Subscribe to Gizbot

ಬೆಂಗಳೂರಿನ ನೀರು ಸಮಸ್ಯೆಗೆ ಪರಿಹಾರವಾದ ಅಪ್ಲಿಕೇಶನ್

Written By:

ಬೆಂಗಳೂರಿನಲ್ಲಿ ನೀರಿಗಾಗಿ ಹಾತೊರೆಯುವಿಕೆ ತೀರದ ಸಮಸ್ಯೆಯಾಗಿಬಿಟ್ಟಿದೆ. ಎಲ್ಲಿ ಎಷ್ಟು ಗಂಟೆಗೆ ಬಿಬಿಎಮ್‌ಪಿಯಿಂದ ನೀರು ಪೂರೈಕೆಯಾಗುತ್ತದೆ ಎಂಬ ಸುದ್ದಿ ಒಮ್ಮೊಮ್ಮೆ ತಿಳಿಯುವುದೇ ಇಲ್ಲ. ಇಂದು ಬರುವ ನೀರು ನಾಳೆ ಬರುತ್ತದೆ ಹೀಗೆ ದಿನವೂ ಕಾದು ಕಾದು ಬರದ ನೀರಿಗಾಗಿ ಬೆವರಿಳಿಸುವ ಕೆಲಸ ನಡೆದೇ ನಡೆಯುತ್ತದೆ.

ಓದಿರಿ: ಚೆನ್ನೈ ಅಳಲಿಗೆ ದನಿಯಾದ ಟೆಲಿಕಾಂ ಕಂಪನಿಗಳು

ಆದರೆ ಬೆಂಗಳೂರಿನ ನಾಗರೀಕರ ಈ ಸಮಸ್ಯೆಯನ್ನು ತೀರಿಸಲೆಂದೇ ನೆಕ್ಸ್ಟ್ ಡ್ರಾಪ್ ಅಪ್ಲಿಕೇಶನ್ ನಿಮಗೆ ಸಹಾಯ ಮಾಡಲಿದೆ. ಇದರ ಸ್ಥಾಪಕರಾದ ಎಮಿಲಿ ಕುಂಪೆಲ್ ಹುಬ್ಬಳ್ಳಿಗೆ ಬಂದಾಗ ಸಿಲಿಕಾನ್ ಸಿಟಿಯ ಸಮಸ್ಯೆಯನ್ನು ತೀರಿಸುವುದಕ್ಕಾಗಿ ತಾವೊಂದು ಸ್ಟಾರ್ಟಪ್ ಅನ್ನು ಸ್ಥಾಪಿಸಲಿರುವೆವು ಎಂಬುದನ್ನು ಯೋಚಿಸಿ ಕೂಡ ಇರಲಿಲ್ಲ. ಕರ್ನಾಟಕದಲ್ಲೇ ನೆಕ್ಸ್ಟ್ ಡ್ರಾಪ್ 75,000 ನೋಂದಾಯಿತ ಬಳಕೆದಾರರನ್ನು ತಲುಪಿದೆ. ಪ್ರದೇಶಗಳಲ್ಲಿ ನೀರು ಪೂರೈಕೆಯ ಸಮಯವನ್ನು ತನ್ನ ನೋಂದಾಯಿತ ಬಳಕೆದಾರರಿಗೆ ಈ ಸಾಮಾಜಿಕ ಸ್ಟಾರ್ಟಪ್ ತಿಳಿಸುತ್ತದೆ. ಬನ್ನಿ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡೋಣ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೀರಿನ ಪೂರೈಕೆ

ಅಪ್ಲಿಕೇಶನ್ ಕಾರ್ಯನಿರ್ವಹಣೆ

ಈ ಅಪ್ಲಿಕೇಶನ್ ತಮ್ಮ ಏರಿಯಾದಲ್ಲಿ ಎಷ್ಟು ಗಂಟೆಗೆ ನೀರಿನ ಪೂರೈಕೆಯಾಗುತ್ತದೆ ಎಂಬುದನ್ನು ತಿಳಿಸುತ್ತದೆ. ತಮ್ಮ ನೋಂದಾಯಿತ ಗ್ರಾಹಕರಿಗೆ ಇದು ನಿರಂತರ ಸೇವೆಯನ್ನು ನೀಡುತ್ತಿದೆ.

