Home
ಸುದ್ದಿಜಾಲ

ಅಸುಸ್ ROG ಫೋನ್ 7 ಸರಣಿ ಖರೀದಿಗೆ ಲಭ್ಯ: ಆಫರ್‌ ಬೆಲೆ, ಫೀಚರ್ಸ್‌ ತಿಳಿಯಿರಿ!

ಅಸುಸ್‌ನ ಸಬ್-ಬ್ರಾಂಡ್ ರಿಪಬ್ಲಿಕ್ ಆಫ್ ಗೇಮರ್ಸ್ (ROG) ಇತ್ತೀಚೆಗೆ ಭಾರತದಲ್ಲಿ ROG ಫೋನ್ 7 ಸರಣಿಯನ್ನು ಲಾಂಚ್‌ ಮಾಡಿದ್ದು, ಇದರಲ್ಲಿ ROG ಫೋನ್ 7 ಮತ್ತು 7 ಅಲ್ಟಿಮೇಟ್ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಈ ನಡುವೆ ಇವು ಇಂದಿನಿಂದ ಖರೀದಿಗೆ ಮುಕ್ತವಾಗಿದ್ದು, ಈ ಅತ್ಯುತ್ತಮ ಫೋನ್‌ ಅನ್ನು ಉತ್ತಮ ಬೆಲೆಗೆ ನಿಮ್ಮದಾಗಿಸಿಕೊಳ್ಳಬಹುದು.

ಹೌದು, ಈ ಫೋನ್‌ಗಳು ಕಳೆದ ತಿಂಗಳು ಅಂದರೆ ಏಪ್ರಿಲ್‌ನಲ್ಲಿ ಲಾಂಚ್‌ ಆಗಿದ್ದು, ಈ ವರೆಗೂ ಖರೀದಿಗೆ ಲಭ್ಯ ಇರಲಿಲ್ಲ.ಆದರೆ, ಇಂದಿನಿಂದ ಈ ವಿಶೇಷ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದ್ದು, ಈ ಫೋನ್‌ಗಳು 6000mAh ಸಾಮರ್ಥ್ಯದ ಸ್ಪ್ಲಿಟ್ ಬ್ಯಾಟರಿ ಸಾಮರ್ಥ್ಯ ಹಾಗೂ 1500 nits ವರೆಗಿನ ಗರಿಷ್ಟ ಬ್ರೈಟ್‌ನೆಟ್‌ ಆಯ್ಕೆ ಸೇರಿದಂತೆ ಇನ್ನಿತರೆ ಆಕರ್ಷಕ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ. ಹಾಗಿದ್ರೆ, ಬನ್ನಿ ಈ ಫೋನ್‌ಗಳ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇವುಗಳ ಬೆಲೆ ಬಗ್ಗೆ ತಿಳಿಯೋಣ.

ಅಸುಸ್ ROG ಫೋನ್ 7 ಸರಣಿ ಖರೀದಿಗೆ ಲಭ್ಯ: ಆಫರ್‌ ಬೆಲೆ, ಫೀಚರ್ಸ್‌ ತಿಳಿಯಿರಿ!

ಅಸುಸ್ ROG ಫೋನ್ 7 ಸರಣಿ ಡಿಸ್‌ಪ್ಲೇ ವಿವರ: ಈ ಸರಣಿಯಲ್ಲಿನ ಮಾಡೆಲ್‌ಗಳು 165Hz ರಿಫ್ರೆಶ್‌ ರೇಟ್‌ ಆಯ್ಕೆಯೊಂದಿಗೆ 6.78 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, ಇದು HDR10+ ಗೆ ಬೆಂಬಲ ಪಡೆದಿದೆ. ಜೊತೆಗೆ 720Hz ವರೆಗಿನ ಟಚ್ ಮಾದರಿ ರೆಟ್ ಆಯ್ಕೆ ಇದ್ದು, 23ms ಟಚ್ ಲೇಟೆನ್ಸಿಯನ್ನು ಬೆಂಬಲಿಸುತ್ತದೆ. ಇನ್ನು ಗರಿಷ್ಠ ಈ ಫೋನ್‌ಗಳು 1500 ನಿಟ್ಸ್‌ ವರೆಗಿನ ಗರಿಷ್ಟ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿರುವುದು ವಿಶೇಷ.

ಅಸುಸ್ ROG ಫೋನ್ 7 ಸರಣಿ ಪ್ರೊಸೆಸರ್‌ ಮಾಹಿತಿ: ಈ ಹೊಸ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ ಸ್ನಾಪ್‌ಡ್ರಾಗನ್ 8 ಜನ್ 2 ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ ಗೇಮ್‌ಕೂಲ್ 7 ಕೂಲಿಂಗ್ ಸಿಸ್ಟಮ್‌ನಿಂದ ಕಾರ್ಯನಿರ್ವಹಿಸಲಿವೆ. ಇದರೊಂದಿಗೆ ROG ಫೋನ್ 7 12GB RAM ಮತ್ತು 256GB ಸ್ಟೋರೇಜ್ ಆಯ್ಕೆ ಹೊಂದಿದ್ದು, ROG ಫೋನ್ 7 ಅಲ್ಟಿಮೇಟ್ 16GB RAM, 512GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ.

ಅಸುಸ್ ROG ಫೋನ್ 7 ಸರಣಿ ಕ್ಯಾಮೆರಾ ರಚನೆ: ಈ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳು 50MP ಸೋನಿ IMX766 ಫ್ಲಾಗ್‌ಶಿಪ್ ರಿಯರ್‌ ಕ್ಯಾಮೆರಾ ಹೊಂದಿದ್ದು, ಕಡಿಮೆ-ಬೆಳಕಿನ ಕಾರ್ಯಕ್ಷಮತೆ, 8K ರೆಕಾರ್ಡಿಂಗ್, EIS ಮತ್ತು HDR10 ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 32MP ಸೆಲ್ಫಿ ಕ್ಯಾಮರಾ ಆಯ್ಕೆ ಹೊಂದಿರುವ ಈ ಫೋನ್‌ಗಳು EIS ಜೊತೆಗೆ 4K ಅನ್ನು ಸಹ ಬೆಂಬಲಿಸುತ್ತದೆ.

ಅಸುಸ್ ROG ಫೋನ್ 7 ಸರಣಿ ಖರೀದಿಗೆ ಲಭ್ಯ: ಆಫರ್‌ ಬೆಲೆ, ಫೀಚರ್ಸ್‌ ತಿಳಿಯಿರಿ!

ಅಸುಸ್ ROG ಫೋನ್ 7 ಸರಣಿ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್‌ಗಳು 6000mAh ಸಾಮರ್ಥ್ಯದ ಸ್ಪ್ಲಿಟ್ ಬ್ಯಾಟರಿ ಆಯ್ಕೆ ಪಡೆದಿದ್ದು, ಈ ಬ್ಯಾಟರಿಯು 65W ಹೈಪರ್‌ಚಾರ್ಜ್‌ನಿಂದ ಚಾಲಿತವಾಗಲಿದೆ. ಇನ್ನುಳಿದಂತೆ ಎರಡೂ ಸ್ಮಾರ್ಟ್‌ಫೋನ್‌ಗಳು ವೈ-ಫ 7 320 MHz ಚಾನಲ್‌ಗಳು ಮತ್ತು ಮಲ್ಟಿ-ಲಿಂಕ್ ಕಾರ್ಯಾಚರಣೆ, ROG ಹೈಪರ್‌ಫ್ಯೂಷನ್ ತಂತ್ರಜ್ಞಾನ, 4G/5G ಸೆಲ್ಯುಲಾರ್ ಸಂಪರ್ಕ ಸೇರಿದಂತೆ ಇನ್ನಿತರೆ ಕನೆಕ್ಟಿವಿಟಿ ಆಯ್ಕೆ ಪಡೆದುಕೊಂಡಿವೆ.

ಇದಿಷ್ಟು ಮಾತ್ರವಲ್ಲದೆ ಈ ಫೋನ್‌ಗಳು ಏರ್‌ಟ್ರಿಗ್ಗರ್ ಅಲ್ಟ್ರಾಸಾನಿಕ್ ಟ್ರಿಗ್ಗರ್ ಬಟನ್‌ಗಳು ಮತ್ತು ಗೇಮ್ ಕಂಟ್ರೋಲ್‌ಗಾಗಿ 10 ಮೋಷನ್ ಕಂಟ್ರೋಲ್ ಗೆಸ್ಚರ್‌ಗಳೊಂದಿಗೆ ಕನ್ಸೋಲ್ ತರಹದ ಗೇಮಿಂಗ್ ಅನುಭವ ನೀಡುತ್ತವೆ. ಈ ಫೋನ್‌ಗಳು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದ್ದು, 2.1 ಧ್ವನಿಗಾಗಿ ಸಬ್-ವೂಫರ್‌ ಆಯ್ಕೆ ಪಡೆದ ವಿಶ್ವದ ಮೊದಲ ಫೋನ್ ಆಗಿಯೂ ಇವು ಗುರುತಿಸಿಕೊಂಡಿವೆ.

ಅಸುಸ್ ROG ಫೋನ್ 7 ಸರಣಿ ಖರೀದಿಗೆ ಲಭ್ಯ: ಆಫರ್‌ ಬೆಲೆ, ಫೀಚರ್ಸ್‌ ತಿಳಿಯಿರಿ!

ಅಸುಸ್ ROG ಫೋನ್ 7 ಸರಣಿ ಬೆಲೆ ಹಾಗೂ ಲಭ್ಯತೆ: ಇನ್ನು 12GB RAM ಮತ್ತು 256GB ಸ್ಟೋರೇಜ್ ಆಯ್ಕೆಯ ROG ಫೋನ್ 7 ಬೆಲೆ 74,999ರೂ. ಗಳಾಗಿದ್ದು, ಈ ಫೋನ್ ಫ್ಯಾಂಟಮ್ ಬ್ಲಾಕ್ ಮತ್ತು ಸ್ಟಾರ್ಮ್ ವೈಟ್ ಎಂಬ ಎರಡು ಬಣ್ಣದಲ್ಲಿ ಲಭ್ಯ. ROG ಫೋನ್ 7 ಅಲ್ಟಿಮೇಟ್ 16GB RAM,512GB ಸ್ಟೋರೇಜ್ ಆಯ್ಕೆಯ ಫೋನ್‌ 99,999ರೂ.ಗಳ ಬೆಲೆ ಹೊಂದಿದೆ. ಇವುಗಳನ್ನು ವಿಜಯ ಸೇಲ್ಸ್ ಹಾಗೂ ಅಸುಸ್‌ ಸೈಟ್‌ ಮೂಲಕ ಖರೀದಿಸಬಹುದು.

Best Mobiles in India

English summary
Asus ROG Phone 7 series phones were launched last April and these exclusive phones are available for purchase from today. These phones have got other attractive features including 6000mAh capacity split battery capacity and maximum Brightnet option up to 1500 nits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+