ಆಸುಸ್‌ನಿಂದ ಹೊಸ ಗೇಮಿಂಗ್ ಡಿವೈಸ್ ಘೋಷಣೆ!..ಗೇಮ್ ಪ್ರಿಯರಿಗೆ ಹಬ್ಬ!
ತೈವಾನ್ ಮೂಲದ ಆಸುಸ್ ಸಂಸ್ಥೆಯು ಭಾರತದಲ್ಲಿ ನೂತನವಾಗಿ ಆಸುಸ್ ROG ಆಲಿ (ASUS ROG Ally) ಡಿವೈಸ್ ಅನ್ನು ಅನಾವರಣ ಮಾಡಿದೆ. ಈ ಸಾಧನವು ಹ್ಯಾಂಡ್ಹೆಲ್ಡ್ ಗೇಮಿಂಗ್ ಕನ್ಸೋಲ್ ಆಗಿದ್ದು, ಕೆಲವು ಆಕರ್ಷಕ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಪಡೆದಿದೆ.
ಹೌದು, ಆಸುಸ್ ಸಂಸ್ಥೆಯು ಹೊಸದಾಗಿ ಆಸುಸ್ ROG ಆಲಿ ಹೆಸರಿನ ಗೇಮಿಂಗ್ ಡಿವೈಸ್ ಅನ್ನು ಪರಿಚಯಿಸಿದೆ. ಈ ಡಿವೈಸ್ 16GB RAM ಮತ್ತು 512GB SSD ಸ್ಟೋರೇಜ್ ಆಯ್ಕೆಯನ್ನು ಪಡೆದಿದ್ದು, AMD ರೆಯಾನ್ Z1 ಎಕ್ಸ್‌ಟ್ರೀಮ್ 4nm ಪ್ರೊಸೆಸರ್ ನಿಂದ ಕಾರ್ಯನಿರ್ವಹಿಸಲಿದೆ.

ಹಾಗೆಯೇ ಈ ಗೇಮಿಂಗ್ ಡಿವೈಸ್ ಡಾಲ್ಬಿ ಅಟ್ಮಾಸ್, ಹೈ-ರೆಸ್, ಇನ್‌ಬಿಲ್ಟ್ ಅರೇ ಮೈಕ್ರೊಫೋನ್, ಸ್ಮಾರ್ಟ್ ಆಂಪ್ಲಿಫೈಯರ್ ತಂತ್ರಜ್ಞಾನದೊಂದಿಗೆ 2 ಸ್ಪೀಕರ್ ಸಿಸ್ಟಮ್ ಮತ್ತು AI ನಾಯಿಸ್ ಕ್ಯಾನ್ಸಲೇಶನ್ ಮಾಡುವ ತಂತ್ರಜ್ಞಾನ ಪಡೆದಿದ್ದು, ಗೇಮಿಂಗ್ ರೋಚಕ ಅನುಭವ ನೀಡಲಿದೆ. ಹಾಗಾದರೆ ಆಸುಸ್ ROG ಆಲಿ ಡಿವೈಸ್ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಆಸುಸ್ ROG ಆಲಿ ಡಿಸ್‌ಪ್ಲೇ ವಿನ್ಯಾಸ : ಆಸುಸ್ ROG ಆಲಿ ಗೇಮಿಂಗ್ ಸಾಧನವು ಮುಂಭಾಗದಲ್ಲಿ 7 ಇಂಚಿನ ಐಪಿಎಸ್ ಮಾದರಿಯ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇಯು ಪೂರ್ಣ ಹೆಚ್‌ಡಿ+ ಸ್ಕ್ರೀನ್ ರೆಸಲ್ಯೂಶನ್ ಅನ್ನು ಒಳಗೊಂಡಿದ್ದು, ಇದರೊಂದಿಗೆ ಹೆಚ್ಚಿನ 120Hz ರಿಫ್ರೆಶ್ ರೇಟ್ ಅನ್ನು ಸಹ ಪಡೆದಿದೆ. ಹಾಗೆಯೇ ಇದರ ಡಿಸ್‌ಪ್ಲೇಯು 500 ನಿಟ್ಸ್ ಬ್ರೈಟ್ನೆಸ್ ಪಡೆದಿದ್ದು, ಡಾಲ್ಬಿ ವಿಷನ್ ಬೆಂಬಲ ಮತ್ತು ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಲೇಯರ್ ಪಡೆದಿದೆ.
ಆಸುಸ್ ROG ಆಲಿ ಪ್ರೊಸೆಸರ್ ಪವರ್ ಯಾವುದು : ಆಸುಸ್ ROG ಆಲಿ ಗೇಮಿಂಗ್ ಸಾಧನವು ವೇರಿಯಂಟ್ ಆಧರಿಸಿ AMD Ryzen Z1 ಅಥವಾ AMD Ryzen Z1 ಎಕ್ಸ್‌ಟ್ರೀಮ್ 4nm ಪ್ರೊಸೆಸರ್ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಜೊತೆಗೆ ಪ್ರೊಸೆಸರ್ AMD ರೇಡಿಯನ್ ಗ್ರಾಫಿಕ್ಸ್ ಪಡೆದಿದೆ. ಇನ್ನು ಈ ಸಾಧನವು 16GB RAM + 512GB SSD ಸ್ಟೋರೇಜ್ ಆಯ್ಕೆ ಅನ್ನು ಪಡೆದಿದ್ದು, UHS-II ಮೈಕ್ರೋ ಎಸ್‌ಡಿ ಕಾರ್ಡ್ ರೀಡರ್ ಸಪೋರ್ಟ್ ಪಡೆದಿದೆ.
ಆಸುಸ್ ROG ಆಲಿ ಬ್ಯಾಟರಿ ಬ್ಯಾಕ್‌ಅಪ್ ಮತ್ತು ಇತರೆ ಸೌಲಭ್ಯ : ಆಸುಸ್ ROG ಆಲಿ ಡಿವೈಸ್ 40WHr ಬ್ಯಾಟರಿಯನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 65W ಚಾರ್ಜರ್ ಸಪೋರ್ಟ್ ಸಹ ಪಡೆದಿದೆ. ಹಾಗೆಯೇ ಈ ಸಾಧನವು ಹೀಟ್ ಪೈಪ್ ಮತ್ತು ಡ್ಯುಯಲ್ ಫ್ಯಾನ್ ವಿನ್ಯಾಸವನ್ನು ದ್ರವ ಬೇರಿಂಗ್ ನೊಂದಿಗೆ ಕಾರ್ಯಕ್ಷಮತೆ ಮತ್ತು ಪರಿಣಾಮಕಾರಿ ಥರ್ಮಲ್ ನಿರ್ವಹಣೆ ಅನ್ನು ಹೆಚ್ಚಿಸಲು ಅಳವಡಿಸಿಕೊಂಡಿದೆ.
ಇದಲ್ಲದೆ ಆಸುಸ್ ROG ಆಲಿ ಗೇಮಿಂಗ್ ಡಿವೈಸ್ ಡಾಲ್ಬಿ ಅಟ್ಮಾಸ್ ಸೌಲಭ್ಯ, ಹೈ-ರೆಸ್ ಸರ್ಟಿಫಿಕೇಶನ್, ಇನ್‌ಬಿಲ್ಟ್ ಅರೇ ಮೈಕ್ರೊಫೋನ್ ಸೌಲಭ್ಯ, ಸ್ಮಾರ್ಟ್ ಆಂಪ್ಲಿಫೈಯರ್ ತಂತ್ರಜ್ಞಾನ, ಎರಡು ಸ್ಪೀಕರ್ ಸಿಸ್ಟಮ್ ಮತ್ತು ಎಐ ನಾಯಿಸ್ ಕ್ಯಾನ್ಸಲೇಶನ್ ತಂತ್ರಜ್ಞಾನ ಪಡೆದಿದೆ.
ಆಸುಸ್ ROG ಆಲಿ ಬೆಲೆ ಮತ್ತು ಲಭ್ಯತೆ : ಭಾರತದಲ್ಲಿ ಆಸುಸ್ ROG ಆಲಿ ಎರಡು ವೇರಿಯಂಟ್ ಮಾದರಿಗಳಲ್ಲಿ ಲಭ್ಯ. AMD Ryzen Z1 ವೇರಿಯಂಟ್ ಬೆಲೆಯು 69,990 ರೂ. ಆಗಿದೆ. ಆದರೆ ಸಂಸ್ಥೆಯು Ryzen Z1 ಎಕ್ಸ್‌ಟ್ರೀಮ್ ವೇರಿಯಂಟ್ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ತೈವಾನ್ ದೈತ್ಯ ಆಸುಸ್ ಬ್ರ್ಯಾಂಡ್ ಮೊದಲ ಹ್ಯಾಂಡ್ಹೆಲ್ಡ್ ಗೇಮಿಂಗ್ ಕನ್ಸೋಲ್ ಜುಲೈ 12 ರಿಂದ ಭಾರತದಲ್ಲಿ ಮಾರಾಟ ಪ್ರಾರಂಭಿಸಲಿದೆ ಎಂದು ಘೋಷಿಸಿದೆ.
ಆದಾಗ್ಯೂ, ಆಸುಸ್ ಸಂಸ್ಥೆಯು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಜುಲೈ 7 ರಂದು ಒಂದು ದಿನದ ಫ್ಲಾಶ್ ಸೇಲ್ ಸಹ ಆಯೋಜಿಸಲಿದೆ. ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ ಹೊರತುಪಡಿಸಿ ಆಸುಸ್ ಸಂಸ್ಥೆಯ ಅಧಿಕೃತ ಆನ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯ. ಅಲ್ಲದೇ ಭಾರತದಲ್ಲಿನ ಆಸುಸ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಲ್ಲಿಯೂ ಖರೀದಿ ಮಾಡಬಹುದಾಗಿದೆ.


Click it and Unblock the Notifications








