ಈ ರೀತಿಯಲ್ಲೂ ಆನ್‌ಲೈನ್‌ನಲ್ಲಿ ಮೋಸ ಮಾಡ್ತಾರೆ ಹುಷಾರ್... ಬಲೆಗೆ ಬಿದ್ರೆ ಪಂಗನಾಮ!
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಆನ್‌ಲೈನ್ ವಂಚನೆ ಸಂಬಂಧ ಜನರು ಎಚ್ಚೆತ್ತುಕೊಳ್ಳುವ ಮುನ್ನವೇ ಅವರ ಬ್ಯಾಂಕ್ ನಲ್ಲಿ ಹಣ ಕಾಲಿಯಾಗಿಬಿಟ್ಟಿರುತ್ತದೆ. ಅಷ್ಟರ ಮಟ್ಟಿಗೆ ಸ್ಕ್ಯಾಮರ್‌ಗಳು ಹೊಸ ಹೊಸ ರೀತಿಯಲ್ಲಿ ನಿಮ್ಮನ್ನು ಮೋಸ ಮಾಡಲು ಸಿದ್ಧರಾಗಿರುತ್ತಾರೆ.
ಹೌದು, ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಆಗಾಗ್ಗೆ ವಿಶೇಷ ಮಾರಾಟಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಲೇ ಇರುತ್ತದೆ. ಅದರಂತೆ ಈಗ ಅಮೆಜಾನ್ ಪ್ರೈಮ್ ಡೇ ಸೇಲ್‌ಗೆ ಎಲ್ಲಾ ಸಿದ್ಧತೆ ನಡೆಸಿದ್ದು, ಇದನ್ನೇ ಆಧಾರವಾಗಿರಿಸಿಕೊಂಡಿರುವ ಸ್ಕ್ಯಾಮರ್‌ಗಳು ಹೊಸ ಮಾರ್ಗದ ಮೂಲಕ ಜನರನ್ನು ಮೋಸದ ಬಲೆಯಲ್ಲಿ ಬೀಳುವಂತೆ ಮಾಡುತ್ತಿದ್ದಾರೆ. ಹಾಗಿದ್ರೆ, ಇದರಿಂದ ಎಚ್ಚರಿಕೆ ವಹಿಸುವುದು ಹೇಗೆ?, ಏನಿದು ಮತ್ತೊಂದು ಸ್ಕ್ಯಾಮ್? ಎಂಬ ಮಾಹಿತಿ ಇಲ್ಲಿದೆ ನೋಡಿ.

ಅಮೆಜಾನ್‌ಪ್ರೈಮ್ ಡೇ ಸೇಲ್: ಅಮೆಜಾನ್‌ನ ಅಮೆಜಾನ್‌ಪ್ರೈಮ್ ಡೇ ಸೇಲ್ ಜುಲೈ 15 ರಂದು ಆರಂಭ ಆಗಲಿದ್ದು, ಇದಕ್ಕಾಗಿ ಬಹುಪಾಲು ಗ್ರಾಹಕರು ಕಾದು ಕುಳಿತಿದ್ದಾರೆ. ಕಾರಣ ಏನೆಂದರೆ ಈ ಸೇಲ್‌ನಲ್ಲಿ ಈವರೆಗೂ ನೀಡಿರದ ದೊಡ್ಡ ಡಿಸ್ಕೌಂಟ್ ಸಿಗಲಿದೆ. ಜೊತೆಗೆ ಹೊಸ ಸ್ಮಾರ್ಟ್ ಡಿವೈಸ್‌ಗಳು ಲಾಂಚ್ ಆಗಲಿದ್ದು, ಇದರಿಂದ ಗ್ರಾಹಕರಲ್ಲಿ ಹೆಚ್ಚಿನ ಕುತೂಹಲ ಉಂಟಾಗಿದೆ.
