ಆಸೂಸ್‌ನ ಎರಡು ಹೊಸ ಲ್ಯಾಪ್‌ಟಾಪ್‌ ಬಿಡುಗಡೆ!.ಆರಂಭಿಕ ಬೆಲೆ 33,990ರೂ!

|

ಆಸೂಸ್‌ ಕಂಪನಿಯು ಈಗಾಗಲೇ ಲ್ಯಾಪ್‌ಟಾಪ್‌ಗಳಿಂದ ಟೆಕ್‌ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದು, ಇದೀಗ ಇದೇ ಜೂನ್ 11ರಂದು ಭಾರತದಲ್ಲಿ ವಿವೋಬುಕ್‌ ಹೆಸರಿನ ಮತ್ತೆರಡು ಹೊಸ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದೆ. ಈ ಲ್ಯಾಪ್‌ಟಾಪ್‌ಗಳು ಫ್ರೇಮ್‌ಲೆಸ್‌ ನ್ಯಾನೊ ಎಡ್ಜ್ ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದ್ದು, ಮಲ್ಟಿಟಾಸ್ಕ್‌ ಕೆಲಸಗಳನ್ನು ವೇಗವಾಗಿ ನಿಭಾಯಿಸಬಲ್ಲ ಸಾಮರ್ಥ್ಯ ಪಡೆದಿವೆ.

ಆಸೂಸ್‌ನ ಎರಡು ಹೊಸ ಲ್ಯಾಪ್‌ಟಾಪ್‌ ಬಿಡುಗಡೆ!.ಆರಂಭಿಕ ಬೆಲೆ 33,990ರೂ!

ಹೌದು, ಆಸೂಸ್‌ ಕಂಪನಿಯು 14 ಇಂಚಿನ ವಿವೋಬುಕ್‌ X412 ಮತ್ತು 15.6 ಇಂಚಿನ ವಿವೋಬುಕ್‌ X512 ಹೆಸರಿನ ಎರಡು ನೋಟ್‌ಬುಕ್‌ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಟ್ರಾನ್ಸ್‌ಪರೆಂಟ್‌ ಸಿಲ್ವರ್, ಸ್ಲೆಟ್‌ ಗ್ರೆ, ಪಿಕಾಕ್ ಬ್ಲೂ, ಮತ್ತು ಕೋರಲ್‌ ಕ್ರಶ್ ಬಣ್ಣಗಳ ಆಯ್ಕೆಗಳನ್ನು ಹೊಂದಿದ್ದು, ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಮತ್ತು ಆಫ್‌ಲೈನ್‌ನಲ್ಲಿಯೂ ಖರೀದಿಗೆ ಲಭ್ಯ ಇವೆ.

ಆಸೂಸ್‌ನ ಎರಡು ಹೊಸ ಲ್ಯಾಪ್‌ಟಾಪ್‌ ಬಿಡುಗಡೆ!.ಆರಂಭಿಕ ಬೆಲೆ 33,990ರೂ!

ಎರಡು ಲ್ಯಾಪ್‌ಟಾಪ್‌ಗಳು 8ನೇ ತಲೆಮಾರಿನ ಇಂಟೆಲ್‌ಕೋರ್‌ i7 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಜೊತೆಗೆ Nvidia GeForce MX250 ಗ್ರಾಫಿಕ್ಸ್‌ ಬೆಂಬಲ ಸಹ ಒಳಗೊಂಡಿದೆ. ಹಾಗಾದರೇ ಆಸೂಸ್‌ನ ವಿವೋಬುಕ್‌ X412 ಮತ್ತು ವಿವೋಬುಕ್‌ X512 ಲ್ಯಾಪ್‌ಟಾಪ್‌ಗಳು ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ವಾಟ್ಸಪ್‌ನಲ್ಲಿ ದೋಷ ಪತ್ತೆಹಚ್ಚಿದ ಭಾರತೀಯ ಇಂಜನಿಯರ್‌! ಓದಿರಿ : ವಾಟ್ಸಪ್‌ನಲ್ಲಿ ದೋಷ ಪತ್ತೆಹಚ್ಚಿದ ಭಾರತೀಯ ಇಂಜನಿಯರ್‌!

ಅತ್ಯುತ್ತಮ ಕಾರ್ಯದಕ್ಷತೆ

ಅತ್ಯುತ್ತಮ ಕಾರ್ಯದಕ್ಷತೆ

ವಿವೋಬುಕ್‌ X412 ಮತ್ತು ವಿವೋಬುಕ್‌ X512 ಲ್ಯಾಪ್‌ಟಾಪ್‌ಗಳು ಅತ್ಯುತ್ತಮ ಕಾರ್ಯದಕ್ಷತೆಯನ್ನು ನಿರ್ವಹಿಸಲಿದ್ದು, ಸರಳವಾಗಿ ಪೋರ್ಟೆಬಲ್ ಮಾಡಬಹುದು. ಈ ಹೊಸ ಲ್ಯಾಪ್‌ಟಾಪ್‌ಗಳನ್ನು ಗ್ರಾಹಕರು ಸ್ವೀಕರಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂಬುದನ್ನು ಭಾರತೀಯ ಆಸೂಸ್‌ನ ರಿಪಬ್ಲಿಕ್ ಆಫ್ ಗೇಮ್ಸ್ (ಆರ್ಒಜಿ) ವ್ಯವಹಾರದ ಮುಖ್ಯಸ್ಥ ಮುಖ್ಯಸ್ಥ ಅರ್ನಾಲ್ಡ್ ಸು ತಿಳಿಸಿದ್ದಾರೆ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಆಸೂಸ್‌ ವಿವೋಬುಕ್‌ X412 ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ ಹೆಚ್‌ಡಿ ಸ್ಕ್ರೀನ್‌ ಅನ್ನು ಹೊಂದಿದ್ದು, ಡಿಸ್‌ಪ್ಲೇ ರೆಸಲ್ಯೂಶನ್ 1920x1080 ಸಾಮರ್ಥ್ಯದಲ್ಲಿದೆ. ಹಾಗೆಯೇ ವಿವೋಬುಕ್‌ X512 ಲ್ಯಾಪ್‌ಟಾಪ್‌ ಸಹ 1,920 x 1,080 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 15.6 ಇಂಚಿನ ಪೂರ್ಣ ಹೆಚ್‌ಡಿ ಸ್ಕ್ರೀನ್‌ ಅನ್ನು ಹೊಂದಿದೆ.

