Home
ಸುದ್ದಿಜಾಲ

ಡಿಸ್ಕೌಂಟ್‌ನಲ್ಲಿ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೊನ್‌ ಖರೀದಿಸಲು ಇದು ಸಕಾಲ!

ಗೂಗಲ್‌ ಸಂಸ್ಥೆಯ ಪಿಕ್ಸಲ್‌ ಸ್ಮಾರ್ಟ್‌ಫೊನ್‌ಗಳು ಕ್ಯಾಮೆರಾ ಹಾಗೂ ಇತರೆ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ಇದೀಗ ಇ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ನ 'ಮೊಬೈಲ್ ಬೊನಾಂಜಾ ಸೇಲ್‌' ನಲ್ಲಿ ಗೂಗಲ್‌ ಪಿಕ್ಸೆಲ್‌ 7 ಸ್ಮಾರ್ಟ್‌ಫೋನ್‌ ಸಖತ್ ರಿಯಾಯಿತಿ ಪಡೆದಿದ್ದು, ಮೊಬೈಲ್‌ ಪ್ರಿಯರಿಗೆ ಖುಷಿ ನೀಡಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್ ತಾಣವು ಇದೀಗ ಮೊಬೈಲ್ಸ್ ಬೊನಾಂಜಾ ಸೇಲ್‌ ಆಯೋಜಿಸದ್ದು, ಈ ಮಾರಾಟ ಮೇಳವು ಇದೇ ಡಿಸೆಂಬರ್ 6 ರ ವರೆಗೂ ಇರಲಿದೆ. ಪ್ರಸ್ತತ ಈ ಸೇಲ್‌ ನಲ್ಲಿ ಗೂಗಲ್‌ ಪಿಕ್ಸೆಲ್‌ 7 (8 GB RAM + 128 GB) ಫೋನ್‌ ಮೇಲೆ ಶೇ. 26% ರಷ್ಟು ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಖರೀದಿದಾರರು ಇದನ್ನು 43,999ರೂ. ಗಳಿಗೆ ಖರೀದಿಸಬಹುದಾಗಿದೆ. ಹಾಗೆಯೇ ಬ್ಯಾಂಕ್‌ ಕೊಡುಗೆ ಹಾಗೂ ಇತರೆ ಕೊಡುಗೆ ಪಡೆದರೇ ಇನ್ನಷ್ಟು ರಿಯಾಯಿತಿ ಲಭ್ಯ.

ಡಿಸ್ಕೌಂಟ್‌ನಲ್ಲಿ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೊನ್‌ ಖರೀದಿಸಲು ಇದು ಸಕಾಲ!

ಅಂದಹಾಗೆ ಗೂಗಲ್‌ ಪಿಕ್ಸೆಲ್‌ 7 ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇದರ ಜೊತೆಗೆ 4,335mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಈ ಫೋನ್‌ ಪಡೆದುಕೊಂಡಿದೆ. ಹಾಗಾದರೇ ಗೂಗಲ್‌ ಪಿಕ್ಸೆಲ್‌ 7 ಹಾಗೂ ಗೂಗಲ್‌ ಪಿಕ್ಸೆಲ್‌ 7 ಪ್ರೊ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್‌ ಪಿಕ್ಸೆಲ್‌ 7 ಫೋನ್‌ ಫೀಚರ್ಸ್‌ ಹೀಗಿವೆ

ಗೂಗಲ್‌ ಸಂಸ್ಥೆಯ ಈ ಫೋನ್ 6.32 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್ ಟೆನ್ಸರ್ G2 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 13 ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 8 GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಈ ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದೆ.

ಡಿಸ್ಕೌಂಟ್‌ನಲ್ಲಿ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೊನ್‌ ಖರೀದಿಸಲು ಇದು ಸಕಾಲ!

ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ಇದಲ್ಲದೆ 10.8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಜೊತೆಗೆ ಕ್ಯಾಮೆರಾ ಮೂಲಕ ವೀಡಿಯೊ ರೆಕಾರ್ಡ್‌ ಮಾಡುವಾಗ ಬ್ಲರ್‌ ಎಫೆಕ್ಟ್‌ ನೀಡುವ 'ಸಿನಿಮ್ಯಾಟಿಕ್ ಬ್ಲರ್' ಫೀಚರ್ಸ್‌ ಅನ್ನು ಕೂಡ ಸಪೋರ್ಟ ಮಾಡುತ್ತದೆ.

ಗೂಗಲ್‌ ಪಿಕ್ಸೆಲ್‌ 7 ಮೊಬೈಲ್ 4,335 mAh ಸಾಮರ್ಥ್ಯದ ಬ್ಯಾಟರಿ ಅನ್ನು ಪಡೆದಿದ್ದು, ಇದು 30W ಫಾಸ್ಟ್‌ ಚಾರ್ಜಿಂಗ್ ಮತ್ತು ವಾರ್‌ಲೆಸ್ ಚಾರ್ಜಿಂಗ್‌ ಸಪೋರ್ಟ್‌ ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಟ್ರೀಮ್ ಬ್ಯಾಟರಿ ಸೇವರ್ ಮೋಡ್ ಅನ್ನು ಆಕ್ಟಿವ್‌ ಮಾಡುವ ಮೂಲಕ 72 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸಬಲ್ಲದು.

ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.2, GPS, NFC, ಮತ್ತು USB ಟೈಪ್-C ಪೋರ್ಟ್ ಪಡೆದಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್, ಬಾರೋಮೀಟರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿದೆ.

ಡಿಸ್ಕೌಂಟ್‌ನಲ್ಲಿ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೊನ್‌ ಖರೀದಿಸಲು ಇದು ಸಕಾಲ!

ಗೂಗಲ್ ಪಿಕ್ಸೆಲ್ 7 ಪ್ರೊ ಫೋನಿನ ಫೀಚರ್ಸ್‌ ಹೀಗಿವೆ

ಈ ಫೋನ್‌ 6.7 ಇಂಚಿನ ಕ್ವಾಡ್ ಎಚ್‌ಡಿ ಡಿಸ್‌ಪ್ಲೇ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್ ಟೆನ್ಸರ್ G2 SoC ಪ್ರೊಸೆಸರ್‌ ನಲ್ಲಿ ಕೆಲಸ ಮಾಡಲಿದ್ದು, ಆಂಡ್ರಾಯ್ಡ್ 13 ಓಎಸ್‌ ಸಪೋರ್ಟ್‌ ಕೂಡಾ ಪಡೆದಿದೆ. ಇನ್ನು ಪಿಕ್ಸೆಲ್ 7 ಪ್ರೊ ಮೊಬೈಲ್‌ ಹಿಂಬದಿಯಲ್ಲಿ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರಲ್ಲಿ ಮೊದಲ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದಿದೆ.

Best Mobiles in India

English summary
Attractive Price drop on Google Pixel 7 on flipkart in india. all details check here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+