Home
ಸುದ್ದಿಜಾಲ

ಭಾರತದಲ್ಲಿ ಲಾಂಚ್ ಆಗಲಿದೆ ಆಸೂಸ್ 'ಝೆನ್‌ಫೋನ್ 6'!..ಟು ಇನ್‌ ಒನ್‌ ಕ್ಯಾಮೆರಾ!

ಟೆಕ್‌ ವಲಯದಲ್ಲಿ ಭಾರೀ ಹೆಸರು ಮಾಡಿರುವ 'ಆಸೂಸ್' ಕಂಪನಿಯು ಇತ್ತೀಚಿಗೆ ವಿಶ್ವ ಮೊಬೈಲ್‌ ಮಾರುಕಟ್ಟೆಗೆ 'ಝೆನ್‌ಫೋನ್ 6' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿ ಸಖತ್ ಸುದ್ದಿ ಮಾಡಿತ್ತು. ವಿಶೇಷ ಫ್ಲಿಪ್‌ ಸೆಲ್ಫಿ ಕ್ಯಾಮೆರಾ ಫೀಚರ್‌ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಅನ್ನು ಕಂಪನಿಯು ಈಗ ಭಾರತೀಯ ಮಾರುಕಟ್ಟೆಗೂ ಬಿಡುಗಡೆ ಮಾಡಲು ಮುಂದಾಗಿದ್ದು, ಆದರೆ ದೇಶಿಯ ಮಾರುಕಟ್ಟೆಯಲ್ಲಿ ಅದರ ಹೆಸರು ಬದಲಾಗಲಿದೆ. ಅದಕ್ಕಾಗಿ ಬಿಡುಗಡೆಯ ದಿನಾಂಕವನ್ನು ಫಿಕ್ಸ್‌ ಮಾಡಿಕೊಂಡಿದೆ.

ಭಾರತದಲ್ಲಿ ಲಾಂಚ್ ಆಗಲಿದೆ ಆಸೂಸ್ 'ಝೆನ್‌ಫೋನ್ 6'!..ಟು ಇನ್‌ ಒನ್‌ ಕ್ಯಾಮೆರಾ!

ಹೌದು, ಆಸೂಸ್‌ ಕಂಪನಿಯು ತನ್ನ ಹೊಸ 'ಝೆನ್‌ಫೋನ್ 6' ಸ್ಮಾರ್ಟ್‌ಫೋನ್‌ ಅನ್ನು ಇದೇ ಜೂನ್ 11 ರಂದು ರಿಲೀಸ್‌ ಮಾಡಲು ಮೂಹೂರ್ತ್ ನಿಗದಿ ಮಾಡಿಕೊಂಡಿದ್ದು, ಆದರೆ ಕಂಪನಿಯು ಈ ಫೋನನ್ನು 'ಆಸೂಸ್‌ 6z' ಹೆಸರಿನಿಂದ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ. ಈ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಮೇನ್‌ ಅಟ್ರ್ಯಾಕ್ಷನ್‌ ಫ್ಲಿಪ್‌ ಕ್ಯಾಮೆರಾ ಆಗಿದ್ದು, ಇದರೊಂದಿಗೆ ಹೈ ಎಂಡ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಲಾಂಚ್ ಆಗಲಿದೆ ಆಸೂಸ್ 'ಝೆನ್‌ಫೋನ್ 6'!..ಟು ಇನ್‌ ಒನ್‌ ಕ್ಯಾಮೆರಾ!

