ಆಸೂಸ್‌ 7 ಮತ್ತು ಆಸೂಸ್‌ 7 ಪ್ರೊ ಬಿಡುಗಡೆಗೆ ದಿನಾಂಕ ನಿಗದಿ!

|

ತೈವಾನ್‌ ಮೂಲದ ತಂತ್ರಜ್ಞಾನ ದೈತ್ಯ ಆಸೂಸ್‌ ಸಂಸ್ಥೆಯು ಹಲವು ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಆ ಸರಣಿಯಲ್ಲಿ ಇದೀಗ ಸಂಸ್ಥೆಯು ಹೊಸದಾಗಿ ಆಸೂಸ್‌ 7 ಮತ್ತು ಆಸೂಸ್‌ 7 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲು ಮೂಹೂರ್ತ ಫಿಕ್ಸ್‌ ಮಾಡುವವರಿದ್ದಾರೆ. ಇನ್ನು ಆಸೂಸ್‌ 7 ಸರಣಿಯು ಈ ಹಿಂದಿನ 6Z ಫೋನಿನ ಉತ್ತರಾಧಿಕಾರಿ ಎನ್ನಲಾಗಿದೆ.

ಆಸೂಸ್

ಹೌದು, ಆಸೂಸ್ ಕಂಪನಿಯು ಆಸೂಸ್‌ 7 ಮತ್ತು ಆಸೂಸ್‌ 7 ಪ್ರೊ ಫೋನ್‌ಗಳನ್ನು ಇದೇ ಜುಲೈ 22, 2020ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಅದಕ್ಕಾಗಿ ಈಗಾಗಲೇ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ವೇದಿಕೆ ಸಜ್ಜುಗೊಳಿಸಿದೆ. ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳು ಸ್ನಾಪ್‌ಡ್ರಾಗನ್ 865 SoC ಪ್ರೊಸೆಸರ್‌ ಹಾಗೂ ಆಂಡ್ರಾಯ್ಡ್‌ 10 ಓಎಸ್‌ ಒಳಗೊಂಡಿರಲಿವೆ ಎಂದೆನ್ನುತ್ತಿವೆ ಲೀಕ್ ಮಾಹಿತಿಗಳು.

ಆಸೂಸ್‌

ಆಸೂಸ್‌ 7 ಸರಣಿಯ ಫೋನ್‌ಗಳು ರೋಟೆಟ್ ಕ್ಯಾಮೆರಾ ರಚನೆಯನ್ನು ಹೊಂದಿರಲಿವೆ. ಹಿಂಭಾಗದಲ್ಲಿ ಕ್ಯಾಮೆರಾ ಜೊತೆಗೆ ಸೆಲ್ಫಿ ಕ್ಯಾಮೆರಾದಂತೆ ಕಾರ್ಯನಿರ್ವಹಿಸಲು ಈ ಕ್ಯಾಮೆರಾ ಸಂವೇದಕ ಹಿಂದಿನಿಂದ ತಿರುಗುವ ರಚನೆ ಪಡೆದಿದೆ. ಅಧಿಕ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ಇರಲಿದ್ದು, ಸುತ್ತಲೂ ನಾಚ್-ಕಡಿಮೆ ಡಿಸೈನ್ ಹೊಂದಿರುವ LCD ಡಿಸ್‌ಪ್ಲೇ ಒಳಗೊಂಡಿರಲಿವೆ. ಜೊತೆಗೆ ಅಧಿಕ RAM ಸೌಲಭ ಚಿಪ್‌ಸೆಟ್ 5G ಮೋಡೆಮ್‌ ವ್ಯವಸ್ಥೆ ಹೊಂದಿರಲಿದೆ.

ಗೇಮಿಂಗ್-ಫೋಕಸ್ಡ್

ಗೇಮಿಂಗ್-ಫೋಕಸ್ಡ್ ಸ್ಮಾರ್ಟ್‌ಫೋನ್ ಆಗಿದ್ದು, ಸ್ನಾಪ್ಡ್ರಾಗನ್ 865 ಪ್ಲಸ್ SoC ನಿಂದ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇನ್ನು ಆಸೂಸ್‌ 7 ಸರಣಿಯ ಫೋನ್‌ಗಳು ಹೈ ಸ್ಕ್ರೀನ್ ರಿಫ್ರೆಶ್ ರೇಟ್ ಡಿಸ್‌ಪ್ಲೇ, 5 ಜಿ ಕನೆಕ್ಟಿವಿಟಿ, 16GB LPDDR5 RAM, 64MP ಟ್ರಿಪಲ್ ರಿಯರ್ ಕ್ಯಾಮೆರಾಗಳು ಮತ್ತು 30 ಡಬ್ಲ್ಯೂ ಹೈಪರ್‌ಚಾರ್ಜ್ ಬೆಂಬಲದೊಂದಿಗೆ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಪಡೆದಿರಲಿದೆ. ಆಸೂಸ್‌ ASUS 6Z ಫೋನ್‌ ಬೆಲೆಯಂತೆ ASUS 7 ಸರಣಿಯ ಸ್ಮಾರ್ಟ್‌ಫೋನ್‌ಗಳು ಬೆಲೆ ಇರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಆಸೂಸ್‌ 7

ಆಸೂಸ್‌ 7 ಬೆಲೆ ಮತ್ತು ಲಾಂಚ್ ಮಾಹಿತಿ:
ಡಿಸ್‌ಪ್ಲೇ: 6.4 ಇಂಚು
ಪ್ರೊಸೆಸರ್: ಸ್ನ್ಯಾಪ್‌ಡ್ರಾಗನ್ 865
ಕ್ಯಾಮೆರಾ: ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌. ಮುಖ್ಯ ಕ್ಯಾಮೆರಾಗಳು 64 MP + 13 MP
ಸೆಲ್ಫಿ ಕ್ಯಾಮೆರಾ: 20ಎಂಪಿ
ಬ್ಯಾಟರಿ: 5000mAh
ನಿರೀಕ್ಷಿತ ಬೆಲೆ: ರೂ. 34,999
ಬಿಡುಗಡೆ ದಿನಾಂಕ: 16-ಜುಲೈ -2020 (ನಿರೀಕ್ಷಿತ)
ವೇರಿಯಂಟ್: 8GB RAM / 128 GB

Most Read Articles
Best Mobiles in India

English summary
The handsets may also come with up to 16GB RAM, 5G support, and an in-display fingerprint scanner.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X