ಭಾರತದಲ್ಲಿ ಆಸೂಸ್‌ 6z ಫೋನಿನ 128GB ಮತ್ತು 256GB ವೇರಿಯಂಟ್ಸ್‌ ಸೇಲ್‌ ಶುರು!

|

ತೈವಾನ್‌ ಮೂಲದ ಆಸೂಸ್‌ ಕಂಪನಿಯು ಇತ್ತೀಚಿಗೆ ಭಾರತದಲ್ಲಿ ತನ್ನ ಬಹುನಿರೀಕ್ಷಿತ 'ಆಸೂಸ್‌ 6z' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದ್ದು, ಹಾಗೆಯೇ 6GB RAM 64GB ಸ್ಟೋರೇಜ್‌ ವೇರಿಯಂಟ್‌ ಸ್ಮಾರ್ಟ್‌ಫೋನ್‌ ಸೇಲ್‌ ಸಹ ಶುರು ಮಾಡಿತ್ತು. ಆದ್ರೆ ಇದೀಗ ಕಂಪನಿಯು 6GB + 128GB ಮತ್ತು 8GB + 256GB ವೇರಿಯಂಟ್ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮಾರಾಟವನ್ನು ಸಹ ದೇಶಿಯ ಮಾರುಕಟ್ಟೆಯಲ್ಲಿ ಆರಂಭಿಸಿದೆ.

ಭಾರತದಲ್ಲಿ ಆಸೂಸ್‌ 6z ಫೋನಿನ 128GB ಮತ್ತು 256GB ವೇರಿಯಂಟ್ಸ್‌ ಸೇಲ್‌ ಶುರು!

ಹೌದು, ಆಸೂಸ್‌ ಕಂಪನಿಯು ತನ್ನ 'ಆಸೂಸ್‌ 6z' ಸ್ಮಾರ್ಟ್‌ಫೋನಿನ್ 6GB + 128GB ಮತ್ತು 8GB + 256GB ವೇರಿಯಂಟ್‌ಗಳ ಸೇಲ್‌ ಅನ್ನು ಜನಪ್ರಿಯ ಇ-ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ ಸಹಯೋಗದಲ್ಲಿ ಶುರುಮಾಡಿದೆ. 6GB RAM ಮತ್ತು 64GB ಸ್ಟೋರೇಜ್‌ ವೇರಿಯಂಟ್‌ ಈಗಾಗಲೇ ಖರೀದಿಗೆ ಲಭ್ಯವಿದೆ. 'ಫ್ಲಿಪ್'‌ ಮಾದರಿಯ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್‌ ಹೊಂದಿರುವುದು ಮೇನ್‌ ಹೈಲೈಟ್‌.

ಭಾರತದಲ್ಲಿ ಆಸೂಸ್‌ 6z ಫೋನಿನ 128GB ಮತ್ತು 256GB ವೇರಿಯಂಟ್ಸ್‌ ಸೇಲ್‌ ಶುರು!

ಇಂದು ಮಧ್ಯಾಹ್ನ 12ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್‌ ಆರಂಭವಾಗಿದೆ. ಆಸೂಸ್‌ 6z ಸ್ಮಾರ್ಟ್‌ಫೋನಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಾಂಚ್‌ ಆಫರ್‌ ಇದ್ದು, ಫೋನ್‌ ಖರೀದಿಸುವ ಗ್ರಾಹಕರಿಗೆ 3,999ರೂ.ಗಳ ಬೆಲೆಯ ಮೊಬೈಲ್‌ ಪ್ರೊಟೆಕ್ಷನ್ ಕಿಟ್‌ ಕೇವಲ 99ರೂ.ಗಳಿಗೆ ಲಭ್ಯವಾಗಲಿದೆ. ಹಾಗಾದರೇ 'ಆಸೂಸ್‌ 6z' ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಅತೀ ಶೀಘ್ರದಲ್ಲೇ ಐಫೋನ್‌ನಲ್ಲಿ ಈ ಫೀಚರ್ಸ್‌ಗಳು ಕಾಣಿಸಿಕೊಳ್ಳಲಿವೆ! ಓದಿರಿ : ಅತೀ ಶೀಘ್ರದಲ್ಲೇ ಐಫೋನ್‌ನಲ್ಲಿ ಈ ಫೀಚರ್ಸ್‌ಗಳು ಕಾಣಿಸಿಕೊಳ್ಳಲಿವೆ!

