Asus ROG: ಆಸುಸ್ ROG ಫೋನ್ 8 ಸರಣಿ ಲಾಂಚ್‌ಗೆ ದಿನಾಂಕ ನಿಗದಿ! 1TB ವರೆಗೂ ಸ್ಟೋರೇಜ್ ಸಾಮರ್ಥ್ಯ!
ಆಸುಸ್ ROG ಫೋನ್‌ಗಳು (Asus ROG Phone) ಪ್ರಮುಖವಾಗಿ ಗೇಮಿಂಗ್ ಪ್ರಿಯರಿಗೆ ನೆಚ್ಚಿನ ಡಿವೈಸ್ ಆಗಿವೆ. ಈ ಮೂಲಕ ತಮ್ಮಿಷ್ಟದ ಗೇಮ್ ಅನ್ನು ಯಾವುದೇ ಅಡೆ ತಡೆ ಇಲ್ಲದೆ ಆಡಬಹುದಾಗಿದೆ. ಅದರಂತೆ ಈಗ ಜಾಗತಿಕವಾಗಿ ಆಸುಸ್ ROG ಫೋನ್ 8 ಸರಣಿ (Asus ROG Phone 8 Series) ಜಾಗತಿಕವಾಗಿ ಲಾಂಚ್ ಆಗುವ ದಿನಾಂಕ ನಿಗದಿಯಾಗಿದೆ.
ಹೌದು, CES 2024 ನಲ್ಲಿ ROG ಫೋನ್ 8 ಸರಣಿ ಅನಾವರಣ ಆಗಲಿವೆ. ಈ ಮೂಲಕ ಭಾರತಕ್ಕೂ ಈ ಫೋನ್‌ಗಳು ಕಾಲಿಡಲಿವೆ. ಈ ಫೋನ್ ಅಮೋಲೆಡ್ ಡಿಸ್ಪ್ಲೇ ಹೊಂದಿದ್ದು, 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿರಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಲೀಕ್ ಮಾಹಿತಿ ಆಧಾರದಂತೆ ಈ ಫೋನ್‌ನ ಪ್ರಮುಖ ಫೀಚರ್ಸ್ ಏನು?, ಯಾವಾಗ ಲಾಂಚ್ ಆಗಲಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಆಸುಸ್ ROG ಫೋನ್ 8 ಸರಣಿ: CES 2024 ನಲ್ಲಿ ROG ಫೋನ್ 8 ಸರಣಿ ಅನ್ನು ಅನಾವರಣ ಮಾಡಲಿದ್ದು, ಈ ಕಾರ್ಯಕ್ರಮ ಇದೇ ತಿಂಗಳ ಅಂದರೆ ಜನವರಿ 8 ಜರುಗಲಿದೆ. ಜಾಗತಿಕ ಮಾರುಕಟ್ಟೆಯನ್ನು ಹೊರತುಪಡಿಸಿ ಈ ಫೋನ್ ಅನ್ನು ಜನವರಿ 16 ರಂದು ಚೀನಾದಲ್ಲಿ ಲಾಂಚ್ ಮಾಡಲಾಗುತ್ತದೆ. ಈ ಫೋನ್ ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಆದ ರೆಡ್ ಮ್ಯಾಜಿಕ್ 9 ಪ್ರೊ ನಂತಹ ಫೋನ್‌ಗಳಿಗೆ ನೇರ ಪೈಪೋಟಿ ನೀಡಲಿದೆ. ಹಾಗಿದ್ರೆ, ಬನ್ನಿ ಈ ಫೋನ್‌ನ ನಿರೀಕ್ಷಿತ ಫೀಚರ್ಸ್ ಏನು ಅನ್ನೋದನ್ನು ತಿಳಿಯೋಣ.
ಆಸುಸ್ ROG ಫೋನ್ 8 ಪ್ರೊ ಸಂಬಂಧ ಕೆಲವು ಮಾಹಿತಿ ಲೀಕ್ ಆಗಿದ್ದು, ಅದರಂತೆ 6.78 ಇಂಚಿನ ಅಮೋಲೆಡ್ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್ ಆಯ್ಕೆ ಕಾಣಬಹುದಾಗಿದ್ದು, ಈ ಮೂಲಕ ಉತ್ತಮ ಗೇಮಿಂಗ್ ಅನುಭವವನ್ನು ಪಡೆಯಬಹುದಾಗಿದೆ.