ಆಸೂಸ್‌ 6z ಫ್ಲಿಪ್‌ ಕ್ಯಾಮೆರಾ ಸ್ಮಾರ್ಟ್‌ಫೋನ್ ಚೀನಾ ಮೂಲದ 'ಪಾಪ್‌ಅಪ್‌' ಸೆಲ್ಫಿ ಕ್ಯಾಮೆರಾ ಫೋನ್‌ಗಳಿಗೆ ಸೆಡ್ಡು ಹೊಡೆಯುವ ಮುನ್ಸೂಚನೆ ನೀಡಿದೆ. ವೇಗದ ಚಾರ್ಜಿಂಗ್ ತಂತ್ರಜ್ಞಾನ ಜೊತೆಗೆ 5000mAh ಸಾಮರ್ಥ್ಯದ ಶಕ್ತಿಯುತ ಬ್ಯಾಟರಿಯನ್ನು ಸಹ ಹೊಂದಿದೆ. ಹಾಗಾದರೇ ಆಸೂಸ್‌ ಝೆನ್‌ಫೋನ್ 6 (ಆಸೂಸ್‌ 6z) ಸ್ಮಾರ್ಟ್‌ಫೋನ್ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಹೆಚ್‌ಡಿ ಡಿಸ್‌ಪ್ಲೇ

ಹೆಚ್‌ಡಿ ಡಿಸ್‌ಪ್ಲೇ

ಆಸೂಸ್‌ ಝೆನ್‌ಫೋನ್ 6 ಸ್ಮಾರ್ಟ್‌ಫೋನಿನಲ್ಲಿ 6.4 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ಕ್ರೀನ್‌ LCD ಮಾದರಿಯಲ್ಲಿದೆ. ಡಿಸ್‌ಪ್ಲೇಯ ಸುತ್ತಲೂ ನಾಚ್‌ ಇಲ್ಲದ, ಅತೀ ಕಡಿಮೆ ಅಂಚಿನ ರಚನೆಯನ್ನು ಪಡೆದಿದೆ. ಹಾಗಾಯೇ ಡಿಸ್‌ಪ್ಲೇ ಸುತ್ತಲಿನ ನಾಲ್ಕು ಮೂಲೆಗಳು ಕರ್ವ್ ಮಾದರಿಯ ಆಕಾರದಲ್ಲಿದ್ದು, ಸ್ಮಾರ್ಟ್‌ಫೋನ್‌ ಅಂದವನ್ನು ಹೆಚ್ಚಿಸಿದೆ.

ಬಲವಾದ ಪ್ರೊಸೆಸರ್

ಬಲವಾದ ಪ್ರೊಸೆಸರ್

ಆಸೂಸ್‌ನ ಈ ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಅನ್ನು ಹೊಂದಿದ್ದು, ಈ ಫೋನ್ ಎರಡು RAM ಆಯ್ಕೆಗಳನ್ನು ಹೊಂದಿದೆ. ಅವು ಕ್ರಮವಾಗಿ 6GB RAM ಮತ್ತು 8GB RAM ಸಾಮರ್ಥ್ಯದಲ್ಲಿವೆ. ಹಾಗೆಯೇ ಆಂತರಿಕ ಸಂಗ್ರಹಕ್ಕಾಗಿ 64GB, 128GB ಮತ್ತು 256GB ಸ್ಥಳಾವಕಾಶದ ಮೂರು ಆಯ್ಕೆಗಳನ್ನು ಒದಗಿಸಲಾಗಿದೆ.

ಫ್ಲಿಪ್ ಕ್ಯಾಮೆರಾ (ಟು ಇನ್ ಒನ್)

ಫ್ಲಿಪ್ ಕ್ಯಾಮೆರಾ (ಟು ಇನ್ ಒನ್)

