Home
ಸುದ್ದಿಜಾಲ

ಇದೇ ಡಿ.26ಕ್ಕೆ ಆಸುಸ್ ROG ಫೋನ್ 5 ಅಲ್ಟಿಮೇಟ್ ಫಸ್ಟ್‌ ಸೇಲ್!..ಬೆಲೆ ಎಷ್ಟು?

ಜನಪ್ರಿಯ ಆಸೂಸ್ ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್ ಪರಿಚಯಿಸಿ ಸೈ ಅನಿಸಿಕೊಂಡಿದೆ. ಮುಖ್ಯವಾಗಿ ಕಂಪನಿಯ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಿವೆ. ಕಂಪನಿಯು ಆಸುಸ್‌ ROG ಫೋನ್ ಅಲ್ಟಿಮೇಟ್ ಅನ್ನು ಭಾರತದಲ್ಲಿ ಮಾರ್ಚ್‌ನಲ್ಲಿ ಬಿಡುಗಡೆ ಮಾಡಲಾಯಿತು. ಈಗ ಅಧಿಕೃತವಾಗಿ ಭಾರತದಲ್ಲಿ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಮೂಲಕ ಮೊದಲ ಬಾರಿಗೆ ಮಾರಾಟ ಕಾಣಲು ದಿನಾಂಕ ನಿಗದಿ ಮಾಡಿದೆ.

ಅಲ್ಟಿಮೇಟ್

ಹೌದು, ಆಸುಸ್‌ ROG ಫೋನ್ 5 ಅಲ್ಟಿಮೇಟ್ ಫೋನ್ ಫ್ಲಿಪ್‌ಕಾರ್ಟ್‌ ಮೂಲಕ ಇದೇ ಡಿಸೆಂಬರ್ 26 ರಂದು ಮೊದಲ ಬಾರಿಗೆ ಮಾರಾಟ ಪ್ರಾರಂಭಿಸಲಿದೆ. ಇನ್ನು ಆಸುಸ್ ROG ಫೋನ್ 5 ಅಲ್ಟಿಮೇಟ್ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 5G SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 18GB RAM ಮತ್ತು 512GB ಆಯ್ಕೆ ಪಡೆದಿದೆ. ಈ ವಿಶೇಷ ಆವೃತ್ತಿಯ ಗೇಮಿಂಗ್ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ AMOLED ಡಿಸ್‌ಪ್ಲೇ ಹೊಂದಿದೆ. ಹಾಗಾದರೇ ಆಸುಸ್‌ ROG ಫೋನ್‌ 5 ಅಲ್ಟಿಮೇಟ್ ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೇಗೆ

ಡಿಸ್‌ಪ್ಲೇ ರಚನೆ ಹೇಗೆ

ಆಸುಸ್ ROG ಫೋನ್ 5 ಅಲ್ಟಿಮೇಟ್ ಸ್ಮಾರ್ಟ್‌ಫೋನ್‌ 1,080x2,448 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 20.4: 9 ರಚನೆಯ ಅನುಪಾತ, 144Hz ರಿಫ್ರೆಶ್ ರೇಟ್‌ ಮತ್ತು 1,200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ ಡಿಸಿ ಡಿಮ್ಮಿಂಗ್ ಬೆಂಬಲವನ್ನು ಸಹ ಒಳಗೊಂಡಿದೆ. ಅಲ್ಲದೆ ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಅನ್ನು ಹೊಂದಿದೆ.

ಪ್ರೊಸೆಸರ್‌ ಪವರ್ ಯಾವುದು

ಪ್ರೊಸೆಸರ್‌ ಪವರ್ ಯಾವುದು

ಆಸುಸ್ ROG ಫೋನ್ 5 ಅಲ್ಟಿಮೇಟ್ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 5G SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ ROG UI ಮತ್ತು ZEN UI ಕಸ್ಟಮ್ ಇಂಟರ್ಫೇಸ್‌ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 18GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಟ್ರಿಪಲ್ ಕ್ಯಾಮೆರಾ ಸೆನ್ಸಾರ್

ಟ್ರಿಪಲ್ ಕ್ಯಾಮೆರಾ ಸೆನ್ಸಾರ್

ಆಸುಸ್ ROG ಫೋನ್ 5 ಅಲ್ಟಿಮೇಟ್ ಸ್ಮಾರ್ಟ್‌ಫೋನ್‌ 5 ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೋನಿ ಐಎಂಎಕ್ಸ್ 686 ಸೆನ್ಸಾರ್, ಎರಡನೇ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 24 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಆಸುಸ್ ROG ಫೋನ್ 5 ಅಲ್ಟಿಮೇಟ್ ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 30W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ-ಫೈ 6, ಬ್ಲೂಟೂತ್ 5.0, ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್‌ ಅನ್ನು ಬೆಂಬಲಿಸಲಿದೆ. ಜೊತೆಗೆ 3.5mm ಹೆಡ್‌ಫೋನ್ ಜ್ಯಾಕ್ ಕೂಡ ಸೇರಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಆಸುಸ್ ROG ಫೋನ್ 5 ಅಲ್ಟಿಮೇಟ್ ಫೋನ್ ಬೆಲೆ 18GB RAM + 512GB ಸ್ಟೋರೇಜ್‌ ಆಯ್ಕೆಗೆ 79,999 ರೂ.ಆಗಿದೆ. ಈ ಫೋನ್ ಇದೇ ಡಿಸೆಂಬರ್ 26 ರಂದು ಫ್ಲಿಪ್‌ಕಾರ್ಟ್‌ ತಾಣದಲ್ಲಿ ಮಧ್ಯಾಹ್ನ 12ಕ್ಕೆ ಮೊದಲ ಬಾರಿಗೆ ಮಾರಾಟ ಕಾಣಲಿದೆ. ಇನ್ನು ಈ ಪೋನ್ ಸ್ಟಾರ್ಮ್ ವೈಟ್ ಬಣ್ಣದ ಆಯ್ಕೆಯಲ್ಲಿ ಲಭ್ಯವಿರುತ್ತದೆ.

Best Mobiles in India

English summary
Asus ROG Phone 5 Ultimate to Go on First Sale in India on December 26: Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+