ಬಿಡುಗಡೆಗೆ ಸಿದ್ಧವಾಗಿದೆ ಆಸೂಸ್ ಝೆನ್‌ಫೋನ್ 7!..ಫೀಚರ್ಸ್ ಲೀಕ್!
ಲ್ಯಾಪ್‌ಟಾಪ್ ಸರಣಿ ಮೂಲಕ ಟೆಕ್ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಆಸೂಸ್ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಗಮನ ಸೆಳೆದಿವೆ. ಕಳೆದ ವರ್ಷ ಸಂಸ್ಥೆಯು ಬಿಡುಗಡೆ ಮಾಡಿದ್ದ ಫ್ಲಿಪ್ ಕ್ಯಾಮೆರಾ ವಿಶೇಷದ ಆಸೂಸ್ ಝೆನ್‌ಫೋನ್ 6 ಭಾರಿ ಕುತೂಹಲ ಮೂಡಿಸಿತ್ತು. ಇದೀಗ ಸಂಸ್ಥೆಯು ಹೊಸದಾಗಿ ಆಸೂಸ್ ಝೆನ್‌ಫೋನ್ 7 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಸೂಚನೆ ಹೊರಹಾಕಿದೆ.

ಹೌದು, ಆಸೂಸ್ ಕಂಪನಿಯು 'ಝೆನ್‌ಫೋನ್ 6' ನಂತರ ಅದೇ ಸರಣಿಯಲ್ಲಿ ಈಗ ಆಸೂಸ್ ಝೆನ್‌ಫೋನ್ 7 ಸ್ಮಾರ್ಟ್‌ಫೋನ್ ಲಾಂಚ್ ಮಾಡುವ ತಯಾರಿ ನಡೆಸಿದೆ. ಈ ಬಗ್ಗೆ ಜಪಾನಿನ ಟೆಕ್ ಬ್ಲಾಗ್‌ವೊಮದು ಮಾಹಿತಿ ತಿಳಿಸಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 865 SoC ಪ್ರೊಸೆಸರ್ ಹೊಂದಿರಲಿದೆ. ಮುಖ್ಯ ರಿಯರ್ ಕ್ಯಾಮೆರಾ 64ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿರಲಿದೆ ಎನ್ನಲಾಗುತ್ತಿದೆ. ಇದೇ ಆಗಸ್ಟ್ 26ರಂದು ತೈವಾನ್‌ನಲ್ಲಿ ಲಾಂಚ್ ಆಗುವ ಸಾಧ್ಯತೆಗಳಿವೆ. ಹಾಗಾದರೇ ಲೀಕ್ ಮಾಹಿತಿಯಂತೆ ಆಸೂಸ್ ಝೆನ್‌ಫೋನ್ 7 ಸ್ಮಾರ್ಟ್‌ಫೋನ್ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಹೆಚ್‌ಡಿ ಡಿಸ್‌ಪ್ಲೇ
ಆಸೂಸ್ ಝೆನ್‌ಫೋನ್ 7 ಸ್ಮಾರ್ಟ್‌ಫೋನಿನಲ್ಲಿ 6.4 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 1,080x2,340 ಪಿಕ್ಸಲ್ ರೆಸಲ್ಯೂಶನ್ ಹೊಂದಿರಲಿದೆ. ಹಾಗೆಯೇ 60Hz ಡಿಸ್‌ಪ್ಲೇ ರೀಫ್ರೇಶ್ದ ರೇಟ್ ಪಡೆದಿರಲಿದೆ. ಡಿಸ್‌ಪ್ಲೇ ನಲ್ಲಿಯೇ ಫಿಂಗರ್ ಸ್ಕ್ಯಾನರ್ ಆಯ್ಕೆ ನೀಡುವ ಸಾಧ್ಯತೆಗಳಿವೆ.

ಪ್ರೊಸೆಸರ್ ಯಾವುದು
ಆಸೂಸ್‌ನ ಈ ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 865 SoC ಪ್ರೊಸೆಸರ್ ನೀಡುವ ನಿರೀಖ್ಷೆಗಳಿವೆ. ಇದರೊಂದಿಗೆ ಆಂಡ್ರಾಯ್ಡ್ 10 ಓಎಸ್ ಇರಲಿದೆ. ಹಾಗೆಯೇ 8GB RAM ಸಾಮರ್ಥ್ಯದ ಜೊತೆಗೆ 128GB ಮತ್ತು 256GB ಸ್ಥಳಾವಕಾಶದ ಎರಡು ಆಯ್ಕೆಗಳನ್ನು ಒದಗಿಸಬಹುದು ಎನ್ನಲಾಗಿದೆ.

ಫ್ಲಿಪ್ ಕ್ಯಾಮೆರಾ
ಆಸೂಸ್ ಫ್ಲಿಪ್ ಕ್ಯಾಮೆರಾ ರಚನೆ ಈ ಫೋನಿನಲ್ಲಿ ಮುಂದುವರಿಸಬಹುದು. ಒಟ್ಟು ಮೂರು ರಿಯಲ್ ಕ್ಯಾಮೆರಾ ಇರಲಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಹೊಂದಿರಲಿದೆ. ಉಳಿದ ಕ್ಯಾಮೆರಾ ಸೆನ್ಸಾರ್ ಸಹ ಹೈ ರೆಸಲ್ಯೂಶನ್ ಆಯ್ಕೆ ಹೊಂದಿರಲಿದ್ದು, ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಸಹ ಇರಲಿದೆ ಎಂದು ಹೇಳಲಾಗ್ತಿದೆ.

ಬ್ಯಾಟರಿ ಲೈಫ್
ಆಸೂಸ್ ಝೆನ್‌ಫೋನ್ 7 ಸ್ಮಾರ್ಟ್‌ಫೋನಿಗೆ 5000mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿ ಶಕ್ತಿಯನ್ನು ಹೊಂದಿರಲಿದೆ. ಇದಕ್ಕೆ ಪೂರಕವಾಗಿ 30W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡುವ ಸಾಧ್ಯತೆಗಳಿವೆ.


Click it and Unblock the Notifications








