256GB ಸ್ಟೋರೇಜ್‌ನ ಈ ರೆಡ್ಮಿ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್‌ಗಳ ಪೈಕಿ ಶಿಯೋಮಿ ಕೂಡಾ ಒಂದಾಗಿದ್ದು, ಶಿಯೋಮಿ ಇದೀಗ ತನ್ನ ವೆಬ್‌ಸೈಟ್‌ನಲ್ಲಿ ಶಿಯೋಮಿ ಸೂಪರ್ ಸೇವರ್ ಸೇಲ್ ( Xiaomi Super Saver Sale ) ಸೇಲ್ ಅನ್ನು ಆಯೋಜಿಸಿದ್ದು, ಗ್ರಾಹಕರ ಗಮನ ಸೆಳೆದಿದೆ. ಈ ಮಾರಾಟದಲ್ಲಿ ಸಂಸ್ಥೆಯ ಕೆಲವು ಜನಪ್ರಿಯ ಮೊಬೈಲ್‌ಗಳು ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿವೆ. ಆ ಪಟ್ಟಿಯಲ್ಲಿ ರೆಡ್ಮಿ 13C (Redmi 13C) ಮೊಬೈಲ್ ಕೂಡಾ ಬೊಂಬಾಟ್ ಬೆಲೆ ಕಡಿತ ಪಡೆದಿದ್ದು, ಖರೀದಿದಾರರು OMG ಎನ್ನುವಂತಾಗಿದೆ.
ಹೌದು, ಶಿಯೋಮಿಯು ತನ್ನ ವೆಬ್‌ಸೈಟ್‌ನಲ್ಲಿ ಶಿಯೋಮಿ ಸೂಪರ್ ಸೇವರ್ ಸೇಲ್ ( Xiaomi Super Saver Sale ) ಮಾರಾಟ ಆಯೋಜಿಸಿದ್ದು, ಈ ಸೇಲ್‌ನಲ್ಲಿ ಆಯ್ದ ಮೊಬೈಲ್‌ಗಳು ಭಾರೀ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ರೆಡ್ಮಿ 13C 4G ಮೊಬೈಲ್ ಆಕರ್ಷಕ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ.

ಇನ್ನು ಈ ಫೋನಿನ 8 GB + 256 GB ವೇರಿಯಂಟ್ ಈಗ 10,999ರೂ. ಗಳಿಗೆ ಖರೀದಿ ಮಾಡಬಹುದಾಗಿದ್ದು, ಕೆಲವು ಆಯ್ದ ಬ್ಯಾಂಕ್ ಕೊಡುಗೆ ಸಹ ದೊರೆಯಲಿದೆ. ಈ ಸ್ಮಾರ್ಟ್‌ಫೋನ್ ಅನ್ನು ಸ್ಟಾರ್ಡಸ್ಟ್ ಕಪ್ಪು ಮತ್ತು ಸ್ಟಾರ್ ಶೈನ್ ಗ್ರೀನ್ ಕಲರ್ ಆಯ್ಕೆಯಲ್ಲಿ ಖರೀದಿಸಬಹುದು. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್ ಮುಂದೆ ನೋಡೋಣ ಬನ್ನಿರಿ.
ರೆಡ್ಮಿ 13C ಫೀಚರ್ಸ್ ಹೀಗಿವೆ
ರೆಡ್ಮಿ 13C ಮೊಬೈಲ್ 6.74 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಅನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಹೊಂದಿದೆ. ಇದರ ಜೊತೆಗೆ ಡಿಸ್‌ಪ್ಲೇ 1920Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್ ಅನ್ನು ಬೆಂಬಲ ಮಾಡುತ್ತದೆ.
ರೆಡ್ಮಿ 13C ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೋ G85 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಜೊತೆಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಎಸ್‌ಡಿ ಮೆಮೊರಿ ಕಾರ್ಡ್ ಸಪೋರ್ಟ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಲು ಆಯ್ಕೆ ಇದೆ.
ರೆಡ್ಮಿ 13C ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್, ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ರೆಡ್ಮಿ 13C ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ ಮತ್ತು 18W ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 3.5 ಎಂಎಂ ಆಡಿಯೊ ಜಾಕ್, ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.3, GPS + GLONASS, USB ಟೈಪ್-C ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.
ರೆಡ್ಮಿ 13C ಸ್ಮಾರ್ಟ್‌ಫೋನ್ ಎರಡು ಕಲರ್ ಆಯ್ಕೆ ಪಡೆದಿದೆ. ಅವುಗಳು ಕ್ರಮವಾಗಿ ಸ್ಟಾರ್ಡಸ್ಟ್ ಕಪ್ಪು ಮತ್ತು ಸ್ಟಾರ್ ಶೈನ್ ಗ್ರೀನ್ ಕಲರ್ ಆಯ್ಕೆಗಳು ಆಗಿವೆ. ಅಲ್ಲದೇ ಈ ಸ್ಮಾರ್ಟ್‌ಫೋನ್ 5G ಮಾದರಿಯಲ್ಲಿಯು ಕೂಡ ಲಭ್ಯವಿದೆ.


Click it and Unblock the Notifications








