Home
ಸುದ್ದಿಜಾಲ

ಆಸುಸ್‌ ROG ಫೋನ್‌ 8 ಸರಣಿ ಅನಾವರಣ!..ಫೀಚರ್ಸ್‌ ತಿಳಿದ್ರೆ, ಅಚ್ಚರಿ ಪಡ್ತೀರಾ!

ಆಸುಸ್‌ ಸಂಸ್ಥೆಯ ಬಹುನಿರೀಕ್ಷಿತ ಆಸುಸ್‌ ROG ಫೋನ್‌ 8 ಸರಣಿ ಅಧಿಕೃತವಾಗಿ ಅನಾವರಣ ಆಗಿದೆ. ಈ ಗೇಮಿಂಗ್ ಸ್ಮಾರ್ಟ್‌ಫೋನ್‌ ಸರಣಿಯು ಆಸುಸ್‌ ROG ಫೋನ್‌ 8, ಆಸುಸ್‌ ROG ಫೋನ್‌ 8 ಪ್ರೊ ಹಾಗೂ ಆಸುಸ್‌ ROG ಫೋನ್‌ 8 ಎಡಿಷನ್‌ ಮಾದರಿಗಳನ್ನು ಒಳಗೊಂಡಿದ್ದು, ಗೇಮಿಂಗ್‌ ಪ್ರಿಯರಿಗೆ ಭರ್ಜರಿ ಖುಷಿ ನೀಡಿದೆ.

ಹೌದು, ಆಸುಸ್‌ ಮೊಬೈಲ್‌ ಸಂಸ್ಥೆಯು ಆಸುಸ್‌ ROG ಫೋನ್‌ 8 ಸರಣಿ ಅನ್ನು ಅನಾವರಣ ಮಾಡಿದೆ. ಈ ಫೋನ್‌ ಸರಣಿಯು ದೈತ್ಯ ಫೀಚರ್ಸ್‌ಗಳನ್ನು ಒಳಗೊಂಡಿದ್ದು, 12GB RAM ಮತ್ತು 256GB, 16GB RAM ಮತ್ತು 512GB ಹಾಗೂ 24GB RAM ಮತ್ತು 1TB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯ ಆಗಲಿವೆ.

ಆಸುಸ್‌ ROG ಫೋನ್‌ 8 ಸರಣಿ ಅನಾವರಣ!..ಫೀಚರ್ಸ್‌ ತಿಳಿದ್ರೆ, ಅಚ್ಚರಿ ಪಡ್ತೀರಾ!

ಆಸುಸ್‌ ROG ಫೋನ್‌ 8 ಸರಣಿಯ ಫೋನ್‌ಗಳು ಕ್ವಾಲ್ಕಾಮ್‌ನ ಇತ್ತೀಚಿನ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಈ ಫೋನ್‌ಗಳು 5,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿವೆ. ಇದರ ಜೊತೆಗೆ 65W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ ಮಾಡುತ್ತವೆ. ಹಾಗಾದರೇ ಈ ಆಸುಸ್‌ ROG ಫೋನ್‌ 8 ಸರಣಿಯ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಸುಸ್‌ ROG ಫೋನ್‌ 8 ಸರಣಿ ಅನಾವರಣ!..ಫೀಚರ್ಸ್‌ ತಿಳಿದ್ರೆ, ಅಚ್ಚರಿ ಪಡ್ತೀರಾ!

ಆಸುಸ್‌ ROG ಫೋನ್‌ 8 ಸರಣಿ ಫೀಚರ್ಸ್‌

ಆಸುಸ್‌ ROG ಫೋನ್‌ 8 ಹಾಗೂ ROG ಫೋನ್‌ 8 ಪ್ರೊ ಮೊಬೈಲ್‌ಗಳು 6.78 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಪಡೆದಿದ್ದು, ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿರಲಿವೆ. ಹಾಗೆಯೇ 2500 nits ಬ್ರೈಟ್ನೆಸ್‌ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಪಡೆದಿವೆ.

ಇನ್ನು ಈ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್ ಪ್ರೊಸೆಸರ್‌ ಪವರ್‌ ಅನ್ನು ಪಡೆದುಕೊಂಡಿದ್ದು,ಇದು ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಪಡೆದಿವೆ. ಹಾಗೆಯೇ, 12 GB RAM ಮತ್ತು 256 GB, 16 GB RAM ಮತ್ತು 512 GB ಹಾಗೂ 24 GB RAM ಮತ್ತು 1 TB ಆಯ್ಕೆಗಳನ್ನು ಪಡೆದಿದೆ.

