ಕಡಿಮೆ ಬೆಲೆಯ ಈ ಫೋನಿಗೂ ಬಿಗ್ ಡಿಸ್ಕೌಂಟ್; 5,000mAh ಬ್ಯಾಟರಿ, ಮಸ್ತ್ ಕಲರ್!
ಲೀಡಿಂಗ್ ಇ ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ದೀಪಾವಳಿ ಹಬ್ಬದ ಪ್ರಯುಕ್ತ ಬೊಂಬಾಟ್ ಆಫರ್‌ಗಳನ್ನು ಘೋಷಣೆ ಮಾಡಿದೆ. ಆ ಪೈಕಿ ರಿಯಲ್‌ಮಿ ಸಂಸ್ಥೆಯು ರಿಯಲ್‌ಮಿ C61 (realme C61) ಮೊಬೈಲ್ ಗಮನಾರ್ಹ ರಿಯಾಯಿತಿ ಬೆಲೆಯಲ್ಲಿ ಪಡೆದುಕೊಂಡಿದೆ. ಅಂದಹಾಗೆ ಈ ಫೋನ್ 4GB + 64GB ಹಾಗೂ 6GB + 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದ್ದು, 8 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ.
ಹೌದು, ಫ್ಲಿಪ್‌ಕಾರ್ಟ್ ಆಯೋಜಿಸಿರುವ ದೀಪಾವಳಿ ಮಾರಾಟದಲ್ಲಿ ರಿಯಲ್‌ಮಿ ಕಂಪನಿಯ ರಿಯಲ್‌ಮಿ C61 (realme C61) ಫೋನ್ ಶೇ. 14% ರಷ್ಟು ನೇರ ಡಿಸ್ಕೌಂಟ್ ದರಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ನ 4 GB RAM + 64 GB ಸ್ಟೋರೇಜ್ ವೇರಿಯಂಟ್ ಕೊಡುಗೆಯಲ್ಲಿ 7,699ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಹೆಚ್ಚುವರಿಯಾಗಿ ಕೆಲವು ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಸಹ ಪಡೆಯಬಹುದಾಗಿದೆ.

ಅಲ್ಲದೇ ಈ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರೊಂದಿಗೆ 4GB + 64GB ಹಾಗೂ 6GB + 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದುಕೊಂಡಿದೆ. ಇನ್ನು ಇದು ಡೈಮಂಡ್ ಡಸ್ಟ್ ಬ್ಲಾಕ್, ಎಥೆರಿಯಲ್ ಬ್ಲೂ ಮತ್ತು ಮಿಸ್ಟಿಕಲ್ ಗ್ರೀನ್ ಕಲರ್ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗಾದರೇ ಪೊಕೊ C61 ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.
ಪೊಕೊ C61 ಮೊಬೈಲ್ ಫೀಚರ್ಸ್
ಪೊಕೊ C61 ಮೊಬೈಲ್ 6.71 ಇಂಚಿನ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಅನ್ನು ಪಡೆದುಕೊಂಡಿದ್ದು, 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಒಳಗೊಂಡಿದೆ. ಇದರ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್‌ಸ್ಯಾಂಪಲಿಂಗ್ ರೇಟ್ ಪಡೆದಿದೆ.
ಪೊಕೊ C61 ಮೊಬೈಲ್ ಮೀಡಿಯಾ ಟೆಕ್ ಹಿಲಿಯೋ G36 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದ್ದು, ವಿಆರ್ GE8320 ಜಿಪಿಯು ಸಪೋರ್ಟ್‌ನೊಂದಿಗೆ ಕೆಲಸ ಮಾಡಲಿದೆ. ಹಾಗೆಯೇ ಇದು ಆಂಡ್ರಾಯ್ಡ್ 14 ಓಎಸ್ ಬೆಂಬಲ ಒಳಗೊಂಡಿದೆ. ಅಲ್ಲದೇ ಈ ಫೋನ್ 4GB + 64GB ಹಾಗೂ 6GB + 128GB ಸ್ಟೋರೇಜ್ ವೇರಿಯಂಟ್ ಒಳಗೊಂಡಿದ್ದು, 6GB ವರೆಗಿನ ವರ್ಚುವಲ್ RAM ಆಯ್ಕೆ ಸಹ ಪಡೆದಿದೆ.
ಪೊಕೊ C61 ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇದರ ಎರಡನೇ ಕ್ಯಾಮೆರಾ ಬೇಸಿಕ್ ಲೆನ್ಸ್ ಸಪೋರ್ಟ್ ಹೊಂದಿದೆ. ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 5 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ಪೊಕೊ C61 ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಹಾಗೆಯೇ 10W ವೈರ್ಡ್ ಚಾರ್ಜಿಂಗ್ ಆಯ್ಕೆ ಪಡೆದಿದೆ. ಅಲ್ಲದೇ ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್, 3.5mm ಆಡಿಯೊ ಜಾಕ್ ಆಯ್ಕೆ ಸಹ ಒಳಗೊಂಡಿದೆ. ಇದಲ್ಲದೇ 4G LTE, ಬ್ಲೂಟೂತ್ ಆವೃತ್ತಿ 5.4, ವೈ-ಫೈ 5 ಆಯ್ಕೆಗಳು ಕೂಡಾ ಪಡೆದಿದೆ.ಇನ್ನು ಈ ಮೊಬೈಲ್ ಡೈಮಂಡ್ ಡಸ್ಟ್ ಬ್ಲಾಕ್, ಎಥೆರಿಯಲ್ ಬ್ಲೂ ಮತ್ತು ಮಿಸ್ಟಿಕಲ್ ಗ್ರೀನ್ ಕಲರ್ ಆಯ್ಕೆಗಳಲ್ಲಿ ಗ್ರಾಹಕರ ಖರೀದಿಗೆ ಲಭ್ಯ.


Click it and Unblock the Notifications