ಇದರೊಂದಿಗೆ ಸ್ನಾಪ್‌ಡ್ರಾಗನ್ 8 ಜನ್ 3 SoC ಪ್ರೊಸೆಸರ್‌ನಲ್ಲಿ ಈ ಫೋನ್ ರನ್ ಆಗಲಿದೆ ಎಂದು ತಿಳಿದುಬಂದಿದ್ದು, ಇದು ಗೀಕ್‌ಬೆಂಚ್ ಪಟ್ಟಿಯಿಂದ ದೃಢೀಕರಿಸಲ್ಪಟ್ಟಿದೆ. ಜೊತೆಗೆ 16GB ಅಥವಾ 24GB RAM ಆಯ್ಕೆಯನ್ನು ಈ ಫೋನ್ ಹೊಂದಿರಬಹುದು ಎನ್ನಲಾಗಿದ್ದು, 512GB ಯಿಂದ 1TB ವರೆಗಿನ ವಿವಿಧ ವೇರಿಯಂಟ್‌ನ ಸ್ಟೋರೇಜ್ ಆಯ್ಕೆಯಲ್ಲಿ ಈ ಫೋನ್ ಕಾಣಿಸಿಕೊಳ್ಳಬಹುದು ಎಂದು ಊಹಿಸಲಾಗಿದೆ.
ಇದರೊಂದಿಗೆ ಸೋನಿ IMX890 ಸೆನ್ಸರ್ ಇರುವ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 13 ಮೆಗಾಪಿಕ್ಸೆಲ್‌ಅಲ್ಟ್ರಾ-ವೈಡ್ ಲೆನ್ಸ್ ಮತ್ತು 32 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಹಾಗೆಯೇ ಸೆಲ್ಫಿ ಉದ್ದೇಶಕ್ಕೆ ಈ ಫೋನ್ 32 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರಲಿದೆ ಎಂದು ಹೇಳಲಾಗಿದೆ.
ಉಳಿದಂತೆ ಈ ಫೋನ್ 65W ವೇಗದ ಚಾರ್ಜಿಂಗ್ ಬೆಂಬಲಿಸುವ 5,500mAh ಸಾಮರ್ಥ್ಯದ ಬ್ಯಾಟರಿ ಹೊಂದಿರಬಹುದು ಎನ್ನಲಾಗಿದ್ದು, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, 3.5mm ಆಡಿಯೊ ಜ್ಯಾಕ್, 5 ಮ್ಯಾಗ್ನೆಟ್ ಸ್ಪೀಕರ್ ಸಿಸ್ಟಮ್, ಜೊತೆಗೆ ವೈ-ಫೈ 6E, ಬ್ಲೂಟೂತ್ 5.3 ಮತ್ತು ಎನ್‌ಎಫ್‌ಸಿ ನಂತಹ ಕನೆಕ್ಟಿವಿಟಿ ಫೀಚರ್ಸ್ ಪಡೆದಿರಲಿದೆ.

ಎಲ್ಲಕ್ಕಿಂತ ಮಿಗಿಲಾಗಿ ಈ ಫೋನ್ ಆರ್‌ಜಿಬಿ ಲಿಟ್ ಇರುವ ರಿಯರ್ ಲೋಗೋ ಆಯ್ಕೆ ಹೊಂದಿರಲಿದೆ ಎಂದು ತಿಳಿದುಬಂದಿದೆ. ಹಾಗೆಯೇ ಈ ಫೋನ್ IP68 ರೇಟೆಡ್ ಚಾಸಿಸ್ ಅನ್ನು ಹೊಂದಿದೆ ಎಂದು ತಿಳಿದುಬಂದಿದ್ದು, ಈ ಮೂಲಕ ನೀವು ಯಾವುದೇ ನೀರು ಮತ್ತು ಧೂಳಿಗೆ ಭಯಪಡುವ ಅವಶ್ಯಕತೆ ಇರುವುದಿಲ್ಲ.


Click it and Unblock the Notifications








