Home
ಸುದ್ದಿಜಾಲ

ಬೆಂಗಳೂರಿನ ವಕೀಲೆಗೆ ವಿಚಿತ್ರ ರೀತಿಯಲ್ಲಿ ಆನ್‌ಲೈನ್‌ ವಂಚನೆ! ತಿಳಿದ್ರೆ ಶಾಕ್‌ ಆಗ್ತೀರಾ...

ಆನ್‌ಲೈನ್‌ ವಂಚನೆ (Online fraud) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಈ ಘಟನೆಗಳು ಹೆಚ್ಚಾದರೂ ಸಹ ಜನರು ಮಾತ್ರ ಇದರಿಂದ ಎಚ್ಚೆತ್ತುಕೊಳ್ಳುತ್ತಿಲ್ಲ. ಅದರಂತೆ ಇಲ್ಲೊಂದು ಘಟನೆಯಲ್ಲಿ ಮಹಿಳೆಯನ್ನು ವಿವಿಧ ರೀತಿಯಲ್ಲಿ ಆನ್‌ಲೈನ್‌ ಮೂಲಕವೇ ಬೆದರಿಸಿ ವಂಚನೆ ಮಾಡಲಾಗಿದೆ.

ಹೌದು, ಸಿಲಿಕಾನ್‌ ಸಿಟಿ ಬೆಂಗಳೂರು ಈ ರೀತಿಯ ಘಟನೆಗೆ ಸಾಕ್ಷಿಯಾಗಿದೆ. ಮಹಿಳೆಯೊಬ್ಬರು ವಂಚನೆಗೆ ಬಲಿಯಾಗಿದ್ದಾರೆ. ಅಲ್ಲದೆ ಈ ವೇಳೆ ಕ್ಯಾಮೆರಾ ಮುಂದೆ ವಿವಸ್ತ್ರವಾಗಿ ನಿಲ್ಲುವಂತೆ ಒತ್ತಾಯ ಮಾಡಿದ್ದಾರೆ ಸ್ಕ್ಯಾಮರ್‌ಗಳು. ಹಾಗಿದ್ರೆ, ಈ ಘಟನೆ ನಡೆದಿದ್ದು ಹೇಗೆ?, ಈ ರೀತಿಯ ವಂಚನೆಗಳಿಂದ ಪಾರಾಗುವುದು ಹೇಗೆ ಅನ್ನೋ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಬೆಂಗಳೂರಿನ ವಕೀಲೆಗೆ ವಿಚಿತ್ರ ರೀತಿಯಲ್ಲಿ ಆನ್‌ಲೈನ್‌ ವಂಚನೆ! ಶಾಕ್‌ ಆಗ್ತೀರಾ...

ಮಹಿಳೆಗೆ ವಂಚನೆ: ಸ್ಕ್ಯಾಮರ್‌ಗಳು ಫೆಡ್ಎಕ್ಸ್ ಉದ್ಯೋಗಿಗಳಂತೆ ನಟಿಸಿ ಮಾದಕವಸ್ತು ಪ್ರಕರಣದಲ್ಲಿ ಭಾಗಿಯಾಗಿದ್ದೀರಿ ಎಂದು ಮಹಿಳೆಯನ್ನು ಬೆದರಿಸಿ ಈ ಕೃತ್ಯ ಎಸಗಿದ್ದಾರೆ. ಇನ್ನು ಸಂತ್ರಸ್ತೆಯನ್ನು ಖಾಸಗಿ ಸಂಸ್ಥೆಯೊಂದರ ವಕೀಲೆ ಭುವಿ ಎಂದು ಗುರುತಿಸಲಾಗಿದೆ. ಅವರು 36 ಗಂಟೆಗಳ ಕಾಲ ತಾವು ಅನುಭವಿಸಿದ ನೋವನ್ನು ಇದೀಗ ತೋಡಿಕೊಂಡಿದ್ದಾರೆ.

ಫೆಡ್ಎಕ್ಸ್ ಪ್ರತಿನಿಧಿ ಎಂದು ಹೇಳಿಕೊಂಡು ವ್ಯಕ್ತಿಯೋರ್ವ ಕರೆ ಮಾಡಿ ಥೈಲ್ಯಾಂಡ್‌ಗೆ ಕಾನೂನುಬಾಹಿರ ವಸ್ತುಗಳನ್ನು ಕಳುಹಿಸಲಾಗುತ್ತಿದೆ. ಇವು ನಿಮ್ಮ ಹೆಸರಿನಲ್ಲಿ ಇವೆ ಎಂದು ಹೇಳಿದ್ದಾನೆ. ಇದಾದ ನಂತರದಲ್ಲಿ ಪೊಲೀಸ್‌ ಅಧಿಕಾರಿ ಎಂದು ಹೇಳಿಕೊಳ್ಳುವ ವ್ಯಕ್ತಿಯೋರ್ವ ಕರೆ ಮಾಡಿ ಸ್ಕೈಪ್ ಅನ್ನು ಡೌನ್‌ಲೋಡ್ ಮಾಡುವಂತೆ ತಿಳಿಸಿದ್ದಾನೆ. ಅಲ್ಲದೆ ನೀವು ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರಿ ಎಂದು ಆರೋಪಿಸಿ ವೈಯಕ್ತಿಕ ಮಾಹಿತಿಯನ್ನು ಕೇಳಲು ಮುಂದಾಗಿದ್ದಾನೆ.

ಆಕೆಯ ಅಪರಾಧಗಳನ್ನು ತನಿಖೆ ಮಾಡುವ ನೆಪದಲ್ಲಿ, ಅಭಿಷೇಕ್ ಚೌಹಾಣ್ ಎಂದು ಹೇಳಿಕೊಂಡ ನಕಲಿ ಪೊಲೀಸ್ ಅಧಿಕಾರಿ, ಮಹಿಳೆಯನ್ನು ತನ್ನ ಕ್ಯಾಮೆರಾವನ್ನು ಆನ್‌ನಲ್ಲಿ ಇರಿಸಿಕೊಳ್ಳಲು ಮತ್ತು ಅವಳು ಮಲಗಿರುವಾಗಲೂ ಸಹ ಕ್ಯಾಮೆರಾವನ್ನು ಆನ್‌ ಆಗಿಯೇ ಇಟ್ಟುಕೊಳ್ಳುವಂತೆ ಹೇಳಿದ್ದಾನೆ. ಇದೇ ವೇಳೆ ಚೌಹಾಣ್ ಬ್ಯಾಂಕ್ ವಿವರಗಳು ಮತ್ತು ಹಣಕಾಸಿನ ಮಾಹಿತಿಯನ್ನು ತನಿಖೆಗಾಗಿ ಹಂಚಿಕೊಳ್ಳುವಂತೆ ತಿಳಿಸಿದ್ದಾನೆ.

ಬೆಂಗಳೂರಿನ ವಕೀಲೆಗೆ ವಿಚಿತ್ರ ರೀತಿಯಲ್ಲಿ ಆನ್‌ಲೈನ್‌ ವಂಚನೆ! ಶಾಕ್‌ ಆಗ್ತೀರಾ...

ಇದೆಲ್ಲಾ ಆದ ಮೇಲೆ ವಂಚಕರು ಭುವಿಯನ್ನು ಅವರ ಖಾತೆಗೆ 10.7 ಲಕ್ಷ ರೂ.ಗಳನ್ನು ವರ್ಗಾಯಿಸುವಂತೆ ತಿಳಿಸಿದ್ದಾರೆ. ಈ ವೇಳೆ ಆಕೆಯ ಕ್ರೆಡಿಟ್ ಕಾರ್ಡ್ ಬಳಸಿ ವಹಿವಾಟು ಹಣ ಪಡೆದುಕೊಂಡಿದ್ದಾರೆ. ಬಳಿಕ ಡ್ರಗ್ ಪರೀಕ್ಷೆಯ ನೆಪದಲ್ಲಿ ಆಕೆಯನ್ನು ವಿವಸ್ತ್ರವಾಗುವಂತೆ ತಿಳಿಸಿದ್ದಾರೆ. ನೀವು ನಾವು ಹೇಳಿದ ಹಾಗೆ ಕೇಳಲಿಲ್ಲ ಎಂದರೆ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ವಕೀಲೆ ಕರೆಯನ್ನು ಕಡಿತಗೊಳಿಸಿ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಕಾನೂನು ಜಾರಿ ಅಧಿಕಾರಿಗಳು ಪ್ರಸ್ತುತ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದು, ಫೆಡ್ಎಕ್ಸ್ ಗ್ರಾಹಕರಿಂದ ಎಂದಿಗೂ ವೈಯಕ್ತಿಕ ಮಾಹಿತಿಯನ್ನು ಕೋರುವುದಿಲ್ಲ ಎಂದು ಜನರಿಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಇಂಥಹ ಕರೆ ಬಂದಾಗ ಸಾರ್ವಜನಿಕರು ಜಾಗರೂಕರಾಗಿರಬೇಕು ಮತ್ತು ಅನುಮಾನಾಸ್ಪದ ಎನಿಸಿದರೆ ಕೂಡಲೇ ಅಧಿಕಾರಿಗಳಿಗೆ ತಿಳಿಸುವಂತೆ ಪೊಲೀಸರು ಜನರನ್ನು ಕೇಳಿಕೊಂಡಿದ್ದಾರೆ.

