ಆಸೂಸ್‌ ಝೆನ್‌ಫೋನ್ 8 ಮತ್ತು ಝೆನ್‌ಫೋನ್ 8 ಫ್ಲಿಪ್ ಲಾಂಚ್!

|

ಆಸೂಸ್‌ ಮೊಬೈಲ್‌ ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನವನ್ನು ಹೊಂದಿದ್ದು, ಈಗಾಗಲೇ ಝೆನ್‌ಫೋನ್ ಸರಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರ ಮೆಚ್ಚುಗೆ ಗಳಿಸಿದೆ. ಇದೀಗ ಕಂಪನಿಯು ತನ್ನ ಬಹುನಿರೀಕ್ಷಿತ ಝೆನ್‌ಫೋನ್ 8 ಸ್ಮಾರ್ಟ್‌ಫೋನ್ ಸರಣಿಯನ್ನು ಇಂದು ಅನಾವರಣ ಮಾಡಿದೆ. ಈ ಸರಣಿಯು ಝೆನ್‌ಫೋನ್ 8 ಮತ್ತು ಝೆನ್‌ಫೋನ್ 8 ಫ್ಲಿಪ್ ಸ್ಮಾರ್ಟ್‌ಫೋನ್ ಮಾಡೆಲ್‌ಗಳನ್ನು ಒಳಗೊಂಡಿದೆ.

ಸ್ಮಾರ್ಟ್‌ಫೋನ್‌

ಹೌದು, ಆಸೂಸ್‌ ಕಂಪನಿಯು ತನ್ನ ಹೊಸ 'ಝೆನ್‌ಫೋನ್ 8' ಸ್ಮಾರ್ಟ್‌ಫೋನ್‌ ಅನ್ನು ಯುರೋಪ್‌ ನಲ್ಲಿ ರಿಲೀಸ್ ಮಾಡಿದೆ. ಈ ಸರಣಿಯಲ್ಲಿನ ಝೆನ್‌ಫೋನ್ 8 ಮತ್ತು ಝೆನ್‌ಫೋನ್ 8 ಫ್ಲಿಪ್ ಸ್ಮಾರ್ಟ್‌ಫೋನ್‌ಗಳು ಸ್ನ್ಯಾಪ್‌ಡ್ರಾಗನ್ 888 soc ಪ್ರೊಸೆಸರ್‌ ಅನ್ನು ಹೊಂದಿದ್ದು, ಜೊತೆಗೆ ಇತರೆ ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿವೆ. ಹಾಗಾದರೇ ಆಸುಸ್ ಸಂಸ್ಥೆಯ ಝೆನ್‌ಫೋನ್ 8 ಮತ್ತು ಝೆನ್‌ಫೋನ್ 8 ಫ್ಲಿಪ್ ಫೋನ್‌ಗಳ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಆಸೂಸ್‌ ಝೆನ್‌ಫೋನ್ 8 ಸ್ಮಾರ್ಟ್‌ಫೋನ್ 1,080x2,400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.9 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು 20:9 ಅನುಪಾತವನ್ನು ಹೊಂದಿದ್ದು, 120Hz ರೀಫ್ರೇಶ್ ರೇಟ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ 1,100 nits ಬ್ರೈಟ್ನೆಸ್‌ ಅನ್ನು ಒಳಗೊಂಡಿದೆ. ಸ್ಕ್ರೀನ್‌ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ ರಚನೆಯನ್ನು ಪಡೆದಿದೆ.

ಪ್ರೊಸೆಸರ್ ಯಾವುದು

ಪ್ರೊಸೆಸರ್ ಯಾವುದು

ಆಸೂಸ್‌ ಝೆನ್‌ಫೋನ್ 8 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್‌ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಇದೆ. ಈ ಫೋನ್ 6GB + 128GB, 8GB + 128GB ಮತ್ತು 16GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ.

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

ಆಸೂಸ್‌ ಝೆನ್‌ಫೋನ್ 8 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸಾಮರ್ಥ್ಯ ಪಡೆದಿದೆ. ಇನ್ನು ಸೆಲ್ಫಿ ಕ್ಯಾಮೆರಾವು ಸಹ 12 ಮೆಗಾ ಪಿಕ್ಸಲ್ ಸೆನ್ಸಾರ್‌ ನಲ್ಲಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಆಸೂಸ್‌ ಝೆನ್‌ಫೋನ್ 8 ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದೆ. ಇದರೊಂದಿಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5 ಜಿ, 4 ಜಿ ಎಲ್ ಟಿಇ, ವೈ-ಫೈ 6/6 ಇ, ಬ್ಲೂಟೂತ್ ವಿ 5.2, ಜಿಪಿಎಸ್ / ಎ-ಜಿಪಿಎಸ್ / ನ್ಯಾವಿಕ್, ಎನ್‌ಎಫ್‌ಸಿ, ಎಫ್‌ಎಂ ರೇಡಿಯೋ, ಯುಎಸ್‌ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ.

ಆಸುಸ್ ಝೆನ್‌ಫೋನ್ 8 ಫ್ಲಿಪ್ - ಫೀಚರ್ಸ್‌

ಆಸುಸ್ ಝೆನ್‌ಫೋನ್ 8 ಫ್ಲಿಪ್ - ಫೀಚರ್ಸ್‌

ಆಸುಸ್ ಝೆನ್‌ಫೋನ್ 8 ಫ್ಲಿಪ್ ಫೋನ್ 1,080x2,400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು 20:9 ಅನುಪಾತವನ್ನು ಹೊಂದಿದ್ದು, 90Hz ರೀಫ್ರೇಶ್ ರೇಟ್ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ಓಎಸ್‌ ಬೆಂಬಲ ಪಡೆದಿದೆ. ಜೊತೆಗೆ 8GB + 256GB ಸ್ಟೋರೇಜ್‌ನ ಸಿಂಗಲ್ ವೇರಿಯಂಟ್ ಆಯ್ಕೆ ಪಡೆದಿದೆ. ಈ ಫೋನ್ ತ್ರಿವಳಿ ಕ್ಯಾಮೆರಾ ರಚನೆ ಹೊಂದಿದ್ದು, ಅದು ಫ್ಲಿಪ್ ಮಾದರಿಯಲ್ಲಿದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಆಸುಸ್ ಝೆನ್‌ಫೋನ್ 8 ಫೋನ್ ಬೆಲೆಯು ಯುರೋಪ್‌ನಲ್ಲಿ EUR 599 ಆಗಿದೆ. (ಭಾರತದಲ್ಲಿ ಅಂದಾಜು 53,200ರೂ.) ಹಾಗೆಯೇ 8GB + 128GB ಸ್ಟೋರೇಜ್ ವೇರಿಯಂಟ್ ದರದವು EUR 669 (ಭಾರತದಲ್ಲಿ 59,400ರೂ.) ಆಗಿದೆ. ಇನ್ನು ಆಸುಸ್ ಝೆನ್‌ಫೋನ್ 8 ಫ್ಲಿಪ್ ಫೋನಿನ 8GB + 256GB ಸ್ಟೋರೇಜ್‌ ವೇರಿಯಂಟ್ ದರವು EUR 799 (ಭಾರತದಲ್ಲಿ ಅಂದಾಜು 71,000ರೂ. ಎಂದು ಊಹಿಸಲಾಗಿದೆ.)

Best Mobiles in India

English summary
Asus ZenFone 8 price starts at EUR 599 (roughly Rs. 53,200), while Asus ZenFone 8 Flip carries a price tag of EUR 799 (roughly Rs. 71,000).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X