Home
ಸುದ್ದಿಜಾಲ

Asus ROG: ಆಸುಸ್ ROG ಫೋನ್ 8 ಗೇಮಿಂಗ್ ಸ್ಮಾರ್ಟ್‌ಫೋನ್ ಅಧಿಕೃತ ಟೀಸರ್ ಔಟ್: ಫೀಚರ್ಸ್‌ ನಿರೀಕ್ಷೆ ಏನು?

ಹೈ-ಎಂಡ್ ಫೋನ್‌ಗಳ ವಿಭಾಗದಲ್ಲಿ ಈ ಆಸುಸ್ ROG ಫೋನ್‌ಗಳು (Asus ROG Phones) ಸಹ ಕಾಣಿಸಿಕೊಳ್ಳುತ್ತವೆ. ಇವುಗಳು ಭಿನ್ನ ಫೀಚರ್ಸ್‌ ಆಯ್ಕೆಯೊಂದಿಗೆ ಬಳಕೆದಾರರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುವ ಸಾಮರ್ಥ್ಯ ಪಡೆದಿವೆ. ಈ ನಡುವೆ ಅಸುಸ್ ROG ಫೋನ್ 8 ಗೇಮಿಂಗ್ ಸ್ಮಾರ್ಟ್‌ಫೋನ್‌ನ (Asus ROG Phone 8 gaming smartphone) ಅಧಿಕೃತ ಟೀಸರ್ ಔಟ್ ಆಗಿದೆ.

ಹೌದು, ಆಸುಸ್ ROG ನ ಯಾವುದೇ ಡಿವೈಸ್‌ಗಳು ಸಹ ಶಕ್ತಿಯುತ ಪ್ರೊಸೆಸರ್‌ಗಳು, ಸುಧಾರಿತ ಗ್ರಾಫಿಕ್ಸ್ ಕಾರ್ಡ್‌ಗಳು ಮತ್ತು ಉತ್ತಮ ಗುಣಮಟ್ಟದ ಕೂಲಿಂಗ್ ಸಿಸ್ಟಮ್‌ಗಳಂತಹ ಉನ್ನತ-ಕಾರ್ಯಕ್ಷಮತೆಯೊಂದಿಗೆ ವಿನ್ಯಾಸಗೊಳ್ಳುತ್ತವೆ. ಅದರಂತೆ ಈಗ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಅಸುಸ್ ROG ಫೋನ್ 8 ದೊಡ್ಡ ಬಿರುಗಾಳಿ ಎಬ್ಬಿಸಲು ಸಜ್ಜಾದಂತೆ ತೋರುತ್ತಿದೆ. ಹಾಗಿದ್ರೆ, ಈ ಫೋನ್‌ ಏನೆಲ್ಲಾ ಫೀಚರ್ಸ್‌ ಹೊಂದಿರಬಹುದು ಅನ್ನೋದನ್ನು ತಿಳಿಸಿಕೊಡಲಾಗಿದೆ ಓದಿರಿ.

ಆಸುಸ್ ROG ಫೋನ್ 8 ಗೇಮಿಂಗ್ ಸ್ಮಾರ್ಟ್‌ಫೋನ್ ಅಧಿಕೃತ ಟೀಸರ್ ಔಟ್...

ಅಸುಸ್ ROG ಫೋನ್ 8 ಗೇಮಿಂಗ್ ಸ್ಮಾರ್ಟ್‌ಫೋನ್‌: ಅಸುಸ್ ಈ ವರ್ಷದ ಏಪ್ರಿಲ್‌ನಲ್ಲಿ ROG ಫೋನ್ 7 ಗೇಮಿಂಗ್ ಸ್ಮಾರ್ಟ್‌ಫೋನ್ ಸರಣಿಯನ್ನು ಆರಂಭ ಮಾಡಿದೆ. ತೈವಾನ್ ಮೂಲದ ಕಂಪನಿ ಆಗಿರುವ ಆಸುಸ್ ಇದೀಗ ROG ಫೋನ್ 8 ಶ್ರೇಣಿಯಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ. ಈಗ, ಆಸುಸ್ ಕಂಪನಿಯ ಎಕ್ಸ್‌ ನಲ್ಲಿನ (ಟ್ಟಿಟ್ಟರ್) ತನ್ನ ಅಧಿಕೃತ ಪೇಜ್‌ನಲ್ಲಿ ROG ಫೋನ್ 8 ಅನ್ನು ಲೇವಡಿ ಮಾಡಿದೆ.

