ಆಸೂಸ್‌ನ ಹೊಸ ಗೇಮಿಂಗ್ ಲ್ಯಾಪ್‌ಟಾಪ್ ಬಿಡುಗಡೆ!..ಬೆಲೆ 99,990ರೂ.!
ವಿಶ್ವ ಟೆಕ್ ಮಾರುಕಟ್ಟೆಯಲ್ಲಿ ಆಸೂಸ್ ಸಹ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು, ಅತ್ಯುತ್ತಮ ಗ್ಯಾಜೆಟ್ ಉತ್ಪನ್ನಗಳಿಂದ ಗ್ರಾಹಕರನ್ನು ಸೆಳೆದಿದೆ. ಮುಖ್ಯವಾಗಿ ಕಂಪನಿಯ ಗೇಮಿಂಗ್ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಗೇಮ್ಸ್ ಪ್ರಿಯರ ಫೇವರೇಟ್ ಎನಿಸಿಕೊಂಡಿವೆ. ಆದ್ರೆ ಇದೀಗ ಆಸೂಸ್ ಮತ್ತೆ ವಿಶೇಷ ಫೀಚರ್ಸ್‌ಗಳೊಂದಿಗೆ ಹೊಸದೊಂದು ಗೇಮಿಂಗ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ.

ಹೌದು, ಆಸೂಸ್ ಕಂಪನಿಯು ಇದೀಗ 'ROG ಜೆಫೈರಸ್ ಜಿ ಜಿಎ 502' (ROG Zephyrus G GA502) ಹೆಸರಿನ ಹೈ ಎಂಡ್ ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್ ಎಎಮ್‌ಡಿ Ryzen 7 3750 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, 32GB DDR4 RAM ಮತ್ತು 512GB ಸ್ಟೋರೇಜ್ ಸ್ಥಳಾವಕಾಶ ಪಡೆದಿದೆ. ಹಾಗಾದರೇ ಆಸೂಸ್ ಕಂಪನಿಯ ROG ಜೆಫೈರಸ್ ಜಿ ಜಿಎ 502 ಲ್ಯಾಪ್‌ಟಾಪ್‌ನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ರಚನೆ
1920x1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 15.6 ಇಂಚಿನ IPS ಆಯಂಟಿ ಗ್ಲೇರ್ ಫುಲ್ ಹೆಚ್‌ಡಿ ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇಯ ರಿಫ್ರೇಶ್ ರೇಟ್ 120Hz ಸಾಮರ್ಥ್ಯದಲ್ಲಿದೆ. ಅತೀ ತಿಳುವಾದ ರಚನೆಯನ್ನು ಪಡೆದಿದ್ದು, ಇದರ ಥೀಕ್ನೆಸ್ 20mm ಆಗಿದೆ. ಹಾಗೂ ಇದರ ತೂಕವು 2.1ಕಿಲೋ ಆಗಿದೆ. ಇಂಟಲಿಜೆಂಟ್ ಮತ್ತು ಡಸ್ಟ್ ಟ್ಯೂನಲ್ ಫ್ಯಾನ್ ಪಡೆದಿದೆ.

ಪ್ರೊಸೆಸರ್ ಶಕ್ತಿ
ಆಸೂಸ್‌ನ ಹೊಸ ಗೇಮಿಂಗ್ ಲ್ಯಾಪ್‌ಟಾಪ್ ಎಎಮ್‌ಡಿ Ryzen 7 3750 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಮೂರನೇ ತಲೆಮಾರಿನ ಚಿಪ್‌ಸೆಟ್ ಒಳಗೊಂಡಿದೆ. ಇದರೊಂದಿಗೆ Nvidia GeForce GTX 1660 ಗ್ರಾಫಿಕ್ ಕಾರ್ಡ್ ನೀಡಿದ್ದು, 1335MHz at 60W ಟರ್ಬೋ ಮೋಡ್ ಆಯ್ಕೆ ಇದೆ. ಹಾಗೆಯೇ 32GB DDR4 RAM ಬೆಂಬಲದೊಂದಿಗೆ 512GB ಸ್ಟೋರೇಜ್ ಪಡೆದುಕೊಂಡಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಈ ಲ್ಯಾಪ್‌ಟಾಪ್ 76Whr ಲಿಥಿಯಂ-ಐಯಾನ್ ಬ್ಯಾಟರಿ ಶಕ್ತಿ ಪಡೆದಿದ್ದು, ಜೊತೆಗೆ 180W ಪವರ್ ಅಡಾಪ್ಟರ್ ಹೊಂದಿದೆ. ಕನೆಕ್ಷನ್‌ಗಾಗಿ ಆಸೂಸ್‌ಈ ಗೇಮಿಂಗ್ ಲ್ಯಾಪ್‌ಟಾಪ್ ವೈ-ಫೈ, ಬ್ಲೂಟೂತ್ ವಿ 5.0, ಒಂದು ಯುಎಸ್‌ಬಿ 3.1 ಜನ್ 2 ಟೈಪ್-ಸಿ ಪೋರ್ಟ್, ಮೂರು ಯುಎಸ್‌ಬಿ 3.1 ಜನ್ 1 ಟೈಪ್-ಎ ಪೋರ್ಟ್‌ಗಳು, ಎಚ್‌ಡಿಎಂಐ ಪೋರ್ಟ್, 3.5 ಎಂಎಂ ಹೆಡ್‌ಫೋನ್ ಆಯ್ಕೆಗಳನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಆಸೂಸ್ ಕಂಪನಿಯು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಹೊಸ ಗೇಮಿಂಗ್ ಲ್ಯಾಪ್‌ಟಾಪ್ 'ROG ಜೆಫೈರಸ್ ಜಿ ಜಿಎ 502' ಕಂಪನಿಯ ROG Zephyrus ಸರಣಿಗೆ ಸೇರಿದೆ. ಈ ಲ್ಯಾಪ್‌ಟಾಪ್ ಬೆಲೆಯು 99,990ರೂ.ಗಳಾಗಿದ್ದು, ಇ ಕಾಮರ್ಸ್ ತಾಣ ಪ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ದೊರೆಯಲಿದೆ. ಇದು ಗೇಮಿಂಗ್ ಪ್ರಿಯರಿಗೆ ಅತ್ಯುತ್ತಮ ಡಿವೈಸ್ ಎನಿಸಿಕೊಳ್ಳಲಿದೆ.


Click it and Unblock the Notifications








