ಇಂದು ಆಸುಸ್‌ನ ಈ ಗೇಮಿಂಗ್ ಡಿವೈಸ್ ಫ್ಲ್ಯಾಶ್ ಸೇಲ್!..ಏನಿದೆ ಆಫರ್ ಗೊತ್ತಾ?
ಆಸುಸ್ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಆಸುಸ್ ROG ಆಲಿ ಗೇಮಿಂಗ್ ಸಾಧನವು ಗೇಮ್ ಪ್ರಿಯರನ್ನು ಆಕರ್ಷಿಸಿದೆ. ಈ ಡಿವೈಸ್ ಇಂದು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಒಂದು ದಿನದ ಫ್ಲ್ಯಾಶ್ ಸೇಲ್ ಪ್ರಾರಂಭಿಸಿದೆ. ಆಸಕ್ತ ಗ್ರಾಹಕರು ಫ್ಲಿಪ್‌ಕಾರ್ಟ್ ತಾಣದಲ್ಲಿ ಇದನ್ನು ಖರೀದಿಸಬಹುದಾಗಿದೆ. ಈ ಗೇಮಿಂಗ್ ಡಿವೈಸ್ (AMD Ryzen Z1 ವೇರಿಯಂಟ್) ಬೆಲೆಯು 69,990 ರೂ. ಆಗಿದೆ.
ಹೌದು, ಫ್ಲಿಪ್‌ಕಾರ್ಟ್ ತಾಣದಲ್ಲಿ ಆಸುಸ್ ROG ಆಲಿ ಡಿವೈಸ್ (ASUS ROG Ally Ryzen Z1 Extreme) ಒಂದು ದಿನದ ಫ್ಲ್ಯಾಶ್ ಸೇಲ್ ಆರಂಭ ಮಾಡಿದೆ. ಅಂದಹಾಗೆ ಈ ಗೇಮಿಂಗ್ ಕನ್ಸೋಲ್‌ನ ನಿಯಮಿತ (regular sale) ಮಾರಾಟವು ಜುಲೈ 12 ರಿಂದ ಪ್ರಾರಂಭವಾಗಲಿದೆ. ಹಾಗೆಯೇ ಈ ಗೇಮಿಂಗ್ ಡಿವೈಸ್ AI ನಾಯಿಸ್ ಕ್ಯಾನ್ಸಲೇಶನ್ ಮಾಡುವ ತಂತ್ರಜ್ಞಾನ ಪಡೆದಿದ್ದು, ಗೇಮಿಂಗ್ ರೋಚಕ ಅನುಭವ ನೀಡಲಿದೆ. ಹಾಗಾದರೆ ಆಸುಸ್ ROG ಆಲಿ ಡಿವೈಸ್ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಸುಸ್ ROG ಆಲಿ ಡಿಸ್‌ಪ್ಲೇ ವಿನ್ಯಾಸ ಹೇಗಿದೆ : ಆಸುಸ್ ROG ಆಲಿ ಗೇಮಿಂಗ್ ಡಿವೈಸ್ ಮುಂಭಾಗದಲ್ಲಿ 7 ಇಂಚಿನ ಐಪಿಎಸ್ ಮಾದರಿಯ ಡಿಸ್‌ಪ್ಲೇ ಅನ್ನು ಪಡೆದಿದೆ. ಈ ಡಿಸ್‌ಪ್ಲೇಯು ಪೂರ್ಣ ಹೆಚ್‌ಡಿ+ ಸ್ಕ್ರೀನ್ ರೆಸಲ್ಯೂಶನ್ ಅನ್ನು ಒಳಗೊಂಡಿದ್ದು, ಇದರೊಂದಿಗೆ ಹೆಚ್ಚಿನ 120Hz ರಿಫ್ರೆಶ್ ರೇಟ್ ಅನ್ನು ಸಹ ಹೊಂದಿದೆ. ಹಾಗೆಯೇ ಇದರ ಡಿಸ್‌ಪ್ಲೇಯು 500 ನಿಟ್ಸ್ ಬ್ರೈಟ್ನೆಸ್ ಪಡೆದಿದ್ದು, ಡಾಲ್ಬಿ ವಿಷನ್ ಬೆಂಬಲ ಮತ್ತು ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಲೇಯರ್ ಸಹ ಒದಗಿಸಲಾಗಿದೆ.