ಈ ನಡುವೆ ಖರೀದಿದಾರರು ತಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ವಿವಿಧ ರೀತಿಯಲ್ಲಿ ಜಾಗರೂಕರಾಗಬೇಕಿದೆ. ಈ ಮಾರಾಟದ ಸಮಯದಲ್ಲಿ ಬಹಳಷ್ಟು ಸೈಬರ್ ಅಪರಾಧಿಗಳು ಉತ್ಪನ್ನವನ್ನು ಖರೀದಿಸಲು ಪ್ರಯತ್ನಿಸುತ್ತಿರುವ ಖರೀದಿದಾರರಿಂದ ಲಾಭ ಪಡೆಯಲು ಮುಂದಾಗಿದ್ದಾರೆ. ಮತ್ಯಾಕೆ ತಡ ಬನ್ನಿ ಈ ವಿಶೇಷ ಸೇಲ್‌ನಲ್ಲಿ ನಡೆಯುವ ಮೂರು ಸಾಮಾನ್ಯ ವಂಚನೆಗಳ ಬಗ್ಗೆ ಸೈಬರ್ ಸೆಕ್ಯುರಿಟಿ ಸಂಸ್ಥೆ, ಚೆಕ್ ಪಾಯಿಂಟ್ ಬಳಕೆದಾರರಿಗೆ ಏನು ಹೇಳಿದೆ ಎನ್ನುವುದನ್ನು ತಿಳಿಯೋಣ.
ಫಿಶಿಂಗ್ ಇಮೇಲ್: ಸ್ಕ್ಯಾಮರ್‌ಗಳು ಸಾಮಾನ್ಯವಾಗಿ ಅಮೆಜಾನ್ ಕಡೆಯವರಂತೆ ಕಾಣಿಸಿಕೊಳ್ಳುತ್ತಿದ್ದು, ಫಿಶಿಂಗ್ ಇಮೇಲ್‌ಗಳನ್ನು ಕಳುಹಿಸುತ್ತಿದ್ದಾರೆ. ಜೊತೆಗೆ ಈ ಮೇಲ್‌ನಲ್ಲಿ ಬಿಲ್ಲಿಂಗ್ ಸಮಸ್ಯೆ ಅಥವಾ ಅವರ ಪ್ರೊಫೈಲ್ ಅನ್ನು ನವೀಕರಿಸುವ ಅಗತ್ಯತೆಯಂತಹ ಸಮಸ್ಯೆ ಇದೆ ಎಂದು ಅವರು ಉಲ್ಲೇಖ ಮಾಡಿರುತ್ತಾರೆ. ಈ ಮೂಲಕ ತಮ್ಮ ಕ್ರೆಡಿಟ್ ಕಾರ್ಡ್ ಸಂಖ್ಯೆಗಳು, ಅಮೆಜಾನ್ ಖಾತೆಯ ರುಜುವಾತುಗಳು ಅಥವಾ ಇತರ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸಲು ಬಳಕೆದಾರರನ್ನು ಕೇಳಲಾಗುತ್ತದೆ.
ಇದರಿಂದ ಬಚಾವ್ ಆಗಲು ನೀವು ಅಪೇಕ್ಷಿಸದ ಇಮೇಲ್‌ಗಳ ಬಗ್ಗೆ ಜಾಗರೂಕರಾಗಿರಿ. ಅದೆಲ್ಲಕ್ಕೂ ಮಿಗಿಲಾಗಿ ನಿಮ್ಮ ಇಮೇಲ್ ಬರುವ ಯಾವುದೇ ಮೆಸೆಜ್ ವಿಳಾಸವನ್ನು ಒಂದು ಬಾರಿಯಲ್ಲದೆ ಹಲವು ಬಾರಿ ಪರಿಶೀಲಿಸುವ ಮೂಲಕ ಅದರಲ್ಲಿ ಮುಂದುವರೆಯಿರಿ. ಇದರಿಂದಾಗಿ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡುವುದು ತಪ್ಪುತ್ತದೆ. ಈ ಮೂಲಕ ಮುಂದೆ ಆಗುವ ಅನಾಹುತ ತಪ್ಪಿದಂತೆ ಆಗುತ್ತದೆ.
