ಭಾರೀ ಡಿಸ್ಕೌಂಟ್ ಬೆಲೆಯಲ್ಲಿ 5000mAh ಬ್ಯಾಟರಿ ಫೋನ್ ಬೇಕಿದ್ರೆ, ಈ ಆಫರ್ ಬೆಸ್ಟ್!
ಇ ಕಾಮರ್ಸ್ ದೊಡ್ಡಣ್ಣ ಫ್ಲಿಪ್‌ಕಾರ್ಟ್ ತಾಣವು ಆಫರ್‌ಗಳ ಹಾಗೂ ಸೇಲ್ ಮೇಳಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತದೆ. ಮುಖ್ಯವಾಗಿ ಮೊಬೈಲ್‌ಗಳಿಗೆ ವಿಶೇಷ ಡಿಸ್ಕೌಂಟ್ ಲಭ್ಯ ಮಾಡುತ್ತದೆ. ಸದ್ಯ ಪೊಕೊ ಸಂಸ್ಥೆಯು ಪೊಕೊ M6 ಪ್ರೊ 5G ಫೋನ್ ಸಹ ಸಕತ್ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದ್ದು, ಖರೀದಿದಾರರ ಗಮನ ಸೆಳೆದಿದೆ. ಈ ಫೋನ್ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಕೂಡಾ ಪಡೆದಿದೆ.
ಹೌದು, ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ನಲ್ಲಿ ಪೊಕೊ M6 ಪ್ರೊ 5G ಫೋನ್ ಶೇ. 41% ರಷ್ಟು ನೇರ ಡಿಸ್ಕೌಂಟ್ ಪಡೆದಿದೆ. ಈ ಮೊಬೈಲ್‌ನ 6 GB + 128GB ಸ್ಟೋರೇಜ್ ವೇರಿಯಂಟ್ ಆಫರ್ ಬೆಲೆಯು 9,999ರೂ. ಗಳು ಆಗಿದೆ. ಇದರ ಜೊತೆಗೆ ಇತರೆ ಆಯ್ದ ಬ್ಯಾಂಕ್ ಕೊಡುಗೆಗಳು ಕೂಡಾ ಗ್ರಾಹಕರಿಗೆ ದೊರೆಯುತ್ತವೆ.

ಅಂದಹಾಗೆ ಪೊಕೊದ ಈ ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್ ಸೌಲಭ್ಯ ಪಡೆದಿದ್ದು, ಅಲ್ಲದೇ 50 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಪಡೆದಿದೆ. ಹಾಗೆಯೇ 5000mAh ಸಾಮರ್ಥ್ಯದ ಬ್ಯಾಟರಿ ಪಡೆದಿದೆ. ಅಲ್ಲದೇ ಪವರ್ ಬ್ಲ್ಯಾಕ್ ಹಾಗೂ ಫಾರೆಸ್ಟ್ ಗ್ರೀನ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಹಾಗಾದರೇ ಪೊಕೊ M6 ಪ್ರೊ 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಪೊಕೊ M6 ಪ್ರೊ 5G ಫೀಚರ್ಸ್
ಪೊಕೊ M6 ಪ್ರೊ 5G ಫೋನ್ 6.79 ಇಂಚಿನ ಫುಲ್ ಹೆಚ್‌ಡಿ + ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದು 2460 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಹಾಗೆಯೇ ಇದರೊಂದಿಗೆ 90Hz ಅಡಾಪ್ಟಿವ್ ರಿಫ್ರೆಶ್ ರೇಟ್ ಪಡೆದಿದ್ದು, 91% ಸ್ಕ್ರೀನ್ ಟು ಬಾಡಿ ಅನುಪಾತ ಹಾಗೂ 550 nits ಬ್ರೈಟ್‌ನೆಸ್ ಸೌಲಭ್ಯ ಹೊಂದಿದೆ. ಹಾಗೆಯೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಸಹ ಇದೆ.
ಪೊಕೊ M6 ಪ್ರೊ 5G ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್ ಸೌಲಭ್ಯದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಸಹ ಒಳಗೊಂಡಿದೆ. ಹಾಗೆಯೇ ಇದು 6GB + 64GB ಮತ್ತು 6GB + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದೆ. ಇದರ ಜೊತೆಗೆ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸುವ ಆಯ್ಕೆ ಇದೆ.
ಪೊಕೊ M6 ಪ್ರೊ 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದಿರುವ ಜೊತೆಗೆ ಎಲ್‌ಇಡಿ ಫ್ಲಾಶ್ ಲೈಟ್ ಆಯ್ಕೆ ಕೂಡಾ ಒಳಗೊಂಡಿದೆ. ಇನ್ನು ದ್ವಿತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸರ್ ಆಯ್ಕೆ ಪಡೆದಿದೆ.
ಹಾಗೆಯೇ ಇದರ ಸೆಲ್ಫಿ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಸಾಮರ್ಥ್ಯದಲ್ಲಿ ಇದೆ. ಪೊಕೊ M6 ಪ್ರೊ 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದ್ದು, 18W ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಕಾಣಬಹುದಾಗಿದೆ.


Click it and Unblock the Notifications