Home
ಸುದ್ದಿಜಾಲ

ಶಾಕಿಂಗ್‌! ನಾಳೆಯಿಂದ ಈ ಡಿವೈಸ್‌ಗಳಲ್ಲಿ ಅಲೆಕ್ಸಾ ಸ್ಥಗಿತ!

ಅಲೆಕ್ಸಾ ಅಮೆಜಾನ್‌ನ ವಾಯ್ಸ್‌ ಎಐ ಆಗಿದ್ದು, ಈ ಮೂಲಕ ಬಳಕೆದಾರರು ತಮಗೆ ಬೇಕಾದ ಅಗತ್ಯ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳುತ್ತಿದ್ದಾರೆ. ಅಂದರೆ, ಪ್ರಸ್ತುತ ಹವಾಮಾನ, ವಿಕಿಪೀಡಿಯಾ ಲೇಖನಗಳಿಗೆ ಪ್ರವೇಶಿಸುವುದು ಸೇರಿದಂತೆ ಇನ್ನೂ ಅನೇಕ ಸೌಲಭ್ಯಗಳು ಇದರಿಂದ ಲಭ್ಯ ಇವೆ. ಆದರೆ ಈ ಡಿವೈಸ್‌ಗಳಲ್ಲಿ ಇನ್ಮುಂದೆ ಅಲೆಕ್ಸಾ (Alexa) ಕೆಲಸ ಮಾಡುವುದಿಲ್ಲ.

ಹೌದು, ಅಲೆಕ್ಸಾ ಸೆಪ್ಟೆಂಬರ್ 29 ರಿಂದ ಕೆಲವು ಜನಪ್ರಿಯ ಡಿವೈಸ್‌ಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಅಂದರೆ ಅಮೆಜಾನ್‌ನ ಜನಪ್ರಿಯ ವಾಯ್ಸ್‌ ಅಸಿಸ್ಟೆಂಟ್‌ ಅಲೆಕ್ಸಾ(Voice assistant Alexa) ಗೂಗಲ್ ನೆಸ್ಟ್ ಕಿಟ್‌ನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂದು ಗೂಗಲ್‌ ಸಹ ಹೇಳಿದೆ. ಹಾಗಿದ್ರೆ, ಏನಿದು ಹೊಸ ಬೆಳವಣಿಗೆ?, ಬಳಕೆದಾರರು ತಮ್ಮ ಸ್ಮಾರ್ಟ್ ನೆಸ್ಟ್ ಡಿವೈಸ್‌ಗಳಲ್ಲಿ ವಾಯ್ಸ್‌ ಅಸಿಸ್ಟೆಂಟ್ ಬಳಸುವುದನ್ನು ಮುಂದುವರಿಸಲು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.

ಶಾಕಿಂಗ್‌! ನಾಳೆಯಿಂದ ಈ ಡಿವೈಸ್‌ಗಳಲ್ಲಿ ಅಲೆಕ್ಸಾ ಸ್ಥಗಿತ!

ಅಮೆಜಾನ್‌ನ ಜನಪ್ರಿಯ ವಾಯ್ಸ್‌ ಅಸಿಸ್ಟೆಂಟ್ ಅಲೆಕ್ಸಾ ಗೂಗಲ್ ನೆಸ್ಟ್ ಕಿಟ್‌ನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಏಕೆಂದರೆ ಸರ್ಚ್‌ ಇಂಜಿನ್‌ ದೈತ್ಯ ಅಲೆಕ್ಸಾಗಾಗಿ ಲೆಗಸಿ ನೆಸ್ಟ್ ಸ್ಕಿಲ್ಸ್‌ಗೆ ಬೆಂಬಲವನ್ನು ಕೊನೆಗೊಳಿಸುತ್ತಿದೆ ಎಂದು ಘೋಷಿಸಿದೆ. ಈ ಸ್ಥಗಿತಗೊಳಿಸುವಿಕೆಯು ಸೆಪ್ಟೆಂಬರ್ 29 ರಿಂದ ನಡೆಯಲಿದೆ. ಜೊತೆಗೆ ಬಳಕೆದಾರರು ತಮ್ಮ ಸ್ಮಾರ್ಟ್ ನೆಸ್ಟ್ ಡಿವೈಸ್‌ಗಳಲ್ಲಿ ವಾಯ್ಸ್‌ ಅಸಿಸ್ಟೆಂಟ್ ಅನ್ನು ಬಳಸಲು ಗೂಗಲ್ ನೆಸ್ಟ್ ಕೌಶಲ್ಯಕ್ಕೆ ಬದಲಾಯಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಈ ಸಂಬಂಧ ಗೂಗಲ್‌ ಬ್ಲಾಗ್‌ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಸೆಪ್ಟೆಂಬರ್ 29, 2023 ರ ನಂತರ ಅಲೆಕ್ಸಾಗಾಗಿ ಲೆಗಸಿ ನೆಸ್ಟ್ ಸ್ಕಿಲ್ಸ್ ಅನ್ನು ಬೆಂಬಲಿಸುವುದಿಲ್ಲ ಎಂದು ಉಲ್ಲೇಖಿಸಲಾಗಿದ್ದು, ಅಲೆಕ್ಸಾ ಜೊತೆಗೆ ನೆಸ್ಟ್ ಡಿವೈಸ್‌ಗಳನ್ನು ನಿಯಂತ್ರಿಸುವುದನ್ನು ಮುಂದುವರಿಸಲು, ನೀವು ನಿಮ್ಮ ನೆಸ್ಟ್ ಖಾತೆಯನ್ನು ಗೂಗಲ್‌ ಗೆ ವರ್ಗಾಯಿಸಬೇಕು ಮತ್ತು ಅಲೆಕ್ಸಾ ಗಾಗಿ ಹೊಸ ಗೂಗಲ್‌ ನೆಸ್ಟ್‌ ಸ್ಕಿಲ್ ಅನ್ನು ಸಕ್ರಿಯಗೊಳಿಸಬೇಕು. ನೀವು ಈಗಾಗಲೇ ಹೊಸ ಸ್ಕಿಲ್‌ ಬಳಸುತ್ತಿದ್ದರೆ ನಂತರ ನೀವು ಯಾವುದೇ ಬದಲಾವಣೆಗಳನ್ನು ಮಾಡುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಈ ಮೂಲಕ ಬಳಕೆದಾರರು ನಿಟ್ಟುಸಿರು ಬಿಡುವಂತೆ ಮಾಡಿದೆ.