ಯಾವ ಪ್ರೊಸೆಸರ್ ಇದೆ

ಯಾವ ಪ್ರೊಸೆಸರ್ ಇದೆ

ಆಸೂಸ್‌ ಎರಡು ಹೊಸ ಲ್ಯಾಪ್‌ಟಾಪ್‌ಗಳು 8ನೇ ತಲೆಮಾರಿನ ಇಂಟೆಲ್‌ಕೋರ್‌ i7 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ವಿವೋಬುಕ್‌ X412 ಲ್ಯಾಪ್‌ಟಾಪ್‌ 12GB DDR4 RAM ಸಾಮರ್ಥ್ಯವನ್ನು ಹೊಂದಿದ್ದು, ಹಾಗೆಯೇ ವಿವೋಬುಕ್‌ X512 ಲ್ಯಾಪ್‌ಟಾಪ್‌ 16GB DDR4 RAM ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಓದಿರಿ : ಶಿಯೋಮಿಯ 'ಮಿ ಬ್ಯಾಂಡ್ 4' ಬಿಡುಗಡೆ : ಫುಲ್‌ ಕಲರ್‌ ಡಿಸ್‌ಪ್ಲೇ! ಓದಿರಿ : ಶಿಯೋಮಿಯ 'ಮಿ ಬ್ಯಾಂಡ್ 4' ಬಿಡುಗಡೆ : ಫುಲ್‌ ಕಲರ್‌ ಡಿಸ್‌ಪ್ಲೇ!

ಇತರೆ ಸೌಲಭ್ಯಗಳು

ಇತರೆ ಸೌಲಭ್ಯಗಳು

ಆಸೂಸ್‌ನ ಈ ಎರಡು ಹೊಸ ಲ್ಯಾಪ್‌ಟಾಪ್‌ಗಳು ಒಂದು ಯುಎಸ್‌ಬಿ 3.1 ಜೆನ್ 1 ಟೈಪ್-ಸಿ ಪೋರ್ಟ್, ಯುಎಸ್‌ಬಿ 3.1 ಜೆನ್ 1 ಟೈಪ್-ಎ ಪೋರ್ಟ್, ಎರಡು ಯುಎಸ್‌ಬಿ 2.0 ಟೈಪ್-ಎ ಪೋರ್ಟ್‌ಗಳು, 3.5 ಎಂಎಂ ಆಡಿಯೊ ಕಾಂಬೊ ಜ್ಯಾಕ್, ಒಂದು ಎಚ್‌ಡಿಎಮ್‌ಐ 1.4 ಪೋರ್ಟ್ ಮತ್ತು ಮೈಕ್ರೊ ಎಸ್ಡಿ ಕಾರ್ಡ್ ರೀಡರ್. ಸೌಲಭ್ಯಗಳನ್ನು ಒಳಗೊಂಡಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಆಸೂಸ್‌ ಬಿಡುಗಡೆ ಮಾಡಿರುವ 'ವಿವೋಬುಕ್‌ X412' ಮತ್ತು 'ವಿವೋಬುಕ್‌ X512' ಈ ಎರಡು ಲ್ಯಾಪ್‌ಟಾಪ್‌ಗಳು ಖರೀದಿಗೆ ಲಭ್ಯವಿದ್ದು, ವಿವೋಬುಕ್‌ X412 ಮಾದರಿಯ ಆರಂಭಿಕ ಬೆಲೆಯು 33,990ರೂ.ಗಳು ಮತ್ತು ವಿವೋಬುಕ್‌ X512 ಮಾದರಿಯ ಆರಂಭಿಕ ಬೆಲೆಯು 34,990ರೂ.ಗಳು. ಜನಪ್ರಿಯ ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ ಮತ್ತು ಆಫ್‌ಲೈನ್‌ ಮಾರುಕಟ್ಟೆಯಲ್ಲಿಯೂ ಲಭ್ಯ ಇವೆ.

ಓದಿರಿ : ಯುವತಿ ಜೊತೆ ಬೈಕ್‌ ಸ್ಟಂಟ್ ಮಾಡಿದ ಯುವಕ!..ಟಿಕ್‌ಟಾಕ್‌ನಲ್ಲಿ ವಿಡಿಯೊ ವೈರಲ್‌! ಓದಿರಿ : ಯುವತಿ ಜೊತೆ ಬೈಕ್‌ ಸ್ಟಂಟ್ ಮಾಡಿದ ಯುವಕ!..ಟಿಕ್‌ಟಾಕ್‌ನಲ್ಲಿ ವಿಡಿಯೊ ವೈರಲ್‌!

Best Mobiles in India

English summary
Asus on Tuesday refreshed its VivoBook series with two new models -- a 14-inch VivoBook X412 and a 15.6-inch VivoBook X512 -- in India. to know more vist to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X