ಹೆಚ್‌ಡಿ ಡಿಸ್‌ಪ್ಲೇ

ಹೆಚ್‌ಡಿ ಡಿಸ್‌ಪ್ಲೇ

ಆಸೂಸ್‌ 6z ಸ್ಮಾರ್ಟ್‌ಫೋನಿನಲ್ಲಿ 6.4 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ಕ್ರೀನ್‌ LCD ಮಾದರಿಯಲ್ಲಿದೆ. ಡಿಸ್‌ಪ್ಲೇಯ ಸುತ್ತಲೂ ನಾಚ್‌ ಇಲ್ಲದ, ಅತೀ ಕಡಿಮೆ ಅಂಚಿನ ರಚನೆಯನ್ನು ಪಡೆದಿದೆ. ಹಾಗಾಯೇ ಡಿಸ್‌ಪ್ಲೇ ಸುತ್ತಲಿನ ನಾಲ್ಕು ಮೂಲೆಗಳು ಕರ್ವ್ ಮಾದರಿಯ ಆಕಾರದಲ್ಲಿದ್ದು, ಸ್ಮಾರ್ಟ್‌ಫೋನ್‌ ಅಂದವನ್ನು ಹೆಚ್ಚಿಸಿದೆ.

ಬಲವಾದ ಪ್ರೊಸೆಸರ್

ಬಲವಾದ ಪ್ರೊಸೆಸರ್

ಆಸೂಸ್‌ 6z ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಅನ್ನು ಹೊಂದಿದ್ದು, ಈ ಫೋನ್ ಎರಡು RAM ಆಯ್ಕೆಗಳನ್ನು ಹೊಂದಿದೆ. ಅವು ಕ್ರಮವಾಗಿ 6GB RAM ಮತ್ತು 8GB RAM ಸಾಮರ್ಥ್ಯದಲ್ಲಿವೆ. ಹಾಗೆಯೇ ಆಂತರಿಕ ಸಂಗ್ರಹಕ್ಕಾಗಿ 64GB, 128GB ಮತ್ತು 256GB ಸ್ಥಳಾವಕಾಶದ ಮೂರು ಆಯ್ಕೆಗಳನ್ನು ಒದಗಿಸಲಾಗಿದೆ.

ಓದಿರಿ : ವಾಟ್ಸಪ್‌ ಸ್ಟೇಟಸ್‌ನಲ್ಲಿ ಬದಲಾವಣೆ!..ಕಾಣಿಸಿಕೊಳ್ಳಲಿದೆ ಹೊಸ ಫೀಚರ್‌! ಓದಿರಿ : ವಾಟ್ಸಪ್‌ ಸ್ಟೇಟಸ್‌ನಲ್ಲಿ ಬದಲಾವಣೆ!..ಕಾಣಿಸಿಕೊಳ್ಳಲಿದೆ ಹೊಸ ಫೀಚರ್‌!

ಫ್ಲಿಪ್ ಕ್ಯಾಮೆರಾ (ಟು ಇನ್ ಒನ್)

ಫ್ಲಿಪ್ ಕ್ಯಾಮೆರಾ (ಟು ಇನ್ ಒನ್)

ಆಸೂಸ್ ಮೊದಲ ಬಾರಿಗೆ ಹೊಸದಾಗಿ ಫ್ಲಿಪ್ ಕ್ಯಾಮೆರಾವನ್ನು ಪರಿಚಯಿಸಿದ್ದು, ಈ ಕ್ಯಾಮೆರಾವು ಹಿಂಬದಿ ಮತ್ತು ಮುಂಬದಿಗೆ ತಿರುಗುವ ಮಾದರಿಯಲ್ಲಿದೆ. ಹೀಗಾಗಿ ಸೆಲ್ಫಿಗಾಗಿ ಪ್ರತ್ಯೇಕ ಕ್ಯಾಮೆರಾ ಒದಗಿಸಿಲ್ಲ. ಸ್ಮಾರ್ಟ್‌ಫೋನಿನ ಹಿಂಬದಿ ಇರುವ ಕ್ಯಾಮೆರಾ ಸೆಲ್ಫಿ ಸೆರೆಹಿಡಿಯುವಾಗ ಮುಂಬದಿಗೆ ತಿರುಗುತ್ತವ ಆಯ್ಕೆಯನ್ನು ಪಡೆದಿದೆ. ಎರಡು ಬದಿಗೂ ಈ ಒಂದೇ ಕ್ಯಾಮೆರಾ ಬಳಕೆಯಾಗಲಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಆಸೂಸ್‌ 6z ಸ್ಮಾರ್ಟ್‌ಫೋನಿನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ನೀಡಲಾಗಿದ್ದು, ಕ್ಯಾಮೆರಾ ಆಯ್ಕೆಯು ಫ್ಲಿಪ್ ಮಾದರಿಯಲ್ಲಿದೆ. ಪ್ರಮುಖ ಕ್ಯಾಮೆರಾವು ಸೋನಿಯ IMX586 ಸೆನ್ಸಾರ್‌ನೊಂದಿಗೆ 48 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು ವೈಲ್ಡ್‌ ಆಂಗಲ್ ಲೆನ್ಸ್‌ನೊಂದಿಗೆ 13 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಸೆಲ್ಫಿಗೂ ಈ ಕ್ಯಾಮೆರಾವೇ ಬಳಕೆಯಾಗಲಿದೆ.

ಓದಿರಿ : BSNLನಿಂದ ಹೊಸ STV-1345ರೂ. ಪ್ಲ್ಯಾನ್‌!.ಒಂದು ವರ್ಷ ವ್ಯಾಲಿಡಿಟಿ!ಓದಿರಿ : BSNLನಿಂದ ಹೊಸ STV-1345ರೂ. ಪ್ಲ್ಯಾನ್‌!.ಒಂದು ವರ್ಷ ವ್ಯಾಲಿಡಿಟಿ!

ಹೇವಿ ಬ್ಯಾಟರಿ ಲೈಫ್

ಹೇವಿ ಬ್ಯಾಟರಿ ಲೈಫ್

ಆಸೂಸ್‌ 6z ಸ್ಮಾರ್ಟ್‌ಫೋನಿಗೆ 5000mAh ಸಾಮರ್ಥ್ಯದ ಪವರ್‌ಫುಲ್‌ ಬ್ಯಾಟರಿ ಶಕ್ತಿಯನ್ನು ನೀಡಲಾಗಿದೆ. ದೀರ್ಘಕಾಲದ ಬಾಳಿಕೆಗೆ ಬೆಂಬಲ ನೀಡಲಿದೆ. ಇದರೊಂದಿಗೆ 4.0. ವೇಗದ ಚಾರ್ಜಿಂಗ್ ತಂತ್ರಜ್ಞಾನ ಸೌಲಭ್ಯವನ್ನು ಸಹ ಒದಗಿಸಲಾಗಿದ್ದು, ಇದರ ನೆರವಿನಿಂದ ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜಿಂಗ್ ಪಡೆದುಕೊಳ್ಳಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಈಗಾಗಲೇ ಆಸೂಸ್‌ 6z ಸ್ಮಾರ್ಟ್‌ಫೋನ್‌ 6GB RAM ಮತ್ತು 64GB ವೇರಿಯಂಟ್ 31,999 ರೂ.ಗಳು ಲಭ್ಯವಿದೆ. ಹಾಗೆಯೇ 6GB RAM ಮತ್ತು 128GB ವೇರಿಯಂಟ್ ಬೆಲೆಯು 34,999ರೂ.ಗಳು ಮತ್ತು 8GB RAM ಮತ್ತು 256GB ವೇರಿಯಂಟ್ ಬೆಲೆಯು 39,999ರೂ.ಗಳ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿವೆ. ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ದೊರೆಯಲಿವೆ.

ಓದಿರಿ : ಬಜೆಟ್‌ ಬೆಲೆಯ 'ಎಲ್‌ಜಿ W10' ಫೋನಿನ ಸ್ಪೆಷಲ್ ಫೀಚರ್ಸ್‌ ಏನು ಗೊತ್ತಾ?ಓದಿರಿ : ಬಜೆಟ್‌ ಬೆಲೆಯ 'ಎಲ್‌ಜಿ W10' ಫೋನಿನ ಸ್ಪೆಷಲ್ ಫೀಚರ್ಸ್‌ ಏನು ಗೊತ್ತಾ?

Best Mobiles in India

English summary
Asus 6Z 6GB + 128GB and 8GB + 256GB variants are now all set to go on sale for the first time starting today. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X