Home
ಸುದ್ದಿಜಾಲ

ಈ ಎಂಟ್ರಿ ಲೆವೆಲ್‌ ಫೋನಿಗೂ ಬಿಗ್‌ ಡಿಸ್ಕೌಂಟ್‌!..ಖರೀದಿಗೆ ಇದೇ ಬೆಸ್ಟ್‌ ಟೈಮ್‌!

ರಿಯಲ್‌ಮಿ ಮೊಬೈಲ್‌ ಸಂಸ್ಥೆಯು ಭಿನ್ನ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಆ ಪೈಕಿ ರಿಯಲ್‌ಮಿ ನಾರ್ಜೊ ಸರಣಿಯ ಫೋನ್‌ಗಳು ಬಜೆಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಗ್ರಾಹಕರ ಗಮನಸೆಳೆದಿವೆ. ಅವುಗಳಲ್ಲಿ ಒಂದಾದ ರಿಯಲ್‌ಮಿ ನಾರ್ಜೊ 50i ಪ್ರೈಮ್‌ ಫೋನ್‌ ಈಗ ಆಕರ್ಷಕ ರಿಯಾಯಿತಿ ಪಡೆದುಕೊಂಡಿದ್ದು, ಮೊಬೈಲ್‌ ಪ್ರಿಯ ಗ್ರಾಹಕರನ್ನು ತನ್ನಡೆ ಸೆಳೆದಿದೆ.

ಹೌದು, ಪ್ರಮುಖ ಇ ಕಾಮರ್ಸ್ ದೈತ್ಯ ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ ರಿಯಲ್‌ಮಿ ನಾರ್ಜೊ 50i ಪ್ರೈಮ್‌ ಮೊಬೈಲ್‌ ಶೇ. 25% ರಷ್ಟು ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ ಇದೆ. ಹೀಗಾಗಿ 9,999ರೂ. ಬೆಲೆ ಹೊಂದಿರುವ ಈ ಫೋನಿನ 4GB RAM + 64GB ಸ್ಟೋರೇಜ್ ವೇರಿಯಂಟ್‌ ಫೋನ್‌ ಅನ್ನು ಆಫರ್‌ ನಲ್ಲಿ ಗ್ರಾಹಕರು 7,499ರೂ. ಗಳ ಪ್ರೈಸ್‌ಟ್ಯಾಗ್‌ ನಲ್ಲಿ ಖರೀದಿ ಮಾಡಬಹುದಾಗಿದೆ.

ಈ ಎಂಟ್ರಿ ಲೆವೆಲ್‌ ಫೋನಿಗೂ ಬಿಗ್‌ ಡಿಸ್ಕೌಂಟ್‌!..ಖರೀದಿಗೆ ಇದೇ ಬೆಸ್ಟ್‌ ಟೈಮ್‌!

ಅಂದಹಾಗೆ ಈ ಫೋನ್‌ ರಿಯರ್‌ ಸಿಂಗಲ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು. ಇದರ ಜೊತೆಗೆ ಈ ಮೊಬೈಲ್‌ ಫೋನ್‌ ಮಿಂಟ್ ಗ್ರೀನ್ ಕಾರ್ಬನ್ ಬ್ಲ್ಯಾಕ್‌ ಕಲರ್‌ ಆಯ್ಕೆಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯ ಇದೆ. ಹಾಗಾದರೇ ರಿಯಲ್‌ಮಿ ನಾರ್ಜೊ 50i ಪ್ರೈಮ್‌ ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ ನಾರ್ಜೊ 50i ಪ್ರೈಮ್‌ ಡಿಸ್‌ಪ್ಲೇ ಮತ್ತು ಪ್ರೊಸೆಸರ್‌ ಹೀಗಿವೆ
ರಿಯಲ್‌ಮಿ ನಾರ್ಜೊ 50i ಪ್ರೈಮ್‌ ಮೊಬೈಲ್‌ 6.5 ಇಂಚಿನ ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಇದು ಯುನಿಸೋಕ್ 9863 SoC ಪ್ರೊಸೆಸರ್‌ ಸಾಮರ್ಥ್ಯ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ UI ಗೋ ಆವೃತ್ತಿ ಸಪೋರ್ಟ್‌ ನೊಂದಿಗೆ ಕಾರ್ಯ ನಿರ್ವಹಿಸುತ್ತದೆ.

ಹಾಗೆಯೇ ಈ ಮೊಬೈಲ್‌ 4 GB RAM ಮತ್ತು 64 GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯ ಅನ್ನು ಪಡೆದಿದೆ. ಇದರ ಜೊತೆಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ಅನ್ನು 1TB ವರೆಗೂ ಸಹ ವಿಸ್ತರಿಸುವ ಆಯ್ಕೆ ಒದಗಿಸಿದೆ. ಇದು ಅಲ್ಲದೇ ಗೇಮಿಂಗ್ ಹಾಗೂ ಮಲ್ಟಿ ಟಾಸ್ಕಿಂಗ್ ಕೆಲಸಗಳಿಗೆ ಈ ಪ್ರೊಸೆಸರ್ ಸಪೋರ್ಟ್‌ ಪಡೆದಿದೆ.

ರಿಯಲ್‌ಮಿ ನಾರ್ಜೊ 50i ಪ್ರೈಮ್‌ ಕ್ಯಾಮೆರಾ ಮತ್ತು ಬ್ಯಾಟರಿ ಬ್ಯಾಕ್‌ಅಪ್‌ :
ರಿಯಲ್‌ಮಿ ನಾರ್ಜೊ 50i ಪ್ರೈಮ್‌ ಮೊಬೈಲ್‌ ಹಿಂಬದಿಯಲ್ಲಿ ಸಿಂಗಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಅದು 8 ಮೆಗಾ ಪಿಕ್ಸೆಲ್ AI ಸೆನ್ಸಾರ್ ಅನ್ನು ಹೊಂದಿದೆ. ಅಲ್ಲದೆ ಸೆಲ್ಫಿಗಾಗಿ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾ ಅನ್ನು ನೀಡಲಾಗಿದೆ. ಇದರ ಜೊತೆಗೆ ಈ ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದ್ದು, ಇದು 43 ದಿನಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ಒದಗಿಸಲಿದೆ.

ರಿಯಲ್‌ಮಿ ನಾರ್ಜೊ 50i ಪ್ರೈಮ್‌ ಮೆಮೊರಿ ಮತ್ತು ಕಲರ್‌ ಆಯ್ಕೆ ಹೀಗಿವೆ :
ರಿಯಲ್‌ಮಿ ನಾರ್ಜೊ 50i ಪ್ರೈಮ್‌ ಫೋನ್‌ ಫೋನ್‌ ಎರಡು ವೇರಿಯಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಅವುಗಳು ಕ್ರಮವಾಗಿ 3 GB RAM + 32 GB ಸ್ಟೋರೇಜ್ ವೇರಿಯಂಟ್‌ ಆಯ್ಕೆ ಹಾಗೂ 4GB RAM + 64 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಆಗವೆ. ಈ ಫೋನ್‌ ಅನ್ನು ಗ್ರಾಹಕರು ಮಿಂಟ್ ಗ್ರೀನ್ ಕಾರ್ಬನ್ ಬ್ಲ್ಯಾಕ್‌ ಕಲರ್‌ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
price drop on realme narzo 50i prime smartphone on amazon platform. check offer price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+