ಇನ್ನು ಈ ಆನ್‌ಲೈನ್‌ ವಂಚನೆಯ ಭಾಗವಾಗಿ ಸ್ಕ್ಯಾಮರ್‌ಗಳು ತುರ್ತುಸ್ಥಿತಿಯನ್ನು ಉಂಟು ಮಾಡಲು ಪ್ರಯತ್ನಿಸುತ್ತಾರೆ ಆದ್ದರಿಂದ ನೀವು ಹೆದರಿಕೊಂಡು ಯಾವುದೇ ಕಾರಣಕ್ಕೂ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ಮುಂದಾಗಬೇಡಿ. ಅಲ್ಲದೆ ಬಹುಮಾನ ಅಥವಾ ಹೆಚ್ಚಿನ ಆದಾಯದ ಭರವಸೆಗಳನ್ನು ನೀಡುತ್ತಾರೆ. ಅಂದರೆ ನಿಮ್ಮ ಹಣವನ್ನು 3 ತಿಂಗಳಲ್ಲಿ ದ್ವಿಗುಣಗೊಳಿಸುತ್ತೇವೆ ಎಂದು ಹೇಳುವ ವ್ಯಕ್ತಿಗಳ ಕರೆಯನ್ನು ತಕ್ಷಣವೇ ಕಟ್‌ ಮಾಡಿ.

ಬೆಂಗಳೂರಿನ ವಕೀಲೆಗೆ ವಿಚಿತ್ರ ರೀತಿಯಲ್ಲಿ ಆನ್‌ಲೈನ್‌ ವಂಚನೆ! ಶಾಕ್‌ ಆಗ್ತೀರಾ...

ಇದರ ಜೊತೆಗೆ ಸ್ಕ್ಯಾಮರ್‌ಗಳು ಸರ್ಕಾರಿ ಏಜೆನ್ಸಿಗಳು, ದತ್ತಿ ಸಂಸ್ಥೆಗಳು, ಬ್ಯಾಂಕ್‌ಗಳು ಅಥವಾ ದೊಡ್ಡ ಕಂಪನಿಗಳ ಹೆಸರನ್ನು ಹೇಳಿಕೊಂಡು ಕರೆ ಮಾಡುತ್ತಾರೆ. ಹಾಗೆಯೇ ಶಿಪ್ಪಿಂಗ್ ವೆಚ್ಚಗಳು ಅಥವಾ ಇತರ ಶುಲ್ಕಗಳನ್ನು ಪಾವತಿಸಲು ಸ್ಕ್ಯಾಮರ್‌ಗಳು ನಿಮ್ಮನ್ನು ಕೇಳಬಹುದು. ಈ ವೇಳೆ ನಿಮ್ಮ ಯಾವುದೇ ಬ್ಯಾಂಕ್‌ ಮಾಹಿತಿಯನ್ನು ಶೇರ್‌ ಮಾಡಿಕೊಳ್ಳಬೇಡಿ ಹಾಗೂ ಅವರು ಕಳುಹಿಸುವ ಯಾವುದೇ ಲಿಂಕ್‌ ಅನ್ನು ಕ್ಲಿಕ್‌ ಮಾಡಬೇಡಿ.

Best Mobiles in India

English summary
Silicon City Bangalore is a witness to this kind of incident. A woman is a victim of online fraud. Also this time the scammers have forced them to stand undress in front of the camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+