ಕೇವಲ ರೂ.5000ಕ್ಕೆ ದೊರೆಯಲಿದೆ ಜಿಯೋ 4G ಲ್ಯಾಪ್‌ಟಾಪ್...!?!?
ಕಡಿಮೆ ಬೆಲೆಗೆ ಲ್ಯಾಪ್‌ಟಾಪ್ ಸೇರಿದಂತೆ ಇನ್ನು ಹಲವು ಆಲೋಚನೆಯನ್ನು ಹೊಂದಿದೆ. ಆದರೆ ಇದೇ ಹೆಸರಿಗೆ ಕಳಂಕ ತರುತ್ತಿದೆ.
ಜಿಯೋ ಸದ್ಯ ದೇಶದಲ್ಲಿ ಸದ್ದು ಮಾಡಿತ್ತಿರುವ ಹೆಸರು. ರಿಲಯನ್ಸ್ ಮಾಲೀಕತ್ವದ ಜಿಯೋ 4G ಟೆಲಿಕಾಂ ಸೇವೆಯನ್ನು ಆರಂಭಿಸಿ ದೇಶದಲ್ಲಿ ಹೊಸ ಡಿಜಿಟಲ್ ಕ್ರಾಂತಿಯನ್ನು ಹುಟ್ಟಿಹಾಕಿತು. ಇದೇ ಸಂದರ್ಭದಲ್ಲಿ ಜಿಯೋ ವಿವಿಧ ವಲಯಗಳಲ್ಲಿಯೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಯೋಜನೆಯನ್ನು ರೂಪಿಸಿದೆ. ಅದುವೇ ಡಿಟಿಹೆಚ್ ಲೋಕ, ಬ್ರಾಡ್ ಬ್ಯಾಂಡ್ ಸೇವೆ ಮುಂತಾದವು.

ಓದಿರಿ: 10,000 ರೂ. ಹೊಸ ಆಫರ್ ಬಿಡುಗಡೆ ಮಾಡಿದೆ ಜಿಯೋ..!! ಏನು ಗೊತ್ತಾ..??
ಟೆಲಿಕಾಂ ಲೋಕದಲ್ಲಿ ಹೊಸ ಬದಲಾವಣೆಯನ್ನು ತಂದಿದಲ್ಲದೇ, ಉಚಿತ ಮತ್ತು ಕಡಿಮೆ ಬೆಲೆಗೆ 4G ಡೇಟಾವನ್ನು ನೀಡುವ ಮೂಲಕ ಕೋಟ್ಯಾಂತರ ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾದ ಜಿಯೋ, ಇದೇ ಮಾದರಿಯಲ್ಲಿ ಕಡಿಮೆ ಬೆಲೆಗೆ ಫೀಚರ್ ಫೋನ್ ಅಂದರೆ ರೂ.999 ಇಲ್ಲವೇ ರೂ.1499ಕ್ಕೆ ನೀಡುವ ಭರವಸೆಯನ್ನು ನೀಡಿದೆ. ಅಲ್ಲದೇ ಕಡಿಮೆ ಬೆಲೆಗೆ ಲ್ಯಾಪ್‌ಟಾಪ್ ಸೇರಿದಂತೆ ಇನ್ನು ಹಲವು ಆಲೋಚನೆಯನ್ನು ಹೊಂದಿದೆ. ಆದರೆ ಇದೇ ಜಿಯೋ ಹೆಸರಿಗೆ ಕಳಂಕ ತರುತ್ತಿದೆ.
ಓದಿರಿ: ಎಪ್ರಿಲ್ 28ಕ್ಕೆ ನೋಕಿಯಾ 3310 ರೀಲಿಸ್: ಪ್ರೀ ಬುಕಿಂಗ್ ಆರಂಭ, ಬೆಲೆ ಎಷ್ಟು..?