ಮಾಹಿತಿ

ನೀರಿನ ಪೂರೈಕೆ ಕುರಿತು ಮಾಹಿತಿ

ನಮ್ಮ ಗ್ರಾಹಕರಿಗೆ ನೀರು ಪೂರೈಕೆಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ಒದಗಿಸುವ ಮೂಲಕ ನಮ್ಮ ಸ್ಟಾರ್ಟಪ್‌ನಿಂದ ಸಹಾಯವನ್ನು ಮಾಡುತ್ತಿದ್ದೇವೆ ಎಂಬುದು ನೆಕ್ಸ್ಟ್ ಡ್ರಾಪ್ ಡೈರೆಕ್ಟರ್ ಬಿಂದು ಸುಶೀಲ್ ಮಾತಾಗಿದೆ.

ನೀರಿನ ಕುರಿತ ಮಾಹಿತಿ

ನೀರಿನ ಕುರಿತು ಸಂಪೂರ್ಣ ಮಾಹಿತಿ

ಮೈಸೂರಿನ ನೆಕ್ಸ್ಟ್ ಡ್ರಾಪ್ ನೋಂದಾಯಿತೆಯಾಗಿರುವ ಮಧುಮಲ ಹೇಳುವಂತೆ ನೀರಿನ ಕುರಿತ ಮಾಹಿತಿಗಾಗಿ ಯಾರನ್ನೂ ಕೇಳಬೇಕಾಗಿಲ್ಲ. ನೆರೆಹೊರೆಯವರನ್ನು ಎಡತಾಕಬೇಕಾಗಿಲ್ಲ ಎಂಬುದಾಗಿದೆ.

ಸ್ಥಳ ಮ್ಯಾಪಿಂಗ್

ಉದ್ಯೋಗಿಗಳ ಸಂಖ್ಯೆ

9 ಜನರು ಪೂರ್ಣ ಉದ್ಯೋಗಿಗಳು ಸಂಸ್ಥೆಯಲ್ಲಿದ್ದು, ನೀರಿನ ಪೂರೈಕೆಗಾಗಿ ಸ್ಥಳ ಮ್ಯಾಪಿಂಗ್ ಅನ್ನು ಇದು ನಡೆಸುತ್ತಿದೆ.

ನಮ್ಮ ಟೋಲ್ ಫ್ರಿ ಸಂಖ್ಯೆ

ಮೊಬೈಲ್‌ನಲ್ಲಿ ಸಂದೇಶ

ನಮ್ಮ ಟೋಲ್ ಫ್ರಿ ಸಂಖ್ಯೆಗೆ ಬಳಕದಾರರು ಮಿಸ್ ಕಾಲ್ ನೀಡಿದ ನಂತರ, ಪೈಪ್ ನೀರು ಯಾವಾಗ ಬರುತ್ತದೆ ಎಂಬುದಾಗಿ ನಾವು ಸಂದೇಶವನ್ನು ಕಳುಹಿಸುತ್ತೇವೆ.

ಸಮಸ್ಯೆ ನಿವಾರಣೆ

ಮಹಿಳೆಯರ ಸಮಸ್ಯೆ ನಿವಾರಣೆ

ವಿಶೇಷವಾಗಿ ನೀರಿಗಾಗಿ ಕಾಯುವ ಮಹಿಳೆಯರ ಸಮಸ್ಯೆಯನ್ನು ಇದು ತಪ್ಪಿಸಿದ್ದು ನೆಕ್ಸ್ಟ್ ಡ್ರಾಪ್ ತಂಡ ಅದ್ಭುತ ಕಾರ್ಯನಿರ್ವಹಿಸುತ್ತಿದೆ.

ಸಹಾಯ

ಆರ್ಥಿಕ ಸಹಾಯ

ಆರಂಭದಲ್ಲಿ ಅಪ್‌ಡೇಟ್‌ಗಳನ್ನು ಸ್ವೀಕರಿಸುವುದಕ್ಕಾಗಿ ನಾವು ಗ್ರಾಹಕರಿಗೆ ದರವಿಧಿಸುತ್ತಿದ್ದೆವು. ಆದರೆ ಈಗ ನೆಕ್ಸ್ಟ್ ಡ್ರಾಪ್ ಯೂನಿಲಿವರ್‌ನೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದ್ದು ಬೆಂಗಳೂರು ನೀರು ಪೂರೈಕೆ ಮಂಡಳಿ ಮತ್ತು ನಮಗೆ ಆರ್ಥಿಕ ಸಹಾಯವನ್ನು ಮಾಡುವ ಒಳಚರಂಡಿ ಮಂಡಳಿಯೊಂದಿಗೆ ಪಾಲುದಾರಿಕೆಯಲ್ಲಿದ್ದೇವೆ ಎಂಬುದು ಮಾರ್ಕೆಟಿಂಗ್ ಮುಖ್ಯಸ್ಥರಾದ ರಯಾಜ್ ಮಾತಾಗಿದೆ.

ಕ್ರಿಯಾತ್ಮಕ

ಕ್ರಿಯಾತ್ಮಕ ವಿಚಾರ

ಕ್ರಿಯಾತ್ಮಕ ವಿಚಾರವು ನೆಕ್ಸ್ಟ್ ಡ್ರಾಪ್‌ಗೆ ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡುವಲ್ಲಿ ಸಹಕಾರವನ್ನು ನೀಡಿದೆ. ಬಿಲ್ ಮತ್ತು ಮೆಲಿಂದಾ ಫೌಂಡೇಶನ್, ನೈಟ್ ಫೌಂಡೇಶನ್ ಮತ್ತು ಗೂಗಲ್ ಆರ್ಥಿಕವಾಗಿ ಈ ಸಂಸ್ಥೆಗೆ ದೇಣಿಗೆಯನ್ನು ನೀಡುತ್ತಿದೆ.

ಇತರ ಭಾಗಗಳಿಗೂ ಸೇವೆ ಲಭ್ಯ

ಭಾರತದ ಇತರ ಭಾಗಗಳಿಗೂ ಸೇವೆ ಲಭ್ಯ

ಭಾರತದ ಇತರ ಭಾಗಗಳಿಗೂ ತಮ್ಮ ಸೇವೆಯನ್ನು ವಿಸ್ತರಿಸುವುದು ನೆಕ್ಸ್ಟ್ ಡ್ರಾಪ್ ಉದ್ದೇಶವಾಗಿದೆ. ನಿರ್ದಿಷ್ಟ ಟ್ಯಾಂಕ್‌ನಲ್ಲಿ ನೀರಿನ ಕೊರತೆಯಾದಾಗ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕೂಡ ಸಂಸ್ಥೆ ಕಾರ್ಯನಿರ್ವಹಿಸುವ ಯೋಜನೆಯಲ್ಲಿದೆ.

ಜನ್ಮ ತಾಳಿದ್ದು

ನೆಕ್ಸ್ಟ್ ಡ್ರಾಪ್ ಜನ್ಮ ತಾಳಿದ್ದು

ಎಮಿಲಿ ಕುಂಪೆಲ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ಪಿಎಚ್‌ಡಿ ವಿದ್ಯಾರ್ಥಿನಿಯಾಗಿದ್ದು "ಇಂಟರ್ಮಿಟೇಟ್ ವಾಟರ್ ಸಪ್ಲೈ ಇನ್ ಇಂಡಿಯಾ" ಎಂಬ ವಿಷಯವನ್ನು ಕುರಿತು ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಇದಕ್ಕೆ ಪೂರಕವಾಗಿಯೇ ನೆಕ್ಸ್ಟ್ ಡ್ರಾಪ್ ಜನ್ಮತಾಳಿದ್ದು ಟ್ರಯಲ್ ಬೇಸೀಸ್ 2010 ರಲ್ಲಿ ನಡೆದಿದೆ ಮತ್ತು ಹುಬ್ಬಳ್ಳಿ ಪರಿಸರದಲ್ಲಿರುವ 230 ಕುಟುಂಬಗಳಿಗೆ ಇದು ಸಹಾಯವನ್ನು ಮಾಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This social start-up sends its registered users notifications about the exact timings of water supply in their respective areas.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot