ಮೊಟೊರೊಲಾದಿಂದ 2024 ರಲ್ಲಿ ಲಾಂಚ್ ಆಗಲಿರುವ ಭರ್ಜರಿ ಫೋನ್‌ಗಳಿವು! ಎಐ ಬೆಂಬಲ
ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ನಡುವೆ ಗ್ರಾಹಕರು ಹೊಸ ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಹೊಸ ವರ್ಷದ ಹಿನ್ನೆಲೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಸಹ ವಿಶೇಷ ಸೇಲ್ ಆಯೋಜನೆ ಮಾಡುವ ಮೂಲಕ ಈಗಾಗಲೇ ಹೊಸ ಫೋನ್‌ಗಳಿಗೂ ಸಹ ಆಫರ್ ನೀಡುತ್ತಾ ಬಂದಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಮೊಟೊರೊಲಾ ಹೊಸ ವರ್ಷಕ್ಕೆ ಪ್ರಮುಖ ಫೋನ್‌ಗಳನ್ನು ಅನಾವರಣ ಮಾಡಲಿದೆ.
ಹೌದು, 2024 ರಲ್ಲಿ ಸಾಕಷ್ಟು ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಲಿದ್ದು, ಅದರಲ್ಲಿ ಪ್ರಮುಖವಾಗಿ ಹೊಸ ವರ್ಷದ ಆರಂಭದಲ್ಲೇ ಸ್ಯಾಮ್‌ಸಂಗ್, ಒನ್‌ಪ್ಲಸ್, ರೆಡ್ಮಿ, ಹಾಗೂ ವಿವೋ ಸೇರಿದಂತೆ ಅನೇಕ ಕಂಪೆನಿಗಳು ಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಹೊಸ ಫೋನ್‌ಗಳನ್ನು ಅನಾವರಣ ಮಾಡಲು ಸಜ್ಜಾಗಿವೆ. ಹೊಸ ವರ್ಷದಲ್ಲಿ ಲಾಂಚ್ ಆಗಲಿರುವ ಫೋನ್‌ಗಳ ವಿಭಾಗದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S14 ಸರಣಿಯ ಫೋನ್‌ಗಳು ಸಖತ್ ಸೌಂಡ್ ಮಾಡುತ್ತಿವೆ. ಅದಾಗ್ಯೂ ಮೊಟೊರೊಲಾ ಫೋನ್‌ಗಳು ಸಹ ಭಾರೀ ಬೇಡಿಕೆ ಪಡೆದಿದ್ದು, ಹೊಸ ವರ್ಷಕ್ಕೆ ಯಾವೆಲ್ಲಾ ಫೋನ್‌ಗಳು ಸೌಂಡ್ ಮಾಡಲಿವೆ ಎನ್ನೋ ವಿವರ ಇಲ್ಲಿದೆ ನೋಡಿ.

ಹೊಸ ವರ್ಷಕ್ಕೆ ಹೊಸ ಮೊಟೊ ಫೋನ್‌ಗಳು: ಮೊಟೊರೊಲಾ 2024 ರಲ್ಲಿ ಹೊಸ ರೇಜರ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ. ರೇಜರ್ ಸರಣಿಯು ಮೊಟೊರೊಲಾದ ಅತ್ಯಂತ ಜನಪ್ರಿಯ ಸರಣಿಗಳಲ್ಲಿ ಒಂದಾಗಿದೆ. ಅದರಲ್ಲೂ ಈ ಫೋನ್‌ಗಳನ್ನು ಎಐ ಬೆಂಬಲದೊಂದಿಗೆ ಲಾಂಚ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭರ್ಜರಿ ಸೌಂಡ್ ಮಾಡಲಿದೆ.
ಇದರೊಂದಿಗೆ ಮೊಟೊರೊಲಾ X ಸರಣಿಯಲ್ಲೂ ಹೊಸ ಫೋನ್ ಗಳನ್ನು ಅನಾವರಣ ಮಾಡಲು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ. ಅದಾಗ್ಯೂ ಈ ವೇಳೆ ಮೊಟೊರೊಲಾ G ಸರಣಿಯಲ್ಲಿ ಹೊಸ ಫೋನ್ ಅನ್ನು ನಿರೀಕ್ಷಿಸಬಹುದು ಎಂದು ಅವರು ಬಹಿರಂಗಪಡಿಸಲಾಗಿದೆ. ಇನ್ನು 2023 ರಲ್ಲಿ ಮೊಟೊರೊಲಾ ರೇಜರ್ ಸರಣಿಯ ಫೋನ್ ಅನ್ನು ಬಿಡುಗಡೆ ಮಾಡಲಾಗಿದ್ದು, ಈ ಫೋನ್‌ಗಳು ಜಾಗತಿಕ ಮಟ್ಟದಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿವೆ.

