Home
ಸುದ್ದಿಜಾಲ

ವೇಗದ ಪ್ರೊಸೆಸರ್‌ ಇರುವ ಈ ಫೋನಿನ ಬೆಲೆಯಲ್ಲಿ ಭಾರೀ ಇಳಿಕೆ!

ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಗ್ರಾಹಕರನ್ನು ಸೆಳೆಯಲು ಬೊಂಬಾಟ್‌ ಆಫರ್‌ ನೀಡುತ್ತಲೆ ಸಾಗಿದೆ. ಅಮೆಜಾನ್‌ ತಾಣದಲ್ಲಿ ಅಗ್ಗದ ಬೆಲೆಯಿಂದ ಹೈ ಎಂಡ್ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ಡಿಸ್ಕೌಂಟ್‌ ಲಭ್ಯ. ಆ ಪೈಕಿ ವೇಗದ ಪ್ರೊಸೆಸರ್‌ ಒಳಗೊಂಡಿರುವ ಐಕ್ಯೂ ಸಂಸ್ಥೆಯ ಐಕ್ಯೂ 11 ಮೊಬೈಲ್‌ ಸಖತ್ ರಿಯಾಯಿತಿ ಪಡೆದಿದೆ.

ಹೌದು, ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ ಐಕ್ಯೂ 11 5G ಮೊಬೈಲ್‌ ಶೇ. 18% ರಷ್ಟು ನೇರ ರಿಯಾಯಿತಿ ಒಳಗೊಂಡಿದೆ. ಈ ಫೋನಿನ 16GB RAM + 256 GB ವೇರಿಯಂಟ್‌ನ ಫೋನ್‌ ಅನ್ನು ಗ್ರಾಹಕರು 54,999ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಲು ಅವಕಾಶ ಇದೆ. ಅಲ್ಲದೇ ಅಮೆಜಾನ್‌ನಲ್ಲಿ ಲಭ್ಯ ಇರುವ ಎಕ್ಸ್‌ಚೆಂಜ್‌ ಕೊಡುಗೆ, ಬ್ಯಾಂಕ್‌ ಆಫರ್‌ ಹಾಗೂ ಇತರೆ ರಿಯಾಯಿತಿ ಪಡೆದುಕೊಂಡರೆ ಈ ಫೋನ್‌ ಇನ್ನಷ್ಟು ರಿಯಾಯಿತಿಗೆ ಲಭ್ಯ.

ವೇಗದ ಪ್ರೊಸೆಸರ್‌ ಇರುವ ಈ ಫೋನಿನ ಬೆಲೆಯಲ್ಲಿ ಭಾರೀ ಇಳಿಕೆ!

ಅಂದಹಾಗೆ ಈ ಫೋನ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ ಸೌಲಭ್ಯ ಪಡೆದಿದ್ದು, ಅಲ್ಲದೇ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ. ಇದರ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸರ್ ಸೌಲಭ್ಯದಲ್ಲಿ ಇದೆ. ಇದರೊಂದಿಗೆ 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸಹ ಇದೆ. ಇನ್ನುಳಿದಂತೆ ಐಕ್ಯೂ 11 ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವೇಗದ ಪ್ರೊಸೆಸರ್‌ ಇರುವ ಈ ಫೋನಿನ ಬೆಲೆಯಲ್ಲಿ ಭಾರೀ ಇಳಿಕೆ!

ಐಕ್ಯೂ 11 ಫೀಚರ್ಸ್‌ ಹೀಗಿವೆ

ಐಕ್ಯೂ 11 ಮೊಬೈಲ್‌ 6.78 ಇಂಚಿನ ಪಂಚ್-ಹೋಲ್ ಸ್ಯಾಮ್‌ಸಂಗ್‌ E6 ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 3200 x 1440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಅನ್ನು ಪಡೆದುಕೊಂಡಿದೆ. ಇದು 144Hz ರಿಫ್ರೆಶ್ ರೇಟ್‌, 300Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಒದಗಿಸಲಿದೆ. ಇನ್ನು ಡಿಸ್‌ಪ್ಲೇ 517 PPI ಪಿಕ್ಸೆಲ್‌ ಸಾಂದ್ರತೆಯನ್ನು ಪಡೆದಿದ್ದು, ಇದರ ಜೊತೆಗೆ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ ಪ್ರೊಟೆಕ್ಷನ್‌ ಅನ್ನು ಪಡೆದಿದೆ.

ವೇಗದ ಪ್ರೊಸೆಸರ್‌ ಇರುವ ಈ ಫೋನಿನ ಬೆಲೆಯಲ್ಲಿ ಭಾರೀ ಇಳಿಕೆ!

ಐಕ್ಯೂ 11 ಮೊಬೈಲ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 ಜೆನ್‌ 2 SoC ಪ್ರೊಸೆಸರ್‌ ಅನ್ನು ಕೆಲಸ ನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ Funtouch OS 13 ಬಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಈ ಫೋನ್‌ 8 RAM ಮತ್ತು 256GB ಹಾಗೂ 16GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯ ಆಯ್ಕೆ ಅನ್ನು ಪಡೆದುಕೊಂಡಿದೆ.

ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌, ದ್ವಿತೀಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ತೃತೀಯ ಕ್ಯಾಮೆರಾ 13 ಮೆಗಾಪಿಕ್ಸೆಲ್‌ 2x ಟೆಲಿಫೋಟೋ ಲೆನ್ಸ್‌ ಅನ್ನು ಪಡೆದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಎಲ್ಲಾ ಕ್ಯಾಮೆರಾಗಳು ವಿವೋ V2 ಇಮೇಜಿಂಗ್ ಚಿಪ್‌ನಿಂದ ರನ್‌ ಆಗಲಿವೆ.

ಐಕ್ಯೂ 11 ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 120W ವೇಗದ ವೈರ್ಡ್ ಚಾರ್ಜಿಂಗ್‌ಗೆ ಸಪೋರ್ಟ್‌ ಅನ್ನು ಪಡೆದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಡ್ಯುಯಲ್ ಸಿಮ್, 5 ಜಿ, ವೈಫೈ 6, ಬ್ಲೂಟೂತ್ 5.3, ಜಿಎನ್ಎಸ್ಎಸ್, ಎನ್ಎಫ್ಸಿ ಮತ್ತು ಯುಎಸ್‌ಬಿ ಟೈಪ್-ಸಿಗೆ ಬೆಂಬಲವನ್ನು ನೀಡಲಿದೆ. ಇದು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಐಆರ್ ಸೆನ್ಸಾರ್‌ ಮತ್ತು ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಕೂಡ ಪಡೆದಿದೆ.

Best Mobiles in India

English summary
Awesome price cut on iQOO 11 5G phone on amazon. check offer price and specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+