ಆಸುಸ್ ROG ಆಲಿ ಪ್ರೊಸೆಸರ್ ಪವರ್ ಬಲವೇನು : ಆಸುಸ್ ROG ಆಲಿ ಗೇಮಿಂಗ್ ಡಿವೈಸ್ ವೇರಿಯಂಟ್ ಆಧರಿಸಿ AMD Ryzen Z1 ಅಥವಾ AMD Ryzen Z1 ಎಕ್ಸ್‌ಟ್ರೀಮ್ 4nm ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ಮಾಡಲಿದೆ. ಹಾಗೆಯೇ ಪ್ರೊಸೆಸರ್ AMD ರೇಡಿಯನ್ ಗ್ರಾಫಿಕ್ಸ್ ಪಡೆದಿದೆ. ಇನ್ನು ಈ ಡಿವೈಸ್ 16GB RAM + 512GB SSD ಸ್ಟೋರೇಜ್ ವೇರಿಯಂಟ್ ಆಯ್ಕೆ ಅನ್ನು ಪಡೆದಿದೆ.

ಆಸುಸ್ ROG ಆಲಿ ಬ್ಯಾಟರಿ ಬ್ಯಾಕ್‌ಅಪ್ ಮತ್ತು ಇತರೆ ಆಯ್ಕೆಗಳ ಮಾಹಿತಿ : ಆಸುಸ್ ROG ಆಲಿ ಡಿವೈಸ್ 40WHr ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 65W ಚಾರ್ಜರ್ ಸಪೋರ್ಟ್ ಸಹ ಹೊಂದಿದೆ. ಅಲ್ಲದೇ ಈ ಡಿವೈಸ್ ಹೀಟ್ ಪೈಪ್ ಮತ್ತು ಡ್ಯುಯಲ್ ಫ್ಯಾನ್ ವಿನ್ಯಾಸವನ್ನು ದ್ರವ ಬೇರಿಂಗ್ ನೊಂದಿಗೆ ಕಾರ್ಯಕ್ಷಮತೆ ಮತ್ತು ಪರಿಣಾಮಕಾರಿ ಥರ್ಮಲ್ ನಿರ್ವಹಣೆ ಅನ್ನು ಹೆಚ್ಚಿಸಲು ಅಳವಡಿಸಿಕೊಂಡಿದೆ.
ಹಾಗೆಯೇ ಆಸುಸ್ ROG ಆಲಿ ಗೇಮಿಂಗ್ ಸಾಧನವು ಡಾಲ್ಬಿ ಅಟ್ಮಾಸ್ ಸೌಲಭ್ಯ, ಹೈ-ರೆಸ್ ಸರ್ಟಿಫಿಕೇಶನ್, ಇನ್‌ಬಿಲ್ಟ್ ಅರೇ ಮೈಕ್ರೊಫೋನ್ ಸೌಲಭ್ಯ, ಸ್ಮಾರ್ಟ್ ಆಂಪ್ಲಿಫೈಯರ್ ತಂತ್ರಜ್ಞಾನ, 2 ಸ್ಪೀಕರ್ ಸಿಸ್ಟಮ್ ಮತ್ತು ಎಐ ನಾಯಿಸ್ ಕ್ಯಾನ್ಸಲೇಶನ್ ತಂತ್ರಜ್ಞಾನ ಒಳಗೊಂಡಿದೆ. ಭಾರತದಲ್ಲಿ ಆಸುಸ್ ROG ಆಲಿ ಎರಡು ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯ.
ಮಾರಾಟ ಮತ್ತು ಬೆಲೆ : ಆಸುಸ್ ROG ಆಲಿ ಗೇಮಿಂಗ್ ಸಾಧನವು AMD Ryzen Z1 ಅಥವಾ AMD Ryzen Z1 ಎಕ್ಸ್‌ಟ್ರೀಮ್ ಮಾಡೆಲ್‌ಗಳ ಆಯ್ಕೆ ಪಡೆದಿದೆ. ಈ ಗೇಮಿಂಗ್ ಡಿವೈಸ್ (AMD Ryzen Z1 ವೇರಿಯಂಟ್) ಬೆಲೆಯು 69,990 ರೂ. ಆಗಿದೆ. ಇದರ ನಿಯಮಿತ ಮಾರಾಟವು ಜುಲೈ 12 ರಿಂದ ಪ್ರಾರಂಭವಾಗಲಿದೆ.


Click it and Unblock the Notifications