ಇನ್ನು ಮೊಟೊರೊಲಾ ಈ ವರ್ಷ ಚೀನಾದಲ್ಲಿ ಮಾತ್ರ ಕೆಲವು ಫೋನ್‌ಗಳನ್ನು ಬಿಡುಗಡೆ ಮಾಡಿವುದನ್ನು ಈ ವೇಳೆ ನೆನಪಿಸಿಕೊಳ್ಳಬಹುದು. ಅವುಗಳಲ್ಲಿ ಮೊಟೊ G34 5G ಪ್ರಮುಖವಾಗಿದೆ. ಈ ಫೋನ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಖಾರ್ಯನಿರ್ವಹಿಸಲಿದ್ದು, ಇದರೊಂದಿಗೆ ಮೊಟೊರೊಲಾ ಎಡ್ಜ್ ಅನ್ನೂ ಸಹ ಈ ವರ್ಷದ ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಪರಿಚಯಿಸಲಾಗಿದೆ. ಇದಾದ ಬಳಿಕ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಮೊಟೊರೊಲಾ ಎಡ್ಜ್ 40 ನಿಯೋ ಫೋನ್ ಅನ್ನು ಅನಾವರಣ ಮಾಡಲಾಗಿತ್ತು.
ಇದೇ ವೇಳೆ ಮೊಟೊರೊಲಾ ರೋಲ್ ಮಾಡಬಹುದಾದ ಡಿಸ್‌ಪ್ಲೇ ಆಯ್ಕೆಯ ಹೊಸ ಫೋನ್‌ನ ಉತ್ಪಾದನೆಯನ್ನು ಪ್ರಾರಂಭಿಸಿದೆ ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ. ಪರಿಣಾಮ ಈ ರೀರಿಯ ಫೋನ್‌ಗಳು 2024 ರಲ್ಲಿಯೇ ಲಾಂಚ್ ಆಗಬಹುದು ಎನ್ನುವ ಮಾತುಗಳು ಸಹ ಕೇಳಿಬಂದಿವೆ. ಆದರೆ ಮೊಟೊರೊಲಾ ಈ ಬಗ್ಗೆ ಯಾವುದೇ ಆಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಇನ್ನು ಮೊಟೊರೊಲಾದ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಸ್ನಾಪ್‌ಡ್ರಾಗನ್ 8 ಜನ್ 3 SoC ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಅದರಂತೆ ಕ್ವಾಲ್ಕಾಮ್‌ನ ಇತ್ತೀಚಿನ ಪ್ರೊಸೆಸರ್‌ಗಳಿಂದ ನಡೆಸಲ್ಪಡುವ ಮಧ್ಯಮ ಶ್ರೇಣಿ ಮತ್ತು ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್ ವೇರಿಯಂಟ್ ಫೋನ್‌ಗಳನ್ನು ಸಹ ಈ ಬೇಳೆ ನಿರೀಕ್ಷೆ ಮಾಡಬಹುದಾಗಿದೆ. ಈ ಎಲ್ಲಾ ಕೆಲವು ಪ್ರಮುಖ ಮಾಹಿತಿಯನ್ನು ಲೆನೊವೊ ಮೊಬೈಲ್ ಬ್ಯುಸಿನೆಸ್ ಗ್ರೂಪ್‌ನ ಮುಖ್ಯಸ್ಥರಾಗಿರುವ ಚೆನ್ ಜಿನ್ ತಿಳಿಸಿದ್ದಾರೆ. ಜೊತೆಗೆ ಫೋಲ್ಡಬಲ್ ಫೋನ್‌ಗಳ ಬಗ್ಗೆ ಒತ್ತಿ ಹೇಳಿದ್ದಾರೆ.


Click it and Unblock the Notifications








