Subscribe to Gizbot

ಬಾಹ್ಯಾಕಾಶದಿಂದ ಸಿನಿಮಾ ಶೂಟ್‌ : ಪೆಪ್ಸಿಯಿಂದ ಬಿಡುಗಡೆ

Posted By:

ಪಿತೂರಿ ಸಿದ್ಧಾಂತಿಗಳು ಇದನ್ನು ಅನ್ಯಗ್ರಹ ಎಂದು ನಂಬುತ್ತಾರೆ - "The Black Knight" ಇದು ಪೋಲಾರ್‌ ಕಕ್ಷೆಯ ಹತ್ತಿರದಲ್ಲಿರುವ ಉಪಗ್ರಹವಾಗಿದ್ದು, 1899 ಪತ್ತೆಯಾಗಿದೆ. ಇದು ಮೊದಲು ತೆಸ್ಲಾ ರೇಡಿಯೋ ಪ್ರಯೋಗದ ವೇಳೆಯಲ್ಲಿ, ಅಂದರೆ 13,000 ವರ್ಷಗಳಿಂದ ಭೂಮಿಯನ್ನು ಸುತ್ತುವರಿದಿದೆ. ಆದರೆ ಇಂದು ಪೆಪ್ಸಿ ಮೊದಲ ಮೆಸೇಜ್‌ ಅನ್ನು ಅನ್ಯಗ್ರಹ "THE Black Knight" ನಿಂದ ತಂದಿದೆ. ಅದೇನೆಂದರೆ, "ಉಪಗ್ರಹ ಹಿಂದಿರುಗ ಬೇಕಾದರೆ ಸಂಪೂರ್ಣ 'ಮೂನ್‌ ಡೇ' ದ ಗುರುತನ್ನು ತೋರಿಸಿ ಎಂಬುದಾಗಿ ಜನರಿಗೆ ಕೇಳಿದೆ".

ಓದಿರಿ :1.1 ಲಕ್ಷ ಕಿಮೀ ಕ್ರಮಿಸಿದ ಕೋಲಾರದ ಸೋಲಾರ್‌ ಕಾರು

ಬಾಹ್ಯಾಕಾಶದಿಂದ ಸಿನಿಮಾ ಶೂಟ್‌ : ಪೆಪ್ಸಿಯಿಂದ ಬಿಡುಗಡೆ

ಪೆಪ್ಸಿ ಸ್ಟುಡಿಯೋ ಪ್ರೊಡಕ್ಷನ್ ಈಗ ಲೆವಿಟಿ ಎಂಟರ್‌ಟೈನ್‌ಮೆಂಟ್‌ ಗ್ರೂಪ್‌ (LEG) ಜೊತೆ ಸಹಭಾಗಿತ್ವ ಹೊಂದಿ, ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಗಳಿಗೆ ಹೈಡೆಫಿನೇಷನ್‌ ಕ್ಯಾಮೆರಾ ಒದಗಿಸುವ UrtheCast ಕಂಪನಿಯ ಕ್ಯಾಮೆರಾ ಬಳಸಿ ಅತಿದೊಡ್ಡ ಸಿನಿಮಾ "ಬ್ಲಾಕ್‌ ನೈಟ್‌ ಡಿಕೋಡೆಡ್‌" ಎಂಬ ಸಿನಿಮಾ ನಿರ್ಮಿಸಿದೆ. ಈ ಸಿನಿಮಾದಲ್ಲಿ ಬಾಹ್ಯಾಕಾಶದಿಂದ ಸೆರೆಹಿಡಿದ ಕೆಲವು ದೃಶ್ಯಗಳನ್ನು ಪೆಪ್ಸಿ ಈಗ ಬಿಡುಗಡೆ ಮಾಡಿದೆ.

