ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ದೈತ್ಯ 'ಆಸುಸ್ ROG ಫೋನ್ 8' ಸರಣಿ!
ಜನಪ್ರಿಯ ಆಸುಸ್ ಕಂಪೆನಿಯ ಈಗಾಗಲೇ ಕೆಲವು ದೈತ್ಯ ಗೇಮಿಂಗ್ ಮಾದರಿಯ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸಂಸ್ಥೆಯು ಅದರ ಮುಂದುವರಿದ ಭಾಗವಾಗಿ ಇದೀಗ ಆಸುಸ್ ROG ಫೋನ್ 8 ಸರಣಿ ಲಾಂಚ್ ಮಾಡಲು ಸಕಲ ರೀತಿ ಸಜ್ಜಾಗಿದೆ. ಈ ಬಹುನಿರೀಕ್ಷಿತ ಫೋನ್ ಸರಣಿಯು ಇಂದು ಜ 8 ರಂದು (ಭಾರತೀಯ ಕಾಲಮಾನ ಜ 9 ರಂದು 4:30AM) ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಹೌದು, ಆಸುಸ್ ಸಂಸ್ಥೆಯು ತನ್ನ ನೂತನ ಆಸುಸ್ ROG ಫೋನ್ 8 ಫೋನ್ ಸರಣಿಯನ್ನು CES 2024 ನಲ್ಲಿ ಗ್ಲೋಬಲ್ ಮಾರಕಟ್ಟೆಗೆ ಲಾಂಚ್ ಮಾಡಲಿದೆ. ಇನ್ನು ಈ ಸರಣಿಯು ಆಸುಸ್ ROG ಫೋನ್ 8 ಹಾಗೂ ಆಸುಸ್ ROG ಫೋನ್ 8 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ. ಆ ಪೈಕಿ ಆಸುಸ್ ROG ಫೋನ್ 8 ಫೋನ್‌ಗಳು ಲೀಕ್ ಫೀಚರ್ಸ್‌ಗಳು ಈಗಾಗಲೇ ಗ್ರಾಹಕರನ್ನು ಸೆಳೆದಿವೆ.

ಇನ್ನು ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದಿರಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿರಲಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಆಸುಸ್ ROG ಫೋನ್ 8 ಸರಣಿ ಫೀಚರ್ಸ್
ಆಸುಸ್ ROG ಫೋನ್ 8 ಪ್ರೊ ಸಂಬಂಧ ಕೆಲವು ಮಾಹಿತಿ ಲೀಕ್ ಆಗಿದ್ದು, ಆ ಮಾಹಿತಿಯಂತೆ ಇದು 6.78 ಇಂಚಿನ ಅಮೋಲೆಡ್ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್ ಆಯ್ಕೆ ಕಾಣಬಹುದಾಗಿದ್ದು, ಈ ಮೂಲಕ ಉತ್ತಮ ಗೇಮಿಂಗ್ ಅನುಭವವನ್ನು ಪಡೆಯಬಹುದಾಗಿದೆ.
ಹಾಗೆಯೇ ಸ್ನಾಪ್‌ಡ್ರಾಗನ್ 8 ಜನ್ 3 SoC ಪ್ರೊಸೆಸರ್‌ನಲ್ಲಿ ಈ ಫೋನ್ ರನ್ ಆಗಲಿದೆ ಎಂದು ತಿಳಿದುಬಂದಿದ್ದು, ಇದು ಗೀಕ್‌ಬೆಂಚ್ ಪಟ್ಟಿಯಿಂದ ದೃಢೀಕರಿಸಲ್ಪಟ್ಟಿದೆ. ಜೊತೆಗೆ 16GB ಅಥವಾ 24GB RAM ಆಯ್ಕೆಯನ್ನು ಈ ಫೋನ್ ಒಳಗೊಂಡಿರಲಿದೆ ಎಂದು ಹೇಳಲಾಗಿದೆ, 512GB ಯಿಂದ 1TB ವರೆಗಿನ ವಿವಿಧ ವೇರಿಯಂಟ್‌ನ ಸ್ಟೋರೇಜ್ ಆಯ್ಕೆಯಲ್ಲಿ ಈ ಫೋನ್ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.
ಇದರೊಂದಿಗೆ ಸೋನಿ IMX890 ಸೆನ್ಸರ್ ಇರುವ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 13 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 32 ಮೆಗಾ ಪಿಕ್ಸೆಲ್ ಟೆಲಿಫೋಟೋ ಲೆನ್ಸ್ ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಅದೇ ರೀತಿ ಸೆಲ್ಫಿ ಕಾರಣಕ್ಕಾಗಿ ಈ ಫೋನ್ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.
ಅಲ್ಲದೇ ಈ ಫೋನ್ 65W ವೇಗದ ಚಾರ್ಜಿಂಗ್ ಸಪೋರ್ಟ್ ಇರುವ 5,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಹೊಂದಿರುವ ಸಾಧ್ಯತೆ ಇದೆ. ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, 3.5mm ಆಡಿಯೊ ಜ್ಯಾಕ್, 5 ಮ್ಯಾಗ್ನೆಟ್ ಸ್ಪೀಕರ್ ಸಿಸ್ಟಮ್, ಜೊತೆಗೆ ವೈ-ಫೈ 6E, ಬ್ಲೂಟೂತ್ 5.3 ಮತ್ತು ಎನ್‌ಎಫ್‌ಸಿ ನಂತಹ ಕನೆಕ್ಟಿವಿಟಿ ಫೀಚರ್ಸ್ ಪಡೆದಿರಲಿದೆ.
ಪ್ರಮುಖವಾಗಿ ಈ ಮೊಬೈಲ್ ಆರ್‌ಜಿಬಿ ಲಿಟ್ ಇರುವ ರಿಯರ್ ಲೋಗೋ ಆಯ್ಕೆ ಹೊಂದಿರಲಿದೆ ಎಂದು ತಿಳಿದುಬಂದಿದೆ. ಹಾಗೆಯೇ ಈ ಫೋನ್ IP68 ರೇಟೆಡ್ ಚಾಸಿಸ್ ಅನ್ನು ಹೊಂದಿದೆ ಎಂದು ತಿಳಿದುಬಂದಿದ್ದು, ಹೀಗಾಗಿ ಬಳಕೆದಾರರು ನೀರಿನ ಹಾಗೂ ಧೂಳಿಗೆ ಬಗ್ಗೆ ಹೆಚ್ಚು ಆತಂಕ ಪಡುವ ಅಗತ್ಯ ಇರುವುದಿಲ್ಲ ಎಂದು ಹೇಳಲಾಗಿದೆ.


Click it and Unblock the Notifications