ಆಸುಸ್‌ ROG ಫೋನ್‌ 8 ಸರಣಿ ಅನಾವರಣ!..ಫೀಚರ್ಸ್‌ ತಿಳಿದ್ರೆ, ಅಚ್ಚರಿ ಪಡ್ತೀರಾ!

ಅದೇ ರೀತಿ ಈ ಮೊಬೈಲ್‌ಗಳು ಹಿಂಬದಿಯಲ್ಲಿ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯ ಪಡೆದಿವೆ. ಹಾಗೆಯೇ 13 ಮೆಗಾ ಪಿಕ್ಸಲ್‌ ಅಲ್ಟ್ರಾ-ವೈಡ್ ಕ್ಯಾಮೆರಾ, 32 ಮೆಗಾ ಪಿಕ್ಸಲ್‌ 3x ಟೆಲಿಫೋಟೋ ಸೆನ್ಸಾರ್‌ ಕ್ಯಾಮೆರಾ ಕಾಣಬಹುದು. ಇದಲ್ಲದೇ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಆಸುಸ್‌ ROG ಫೋನ್‌ 8 ಸರಣಿ ಮೊಬೈಲ್‌ಗಳು 5500mAh ಬಿಗ್ ಬ್ಯಾಟರಿ ಸೌಲಭ್ಯ ಪಡೆದಿದ್ದು, ಇದರ ಜೊತೆಗೆ 65W ಹೈಪರ್ ಚಾರ್ಜ್ ಫಾಸ್ಟ್ ಚಾರ್ಜಿಂಗ್, ಕ್ವಿಕ್ ಚಾರ್ಜ್ 5.0 ಮತ್ತು PD ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ನಂತಹ ಸೌಲಭ್ಯಗಳ ಆಯ್ಕೆ ಕೂಡಾ ಪಡೆದಿವೆ.

ಅಲ್ಲದೇ ಈ ಫೋನ್‌ಗಳು 3.5mm ಆಡಿಯೋ ಜ್ಯಾಕ್, ಡ್ಯುಯಲ್ ಸ್ಪೀಕರ್‌ಗಳು, 5-ಮ್ಯಾಗ್ನೆಟ್ ಸ್ಟೀರಿಯೋ ಸ್ಪೀಕರ್, ಹೆಡ್‌ಫೋನ್ ಸ್ಪಾಟಿಯಲ್ ಸೌಂಡ್‌ಗಾಗಿ ಡೈರಾಕ್ ವರ್ಚುವೋ, ಆಸುಸ್‌ ನಾಯ್ಸ್ ರಿಡಕ್ಷನ್ ಟೆಕ್ನಾಲಜಿಯೊಂದಿಗೆ ಟ್ರೈ-ಮೈಕ್ರೋಫೋನ್‌ಗಳು ಆಯ್ಕೆಗಳ ಜೊತೆಗೆ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸೌಲಭ್ಯ ಸಹ ಇದೆ.

ಅಂದಹಾಗೆ ಆಸುಸ್‌ ROG ಫೋನ್ 8 ಮೊಬೈಲ್‌ ರೆಬೆಲ್ ಗ್ರೇ ಮತ್ತು ಫ್ಯಾಂಟಮ್ ಬ್ಲ್ಯಾಕ್ ಕಲರ್‌ ಆಯ್ಕೆ ಪಡೆದಿದ್ದರೇ, ಆಸುಸ್‌ ROG ಫೋನ್ 8 ಪ್ರೊ ಎಡಿಷನ್‌ ಹಾಗೂ ಆಸುಸ್‌ ROG ಫೋನ್ 8 ಪ್ರೊ ಮೊಬೈಲ್‌ಗಳು ಕೇವಲ ಫ್ಯಾಂಟಮ್ ಬ್ಲ್ಯಾಕ್‌ ಕಲರ್‌ ಆಯ್ಕೆ ಪಡೆದುಕೊಂಡಿವೆ.

Best Mobiles in India

English summary
ASUS ROG Phone 8 Series with Snapdragon 8 Gen 3 announced. specifications, color, camera and other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+