ನಕಲಿ ಡೊಮೇನ್: ಇದೆಲ್ಲಕ್ಕಿಂತ ಮಿಗಿಲಾಗಿ ಅಮೆಜಾನ್ ಹೆಸರಲ್ಲಿ ಸುಮಾರು 1,500 ಹೊಸ ಅಮೆಜಾನ್ ಸಂಬಂಧಿತ ಡೊಮೇನ್‌ಗಳನ್ನು ಸೈಬರ್ ಸೆಕ್ಯುರಿಟಿ ಸಂಸ್ಥೆ ಚೆಕ್ ಪಾಯಿಂಟ್ ಪತ್ತೆ ಮಾಡಿದೆ. ಈ ಸೈಟ್‌ಗಳು ಅಮೆಜಾನ್‌ನಂತೆಯೇ ಕಾಣಿಸಿಕೊಂಡಿದ್ದು, ಈ ಮೂಲಕ ಗ್ರಾಹಕರು ಏನಾದರೂ ಖರೀದಿ ಮಾಡಲು ಮುಂದಾದರೆ ಮೋಸ ಹೋದ್ರು ಎಂದೇ ಅರ್ಥ. ಇಷ್ಟು ಮಾತ್ರವಲ್ಲದೆ ತಮ್ಮ ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ಒದಗಿಸುವಂತೆ ಇಲ್ಲಿ ಕೇಳಲಾಗುತ್ತದೆ.
ಈ ರೀತಿಯ ಮೋಸ ಹೋಗುವುದನ್ನು ತಪ್ಪಿಸಲು ಮೊದಲು ಅಮೆಜಾನ್‌ನ ಡೊಮೆನ್ ವಿಳಾಸವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿ. ಅಂದರೆ ಆ ವಿಳಾಸ ಪಟ್ಟಿಯಲ್ಲಿರುವ ಯುಆರ್‌ಎಲ್ ಅನ್ನು ಪರಿಶೀಲಿಸಿ. ಅದೆಲ್ಲಕ್ಕೂ ಮಿಗಿಲಾಗಿ ಅಮೆಜಾನ್‌ನ ಅಧಿಕೃತ ಸೈಟ್ ಒಂದೇ ಆಗಿದ್ದು, ಬೇರೆ ಬೇರೆ ವಿಭಾಗಕ್ಕೆ ಬೇರೆ ಸೈಟ್‌ಗಳು ಓಪನ್ ಆಗುವುದಿಲ್ಲ ಎಂಬುದು ನಿಮಗೆ ಗೊತ್ತಿರಲಿ.

ಮೋಸದ ಮೆಸೆಜ್‌ಗಳು: ಇದರೊಂದಿಗೆ ಶಿಪ್ಪಿಂಗ್ ನೋಟಿಫಿಕೇಶನ್, ಆರ್ಡರ್ ದೃಢೀಕರಣಗಳು ಅಥವಾ ಖಾತೆ ಸಮಸ್ಯೆಗಳನ್ನು ಹೋಲುವ ಸ್ಕ್ಯಾಮ್ ಇಮೇಲ್‌ಗಳು ಮತ್ತು ಪಠ್ಯ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಈ ಮೆಸೆಜ್‌ಗಳಲ್ಲಿ ದುರುದ್ದೇಶಪೂರಿತ ಲಿಂಕ್‌ಗಳು ಇರಲಿದ್ದು, ಇವುಗಳ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಸೂಕ್ಷ್ಮಮಾಹಿತಿಯನ್ನು ಸ್ಕ್ಯಾಮರ್‌ಗಳು ಪಡೆದುಕೊಳ್ಳುತ್ತಾರೆ.
ಈ ರೀತಿಯ ಸ್ಕ್ಯಾಮ್‌ನಿಂದ ಪಾರಾಗಲೂ ಎಂದಿಗೂ ಈ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಜೊತೆಗೆ ಮೆಸೆಜ್‌ಗಳ ಮೂಲಕ ಸಂವಹನ ನಡೆಸುವುದನ್ನು ತಪ್ಪಿಸಿ. ನೀವು ಇಲ್ಲಿ ಯಾವುದೇ ಬ್ಯಾಂಕ್ ಹಾಗೂ ಆರ್ಡರ್ ಮಾಹಿತಿ ಸಂಬಂಧ ಮಾಹಿತಿ ಹಂಚಿಕೊಂಡರೆ ಸ್ಕ್ಯಾಮರ್‌ಗಳು ನಿಮ್ಮನ್ನು ಸುಲಭವಾಗಿ ಮೋಸಗೊಳಿಸುತ್ತಾರೆ.


Click it and Unblock the Notifications








