Just In
Don't Miss
- News
'ಈ ಬಾರಿ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ' ಕೊಡಿಶ್ರೀಗಳ ರಾಜಕೀಯ ಭವಿಷ್ಯ
- Sports
ಲೂನಾ ಸವಾರಿ ಮಾಡುವುದನ್ನು ನಿಲ್ಲಿಸು ಎಂದು ಚೇತೇಶ್ವರ ಪೂಜಾರಗೆ ಹೇಳಿದ್ದ ರವಿಶಾಸ್ತ್ರಿ
- Automobiles
ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ... ಹಿಂದೆಯೇ ಬಂತು ಟಿವಿಎಸ್!
- Movies
Lakshana Seria: ಶ್ವೇತಾಗೆ ಎಚ್ಚರಿಕೆ ಕೊಟ್ಟ ಭೂಪತಿ, ನಕ್ಷತ್ರ ಜೊತೆ ಚೆಲ್ಲಾಟ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮತ್ತೊಮ್ಮೆ ಬೆಲೆ ಇಳಿಕೆ ಕಂಡ 'ಆಸೂಸ್ 5Z' ಸ್ಮಾರ್ಟ್‌ಫೋನ್!
ಜನಪ್ರಿಯ ಟೆಕ್ ಕಂಪನಿ 'ಆಸೂಸ್' ಹಲವು ಶ್ರೇಣಿಗಳಲ್ಲಿ ನೂತನ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಗ್ರಾಹಕರನ್ನು ಸೆಳೆದಿದೆ. ಆ ಪೈಕಿ 'ಆಸೂಸ್ 5Z' ಸ್ಮಾರ್ಟ್‌ಫೋನ್ ಹೈ ಎಂಡ್ ಫೀಚರ್ಸ್‌ಗಳಿಂದ ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್ ಆಗಿ ಗುರುತಿಸಿಕೊಂಡಿದೆ. ಆದ್ರೆ ಈಗ ಖುಷಿ ವಿಷಯ ಏನೆಂದರೇ ಈಗಾಗಲೇ ಬೆಲೆ ಇಳಿಕೆ ಕಂಡಿರುವ 'ಆಸೂಸ್ 5Z' ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಮತ್ತೊಮ್ಮೆ ಭರ್ಜರಿ ಬೆಲೆ ಇಳಿಕೆ ಆಗಿದೆ.

ಹೌದು, ಆಸೂಸ್ ಕಂಪನಿಯ ಆಸೂಸ್ 5Z ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇದೀಗ ಇಳಿಕೆಯಾಗಿದೆ. 6GB RAM + 128GB ವೇರಿಯಂಟ್ ಸದ್ಯ 24,999ರೂ.ಗಳಿಗೆ ಲಭ್ಯವಿದ್ದು, 8GB RAM + 256GB ವೇರಿಯಂಟ್ 28,999ರೂ.ಗಳ ಪ್ರೈಸ್‌ಟ್ಯಾಗ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಇ-ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, ಸಿಲ್ವರ್ ಮತ್ತು ಮಿಡ್‌ನೈಟ್ ಬ್ಲೂ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ.

ಕಳೆದ ವರ್ಷ ಬಿಡುಗಡೆ ಆಗಿದ್ದ ಈ ಎರಡು ವೇರಿಯಂಟ್‌ಗಳಿ ಈಗಾಗಲೇ ಒಂದು ಬಾರಿ ಬೆಲೆ ಇಳಿಕೆ ಕಂಡಿದ್ದು, ಈಗ ಮತ್ತೆ 3,000ರೂ ಕಡಿತವಾಗಿವೆ. ಸ್ನ್ಯಾಪ್‌ಡ್ರಾಗನ್ 845 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಿಂಬದಿ ಡ್ಯುಯಲ್ ಕ್ಯಾಮೆರಾ ಸೌಲಭ್ಯವನ್ನು ಹೊಂದಿದೆ. ಹಾಗಾದರೇ ಆಸೂಸ್ 5Z ಸ್ಮಾರ್ಟ್‌ಫೋನ್ ಹೊಂದಿರುವ ಇತರೆ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ
6.2 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿರುವ ಆಸೂಸ್ 5Z ಸ್ಮಾರ್ಟ್‌ಫೋನ್ 1080x2246 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 18.7:9 ಆಗಿದ್ದು, ಸ್ಕ್ರೀನ್ ಗೊರಿಲ್ಲಾ ಗ್ಲಾಸ್‌ನ ರಕ್ಷಣೆ ಪಡೆದುಕೊಂಡಿದೆ. ಹಾಗೆಯೇ ಫೋನಿನ ಡಿಸ್‌ಪ್ಲೇ ಸುತ್ತಲೂ ಕಡಿಮೆ ಅಂಚನ್ನು ಹೊಂದಿದೆ.

ಪ್ರೊಸೆಸರ್ ಶಕ್ತಿ
ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 845 SoC ಪ್ರೊಸೆಸರ್ ಶಕ್ತಿ ಇದ್ದು, ಜೊತೆಗೆ ಆಡ್ರೆನೊ 630 GPU ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 6GB RAM + 128GB ವೇರಿಯಂಟ್ 8GB RAM + 256GB ವೇರಿಯಂಟ್ ಸಾಮರ್ಥ್ಯದಲ್ಲಿವೆ.

ಕ್ಯಾಮೆರಾ ವಿಶೇಷತೆ
ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆಯನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾವು ಸೋನಿಯ IMX363 ಸೆನ್ಸಾರ್‌ನೊಂದಿಗೆ f/1.8 ಲೆನ್ಸ್‌ನ 12 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು ಮೆಗಾಪಿಕ್ಸಲ್ ಓಮಿನಿವಿಶನ್ 8856 ಸೆನ್ಸಾರ್‌ನೊಂದಿಗೆ f/2.2 ಲೆನ್ಸ್ ಒಳಗೊಂಡ 8ಎಂಪಿ ಕ್ಯಾಮೆರಾ ಇದೆ. ಸೆಲ್ಫಿ ಕ್ಯಾಮೆರಾ ಸಹ 8ಎಂಪಿ ಸೆನ್ಸಾರ್ ಹೊಂದಿದೆ.

ಬ್ಯಾಟರಿ ಪವರ್
ಆಸೂಸ್ 5Z ಸ್ಮಾರ್ಟ್‌ಫೋನ್ 3,300mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಜೊತೆಗೆ 3.0 ಕ್ವಿಕ್ ಚಾರ್ಜಿಂಗ್ ಸೌಲಭ್ಯದ ಬೆಂಬಲವನ್ನು ಸಹ ಒಳಗೊಂಡಿದೆ. ಇದರೊಂದಿಗೆ ಬ್ಲೂಟೂತ್ 5.0, ವೈಫೈ 802.11ac (2.4GHz/ 5GHz), 3.5mm ಆಡಿಯೊ ಜಾಕ್, NFC, ಯುಎಸ್‌ಬಿ, ಓಟಿಜಿ, ಯುಎಸ್‌ಬಿ ಟೈಪ್-ಸಿ ಮತ್ತು ಜಿಪಿಎಸ್ ಸೌಲಭ್ಯಗಳನ್ನು ಸಹ ಪಡೆದುಕೊಂಡಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470