ಜಿಯೋ ಹೆಸರಿನಲ್ಲಿ ಶುರುವಾಗಿದೆ ಮೋಸ:
ಜಿಯೋ ಕಡಿಮೆ ಬೆಲೆ ಗುಣಮಟ್ಟದ ಮತ್ತು ವೇಗದ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡಲು ತುದಿಗಾಲಿನಲ್ಲಿ ನಿಂತಿದೆ. ಇಲ್ಲದೇ ಈಗಾಗಲೇ ಜಿಯೋ ಡಿಟಿಹೆಚ್ ಲೋಕದಲ್ಲಿಯೂ ದರ ಸಮರ ನಡೆಸುವ ಮುನ್ಸುಚನೆ ನೀಡಿದೆ. ಈ ಹಿನ್ನಲೆಯಲ್ಲಿ ಹಲವರು ಜಿಯೋ ಹೆಸರು ಹೇಳಿಕೊಂಡು ಮೋಸ ಮಾಡಲು ಶುರುಮಾಡಿದ್ದಾರೆ. ಜಿಯೋ ನಂಬುವ ಗ್ರಾಹಕರನ್ನು ಮೋಸ ಮಾಡಲು ಮುಂದಾಗಿದ್ದಾರೆ.

ಆನ್‌ಲೈನಿನಲ್ಲಿ ಶುರುವಾಗಿ ವಂಚನೆ:
ಕೇವಲ 5000ಕ್ಕೆ ಜಿಯೋ 4G ಲ್ಯಾಪ್‌ಟಾಪ್ ನೀಡುವುದಾಗಿ ಜಾಹೀರಾತು ಆರಂಭವಾಗಿದ್ದು, ನೀವು ಜಾಹೀರಾತಿಗೆ ಮಾರುಹೋದರೆ ವಂಚನೆಗೆ ಗುರಿಯಾಗುವುದು ಖಂಡಿತ ಇಂತಹ ಜಾಹೀರಾತುಗಳ ಬಗ್ಗೆ ನೀವು ಸದಾ ಎಚ್ಚರದಿಂದ ಇರುವುದು ಉತ್ತಮ.

ಆನ್‌ಲೈನಲ್ಲಿ ಲಭ್ಯವಿರುವ ಜಾಹೀರಾತಿನ ಕುರಿತು:
ಆನ್‌ಲೈನಿನಲ್ಲಿ www.buyredmi.com/jiolaptop/ ಎಂಬ ಜಾಲತಾಣವು ಕೇವಲ 5000ಕ್ಕೆ ಜಿಯೋ 4G ಲ್ಯಾಪ್‌ಟಾಪ್ ನೀಡುವುದಾಗಿ ಜಾಹೀರಾತು ನೀಡಿದ್ದು, ಇದು ವಂಚನೆಯ ಜಾಲ ಎನ್ನಲಾಗಿದೆ. ಕಾರಣ ಈಗಾಗಲೇ ಜಿಯೋ ಲ್ಯಾಪ್‌ಟಾಪ್ ಬಿಡುಗಡೆ ಮಾಡಲು ಪ್ಲಾನ್ ಮಾಡಿರುವುದು ಸತ್ಯವಾದರು ಈ ಕುರಿತು ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಹಾಗಾಗಿ ಇದು ಸುಳ್ಳು.

ಪ್ರೀ ಬುಕಿಂಗ್ ಓಪನ್ ಎನ್ನಲಾಗಿದೆ:
ಈ ವೆಬ್ ಸೈಟ್ ಈಗಾಗಲೇ ಜಿಯೋ ಲ್ಯಾಪ್‌ಟಾಪ್ ಪ್ರೀ ಬುಂಕಿಂಗ್ ಓಪನ್ ಆಗಿದ್ದು, ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಿ ಲಾಂಗ್ ಇನ್ ಆಗುವ ಮೂಲಕ ಜಿಯೋ ಲ್ಯಾಪ್‌ಟಾಪ್ ಪ್ರೀ ಬುಕ್ ಮಾಡಿರಿ ಎಂಬ ಆಮಿಷವನ್ನು ಓಡ್ಡುತ್ತಿದೆ.

