Home
ಸುದ್ದಿಜಾಲ

ಆಸುಸ್‌ನಿಂದ ಹೊಸ ಲ್ಯಾಪ್‌ಟಾಪ್‌ ಬಿಡುಗಡೆ!..ದೈತ್ಯ ಫೀಚರ್ಸ್‌..ಬೆಲೆ ಎಷ್ಟು?

ಜನಪ್ರಿಯ ಆಸುಸ್‌ ಸಂಸ್ಥೆಯು ಇಂದು ಭಾರತದಲ್ಲಿ ಆಸುಸ್‌ ROG ಫ್ಲೋ X13 ಲ್ಯಾಪ್‌ಟಾಪ್‌ನ ಹೊಸ ವೇರಿಯಂಟ್‌ ಮಾಡೆಲ್‌ ಅನ್ನು ಬಿಡುಗಡೆ ಮಾಡಿದೆ. ಹೊಸದಾಗಿ ಲಾಂಚ್ ಮಾಡಲಾದ ಆಸುಸ್‌ ROG ಫ್ಲೋ X13 ( ASUS ROG Flow X13 ) ವೇರಿಯಂಟ್‌ಗಳನ್ನು ಗ್ರಾಹಕರ ಖರೀದಿಗಾಗಿ ಸಂಸ್ಥೆಯು ಅಧಿಕೃತ ತನ್ನ ಇಂಡಿಯಾ ವೆಬ್‌ಸೈಟ್‌ನಲ್ಲಿ ಲಿಸ್ಟ್‌ ಮಾಡಿದ್ದು, ಗಮನ ಸೆಳೆದಿದೆ.

ಹೌದು, ಆಸುಸ್‌ ಸಂಸ್ಥೆಯು ಹೊಸದಾಗಿ ಆಸುಸ್‌ ROG ಫ್ಲೋ X13 ವೇರಿಯಂಟ್‌ ಪರಿಚಯಿಸಿದ್ದು, ಇವು AMD ಯ Ryzen 9 7940HS ಮೊಬೈಲ್ ಪ್ರೊಸೆಸರ್‌ ಸೌಲಭ್ಯ ಪಡೆದುಕೊಂಡಿವೆ. ಇದನ್ನು ಕ್ರಮವಾಗಿ NVIDIA GeForce RTX 4050 ಮತ್ತು 4060 GPU ಗಳೊಂದಿಗೆ ಜೋಡಿಸಬಹುದು. ಇನ್ನು ಲ್ಯಾಪ್‌ಟಾಪ್ 13.4 ಇಂಚಿನ IPS ಡಿಸ್‌ಪ್ಲೇ ಅನ್ನು ಪಡೆದಿದ್ದು, ಅದು QHD+ ರೆಸಲ್ಯೂಶನ್ ಹೊಂದಿದೆ. ಇನ್ನಷ್ಟು ವಿವರ ಮುಂದೆ ನೋಡೋಣ ಬನ್ನಿರಿ.

ಆಸುಸ್‌ನಿಂದ ಹೊಸ ಲ್ಯಾಪ್‌ಟಾಪ್‌ ಬಿಡುಗಡೆ!..ದೈತ್ಯ ಫೀಚರ್ಸ್‌..ಬೆಲೆ ಎಷ್ಟು?

ಆಸುಸ್‌ ROG ಫ್ಲೋ X13 ಲ್ಯಾಪ್‌ಟಾಪ್‌ ಫೀಚರ್ಸ್‌

ಆಸುಸ್‌ ಕಂಪನಿಯ ROG ಫ್ಲೋ X13 ಲ್ಯಾಪ್‌ಟಾಪ್‌ 13.4 ಇಂಚಿನ IPS LCD ಡಿಸ್‌ಪ್ಲೇ ಸಪೋರ್ಟ್ ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್ 165Hz ರಿಫ್ರೆಶ್ ರೇಟ್ ಪಡೆದಿದ್ದು, ಜೊತೆಗೆ QHD+ ರೆಸಲ್ಯೂಶನ್ ಹೊಂದಿದೆ. ಅಲ್ಲದೇ 3ms ಪ್ರತಿಕ್ರಿಯೆ ಸಮಯ ಜೊತೆಗೆ 500 nits ಬ್ರೈಟ್‌ನೆಸ್ ಅನ್ನು ಪಡೆದುಕೊಂಡಿದೆ.

ಆಸುಸ್‌ನಿಂದ ಹೊಸ ಲ್ಯಾಪ್‌ಟಾಪ್‌ ಬಿಡುಗಡೆ!..ದೈತ್ಯ ಫೀಚರ್ಸ್‌..ಬೆಲೆ ಎಷ್ಟು?

ಇನ್ನು ಈ ಲ್ಯಾಪ್‌ಟಾಪ್ ಅನ್ನು ಪವರ್ ಮಾಡುವುದು AMD Ryzen 9 7940HS ಮೊಬೈಲ್ ಪ್ರೊಸೆಸರ್ ಪವರ್‌ ಪಡೆದುಕೊಂಡಿದ್ದು, ಹಾಗೆಯೇ GeForce RTX 4050 ಅಥವಾ GeForce RTX 4060 GPU ನೊಂದಿಗೆ ಕಾನ್ಫಿಗರ್ ಒಳಗೊಂಡಿದೆ. ಅಂದಹಾಗೆ ಈ ಲ್ಯಾಪ್‌ಟಾಪ್‌ 16GB RAM ವರೆಗೆ ಸೌಲಭ್ಯ ಒಳಗೊಂಡಿದ್ದು, 1TB PCIe 4.0 NVMe M.2 SSD ಸ್ಟೋರೇಜ್‌ ಸೌಲಭ್ಯ ಕೂಡಾ ಹೊಂದಿದೆ.

ಇನ್ನು ಉಳಿದಂತೆ ಆಸುಸ್‌ ROG ಫ್ಲೋ X13 ಲ್ಯಾಪ್‌ಟಾಪ್‌ ಬ್ಯಾಕ್‌ಲಿಟ್ ಚಿಕ್ಲೆಟ್ ಕೀಬೋರ್ಡ್ ಸೌಲಭ್ಯ, ಫುಲ್‌ ಹೆಚ್‌ಡಿ ಕ್ಯಾಮೆರಾ, Wi-Fi 6E ಸಪೋರ್ಟ್‌, ಬ್ಲೂಟೂತ್ v5.3, 75Whr ಬ್ಯಾಟರಿ ಸೌಲಭ್ಯ ಮತ್ತು 3.5mm ಆಡಿಯೊ ಜ್ಯಾಕ್‌ ನಂತಹ ಕನೆಕ್ಟಿವಿಟಿ ಸೌಲಭ್ಯಗಳ ಆಯ್ಕೆಗಳನ್ನು ಪಡೆದುಕೊಂಡಿದೆ.

ಆಸುಸ್‌ನಿಂದ ಹೊಸ ಲ್ಯಾಪ್‌ಟಾಪ್‌ ಬಿಡುಗಡೆ!..ದೈತ್ಯ ಫೀಚರ್ಸ್‌..ಬೆಲೆ ಎಷ್ಟು?

ಹಾಗೆಯೇ ಇದು ಒಂದು ಹೆಚ್‌ಡಿಎಮ್‌ಐ 2.1 ಪೋರ್ಟ್ ಸೌಲಭ್ಯ, ಒಂದು USB 3.2 ಜೆನ್‌ 2 ಟೈಪ್ ಸಿ ಪೋರ್ಟ್, ಒಂದು USB 3.2 ಜೆನ್‌ 2 ಟೈಪ್‌ A ಪೋರ್ಟ್ ಸೌಲಭ್ಯ, ಒಂದು ROG XG ಮೊಬೈಲ್ ಇಂಟರ್ಫೇಸ್ ಮತ್ತು USB ಟೈಪ್ ಸಿ ಕಾಂಬೋ ಪೋರ್ಟ್ ಸೌಲಭ್ಯ, ಒಂದು ಟೈಪ್ C USB 4 ಪೋರ್ಟ್ ಸೌಲಭ್ಯ ಹಾಗೂ ಕಾರ್ಡ್ ರೀಡರ್ ಸೌಲಭ್ಯಗಳಂತಹ ಆಯ್ಕೆಗಳನ್ನು ಕೂಡಾ ಪಡೆದುಕೊಂಡಿದೆ.

ಆಸುಸ್‌ ROG ಫ್ಲೋ X13 ಬೆಲೆ ಎಷ್ಟು? ಹಾಗೂ ಲಭ್ಯತೆ ಮಾಹಿತಿ

ಭಾರತದಲ್ಲಿ ಆಸುಸ್‌ ROG ಫ್ಲೋ X13 ಲ್ಯಾಪ್‌ಟಾಪ್‌ (GV302XU-MU013WS ವೇರಿಯಂಟ್‌) 1,74,990ರೂ. ಗಳ ಬೆಲೆಯನ್ನು ಹೊಂದಿದೆ. ಅದೇ ರೀತಿ (GV302XV-MU016WS ವೇರಿಯಂಟ್‌) ಲ್ಯಾಪ್‌ಟಾಪ್‌ ಮಾಡೆಲ್‌ 1,84,990ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸುಸ್‌ ಸಂಸ್ಥೆಯ ಈ ಹೊಸ ROG ಫ್ಲೋ X13 ಲ್ಯಾಪ್‌ಟಾಪ್‌ಗಳನ್ನು ಗ್ರಾಹಕರು ಅಧಿಕೃತ ಆಸುಸ್‌ ಇಂಡಿಯಾ ವೆಬ್‌ಸೈಟ್ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
ASUS ROG Flow X13 Newer Variant Launched in India. check Price and Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+