫೋಟೋವನ್ನು ಸ್ಪೇಸ್‌ ಸ್ಟೇಷನ್‌ನಿಂದ ತೆಗೆದು ಟ್ವೀಟ್‌ ಮಾಡಿರುವುದು.

ಹೊಸ ವರ್ಷ

ಸ್ಕಾಟ್‌ ಕೆಲ್ಲಿಯವರ ಟ್ವೀಟ್‌

ಹೊಸ ವರ್ಷದ ನಂತರ ಅಲೆಯುತಿಯನ್‌ ದ್ವೀಪದಲ್ಲಿ ವಾಲ್ಕೆನೋ ಕಾಣಿಸಿಕೊಂಡ ಫೋಟೋವನ್ನು ಟ್ವೀಟ್‌ ಮಾಡಿರುವುದು. ಸ್ಕಾಟ್‌ ಕೆಲ್ಲಿಯವರನ್ನು ಟ್ವಿಟರ್‌ನಲ್ಲಿ ನೀವು ಫಾಲೋ ಮಾಡಬಹುದಾಗಿದೆ. ಹಾಗೂ ಸ್ಪೇಸ್‌ ಮಾಹಿತಿಯನ್ನು ತಿಳಿಯಬಹುದಾಗಿದೆ. ಸ್ಕಾಟ್‌ ಕೆಲ್ಲಿಯವರ ಟ್ವಿಟರ್‌ ಪೇಜ್‌ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಸ್ಪೇಸ್ ಸಂಬಂಧಿಸಿದ ಇತರೆ ಲೇಖನಗಳು

ಗಿಜ್‌ಬಾಟ್‌

ನಾಸಾದ 'ಸ್ಪೇಸ್ ಟ್ಯಾಕ್ಸಿ' ಯಲ್ಲಿ ಬಾಹ್ಯಾಕಾಶಕ್ಕೆ ಪ್ರವಾಸಿಗರು

ಹೊಸ ಗ್ರಹದ ಜನನ ಕಂಡ ಖಗೋಳವಿಜ್ಞಾನಿಗಳು

ಭಾರತದಿಂದಲೇ ಅಂತರಿಕ್ಷಕ್ಕೆ ಮಾನವರು:ಇಸ್ರೋ ಸ್ಪೇಸ್‌ ಕ್ಯಾಪ್ಸೂಲ್‌ ರೆಡಿ

ಕನ್ನಡ ಗಿಜ್‌ಬಾಟ್‌ನ ಲೇಖನಗಳು ನಿಮಗೆ ಫೇಸ್‌ಬುಕ್‌ನಲ್ಲೂ ಲಭ್ಯ. ಓದಲು ಇಲ್ಲಿ ಕ್ಲಿಕ್ ಮಾಡಿ

ಗಿಜ್‌ಬಾಟ್‌

https://www.facebook.com/GizBotKannada/?fref=ts

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Veteran NASA astronaut Scott Kelly has just tweeted some stunning photographs of south India from the International Space Station. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot