ಬೆಂಗಳೂರಿನ ಸ್ಮಾರ್ಟ್ ಜನರಿಗೆ ಆನ್‌ಲೈನ್ ಬಟ್ಟೆ ಒಗೆಯುವ ಆಪ್
ಒಂದೇ ಒಂದು ಬಟನ್ ಕ್ಲಿಕ್ ಆಗುವುದರಲ್ಲಿ ನಿಮ್ಮ ಬಟ್ಟೆ ಹೊಸತರಂತೆ ಕಂಗೊಳಿಸುವುದನ್ನು ನೋಡಬೇಕೆಂಬ ಬಯಕೆಯೇ? ಹಾಗಿದ್ದರೆ ನಿಮ್ಮ ಆಸೆ ಇದೀಗ ಈಡೇರಲಿದೆ. ಹೌದು ಮೈವಾಶ್ ಎಂಬ ಆನ್‌ಲೈನ್ ಲಾಂಡ್ರಿ ಸೇವೆ ಭಾರತದಲ್ಲಿ ಆನ್‌ಲೈನ್ ಮೂಲಕ ಡ್ರೈವಾಶ್ ಸೇವೆಯನ್ನು ನಿಮಗೆ ಒದಗಿಸಲಿದೆ. ಇದೊಂದು ಸರಳ ಮತ್ತು ಪ್ರಯೋಜನಕಾರಿ ಅಂತೆಯೇ ಸರಳ ಡ್ರೈ ಕ್ಲೀನಿಂಗ್ ಸೌಲಭ್ಯವನ್ನು ಭಾರತೀಯರಿಗೆ ನೀಡಲಿದೆ.
ಓದಿರಿ: ರಕ್ತವರ್ಣ ಚಂದ್ರನ ಆಗಮನ: ವಿಶ್ವಕ್ಕೆ ಅಂತ್ಯದ ಸೂಚನೆ
ಇಂದಿನ ಲೇಖನದಲ್ಲಿ ಈ ವೆಬ್‌ಸೈಟ್‌ನ ಮೈವಾಶ್ ಅಪ್ಲಿಕೇಶನ್ ಅನ್ನು ಹೊರತಂದಿದ್ದು ನಿಮ್ಮ ಫೋನ್ ಅಥವಾ ಟ್ಯಾಬ್ಲೇಟ್‌ನಲ್ಲಿ ಇದನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಕೆಲಸವನ್ನು ನೆರವೇರಿಸಿಕೊಳ್ಳಬಹುದಾಗಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಅಪ್ಲಿಕೇಶನ್ ಕಾರ್ಯನಿರ್ವಹಣೆಯನ್ನು ನೋಡೋಣ

ಬೆಂಗಳೂರು ಆಧಾರಿತ ಲಾಂಡ್ರಿ ಸೇವೆ
ಬೆಂಗಳೂರು ಆಧಾರಿತ ಲಾಂಡ್ರಿ ಸೇವೆ ಅಪ್ಲಿಕೇಶನ್ ಮೈವಾಶ್‌ನೊಂದಿಗೆ ದಕ್ಷಿಣ ಆಫ್ರಿಕಾದ ಮಾಧ್ಯಮ ಮತ್ತು ಇಂಟರ್ನೆಟ್ ಸಂಸ್ಥೆ ನಾಸ್ಪರ್ಸ್ ಇದೀಗ ಕೈಜೋಡಿಸಲಿದೆ.

ನಾಸ್ಪರ್ಸ್ ಸಂಸ್ಥೆ
ನಾಸ್ಪರ್ಸ್ ಸಂಸ್ಥೆ ಮೈವಾಶ್‌ಗೆ ಹೂಡಿಕೆಯನ್ನು ಮಾಡಲಿದ್ದು ರೂ 107 ಕೋಟಿಯಷ್ಟು ಬಂಡವಾಳವನ್ನು ತೊಡಗಿಸಲಿದೆ. ಭಾರತದಲ್ಲಿ ಇದು ಹೂಡಿಕೆ ಮಾಡಲಿರುವ ಅತಿದೊಡ್ಡ ಮೊತ್ತವಾಗಿದೆ.

ಜಾಹೀರಾತು ಸಂಸ್ಥೆ
ಫ್ಲಿಪ್‌ಕಾರ್ಟ್, ರೆಡ್‌ಬಸ್‌ಗೆ ಹೂಡಿಕೆ ಮಾಡಿರುವ ನಾಸ್ಪರ್ಸ್ ಓಎಲ್ಎಕ್ಸ್‌ನಂತಹ ಜಾಹೀರಾತು ಸಂಸ್ಥೆಗಳಿಗೆ ಸಹಾಯವನ್ನು ಒದಗಿಸುತ್ತಿದೆ.

48-72 ಗಂಟೆ
ಮೈ ವಾಶ್ ಅಪ್ಲಿಕೇಶನ್ ಮೂಲಕ ಬಳಕೆದಾರರು ಆರ್ಡರ್ ಅನ್ನು ತೆಗೆದುಕೊಳ್ಳಬಹುದು ಮತ್ತು ಇದು 48-72 ಗಂಟೆಯೊಳಗೆ ಪ್ಲಾಸ್ಟಿಕ್ ಅಲ್ಲದ ಚೀಲಗಳಲ್ಲಿ ಗ್ರಾಹಕರಿಗೆ ತೊಳೆದ ಬಟ್ಟೆಗಳನ್ನು ಒದಗಿಸುತ್ತದೆ.

ಅದ್ಭುತ ಲಾಂಡ್ರಿ ಸೇವೆ
ಅದ್ಭುತ ಲಾಂಡ್ರಿ ಸೇವೆಯನ್ನು ಒದಗಿಸುವುದರೊಂದಿಗೆ, ಒನ್-ಸ್ಟಾಪ್ ಲಾಂಡ್ರಿ ಕೇಂದ್ರ, ಲಾಂಡ್ರಿ ಅಪ್ಲಿಕೇಶನ್, ಡ್ರೈ ಕ್ಲೀನಿಂಗ್ ಸೇವೆಯನ್ನು ಗ್ರಾಹಕರಿಗೆ ಒದಗಿಸುತ್ತದೆ.

ಬೆಂಗಳೂರಿನಲ್ಲಿ ಈ ಸೇವೆಯು
ಇನ್ನು ಬೆಂಗಳೂರಿನಲ್ಲಿ ಈ ಸೇವೆಯು ಕೋರಮಂಗಲ, ಎಚ್‌ಎಸ್‌ಆರ್, ಬಿಟಿಎಮ್, ಬೆಲ್ಲಂದೂರು, ಡೊಮ್ಲೂರು, ಇಂದಿರಾನಗರ್, ಬನ್ನೇರುಘಟ್ಟ,ಆಡುಗೋಡಿ ಮತ್ತು ಈಜಿಪುರದಲ್ಲಿದೆ.

ಬೆಲೆ
ಇದು ಶರ್ಟ್‌ಗಳಿಗೆ ತೊಳೆಯುವುದು ಮತ್ತು ಇಸ್ರ್ತಿ ಸೇರಿದಂತೆ ರೂ 19 ಅನ್ನು ನಿಗದಿಪಡಿಸುತ್ತಿದೆ. ಇನ್ನು ಸೂಟ್‌ಗಳಿಗೆ ರೂ 290, ಸೀರೆಗಳಿಗೆ ರೂ 190 ಇದರ ಬೆಲೆಯಾಗಿದೆ.

ಮೈ ವಾಶ್ ಏಜೆಂಟ್
ನೀವು ಈ ಅಪ್ಲಿಕೇಶನ್ ಬಳಸಿ ಸಂಬಂಧ ಪಟ್ಟವರಿಗೆ ಮಾಹಿತಿಯನ್ನು ಒದಗಿಸಿದರೆ ಮೈ ವಾಶ್ ಏಜೆಂಟ್ ನಿಮ್ಮ ಮನೆಗೆ ಬಂದು ಒಗೆಯುವ ಬಟ್ಟೆಗಳನ್ನು ಕೊಂಡೊಯ್ಯುತ್ತಾರೆ.

ತಜ್ಞರು
ಇನ್ನು ಸಂಸ್ಥೆಯ ತಜ್ಞರು ಬಟ್ಟೆಯನ್ನು ಶುಭ್ರವಾಗಿ ತೊಳೆದು ಐರನ್ ಮಾಡಿ ನಿಮಗೆ ತಲುಪಿಸುತ್ತಾರೆ.

ನಿಗದಿತ ಸಮಯ
ಇನ್ನು ನಿಗದಿತ ಸಮಯಕ್ಕೆ ನಿಮ್ಮ ಮನೆಯ ಬಾಗಿಲನ್ನು ನಿಮ್ಮ ಬಟ್ಟೆಗಳು ತಲುಪುತ್ತವೆ. ಹೀಗೆ ಬಟ್ಟೆ ಒಗೆಯುವ ನಿಮ್ಮ ತಲೆನೋವನ್ನು ತಪ್ಪಿಸಿಕೊಳ್ಳಬಹುದು.


Click it and Unblock the Notifications