Subscribe to Gizbot

ಅಸೂಸ್ ಹೊರತಂದಿದೆ ಅತ್ಯಾಧುನಿಕ ಟ್ಯಾಬ್ಲೆಟ್

Written By:

ತೈವಾನ್ ಮೂಲದ ಹ್ಯಾಂಡ್‌ಸೆಟ್ ತಯಾರಕ ಕಂಪೆನಿ ಅಸೂಸ್ ತಮ್ಮ ಅತ್ಯಾಧುನಿಕ ಟ್ಯಾಬ್ಲೆಟ್ ಅನ್ನು ಲಾಂಚ್ ಮಾಡಿದ್ದು ಜೆನ್‌ಪ್ಯಾಡ್ 3 8.0 ಎಂಬುದಾಗಿ ಇದನ್ನು ಕರೆಯಲಾಗಿದೆ. ಟ್ಯಾಬ್ಲೆಟ್‌ನ ವಿ‍ಷೇಷತೆಗಳನ್ನು ನೋಡುವಾಗ ಜೆನ್‌ಪ್ಯಾಡ್ 3 8.0, 7.9 ಇಂಚಿನ ಐಪಿಎಸ್ ಎಲ್ಇಡಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ರೆಸಲ್ಯೂಶನ್ 2048 x 1536 ಪಿಕ್ಸೆಲ್‌ಗಳಾಗಿವೆ.

ಓದಿರಿ: ವಿಜ್ಞಾನಿಗಳಿಂದ ಸ್ಥೂಲಾಕಾಯ ಸಮಸ್ಯೆಗೆ ಅದ್ಭುತ ಪರಿಹಾರ

ಫೋನ್‌ನ ಹಾರ್ಡ್‌ವೇರ್ ಕುರಿತು ನೋಡುವುದಾದರೆ, ಟ್ಯಾಬ್ಲೆಟ್ ಹೆಕ್ಸಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 650 ಸಾಕ್ ಅನ್ನು ಪಡೆದುಕೊಂಡಿದ್ದು ಅಡ್ರೆನೊ 510 ಜಿಪಿಯುವನ್ನು ಒಳಗೊಂಡಿದೆ. ಡಿವೈಸ್ ಸಂಗ್ರಹಣೆಯು 2ಜಿಬಿ/4ಜಿಬಿ RAM ಆಗಿದ್ದು, 16/32ಜಿಬಿ ROM ಅನ್ನು ಪಡೆದುಕೊಂಡಿದೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ.

ಅಸೂಸ್ ಹೊರತಂದಿದೆ ಅತ್ಯಾಧುನಿಕ ಟ್ಯಾಬ್ಲೆಟ್

ಬಳಕೆದಾರರು 5ಜಿಬಿ ಅಸೂಸ್ ವೆಬ್ ಸ್ಟೋರೇಜ್ ಅನ್ನು ಪಡೆದುಕೊಂಡಿದ್ದು 100 ಜಿಬಿ ಗೂಗಲ್ ಡ್ರೈವ್ ಅನ್ನು ಎರಡು ವರ್ಷಗಳಿಗಾಗಿ ಹೊಂದಿದೆ. ಡಿವೈಸ್ 8ಎಮ್‌ಪಿ ರಿಯರ್ ಕ್ಯಾಮೆರಾವನ್ನು ಹೊಂದಿದ್ದು ಮುಂಭಾಗದಲ್ಲಿ 2ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಒಳಗೊಂಡಿದೆ.

ಓದಿರಿ: 'ರಾಷ್ಟ್ರೀಯ ಖಗೋಳ ಛಾಯಾಗ್ರಾಹಕ' ಸ್ಪರ್ಧೆಗೆ ಆಯ್ಕೆಯಾದ ಫೋಟೋಗಳು!

ಫೋನ್ ಸಂಪರ್ಕ ವ್ಯವಸ್ಥೆಗಳಾದ ವೈಫೈ, ಬ್ಲ್ಯೂಟೂತ್ 4.0, 3ಜಿ, 4ಜಿ ಮತ್ತು ಇತರ ಫೀಚರ್‌ಗಳನ್ನು ಪಡೆದುಕೊಂಡಿದ್ದು ಆಡಿಯೊ ಸ್ಪೀಕರ್ ಅನ್ನು ಹೊಂದಿದೆ. ಒಳಭಾಗದ ಹಾರ್ಡ್‌ವೇರ್ 4,680mAh ಬ್ಯಾಟರಿಯನ್ನು ಹೊಂದಿದ್ದು 11 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ಒದಗಿಸಲಿದೆ.

English summary
Today, the Taiwan-based handset maker Asus has launched their latest tablet under the high-end segment dubbed as Zenpad 3 8.0.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot