Home
ಸುದ್ದಿಜಾಲ

ಆಟೋ ಚಾಲಕನ ಈ ಟೆಕ್ನಾಲಜಿಗೆ ಪ್ರಯಾಣಿಕ ಸೇರಿದಂತೆ ನೆಟ್ಟಿಗರು ಫಿದಾ... ಪೀಕ್ ಬೆಂಗಳೂರು!

ಸ್ಮಾರ್ಟ್‌ ಜಗತ್ತಿನಲ್ಲಿ ಇಂದು ನಾವು ನೀವೆಲ್ಲಾ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ವಾಚ್‌ ಹಾಗೂ ಸ್ಮಾರ್ಟ್‌ಟಿವಿ (Smartphone, Smartwatch, SmartTV) ಸೇರಿದಂತೆ ಅನೇಕ ಸ್ಮಾರ್ಟ್‌ಗ್ಯಾಜೆಟ್‌ ಬಳಕೆ ಮಾಡುತ್ತೇವೆ. ಅದರಲ್ಲೂ ಇವುಗಳನ್ನು ಬೆಂಗಳೂರಿನ ಜನ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಈ ನಡುವೆ ಆಟೋ ಚಾಲಕರೋರ್ವರ ಸ್ಮಾರ್ಟ್‌ ಕಾರ್ಯಕ್ಕೆ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

ಹೌದು, ಬೆಂಗಳೂರಿನ ಆಟೋ ಚಾಲಕರು (Bangalore Auto driver) ಹಣ ಪಾವತಿಗಾಗಿ ಕ್ಯೂಆರ್ ಕೋಡ್ ಇರುವ ಸ್ಮಾರ್ಟ್ ವಾಚ್ ತೋರಿಸಿದ್ದು, ಈ ಬಗ್ಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಬೆಂಗಳೂರಿನ ಗದ್ದಲದ ಬೀದಿಗಳಲ್ಲಿ ಹೊಸ ಟೆಕ್ನಾಲಜಿ ಬಳಕೆ ಹೊಸತನಕ್ಕೆ ಹೊಸದೇನಲ್ಲ.ಆದರೆ, ಸ್ಮಾರ್ಟ್‌ವಾಚ್‌ನಲ್ಲಿ ಸ್ಕ್ರೀನ್‌ಸೇವರ್‌ನಂತೆ ಕ್ಯೂಆರ್ ಕೋಡ್ ಬಳಕೆ ಮಾಡಿದ ಆಟೋ ಡ್ರೈವರ್‌ದು ಮಾತ್ರ ವಿಶೇಷ ಕೆಲಸವಾಗಿದೆ. ಹಾಗಿದ್ರೆ, ಏನಿದು ಘಟನೆ, ವಾಚ್‌ನಲ್ಲಿ ಈ ಕ್ಯೂಆರ್‌ ಕೋಡ್‌ ಬಳಕೆ ಮಾಡುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಆಟೋ ಚಾಲಕನ ಈ ಟೆಕ್ನಾಲಜಿಗೆ ಪ್ರಯಾಣಿಕ ಸೇರಿದಂತೆ ನೆಟ್ಟಿಗರು ಫಿದಾ,ಪೀಕ್ ಬೆಂಗಳೂರು

'ಪೀಕ್ ಬೆಂಗಳೂರು' ಎಂದು ಜನಪ್ರಿಯವಾಗುತ್ತಿರುವ ಟೆಕ್ ಸಿಟಿ ಬೆಂಗಳೂರಿನಲ್ಲಿ ಈ ಪ್ರತಿಕ್ಷಣವೂ ಸ್ಟಾರ್ಟ್‌ಅಪ್‌ ಸಂಸ್ಕೃತಿ, ಐಟಿ ಉದ್ಯಮ, ಟ್ರಾಫಿಕ್, ಗಗನಕ್ಕೇರುತ್ತಿರುವ ಬಾಡಿಗೆಗಳು ಮತ್ತು ನಾವೀನ್ಯತೆ ಮತ್ತು ಸೃಜನಶೀಲತೆ ಮೂಲಕ ಭಾರೀ ಸದ್ದು ಮಾಡುತ್ತಿರುತ್ತದೆ. ಅಷ್ಟು ಮಾತ್ರವಲ್ಲದೆ ಸಂಚಾರದಟ್ಟಣೆಯಿಂದಲೂ ಹೆಸರುವಾಸಿ. ಈ ನಡುವೆ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದ್ದು, ಆಟೋ ಪ್ರಯಾಣಿಕನೊಬ್ಬ ತನ್ನ ಸ್ಮಾರ್ಟ್‌ವಾಚ್‌ ಅನ್ನು ಸೃಜನಶೀಲತೆಯಿಂದ ಬಳಕೆ ಮಾಡಿದ್ದಾನೆ.

ಏನಿದು ಘಟನೆ? : ಪ್ರಯಾಣಿಕನೊಬ್ಬ ಆಟೋದಲ್ಲಿ ಸಂಚಾರ ಮಾಡಿದ ಬಳಿಕ ಹಣ ಪಾವತಿ ಮಾಡಲು ಕ್ಯೂಆರ್‌ಕೋಡ್ (QRcode) ಕೇಳಿದ್ದಾರೆ. ಆದರೆ, ಆಟೋ ಚಾಲಕ (Auto driver) ಮಾತ್ರ ಕ್ಯೂಆರ್‌ ಕೋಡ್‌ ಕಾಗದ ತೋರಿಸುವುದರ ಬದಲಿಗೆ ಅವರ ಸ್ಮಾರ್ಟ್‌ವಾಚ್‌ ಅನ್ನು ತೋರಿಸಿದ್ದಾರೆ. ಈ ವೇಳೆ ದಂಗಾದ ಪ್ರಯಣಿಕ ಸ್ಮಾರ್ಟ್‌ವಾಚ್‌ನಲ್ಲಿ ಕಾಣಿಸಿಕೊಂಡ ಕ್ಯೂಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡುವ ಮೂಲಕ ಹಣ ಪಾವತಿ ಮಾಡಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ತನ್ನ ವಿಶೇಷ ಅನುಭವವನ್ನು ಶೇರ್‌ ಮಾಡಿಕೊಂಡಿರುವ ಪ್ರಯಾಣಿಕ, ಇಂದು ನಾನು @nammayatri ನಲ್ಲಿ ನಮ್ಮ ಟೋನಿ ಸ್ಟಾರ್ಕ್ ಅವರನ್ನು ಭೇಟಿ ಮಾಡಿದ್ದೇನೆ. ನಾನು ಆಟೋ ಡ್ರೈವರ್‌ಗೆ ಕ್ಯೂಆರ್ ಕೋಡ್ ಕೇಳಿದೆ. ಆತ ತನ್ನ ಕೈಯನ್ನು ತಿರುಗಿಸಿ ತನ್ನ ಸ್ಮಾರ್ಟ್ ವಾಚ್ ಅನ್ನು ನನಗೆ ತೋರಿಸಿದನು. ಅವನು ಕ್ಯೂಆರ್‌ ಕೋಡ್ ಅನ್ನು ತನ್ನ ಸ್ಮಾರ್ಟ್ ವಾಚ್ ಸ್ಕ್ರೀನ್‌ಸೇವರ್ ಆಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಈ ಪೋಸ್ಟ್‌ ವೈರಲ್ ಆದ ನಂತರ 105K ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿರುವ ಈ ಫೋಟೋಗೆ ಜನರು ಮೆಚ್ಚುಗೆ ಜೊತೆಗೆ ಅಚ್ಚರಿ ಕೂಡ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಎಕ್ಸ್‌ ನ ಬಳಕೆದಾರರೊಬ್ಬರು, ಬೆಂಗಳೂರಲ್ಲಿ ಮಾತ್ರ ಇದನ್ನು ನೋಡಲು ಸಾಧ್ಯ ಎಂದು ಬರೆದಿದ್ದರೆ, ಮತ್ತೊಬ್ಬರು ಆ ಚಾಲಕ ಇನ್ಮುಂದೆ ಆಟೋ ರಾಜನಲ್ಲ ಬದಲಾಗಿ ಆತ ಸ್ವಾಗ್‌ ರಾಜ ಎಂದಿದ್ದಾರೆ.

ಆಟೋ ಚಾಲಕನ ಈ ಟೆಕ್ನಾಲಜಿಗೆ ಪ್ರಯಾಣಿಕ ಸೇರಿದಂತೆ ನೆಟ್ಟಿಗರು ಫಿದಾ,ಪೀಕ್ ಬೆಂಗಳೂರು

ವಾಚ್‌ನಲ್ಲಿ ಕ್ಯೂಆರ್‌ ಕೋಡ್‌ ಬಳಕೆ ಹೇಗೆ?
ಹಂತ 1 : ನೀವು ಆಟೋ ಚಾಲಕರಾಗಿದ್ದು, ನಿಮ್ಮ ಬಳಿ ಸ್ಮಾರ್ಟ್‌ವಾಚ್‌ (Smartwatch) ಇದ್ದರೆ ನೀವು ಸಹ ಈ ಮೂಲಕ ನಿಮ್ಮ ಪ್ರಯಾಣಿಕರಿಗೆ ವಿಶೇಷವಾದ ಅನುಭವ ನೀಡಬಹುದು. ಇದಕ್ಕಾಗಿ ನೀವು ಮೊದಲು ಮಾನ್ಯವಾದ QR ಕೋಡ್‌ನ ಚಿತ್ರವನ್ನು ಸೆರೆಹಿಡಿದುಕೊಳ್ಳಿ. ನಂತರ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಚ್‌ಗೆ ಸಂಬಂಧಿಸಿದ ಆಪ್‌ ಅನ್ನು ಓಪನ್‌ ಮಾಡಿ.

ಹಂತ 2: ನಿಮ್ಮ ಫೋನ್‌ನಲ್ಲಿ ಯಾವುದೇ ಆಪ್‌ ಇಲ್ಲ ಎಂದಾದರೂ ಚಿಂತೆ ಬೇಡ, ಸ್ಮಾರ್ಟ್‌ವಾಚ್‌ನಲ್ಲಿಯೇ ಸ್ಟಾರ್ಟ್ ಅಪ್ಲಿಕೇಶನ್ ಅನ್ನು ಬಳಕೆ ಮಾಡಿವ ಮೂಲಕ ಈ ಕೆಲಸ ಮಾಡಬಹುದು. ಇನ್ನು ಆಪ್‌ ವಿಭಾಗದಲ್ಲಿ ಸೆಂಡ್‌ ಫೋಟೋ ಟು ಸ್ಮಾರ್ಟ್‌ವಾಚ್‌ ಎಂದು ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಸ್ಮಾರ್ಟ್‌ವಾಚ್‌ ವಾಲ್‌ಪೇಪರ್‌ ಬದಲಾಗುತ್ತದೆ.

Best Mobiles in India

English summary
Bangalore auto driver showed smartwatch with QR code for payment and many people appreciate it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+