ಕ್ಯಾಷ್ ಆನ್ ಡಿಲಿವರಿ ಲಭ್ಯ:
ಈ ವೈಬ್‌ಸೈಟ್ ಕ್ಯಾಷ್ ಆನ್ ಡಿಲಿವಲಿ ಆಯ್ಕೆಯನ್ನು ನೀಡುತ್ತಿದ್ದು, ನೀವು ಪ್ರೀ ಬುಕ್ ಮಾಡಲು ನಿಮ್ಮ ಮಾಹಿತಿಯನ್ನು ನೀಡಿದರೆ ಸಾಕು ನಿಮ್ಮ ಮನೆಯ ಬಾಗಿಲಿಗೆ ಜಿಯೋ ಲ್ಯಾಪ್‌ಟಾಪ್ ಬರಲಿದ್ದು, ಇದುವೇ ಕೇವಲ ರೂ. 5000ಕ್ಕೆ.

1TD ಹಾರ್ಡ್ ಡಿಸ್ಕ್ ಇದರಲ್ಲಿದೆಯಂತೆ:
ಈ ವೆಬ್ ಸೈಟಿನಲ್ಲಿ ನೀಡಿರುವ ಮಾಹಿತಿಯಂತೆ ಜಿಯೋ 4G ಲ್ಯಾಪ್‌ಟಾಪ್‌ನಲ್ಲಿ 1 TB ಹಾರ್ಡ್‌ಡಿಸ್ಕ್ ಇದೆಯಂತೆ. ಅಲ್ಲದೇ ಇದರೊಂದಿಗೆ 4GB RAM ಸಹ ಅಳವಡಿಸಲಾಗಿದೆ ಎಂದು ಜಾಹೀರಾತು ನೀಡಿದೆ.

4G ಸಿಮ್ ಸ್ಲಾಟ್:
ಈಗಾಗಲೇ ದೊರೆತಿರುವ ಮಾಹಿತಿಯಂತೆ ಜಿಯೋ ಬಿಡುಗಡೆ ಮಾಡಲಿರುವ 4G ಲ್ಯಾಪ್‌ಟಾಪ್‌ನಲ್ಲಿ 4G ಸಿಮ್ ಹಾಕುವ ಸಾಧ್ಯತೆ ಇದ್ದು, ಇದಕ್ಕಾಗಿಯೇ ಸ್ಲಾಟ್ ಒಂದನ್ನು ನೀಡಿದೆ. ಅಲ್ಲದೇ 13.3 ಇಂಚಿನ ಪರದೆಯೂ ಇದರಲ್ಲಿದೆ.

4G ಲ್ಯಾಪ್‌ಟಾಪ್ ನಲ್ಲಿ ಜಿಯೋ ಆಪ್‌ಗಳು:
ಜಿಯೋ ತನ್ನ 4G ಸೇವೆಯನ್ನು ಬಳಸುತ್ತಿರುವ ಗ್ರಾಹಕರಿಗೆ ನೀಡಿರುವ ಮಾದರಿಯಲ್ಲಿ ಲ್ಯಾಪ್‌ಟಾಪ್ ಬಳಕೆದಾರರಿಗೂ ತನ್ನ ಆಫ್‌ಗಳನ್ನು ಮುಕ್ತವಾಗಿ ಬಳಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ ಎನ್ನಲಾಗಿದೆ.

ವಿಂಡೋಸ್ 10:
ಜಿಯೋ ಲಾಪ್ ಟಾಪ್ ವಿಂಡೋಸ್ 10 ಕಾರ್ಯಚರಣೆ ನಡೆಸಲಿದೆ ಎನ್ನಲಾಗಿದೆ. ಈಗಾಗಲೇ ಜಿಯೋ ಲ್ಯಾಪ್‌ಟಾಪ್ ಅಂತಿಮ ಹಂತದಲ್ಲಿದ್ದು, ಶೀಘ್ರವ ಮಾರುಕಟ್ಟೆಗೆ ಬರಲಿದೆ.

ಆದರೆ ಕಾಯಬೇಕು:
ಈ ಮೇಲಿನಂತೆ ಹೇಳಿರುವಂತೆ ಕೇವಲ 5000ರೂಗಳಿಗೆ ಲಭ್ಯವಿರುವುದಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಲ್ಯಾಪ್‌ಟಾಪ್ ದೊರೆಯುವುದಂತೂ ಖಂಡಿತ ಆದರೆ ಇದಕ್ಕೆ ಸ್ವಲ್ಪ ದಿನ ಕಾಯಲೇಬೇಕು.


Click it and Unblock the Notifications








