SMS ಬ್ಯಾನ್: ಅಸಲಿ ಸಂಗತಿಗಳು

By Varun
|

SMS ಬ್ಯಾನ್: ಅಸಲಿ ಸಂಗತಿಗಳು
ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಜನರ ಮೇಲಿನ ಪ್ರಚೋದಕ ಮೆಸೇಜ್ ಹಾಗು MMS ಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು 15 ದಿನಗಳ ಕಾಲ ದಿನಕ್ಕೆ 5 sms ಮಾತ್ರ ಮಾಡಬೇಕು ಅಂತ ನಿರ್ಬಂಧಿಸಿರೋದು ಹಲವರಿಗೆ ತುಂಬಾ ಕಷ್ಟಕರವಾಗಿದೆ.

ಇದರಿಂದಾಗಿ ಜನರಿಗಷ್ಟೆ ಅಲ್ಲದೆ ಮೊಬೈಲ್ ಸೇವೆ ನೀಡುವ ಕಂಪನಿಗಳೂ ನಷ್ಟ ಅನುಭವಿಸುವಂತಾಗಿದ್ದು ಯಾರ್ಯಾರಿಗೆ ಯಾವ ರೀತಿ ಪರಿಣಾಮ ಬೀರಿದೆ ಅಂತ ನೋಡಿ:

1) ಭಾರತದ ಪ್ರೀ-ಪೇಡ್ ಗ್ರಾಹಕರು: ದೇಶದಲ್ಲಿ 95 ಕೋಟಿ ಮೊಬೈಲ್ ಚಂದಾದಾರರಿದ್ದು ಅದರಲ್ಲಿ 96 % ಜನ ಪ್ರೀ-ಪೇಡ್ ಗ್ರಾಹಕರು.

sms: ದಿನಕ್ಕೆ 5 ಮಾತ್ರ

mms: ದಿನಕ್ಕೆ 5 ಮಾತ್ರ ( 25 KB ಮೀರಬಾರದು)

2)ಭಾರತದ ಪೋಸ್ಟ್ ಪೇಡ್ ಗ್ರಾಹಕರು: ಇವರಿಗೆ sms ಬ್ಯಾನ್ ಇಲ್ಲ. ಯಾಕೆಂದರೆ ಟೆಲಿಕಾಂ ಕಂಪನಿಗಳ ಪ್ರಕಾರ ಈ ಗ್ರಾಹಕರ ಮೇಲೆ ಇದನ್ನು ವಿಧಿಸುವುದು ಕಷ್ಟ.

3) ವ್ಯವಹಾರಿಕ ಕಂಪನಿಗಳು: ಬ್ಯಾಂಕ್, ಏರ್ ಲೈನ್, ರೈಲ್ವೆ, ಸ್ಟಾಕ್ ಬ್ರೋಕಿಂಗ್, ಟ್ಯಾಕ್ಸಿ, ಮನರಂಜನೆ ವೆಬ್ಸೈಟ್, ಮಲ್ಟಿಪ್ಲೆಕ್ಸ್ ಗಳಿಗೆ ಈ ಬ್ಯಾನ್ ಅನ್ವಯಿಸುವುದಿಲ್ಲ.

4) ಒಟ್ಟಾರೆ ಬ್ಯಾನ್ ಅವಧಿ: 15 ದಿನಗಳು (ಆಗಸ್ಟ್ 18- ಸೆಪ್ಟೆಂಬರ್ 2)

5) ಬ್ಯಾನ್ ತಪ್ಪಿಸಿಕೊಳ್ಳುವ ಬಗೆ: ಉಚಿತ sms ವೆಬ್ಸೈಟ್ ಉಪಯೋಗಿಸಿ ಇಲ್ಲವೆ ಸ್ಮಾರ್ಟ್ ಫೋನ್ ಇದ್ದರೆ WhatsApp ಉಪಯೋಗಿಸಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X