ಹಾಗಿದ್ರೆ ಬಳಕೆದಾರರು ಮಾಡಬೇಕಿರುವುದೇನು?:
* ಹಳೆಯ ನೆಸ್ಟ್ ಅಲೆಕ್ಸಾವನ್ನು ನಿಷ್ಕ್ರಿಯಗೊಳಿಸಿ: ನಿಮ್ಮ ಅಲೆಕ್ಸಾ ಖಾತೆಯಿಂದ ನಿಮ್ಮ ಐಫೋನ್‌ ಅಥವಾ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಅಲೆಕ್ಸಾ ಅಲೆಕ್ಸಾ ವಿಭಾಗಕ್ಕೆ ಹೋಗಿ. ನಂತರ ಮೋರ್‌ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಇದಾದ ಬಳಿಕ ಸ್ಕಿಲ್‌ ಮತ್ತು ಗೇಮ್‌ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಆಯ್ಕೆ ಮಾಡಿದ್ರೆ ಅಲ್ಲಿ ನಿಮ್ಮ ಸ್ಕಿಲ್‌ ಅನ್ನು ಹುಡುಕಿ ಮೇಲೆ ಕ್ಲಿಕ್‌ ಮಾಡಿ ನೆಸ್ಟ್ ಅಲೆಕ್ಸಾ ಸ್ಕಿಲ್ ಆಯ್ಕೆ ಮೇಲೆ ಟ್ಯಾಪ್‌ ಮಾಡಿ ಅದನ್ನು ನಿಷ್ಕ್ರಿಯಗೊಳಿಸಿ.

* ನೆಸ್ಟ್‌ ಡಿವೈಸ್‌ ಅಳಿಸಿ: ಅಲೆಕ್ಸಾ ಆಪ್‌ಗೆ ಹೋಗುವ ಮೂಲಕ ಕನೆಕ್ಟ್‌ ಆಗಿರುವ ಎಲ್ಲಾ ನೆಸ್ಟ್‌ ಡಿವೈಸ್‌ಗಳನ್ನು ಹಸ್ತಚಾಲಿತವಾಗಿ ತೆಗೆದುಹಾಕಿ. ಇದಕ್ಕಾಗಿ ನೀವು ಆಪ್‌ನ ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು ನೀವು ತೆಗೆದುಹಾಕಲು ಬಯಸುವ ಎಲ್ಲಾ ನೆಸ್ಟ್‌ ಡಿವೈಸ್‌ಗಳ ಲಿಸ್ಟ್ ಆಯ್ಕೆ ಮಾಡಿ. ನಂತರ ತೆಗೆದುಹಾಕಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿದ್ರೆ ಸಾಕು.

ಶಾಕಿಂಗ್‌! ನಾಳೆಯಿಂದ ಈ ಡಿವೈಸ್‌ಗಳಲ್ಲಿ ಅಲೆಕ್ಸಾ ಸ್ಥಗಿತ!

* ಹೊಸ ಗೂಗಲ್‌ ನೆಸ್ಟ್‌ ಅಲೆಕ್ಸಾ ಸ್ಕಿಲ್‌ ಅನ್ನು ಸಕ್ರಿಯಗೊಳಿಸಿ: ಇದರೊಂದಿಗೆ ಗೂಗಲ್‌ ಹೋಮ್ ಆಪ್‌ನಿಂದ ಹೊಸ ಗೂಗಲ್‌ ನೆಸ್ಟ್‌ ಅಲೆಕ್ಸಾ ಸ್ಕಿಲ್‌ (Google Nest Alexa) ಆನ್ ಮಾಡಿ. ಬಳಿಕ ಗೂಗಲ್‌ ಹೋಮ್ ಆಪ್‌ನ ಕೆಳಗಿನ ಸೆಟ್ಟಿಂಗ್‌ಗಳನ್ನು ಕ್ಲಿಕ್ ಮಾಡಿ ಬಳಿಕ + ಐಕಾನ್ ಟ್ಯಾಪ್ ಮಾಡಿ. ಇದೆಲ್ಲವನ್ನು ಮಾಡಿದ ಮೇಲೆ ಅಮೆಜಾನ್‌ ಅಲೆಕ್ಸಾ ಸ್ಕಿಲ್‌ ಆಯ್ಕೆ ಮೇಲೆ ಟ್ಯಾಪ್ ಮಾಡಿ ಮತ್ತು ಅಲೆಕ್ಸಾ ಆಪ್‌ನಲ್ಲಿ ನಿಮ್ಮ ಸ್ಕಿಲ್‌ ಅನ್ನು ಸಕ್ರಿಯಗೊಳಿಸಲು ಅಲ್ಲಿ ನೀಡಲಾಗುವ ಸೂಚನೆಗಳನ್ನು ಅನುಸರಿಸಿ.

Best Mobiles in India

English summary
Alexa will stop working on some popular devices starting September 29. That means Amazon's popular voice assistant Alexa will stop working on the Google Nest Kit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+