ಆಸೂಸ್ ಮೊದಲ ಬಾರಿಗೆ ಹೊಸದಾಗಿ ಫ್ಲಿಪ್ ಕ್ಯಾಮೆರಾವನ್ನು ಪರಿಚಯಿಸಿದ್ದು, ಈ ಕ್ಯಾಮೆರಾವು ಬಿಂಬದಿ ಮತ್ತು ಮುಂಬದಿಗೆ ತಿರುಗುವ ಮಾದರಿಯಲ್ಲಿದೆ. ಹೀಗಾಗಿ ಸೆಲ್ಫಿಗಾಗಿ ಪ್ರತ್ಯೇಕ ಕ್ಯಾಮೆರಾ ಒದಗಿಸಿಲ್ಲ. ಸ್ಮಾರ್ಟ್‌ಫೋನಿನ ಹಿಂಬದಿ ಇರುವ ಕ್ಯಾಮೆರಾ ಸೆಲ್ಫಿ ಸೆರೆಹಿಡಿಯುವಾಗ ಮುಂಬದಿಗೆ ತಿರುಗುತ್ತವ ಆಯ್ಕೆಯನ್ನು ಪಡೆದಿದೆ. ಎರಡು ಬದಿಗೂ ಈ ಒಂದೇ ಕ್ಯಾಮೆರಾ ಬಳಕೆಯಾಗಲಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಝೆನ್‌ಫೋನ್‌ 6 ಸ್ಮಾರ್ಟ್‌ಫೋನಿನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ನೀಡಲಾಗಿದ್ದು, ಕ್ಯಾಮೆರಾ ಆಯ್ಕೆಯು ಫ್ಲಿಪ್ ಮಾದರಿಯಲ್ಲಿದೆ. ಪ್ರಮುಖ ಕ್ಯಾಮೆರಾವು ಸೋನಿಯ IMX586 ಸೆನ್ಸಾರ್‌ನೊಂದಿಗೆ 48 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು ವೈಲ್ಡ್‌ ಆಂಗಲ್ ಲೆನ್ಸ್‌ನೊಂದಿಗೆ 13 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಸೆಲ್ಫಿಗೂ ಈ ಕ್ಯಾಮೆರಾವೇ ಬಳಕೆಯಾಗಲಿದೆ.

ಹೇವಿ ಬ್ಯಾಟರಿ ಲೈಫ್

ಹೇವಿ ಬ್ಯಾಟರಿ ಲೈಫ್

ಆಸೂಸ್‌ ಝೆನ್‌ಫೋನ್ 6 ಸ್ಮಾರ್ಟ್‌ಫೋನಿಗೆ 5000mAh ಸಾಮರ್ಥ್ಯದ ಪವರ್‌ಫುಲ್‌ ಬ್ಯಾಟರಿ ಶಕ್ತಿಯನ್ನು ನೀಡಲಾಗಿದೆ. ದೀರ್ಘಕಾಲದ ಬಾಳಿಕೆಗೆ ಬೆಂಬಲ ನೀಡಲಿದೆ. ಇದರೊಂದಿಗೆ 4.0. ವೇಗದ ಚಾರ್ಜಿಂಗ್ ತಂತ್ರಜ್ಞಾನ ಸೌಲಭ್ಯವನ್ನು ಸಹ ಒದಗಿಸಲಾಗಿದ್ದು, ಇದರ ನೆರವಿನಿಂದ ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜಿಂಗ್ ಪಡೆದುಕೊಳ್ಳಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಆಸೂಸ್‌ 'ಝೆನ್‌ಫೋನ್ 6' ಸ್ಮಾರ್ಟ್‌ಫೋನ್ ಇದೇ ಜೂನ್ 11ರಂದು ಭಾರತಕ್ಕೆ ಎಂಟ್ರಿ ಆಗಲಿದ್ದು, ಮೂರು ವೇರಿಯಂಟ್ ಮಾದರಿಗಳಲ್ಲಿ ಲಭ್ಯ ಇರಲಿದೆ. 6GB RAM ಮತ್ತು 64GB ವೇರಿಯಂಟ್ ಬೆಲೆಯು 39,000ರೂ.ಗಳ, 6GB RAM ಮತ್ತು 128GB ವೇರಿಯಂಟ್ ಬೆಲೆಯು 44,000ರೂ.ಗಳು ಮತ್ತು 8GB RAM ಮತ್ತು 256GB ವೇರಿಯಂಟ್ ಬೆಲೆಯು 47,000ರೂ.ಗಳು ಎಂದು ಊಹಿಸಲಾಗಿದೆ.

Best Mobiles in India

English summary
Taiwanese company and an updated microsite on Flipkart, the ZenFone 6 will be launched as the ‘Asus 6z' in India on June 19. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+