Home
ಸುದ್ದಿಜಾಲ

ಮಡಚುವ ಈ ದೈತ್ಯ ಫೋನಿನ ಆಫರ್‌ ಬೆಲೆ ತಿಳಿದ್ರೆ, ನೀವು OMG ಅಂತೀರಾ!

ಜನಪ್ರಿಯ ಇ ಕಾಮರ್ಸ್‌ ತಾಣ ಎನಿಸಿಕೊಂಡಿರುವ ಅಮೆಜಾನ್‌ನಲ್ಲಿ ಈಗ ಟೆಕ್ನೋ ಡೇಸ್‌ ಮಾರಾಟ ಮೇಳ ಚಾಲ್ತಿ ಇದೆ. ಈ ಮಾರಾಟ ಮೇಳದಲ್ಲಿ ಆಯ್ದ ಟೆಕ್ನೋ ಫೋನ್‌ಗಳು ಆಕರ್ಷಕ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ದೈತ್ಯ ಟೆಕ್ನೋ ಫ್ಯಾಂಟಮ್ V ಫೋಲ್ಡ್ ಮೊಬೈಲ್‌ ಕೂಡಾ ಭರ್ಜರಿ ದರ ಇಳಿಕೆಯಲ್ಲಿ ಖರೀದಿಗೆ ಲಭ್ಯ ಇದೆ.

ಹೌದು, ಅಮೆಜಾನ್‌ ತಾಣದಲ್ಲಿ ಟೆಕ್ನೋ ಫ್ಯಾಂಟಮ್ V ಫೋಲ್ಡ್ ಫೋನ್ ಶೇ. 36% ರಷ್ಟು ನೇರ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಫೋನಿನ 12GB RAM + 256GB ಸ್ಟೋರೇಜ್‌ ವೇರಿಯಂಟ್‌ ಅನ್ನು ಖರೀದಿದಾರರು 69,999ರೂ. ಗಳ ಬೆಲೆಯಲ್ಲಿ ಲಭ್ಯವಿದೆ. ಇನ್ನು ಲಭ್ಯ ಇರುವ ಕೂಪನ್‌ ಹಾಗೂ ಎಕ್ಸ್‌ಚೇಂಜ್‌ ಕೊಡುಗೆಯನ್ನು ಪಡೆದುಕೊಂಡಿರೆ, ಈ ಫೋನ್‌ ಅನ್ನು 54,999ರೂ. ಗಳಿಗೆ ಖರೀದಿಸಬಹುದು.

ಮಡಚುವ ಈ ದೈತ್ಯ ಫೋನಿನ ಆಫರ್‌ ಬೆಲೆ ತಿಳಿದ್ರೆ, ನೀವು OMG ಅಂತೀರಾ!

ಇದು ಮೀಡಿಯಾ ಟೆಕ್‌ ಡೈಮೆನ್ಸಿಟಿ 9000+ ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿದ್ದು, ಹಾಗೆಯೇ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಹ ಪಡೆದುಕೊಂಡಿದೆ. ಇನ್ನು ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಹ ಪಡೆದುಕೊಂಡಿದೆ. ಇನ್ನು ಈ ಫೋನ್‌ ಗ್ಲೋವಿಂಗ್ ಬ್ಲೂ ಹಾಗೂ ಗ್ಲೋವಿಂಗ್ ಬ್ಲ್ಯಾಕ್‌ ಕಲರ್‌ ಆಯ್ಕೆ ಅನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಒಪ್ಪೋ A18 ಮೊಬೈಲ್‌ನ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಟೆಕ್ನೋ ಫ್ಯಾಂಟಮ್ V ಫೋಲ್ಡ್ - ಫೀಚರ್ಸ್‌

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಫೋನ್ 6.42 ಇಂಚಿನ LTPO ಔಟರ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದು FHD+ ಪ್ಯಾನೆಲ್ ಆಗಿದೆ. ಹಾಗೆಯೇ 2296 X 2000 ಪಿಕ್ಸೆಲ್‌ ರೆಸಲ್ಯೂಶನ್‌ ಒಳಗೊಂಡಿದೆ. ಇದರೊಂದಿಗೆ 7.65 ಇಂಚಿನ 2K LTPO ಅಮೋಲೆಡ್‌ ಫೋಲ್ಡಬಲ್ ಡಿಸ್‌ಪ್ಲೇ ಇದ್ದು, ಅಟೋಮ್ಯಾಟಿಕ್‌ ಆಗಿ 10Hz ನಿಂದ 120Hz ನಡುವೆ ರಿಫ್ರೆಶ್‌ ರೇಟ್‌ ಅನ್ನು ಚೇಂಜ್ ಮಾಡಿಕೊಳ್ಳುತ್ತದೆ.

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 9000+ ಚಿಪ್‌ಸೆಟ್‌ ಪ್ರೊಸೆಸರ್‌ ಬಲದಲ್ಲಿ ಕೆಲಸ ನಿರ್ವಹಿಸುವ ಈ ಮೊಬೈಲ್‌ 12GB RAM + 512GB ಆಂತರೀಕ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ. ಪ್ರೊಸೆಸರ್‌ಗೆ ಪೂರಕವಾಗಿ ಇದು ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್ ಕೂಡಾ ಪಡೆದುಕೊಂಡಿದೆ.

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಫೋನ್‌ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿದೆ. ಅಲ್ಲದೇ 13 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್‌ ಹಾಗೂ 50 ಮೆಗಾ ಪಿಕ್ಸೆಲ್ 2x ಪೋಟ್ರೇಟ್ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದೆ. ಇನ್ನು ಈ ಡಿವೈಸ್‌ ಅನ್ನು ಓಪನ್‌ ಮಾಡಿದಾಗ ಹೊರಗಿನ ಡಿಸ್‌ಪ್ಲೇನಲ್ಲಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಇನ್ನುಳಿದಂತೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 45W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಒಳಗೊಂಡಿದೆ. ಹಾಗೆಯೇ ಇನ್ - ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ ಸೌಲಭ್ಯ, ಸ್ಟೀರಿಯೋ ಸ್ಪೀಕರ್‌ ಸೌಲಭ್ಯದ ಆಯ್ಕೆಗಳನ್ನು ಇದು ಪಡೆದಿದೆ. ಇನ್ನು ಈ ಫೋನ್‌ ಬ್ಲ್ಯಾಕ್‌ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.

Best Mobiles in India

English summary
Awesome Price Drop on Tecno Phantom V Fold Phone on Tecno Days Sale on Amazon website. check out offer Price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+