ಇನ್ನು ಈ ಪೋಸ್ಟ್‌ನಲ್ಲಿ ಕಂಡುಬರುವಂತೆ ROG ಫೋನ್ 8 ಶೀಘ್ರದಲ್ಲೇ ಲಾಂಚ್‌ ಆಗಲಿದೆ ಎನ್ನಲಾಗಿದೆ. ಜೊತೆಗೆ ಆಸುಸ್ ಮುಂಬರುವ ಹೈ-ಎಂಡ್ ಗೇಮಿಂಗ್ ಸ್ಮಾರ್ಟ್‌ಫೋನ್ ಅನ್ನು ಬಿಯಾಂಡ್ ಗೇಮಿಂಗ್ ಎಂಬ ಅಡಿಬರಹದೊಂದಿಗೆ ಪರಿಚಯಿಸಬಹುದು ಎಂದೂ ಸಹ ತಿಳಿದುಬಂದಿದೆ. ಜೊತೆಗೆ ಈ ಪೋಸ್ಟ್‌ನಲ್ಲಿ ಭಾಗಶಃ ವಿನ್ಯಾಸ ತಿಳಿದುಬಂದಿದ್ದು, ಇದರ ಹೊರತಾಗಿ, ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಅಥವಾ ಬಿಡುಗಡೆ ಯಾವಾಗ ಅನ್ನೋ ಮಾಹಿತಿ ಲಭ್ಯ ಇಲ್ಲ.

ಆಸುಸ್‌ ROG ಫೋನ್ 8 ನಲ್ಲಿ ಏನನ್ನು ನಿರೀಕ್ಷಿಸಬಹುದು?: ನೋಟ್‌ಬುಕ್‌ ಚೆಕ್‌ನ ವರದಿಯ ಪ್ರಕಾರ, ಆಸುಸ್ ROG ಫೋನ್ 8 ಶ್ರೇಣಿಯ ಅಡಿಯಲ್ಲಿ ಎರಡು ಮಾದರಿಗಳನ್ನು ಅನಾವರಣ ಮಾಡಲಾಗಿದೆ ಎನ್ನಲಾಗಿದೆ. ಅದರಲ್ಲಿ AI2401_A ಮತ್ತು AI2401_D ಎಂಬ ಮಾದರಿ ಸಂಖ್ಯೆಗಳನ್ನೂ ಸಹ ಉಲ್ಲೇಖ ಮಾಡಲಾಗಿದೆ. ROG ಫೋನ್ 8 ಶ್ರೇಣಿಯಲ್ಲಿನ ಸ್ಮಾರ್ಟ್‌ಫೋನ್‌ಗಳು ಹಿಂದಿನಂತೆಯೇ ಟೋನ್ ಡೌನ್ ವಿನ್ಯಾಸವನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.

ROG ಫೋನ್ 8 ರ ಹಿಂದಿನ ಪ್ಯಾನಲ್‌ ವ್ಯಾಪಕವಾದ ಬ್ರ್ಯಾಂಡಿಂಗ್ ಮತ್ತು ಇತರ ವಿವರಗಳೊಂದಿಗೆ ಕಾಣಿಸಿಕೊಳ್ಳಲಿದ್ದು, ROG ಫೋನ್ 7 ನಲ್ಲಿ ಇರುವ ಆಯತಕ್ಕೆ ಹೋಲಿಸಿದರೆ ಮುಂಬರುವ ಫೋನ್‌ನಲ್ಲಿನ ಕ್ಯಾಮೆರಾ ಮಾಡ್ಯೂಲ್ ಸ್ಕ್ವಾರಿಶ್ ಆಗಿರುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಹೊಸ ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿರಬಹುದು ಎಂದು ಹೇಳಲಾಗಿದ್ದು, ಕ್ವಾಲ್ಕಾಮ್‌ ನ ಇತ್ತೀಚಿನ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್, ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್ ಬಲ ಪಡೆಯಬಹುದು ಎಂದು ಊಹಿಸಲಾಗಿದೆ.

ಆಸುಸ್ ROG ಫೋನ್ 8 ಗೇಮಿಂಗ್ ಸ್ಮಾರ್ಟ್‌ಫೋನ್ ಅಧಿಕೃತ ಟೀಸರ್ ಔಟ್...

ಕೆಲವು ವರದಿಗಳ ಪ್ರಕಾರ, AI2401_D ಮಾದರಿಯು 24GB RAM ಅನ್ನು ಹೊಂದಿರಲಿದೆ ಎನ್ನಲಾಗಿದ್ದು, ಆಸುಸ್‌ ROG ಫೋನ್ 8 ಅಲ್ಟಿಮೇಟ್ ರೂಪಾಂತರವಾಗಿದೆ ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ AI2401_A ಮಾದರಿ ವೆನಿಲ್ಲಾ ರೂಪಾಂತರ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಮುಂಬರುವ ಫೋನ್ ಲ್ಯಾಂಡ್‌ಸ್ಕೇಪ್-ಮೌಂಟೆಡ್ ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಆಸುಸ್‌ನ ಪ್ರಮುಖ ರಿಪಬ್ಲಿಕ್ ಆಫ್ ಗೇಮ್ಸ್ (ROG) ಲೋಗೋದಂತಹ ಗೇಮಿಂಗ್ ಫೋಕಸ್ಡ್ ಫೀಚರ್ಸ್‌ ಅನ್ನು ಹಾಗೆಯೇ ಉಳಿಸಿಕೊಳ್ಳುತ್ತದೆ ಎಂಬ ವದಂತಿಗಳಿವೆ.

Best Mobiles in India

English summary
Asus ROG Phone 8 gaming smartphone was mentioned in X. It is said that this phone will be launched in a few days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+