ಆನ್‌ಲೈನಿನಲ್ಲಿ ಬಾಹುಬಲಿ-2 ಸಿನಿಮಾ ಟಿಕೆಟ್ ಬುಕ್ ಮಾಡುತ್ತೀರಾ..? ಹಾಗಿದ್ದರೇ ಹುಷಾರಾಗಿರಿ

Written By:

ದೇಶದಲ್ಲಿ ಹೊಸ ಅಲೆಯನ್ನು ಹುಟ್ಟುಹಾಕಿರುವ ಬಾಹುಬಲಿ-2 ಸಿನಿಮಾ ಕ್ರೇಜ್ ಹೆಚ್ಚಾಗಿದ್ದು, ಅಭಿಮಾನಿಗಳು ಈಗಾಗಲೆ ಈ ಸಿನಿಮಾವನ್ನು ನೋಡಲು ತುದಿಗಾಲಿನಲ್ಲಿ ನಿಂತಿದ್ದು, ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಆನ್‌ಲೈನಿನಲ್ಲಿ ಟಿಕೆಟ್ ಬುಕಿಂಗ್ ಹೆಚ್ಚಾಗುತ್ತಿದ್ದು, ಆದರೆ ಆನ್‌ಲೈನಿನಲ್ಲಿ ನಕಲಿ ಟಿಕೆಟ್ ಬುಂಕಿಗ್ ತಾಣಗಳು ಮೋಸ ಮಾಡಲು ಹುಟ್ಟಿಕೊಂಡಿವೆ.

ಆನ್‌ಲೈನಿನಲ್ಲಿ ಬಾಹುಬಲಿ-2 ಸಿನಿಮಾ ಟಿಕೆಟ್ ಬುಕ್ ಮಾಡುತ್ತೀರಾ..?

ಓದಿರಿ: ಜಿಯೋ ಭರ್ಜರಿ ಕೊಡುಗೆಗಳು ಮತ್ತೆ ಬರಲಿವೆ..!!!!

ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಶುಕ್ರವಾರ ಬಿಡುಗಡೆ ಸಿದ್ಧವಾಗಿದ್ದು, ಬಾಹುಬಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಅಭಿಮಾನಿಗಳು ಈ ಸಿನಿಮಾವನ್ನು ನೋಡಲು ಮುಗಿ ಬೀಳುತ್ತಿರುವ ಹಿನ್ನಲೆಯಲ್ಲಿ ನಕಲಿ ಸಿನಿಮಾ ಟಿಕೆಟ್ ವೆಬ್ ಸೈಟೊಂದು ವಂಚನೆ ನಡೆಸುತ್ತಿದೆ.

ಓದಿರಿ: ಕೇವಲ ರೂ.5000ಕ್ಕೆ ದೊರೆಯಲಿದೆ ಜಿಯೋ 4G ಲ್ಯಾಪ್‌ಟಾಪ್...!?!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆನ್‌ಲೈನಿನಲ್ಲಿ ವಂಚನೆ:

ಆನ್‌ಲೈನಿನಲ್ಲಿ ವಂಚನೆ:

newtickets.in ಹೆಸರಿನ ಸೈಟ್ ವೊಂದರಲ್ಲಿ ಅಭಿಮಾನಿಗಳನ್ನು ವಂಚಿಸಿದೆ ಎನ್ನಲಾಗಿದೆ. ಆನ್‌ಲೈನಿನಲ್ಲಿ ಟಿಕೆಟ್ ಬುಕ್ ಮಾಡಿದ ನಂತರ ಹಣ ಪಾವತಿಯಾಗುತ್ತಿದೆ ಆದರೆ ತಾವು ಬುಕ್ ಮಾಡಿದ ಸೀಟ್ ಮಾತ್ರ ಲಾಕ್ ಆಗುತ್ತಿಲ್ಲ. ಬುಕಿಂಗ್ ಕುರಿತು ಮೆಸೇಜ್ ಬರುತಿದ್ದರೂ ಬುಕ್ ಮಾಡಿದ ಸೀಟನ್ನೇ ಮತ್ತೇ ಬುಕ್ ಮಾಡುವ ಅವಕಾಶ ಮಾಡಿಕೊಡುವ ಮೂಲಕ ಜನರನ್ನು ವಂಚಿಸುತ್ತಿದೆ ಎಂದು ದೂರಲಾಗಿದೆ.

 ಸೈಬರ್ ಕ್ರೈಂ ವಿಭಾಗಕ್ಕೆ ದೂರು

ಸೈಬರ್ ಕ್ರೈಂ ವಿಭಾಗಕ್ಕೆ ದೂರು

ಈಗಾಗಲೇ ಈ ಕುರಿತು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲಾಗಿದೆ. ಇದಾದ ನಂತರ ವೆಬ್‍ಸೈಟ್ ತನ್ನ ಮುಖಪುಟದಲ್ಲಿ, ಪೋರ್ಟಲ್‍ನಲ್ಲಿ ತಾಂತ್ರಿಕ ಸಮಸ್ಯೆಯಿತ್ತು. ನಿಮ್ಮ ಹಣವನ್ನು ನಾವು ಮರಳಿ ಪಾವತಿಸಿದ್ದೇವೆ ಎಂಬ ಮೇಸೆಜ್ ಹಾಕಿದೆ.

ನೀವು ಎಚ್ಚರವಹಿಸಿ:

ನೀವು ಎಚ್ಚರವಹಿಸಿ:

ನೀವು ಸಹ ಬಾಹುಬಲಿ 2 ಚಿತ್ರವನ್ನು ನೋಡಲು ಟಿಕೆಟ್ ಬುಕ್ ಮಾಡುತ್ತಿದ್ದರೇ ಎಚ್ಚರವಹಿಸುವದು ಅಗತ್ಯ, ಅಧಿಕೃತ ಜಾಲತಾಣಗಳಲ್ಲಿ ಮಾತ್ರವೇ ಎಚ್ಚರಿಕೆಯಿಂದ ಬುಕ್ ಮಾಡಿ. ಆಫರ್ ಇದೇ ಎಂದು ನಕಲಿ ವೆಬ್್ ಸೈಟಿನ ಜಾಲಕ್ಕೆ ಸಿಲುಕದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
As Film Release Date Came CLoser Many Popular Ticket Booking Sites Started Selling Tickets in Their Portal everyone is feeling happy for saving the time of standing in ticket queues. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot