ASUS ROG Phone: ಆಸುಸ್ ROG ಫೋನ್ 8 ಪ್ರೊ ಸರಣಿ ವಿಜಯ್ ಸೇಲ್ಸ್‌ನಲ್ಲಿ ಲಭ್ಯ! ಬೆಲೆ ಎಷ್ಟು?
ಗೇಮಿಂಗ್ ವಿಭಾಗದಲ್ಲಿ ಅಗ್ರಗಣ್ಯ ಸ್ಮಾರ್ಟ್‌ಫೋನ್ ಎಂದರೆ ಆಸುಸ್ ROG ಫೋನ್‌ಗಳು(ASUS ROG Phone ). ಈ ನಡುವೆ ಕೆಲವು ದಿನಗಳ ಹಿಂದೆ ಹೊಸ ಫೋನ್ ಅನ್ನು ಅನಾವರಣ ಮಾಡಲಾಗಿದ್ದು, ಈ ಫೋನ್ ಅನ್ನು ಭಾರತದಲ್ಲಿ ವಿಜಯ್ ಸೇಲ್ಸ್ (Vijay Sales) ಮೂಲಕ ಖರೀದಿ ಮಾಡಬಹುದಾಗಿದೆ.
ಹೌದು, ಸುಧಾರಿತ ತಂತ್ರಜ್ಞಾನ ಮತ್ತು ತಲ್ಲೀನಗೊಳಿಸುವ ಗೇಮಿಂಗ್ (Gaming) ಅನುಭವಗಳಿಗೆ ಹೆಸರುವಾಸಿಯಾಗಿರುವ ಆಸುಸ್ ROG ಫೋನ್ 8 ಪ್ರೊ ಸರಣಿಯನ್ನು (Asus ROG Phone 8 Pro Series) ಇನ್ಮುಂದೆ ಭಾರತದಲ್ಲಿ ಸುಲಭವಾಗಿ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ 50MP ಮುಖ್ಯ ಕ್ಯಾಮೆರಾ ಆಯ್ಕೆ ಪಡೆದಿದೆ. ಹಾಗಿದ್ರೆ, ಯಾವ ವೇರಿಯಂಟ್‌ಗೆ ಎಷ್ಟು ಬೆಲೆ?, ಈ ಫೋನ್‌ನ ಫೀಚರ್ಸ್ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಆಸುಸ್ ROG ಫೋನ್ 8 ಪ್ರೊ ಸರಣಿ: ಆಸುಸ್ ROG ಫೋನ್ 8 ಪ್ರೊ ಎಲ್ಲಾ ವಿಜಯ್ ಸೆಲ್ಸ್‌ನ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಲಭ್ಯ ಇವೆ. ಆಸುಸ್ ROG ಫೋನ್ 8 ಪ್ರೊ ಎರಡು ವೇರಿಯಂಟ್‌ನಲ್ಲಿ ಲಭ್ಯ ಇದ್ದು, ಅದರಲ್ಲಿ 16GB+512GB ಸ್ಟೋರೇಜ್ ಆವೃತ್ತಿಗೆ 94,999 ರೂ.ಗಳ ಬೆಲೆ ಇದ್ದರೆ 24GB+1TB ಸ್ಟೋರೇಜ್ ಆವೃತ್ತಿಯ ಫೋನ್ 1,19,999 ರೂ.ಗಳ ಬೆಲೆ ಹೊಂದಿದೆ. ಇನ್ನು ವಿಜಯ್ ಸೇಲ್ಸ್ ROG ಫೋನ್ 8 ಪ್ರೊ ಸರಣಿಗಾಗಿ ಆಸುಸ್ ಜೊತೆಗೆ ವಿಶೇಷ ಪಾಲುದಾರಿಕೆಯನ್ನು ಪ್ರಕಟಿಸಿದೆ.
ಆಸುಸ್ ROG ಫೋನ್ 8 ಸರಣಿ ಫೀಚರ್ಸ್: ಆಸುಸ್ ROG ಫೋನ್ 8 ಸರಣಿಯು LPTO ತಂತ್ರಜ್ಞಾನದೊಂದಿಗೆ 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು 1Hz ನಿಂದ 120Hz ವರೆಗೆ ರಿಫ್ರೆಶ್ ರೇಟ್‌ಗಳನ್ನು ಬೆಂಬಲಿಸುತ್ತದೆ. ಇದರೊಂದಿಗೆ 2500 ನಿಟ್ಸ್ ನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಇದ್ದು, ಈ ಮೂಲಕ ಗೇಮಿಂಗ್ ಅಷ್ಟೇ ಅಲ್ಲದೆ ಎಲ್ಲಾ ರೀತಿಯಲ್ಲಿ ಉತ್ತಮ ವೀಕ್ಷಣೆ ಅನುಭವ ಪಡೆಯಬಹುದಾಗಿದೆ.
ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಉತ್ತಮ ಗೇಮಿಂಗ್ ಅನುಭವಕ್ಕೆ ಅನುಕೂಲ ಮಾಡಿಕೊಡಲಿದೆ. ಅಂದರೆ ಬಿಜಿಎಮ್‌ಐ, ಕಾಲ್ ಆಫ್ ಡ್ಯೂಟಿ ಮೊಬೈಲ್, ಅಪೆಕ್ಸ್ ಲೆಜೆಂಡ್‌ಗಳು ಸೇರಿದಂತೆ ಇತ್ಯಾದಿ ಗೇಮಿಂಗ್ ಸಂಬಂಧಿ ಕಾರ್ಯಕ್ಷಮತೆಯನ್ನು ಈ ಫೋನ್ ಹೊಂದಿದೆ. ಇದರೊಂದಿಗೆ ಎರಡು ವೇರಿಯಂಟ್ ಆಯ್ಕೆಯನ್ನು ಈ ಫೋನ್ ಪಡೆದಿದೆ.

ಈ ಫೋನ್ ಕ್ಯಾಮೆರಾ ಫೀಚರ್ಸ್‌ನಲ್ಲೂ ಒಂದು ಹೆಜ್ಜೆ ಮುಂದಿದೆ. 50 ಮೆಗಾಪಿಕ್ಸೆಲ್ ಸೋನಿ IMX890 ಮುಖ್ಯ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಜೊತೆಗೆ ಫ್ರೀ-ಫಾರ್ಮ್ ಲೆನ್ಸ್ ಮತ್ತು 3X ಆಪ್ಟಿಕಲ್ ಜೂಮ್ ನೊಂದಿಗೆ 32 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಆಯ್ಕೆ ಹೊಂದಿದೆ. ಈ ಕ್ಯಾಮೆರಾಗಳು 10x ಹೈಪರ್‌ಕ್ಲಾರಿಟಿ ಜೂಮ್, ಪ್ರೊ ಮೋಡ್ ಅನ್ನು ಬೆಂಬಲಿಸಲಿದ್ದು, ಹೆಚ್‌ಡಿಆರ್ ನಲ್ಲಿ 8K ಯುಹೆಚ್‌ಡಿ ಮತ್ತು 4K ವರೆಗೆ ವಿಡಿಯೋ ರೆಕಾರ್ಡಿಂಗ್ ಅನ್ನು ಮಾಡಬಹುದಾಗಿದೆ. ಜೊತಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.
5,500 mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್ ಹೊಂದಿದ್ದು, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 65W ಹೈಪರ್‌ಚಾರ್ಜ್ ವೇಗದ ಚಾರ್ಜಿಂಗ್ ಬೆಂಬಲ ಪಡೆದಿದ್ದು, ಈ ಮೂಲಕ ಉತ್ತಮ ಬ್ಯಾಟರಿ ಬ್ಯಾಕಪ್ ಅನ್ನು ಪಡೆಯಬಹುದಾಗಿದೆ. ಇನ್ನು ಈ ಫೋನ್ ಏರೋಆಕ್ಟಿವ್ ಕೂಲರ್ X ನೊಂದಿಗೆ ಬರಲಿದ್ದು, ತೀವ್ರವಾದ ಗೇಮಿಂಗ್ ಸೆಷನ್‌ಗಳಲ್ಲಿ ಫೋನ್‌ನ ಕೂಲಿಂಗ್ ವ್ಯವಸ್ಥೆಯನ್ನು ಹೆಚ್ಚಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಇದು ಥರ್ಮೋಎಲೆಕ್ಟ್ರಿಕ್ ಕೂಲಿಂಗ್ ಚಿಪ್‌ನಿಂದ ಕಾರ್ಯನಿರ್ವಹಿಸಲಿದ್ದು, ಅಲ್ಟ್ರಾ-ಕಾಂಪ್ಯಾಕ್ಟ್ ಗಾತ್ರದಲ್ಲಿ ಡ್ಯುಯಲ್ ಕನ್ಸೋಲ್ ತರಹದ ಬಟನ್‌ಗಳನ್ನು ಹೊಂದಿದೆ. ಕೂಲರ್ ಶಾಖವನ್ನು ಹೆಚ್ಚು ಪರಿಣಾಮಕಾರಿಯಾಗಿ ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದಾಗಿ ಫೋನ್‌ನ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳುತ್ತದೆ ಮತ್ತು ವಿಸ್ತೃತ ಗೇಮಿಂಗ್ ಸೆಷನ್‌ಗಳಲ್ಲಿ ಥರ್ಮಲ್ ಥ್ರೊಟ್ಲಿಂಗ್ ಅನ್ನು ತಡೆಯುತ್ತದೆ.


Click it and Unblock the Notifications








