ಅಂತೂ ಲಾಂಚ್ ಆಯ್ತು 'ಆಸುಸ್ ಜೆನ್‌ಫೋನ್ 10'!..ಸ್ಟೈಲಿಶ್ ಡಿಸೈನ್ ಇದೆ!
ಬಹುನಿರೀಕ್ಷಿತ ಆಸುಸ್ ಸಂಸ್ಥೆಯು ಆಸುಸ್ ಜೆನ್‌ಫೋನ್ 10 ಬಿಡುಗಡೆ ಆಗಿದೆ. ಈ ಫೋನ್ ಜೆನ್‌ಫೋನ್ 9 ಉತ್ತರಾಧಿಕಾರಿ ಆಗಿದ್ದು, ಸಾಕಷ್ಟು ಅಪ್‌ಡೇಟ್ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಪಡೆದಿದೆ. ಕಂಪ್ಯಾಕ್ಟ್ ರಚನೆ, ಅದರ ಡಿಸೈನ್ ಹಾಗೂ ಅಧಿಕ RAM ಆಯ್ಕೆಗಳು ಜೆನ್‌ಫೋನ್ 10 ಮೊಬೈಲ್‌ನ ಪ್ರಮುಖ ಕೀ ಹೈಲೈಟ್ಸ್‌ಗಳಾಗಿ ಕಾಣಿಸಿಕೊಂಡಿವೆ.
ಹೌದು, ಆಸುಸ್ ಸಂಸ್ಥೆಯು ಈಗ 'ಆಸುಸ್ ಜೆನ್‌ಫೋನ್ 10' (Asus Zenfone 10) ಅನ್ನು (ಜೂನ್ 29 ರಂದು) ಲಾಂಚ್ ಮಾಡಿದೆ. ಅಧಿಕೃತವಾಗಿ ಮಾರುಕಟ್ಟೆಗೆ ಎಂಟ್ರಿ ಕೊಡೆದಿರುವ ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಹೊಂದಿದ್ದು, 16GB RAM ಮತ್ತು 512GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ.

ನೂತನ ಆಸುಸ್ ಜೆನ್‌ಫೋನ್ 10 ಫೋನ್ AMOLED ಡಿಸ್‌ಪ್ಲೇ, 144Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, ಇದರೊಂದಿಗೆ 4,300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ರಚನೆಯನ್ನು ಪಡೆದಿದೆ. ಹಾಗಾದರೆ ಆಸುಸ್ ಜೆನ್‌ಫೋನ್ 10 ಇತರೆ ಫೀಚರ್ಸ್‌ಗಳೆನು ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಆಸುಸ್ ಜೆನ್‌ಫೋನ್ 10 ಡಿಸ್‌ಪ್ಲೇ ರಚನೆ : ಆಸುಸ್ ಜೆನ್‌ಫೋನ್ 10 ಸ್ಮಾರ್ಟ್‌ಫೋನ್ 5.9 ಇಂಚಿನ AMOLED ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇಯು 1,080 x 2,400 ಪಿಕ್ಸಲ್ ರೆಸಲ್ಯೂಶನ್ ಹೊಂದಿದೆ. ಜೊತೆಗೆ 144Hz ರಿಫ್ರೆಶ್ ರೇಟ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಈ ಡಿಸ್‌ಪ್ಲೇಯು 20:9 ಅನುಪಾತವನ್ನು ಹೊಂದಿದೆ. ಇದರೊಂದಿಗೆ 1,100 nits ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಇದ್ದಯ, ಹೆಚ್‌ಆರ್‌ಡಿ ಬೆಂಬಲ ಸಹ ಇದೆ. ಹಾಗೆಯೇ ಗೊರಿಲ್ಲಾ ಗ್ಲಾಸ್ ರಕ್ಷಣೆ ಇದೆ.
ಆಸುಸ್ ಜೆನ್‌ಫೋನ್ 10 ಪ್ರೊಸೆಸರ್ ಪವರ್ : ಆಸುಸ್ ಜೆನ್‌ಫೋನ್ 10 ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಸಹ ಒಳಗೊಂಡಿದೆ. ಇದರೊಂದಿಗೆ 8GB/16GB RAM ಮತ್ತು 128GB/256GB/512GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಆಡ್ರಿನೊ 740 GPU ಸಹ ಇದೆ.
ಆಸುಸ್ ಜೆನ್‌ಫೋನ್ 10 ಕ್ಯಾಮೆರಾ ಸೆನ್ಸಾರ್ : ಆಸುಸ್ ಜೆನ್‌ಫೋನ್ 10 ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಇನ್ನೊಂದು ಕ್ಯಾಮೆರಾವು ಅಲ್ಟ್ರಾ-ವೈಡ್ 13 ಮೆಗಾ ಪಿಕ್ಸಾಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 12 ಮೆಗಾ ಪಿಕ್ಸಾಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನು ಸೆಲ್ಫಿ ಕ್ಯಾಮೆರಾವು ವಿಡಿಯೋ ಕರೆ ಹಾಗೂ ಫೋಟೋಗಳಿಗೆ ಪೂರಕ ಆಗಿದೆ.
ಆಸುಸ್ ಜೆನ್‌ಫೋನ್ 10 ಬ್ಯಾಟರಿ ಬಲ : ಆಸುಸ್ ಜೆನ್‌ಫೋನ್ 10 ಮೊಬೈಲ್ 4,300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಇದಕ್ಕೆ ಪೂರಕವಾಗಿ 30W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ. ಜೊತೆಗೆ ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್, 5G, ಡ್ಯುಯಲ್ 4G VoLTE, Wi-Fi 7.0, ಬ್ಲೂಟೂತ್, GPS, USB ಟೈಪ್-C ಪೋರ್ಟ್ ಮತ್ತು 3.5mm ಆಡಿಯೊ ಜ್ಯಾಕ್‌ನಂತಹ ಫೀಚರ್ಸ್‌ಗಳ ಆಯ್ಕೆ ಸಹ ಹೊಂದಿದೆ.


Click it and Unblock the Notifications