"ಬ್ಲಾಕ್‌ ನೈಟ್‌ ಡಿಕೋಡೆಡ್‌" ಸಿನಿಮಾ, ಮೂವರು ವ್ಯಕ್ತಿಗಳು ಅನ್ಯಗ್ರಹದಿಂದ ಏಲಿಯನ್‌ಗಳು ಕಳುಹಿಸಿದ ರೇಡಿಯೋ ಸಂಕೇತಗಳನ್ನು ಡಿಕೋಡ್‌ ಮಾಡಲು ತೆರಳುವ ಪ್ರಯಾಣದ ನಿರೂಪಣೆಯನ್ನು ಹೊಂದಿದೆ. ಈ ಮೂವರು ಕೊನೆಗೂ ಸಹ ಅನ್ಯಗ್ರಹದ ರೇಡಿಯೋ ಸಂಕೇತಗಳನ್ನು ಡಿಕೋಡಿಂಗ್ ಮಾಡಿ ವಿಜಯಿಗಳಾಗುತ್ತಾರೆ. ಇವರ ಈ ಕ್ರಮದಿಂದ ಉಪಗ್ರಹವನ್ನು ಹಿಂದಕ್ಕೆ ಕಳುಹಿಸುತ್ತಾರೆ. ಬ್ಲಾಕ್‌ ನೈಟ್‌ ಕಳುಹಿಸಿದ ಮೆಸೇಜ್ ಅನ್ನು ಅವರು ಒಮ್ಮೆ ಎನ್ಕ್ರಿಪ್ಟ್‌ ಮಾಡಿಕೊಂಡು ಕೆಲವೇ ಕ್ಷಣಗಳಲ್ಲಿ ಆ ಮೆಸೇಜ್‌ ಅನ್ನು ಭಾಷಾಂತರಿಸುವ ಸಂಗತಿಯಾಗಿದೆ.

ಓದಿರಿ:ಇವರನ್ನು ನೋಡಿದರೆ ಕಂಪ್ಯೂಟರ್ ಕೂಡ ಥರ ಥರ ನಡುಗುತ್ತೆ!!!

ಬಾಹ್ಯಾಕಾಶದಿಂದ ಸಿನಿಮಾ ಶೂಟ್‌ : ಪೆಪ್ಸಿಯಿಂದ ಬಿಡುಗಡೆ

ಈ ಎಪಿಕ್‌ ಸಿನಿಮಾದಲ್ಲಿ 11 ದೇಶಗಳ ಜನರು ಸಾರ್ವತ್ರಿಕ ಸಂದೇಶವನ್ನು ಸಂವಹಿಸಲು ಒಟ್ಟಿಗೆ ಬರುತ್ತಾರೆ, ಆ ದೇಶಗಳ ಜನರಲ್ಲಿ ಭಾರತ, ಚೀನಾ, ಆಸ್ಟ್ರೇಲಿಯಾಗಳು ಸೇರಿವೆ. ಪೆಪ್ಸಿ ಬಿಡಗಡೆ ಮಾಡಿರುವ "ಬ್ಲಾಕ್ ನೈಟ್‌ ಡಿಕೋಡೆಡ್‌" ಸಿನಿಮಾದ ಕೆಲವು ಬಾಹ್ಯಾಕಾಶದಿಂದ ಸೆರೆಹಿಡಿದ ದೃಶ್ಯಾವಳಿಯ ವೀಡಿಯೋವನ್ನು ಗಿಜ್‌ಬಾಟ್‌ ಇಲ್ಲಿ ನೀಡಿದೆ. ಇನೆಂದೂ ನೋಡಿರದ ಈ ವೀಡಿಯೋ ನಿಮ್ಮನ್ನು ರೋಮಾಂಚನಗೊಳಿಸುವಲ್ಲಿ ಸಂಶಯವಿಲ್ಲ. ನಿಮಗಾಗಿ ಈ ವೀಡಿಯೋ....

English summary
Conspiracy theorists believe that an alien satellite – The Black Knight, which was first discovered in 1899 during Radio Experiments by Tesla has been circling the Earth since 13,000 years now.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot