ಫ್ಲಿಪ್ ಕ್ಯಾಮೆರಾ ಸ್ಪೆಷಲ್ 'ಆಸೂಸ್ 6z' ಸ್ಮಾರ್ಟ್‌ಫೋನ್ ಭಾರತದಲ್ಲಿಗ ಲಭ್ಯ!
ಆಸೂಸ್ ಕಂಪನಿಯು ಇತ್ತೀಚಿಗೆ ವಿಶ್ವ ಮಟ್ಟದಲ್ಲಿ ಫ್ಲ್ಯಾಗ್‌ಶಿಪ್ ಮಾದರಿಯ ಹೊಸ 'ಝೆನ್‌ಫೋನ್ 6' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತ್ತು. ಹಾಗೆಯೇ ಕಂಪನಿಯು ಕಳೆದ ವಾರವಷ್ಟೇ ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು 'ಆಸೂಸ್ 6z' ಹೆಸರಿನಿಂದ ಲಾಂಚ್ ಮಾಡಿತ್ತು. ಆದ್ರೆ ಇದೀಗ ಈ ಸ್ಮಾರ್ಟ್‌ಫೋನ್ ದೇಶಿಯ ಮಾರುಕಟ್ಟೆಯಲ್ಲಿ ಸೇಲ್ ಆರಂಭಿಸಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರ ಖರೀದಿಗೆ ಲಭ್ಯವಾಗಿದೆ.

ಹೌದು, 'ಆಸೂಸ್ 6z' ಸ್ಮಾರ್ಟ್‌ಫೋನ್ ಭಾರತದಲ್ಲಿ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ (ಜೂನ್.26) ಮೂಲಕ ಮಾರಾಟ ಆರಂಭಿಸಿದ್ದು, 6GB RAM 64GB ಸ್ಟೋರೇಜ್ ವೇರಿಯಂಟ್ ಖರೀದಿಗೆ ಲಭ್ಯವಿದೆ. ಹಾಗೂ 8GB ವೇರಿಯಂಟ್ ಸಹ ಶೀಘ್ರದಲ್ಲೇ ಗ್ರಾಹಕರಿಗೆ ದೊರೆಯಲಿದೆ. ಈ ಸ್ಮಾರ್ಟ್‌ಫೋನ್ ಮೇನ್ ಅಟ್ರ್ಯಾಕ್ಷನ್ 'ಫ್ಲಿಪ್ ಕ್ಯಾಮೆರಾ' ಆಗಿರುವ ಜೊತೆಗೆ 5000mAh ಸಾಮರ್ಥ್ಯದ ಶಕ್ತಿಯುತ ಬ್ಯಾಟರಿ ಫೀಚರ್‌ನಿಂದ ಗಮನ ಸೆಳೆದಿದೆ. ಹಾಗಾದರೇ 'ಆಸೂಸ್ 6z' ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಹೆಚ್‌ಡಿ ಡಿಸ್‌ಪ್ಲೇ
ಆಸೂಸ್ 6z ಸ್ಮಾರ್ಟ್‌ಫೋನಿನಲ್ಲಿ 6.4 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ಕ್ರೀನ್ LCD ಮಾದರಿಯಲ್ಲಿದೆ. ಡಿಸ್‌ಪ್ಲೇಯ ಸುತ್ತಲೂ ನಾಚ್ ಇಲ್ಲದ, ಅತೀ ಕಡಿಮೆ ಅಂಚಿನ ರಚನೆಯನ್ನು ಪಡೆದಿದೆ. ಹಾಗಾಯೇ ಡಿಸ್‌ಪ್ಲೇ ಸುತ್ತಲಿನ ನಾಲ್ಕು ಮೂಲೆಗಳು ಕರ್ವ್ ಮಾದರಿಯ ಆಕಾರದಲ್ಲಿದ್ದು, ಸ್ಮಾರ್ಟ್‌ಫೋನ್ ಅಂದವನ್ನು ಹೆಚ್ಚಿಸಿದೆ.

ಬಲವಾದ ಪ್ರೊಸೆಸರ್
ಆಸೂಸ್ 6z ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಅನ್ನು ಹೊಂದಿದ್ದು, ಈ ಫೋನ್ ಎರಡು RAM ಆಯ್ಕೆಗಳನ್ನು ಹೊಂದಿದೆ. ಅವು ಕ್ರಮವಾಗಿ 6GB RAM ಮತ್ತು 8GB RAM ಸಾಮರ್ಥ್ಯದಲ್ಲಿವೆ. ಹಾಗೆಯೇ ಆಂತರಿಕ ಸಂಗ್ರಹಕ್ಕಾಗಿ 64GB, 128GB ಮತ್ತು 256GB ಸ್ಥಳಾವಕಾಶದ ಮೂರು ಆಯ್ಕೆಗಳನ್ನು ಒದಗಿಸಲಾಗಿದೆ.

ಫ್ಲಿಪ್ ಕ್ಯಾಮೆರಾ (ಟು ಇನ್ ಒನ್)
ಆಸೂಸ್ ಮೊದಲ ಬಾರಿಗೆ ಹೊಸದಾಗಿ ಫ್ಲಿಪ್ ಕ್ಯಾಮೆರಾವನ್ನು ಪರಿಚಯಿಸಿದ್ದು, ಈ ಕ್ಯಾಮೆರಾವು ಹಿಂಬದಿ ಮತ್ತು ಮುಂಬದಿಗೆ ತಿರುಗುವ ಮಾದರಿಯಲ್ಲಿದೆ. ಹೀಗಾಗಿ ಸೆಲ್ಫಿಗಾಗಿ ಪ್ರತ್ಯೇಕ ಕ್ಯಾಮೆರಾ ಒದಗಿಸಿಲ್ಲ. ಸ್ಮಾರ್ಟ್‌ಫೋನಿನ ಹಿಂಬದಿ ಇರುವ ಕ್ಯಾಮೆರಾ ಸೆಲ್ಫಿ ಸೆರೆಹಿಡಿಯುವಾಗ ಮುಂಬದಿಗೆ ತಿರುಗುತ್ತವ ಆಯ್ಕೆಯನ್ನು ಪಡೆದಿದೆ. ಎರಡು ಬದಿಗೂ ಈ ಒಂದೇ ಕ್ಯಾಮೆರಾ ಬಳಕೆಯಾಗಲಿದೆ.

ಕ್ಯಾಮೆರಾ ವಿಶೇಷತೆ
ಆಸೂಸ್ 6z ಸ್ಮಾರ್ಟ್‌ಫೋನಿನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ನೀಡಲಾಗಿದ್ದು, ಕ್ಯಾಮೆರಾ ಆಯ್ಕೆಯು ಫ್ಲಿಪ್ ಮಾದರಿಯಲ್ಲಿದೆ. ಪ್ರಮುಖ ಕ್ಯಾಮೆರಾವು ಸೋನಿಯ IMX586 ಸೆನ್ಸಾರ್‌ನೊಂದಿಗೆ 48 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು ವೈಲ್ಡ್ ಆಂಗಲ್ ಲೆನ್ಸ್‌ನೊಂದಿಗೆ 13 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಸೆಲ್ಫಿಗೂ ಈ ಕ್ಯಾಮೆರಾವೇ ಬಳಕೆಯಾಗಲಿದೆ.

ಹೇವಿ ಬ್ಯಾಟರಿ ಲೈಫ್
ಆಸೂಸ್ 6z ಸ್ಮಾರ್ಟ್‌ಫೋನಿಗೆ 5000mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿ ಶಕ್ತಿಯನ್ನು ನೀಡಲಾಗಿದೆ. ದೀರ್ಘಕಾಲದ ಬಾಳಿಕೆಗೆ ಬೆಂಬಲ ನೀಡಲಿದೆ. ಇದರೊಂದಿಗೆ 4.0. ವೇಗದ ಚಾರ್ಜಿಂಗ್ ತಂತ್ರಜ್ಞಾನ ಸೌಲಭ್ಯವನ್ನು ಸಹ ಒದಗಿಸಲಾಗಿದ್ದು, ಇದರ ನೆರವಿನಿಂದ ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜಿಂಗ್ ಪಡೆದುಕೊಳ್ಳಲಿದೆ.

ಬೆಲೆ ಮತ್ತು ಲಭ್ಯತೆ
ಆಸೂಸ್ 6z ಸ್ಮಾರ್ಟ್‌ಫೋನ್ 6GB RAM ಮತ್ತು 64GB ವೇರಿಯಂಟ್ ಬೆಲೆಯು 31,999 ರೂ.ಗಳು ಹಾಗೆಯೇ 6GB RAM ಮತ್ತು 128GB ವೇರಿಯಂಟ್ ಬೆಲೆಯು 34,999ರೂ.ಗಳು ಮತ್ತು 8GB RAM ಮತ್ತು 256GB ವೇರಿಯಂಟ್ ಬೆಲೆಯು 39,999ರೂ.ಗಳ ಪ್ರೈಸ್‌ಟ್ಯಾಗ್ ಅನ್ನು ಹೊಂದಿವೆ. ಇ ಕಾಮರ್ಸ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ದೊರೆಯಲಿವೆ.


Click it and Unblock the Notifications








