Home
ಸುದ್ದಿಜಾಲ

ಬೆಂಗಳೂರಲ್ಲಿ ಟೆಕ್ಕಿಗೆ ಪಂಗನಾಮ, ಆನ್‌ಲೈನ್‌ನಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ!

ಬೆಂಗಳೂರು (bangalore) ಇಂದು ಎಲ್ಲಾ ರೀತಿಯಲ್ಲೂ ಒಂದು ಹೆಜ್ಜೆ ಮುಂದಿದೆ. ಅಂದರೆ ಟೆಕ್ನಾಲಜಿ ಬೆಳವಣಿಗೆಯಲ್ಲಿ ಇರಬಹುದು, ಇತರೆ ಯಾವುದೇ ವಿಭಾಗದಲ್ಲಿ ಇರಬಹುದು. ಆದರೆ ಇಲ್ಲಿಂದಲೇ ಹಲವಾರು ವಂಚನೆಯ ಪ್ರಕರಣಗಳು ಸಹ ವರದಿಯಾಗುತ್ತಲೇ ಇರುತ್ತವೆ. ಈ ಮೂಲಕ ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ಜನರು ಇಲ್ಲಿ ಮೋಸ ಹೋಗುವುದುಂಟು.

ಹೌದು, ಬೆಂಗಳೂರು ದೇಶದ ಎಲ್ಲಾ ರಾಜ್ಯದ ಜನರಿಗೆ ನೆಲೆ ನೀಡುತ್ತದೆ. ಅಷ್ಟೇ ಯಾಕೆ ವಿದೇಶದಲ್ಲಿನ ಉದ್ಯೋಗಿಗಳು ಸಹ ಇಲ್ಲಿ ಬಂದು ಕೆಲವು ಮಾಡುವುದುಂಟು. ಅಷ್ಟರ ಮಟ್ಟಿಗೆ ಬೆಂಗಳೂರು ಜಗತ್ತಿನಲ್ಲಿ ವಿಶೇಷವಾದ ಸ್ಥಾನಮಾನ ಪಡೆದಿದೆ. ಆದರೆ ಇಲ್ಲಿ ಸೈಬರ್‌ ಅಪರಾಧಗಳು ಹೆಚ್ಚಾಗುತ್ತಿದ್ದು, ಇದರ ಭಾಗವಾಗಿ ಇಲ್ಲೋರ್ವ ಸಾಫ್ಟ್‌ವೇರ್ ಇಂಜಿನಿಯರ್ ಹಣ ಕಳೆದುಕೊಂಡಿದ್ದಾರೆ. ಹಾಗಿದ್ರೆ, ಇವರು ಬಾಡಿಗೆ ಮನೆ ಸರ್ಚ್‌ ಮಾಡುವಾಗ ಮೋಸ ಹೋಗಿದ್ದು ಹೇಗೆ? ಈ ರೀತಿಯ ವಂಚನೆಯಿಂದ ಎಚ್ಚರಿಕೆ ವಹಿಸುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಟೆಕ್ಕಿಗೆ ಪಂಗನಾಮ, ಆನ್‌ಲೈನ್‌ನಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ!

ಆನ್‌ಲೈನ್‌ನಲ್ಲಿ ಬಾಡಿಗೆ ಮನೆ ಹುಡುಕುವ ವೇಳೆ ಮೋಸ :ಸೈಬರ್ ವಂಚನೆಯ (Cyber fraud) ಪ್ರಕರಣದಲ್ಲಿ, ಬೆಂಗಳೂರಿನ ಟೆಕ್ಕಿಯೊಬ್ಬರು ಆನ್‌ಲೈನ್‌ನಲ್ಲಿ ಬಾಡಿಗೆ ಮನೆಗಾಗಿ ಹುಡುಕುತ್ತಿದ್ದಾಗ 64,000 ರೂ ಕಳೆದುಕೊಂಡಿದ್ದಾರೆ. ಇವರು ನಗರದ ವೈಟ್‌ಫೀಲ್ಡ್ ಪ್ರದೇಶದಲ್ಲಿ ಮನೆ ಹುಡುಕುತ್ತಿದ್ದರು. ಹುಡುಕಾಟದ ಸಮಯದಲ್ಲಿ ಮನೆಯ ಮಾಲೀಕರನ್ನು ಸಂಪರ್ಕಿಸಿದ್ದಾರೆ. ಆದರೆ, ಇದೇ ಇವರಿಗೆ ಮುಳುವಾಗಿದೆ.

ಈ ಸಂಬಂಧ ಟೈಮ್ಸ್ ನೌ ವರದಿ ಮಾಡಿದ್ದು, ವರದಿ ಪ್ರಕಾರ ಮೋಸಹೋದವರು ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ಹಾಗೆಯೇ ವೈಟ್‌ಫೀಲ್ಡ್‌ನಲ್ಲಿರುವ ಐಪಿಬಿ ಇಂಟರ್ನ್ಯಾಷನಲ್ ಟೆಕ್ ಪಾರ್ಕ್ ಬೆಂಗಳೂರಿನ ನಿವಾಸಿಯಾಗಿದ್ದಾರೆ. ಆದರೆ, ಹೊಸ ಫ್ಲಾಟ್‌ಗಾಗಿ ಇವರು ಆನ್‌ಲೈನ್‌ನಲ್ಲಿ ಹುಡುಕಾಟ ಆರಂಭಿಸಿದ್ದು, ಆಗಸ್ಟ್ 17 ರಂದು ಇವರು ಇಷ್ಟಪಡುವ ಕೆಲವು ಚಿತ್ರಗಳು ಕಣ್ಣಿಗೆ ಬಿದ್ದಿವೆ. ತಕ್ಷಣವೇ ಹೆಚ್ಚಿನ ವಿವರಗಳನ್ನು ಪಡೆಯಲು, ಟೆಕ್ಕಿ ಆನ್‌ಲೈನ್‌ ಪೋಸ್ಟ್‌ನಲ್ಲಿ ಉಲ್ಲೇಖ ಮಾಡಿದ್ದ ಫೋನ್ ಸಂಖ್ಯೆಗೆ ಸಂಪರ್ಕಿಸಿದ್ದಾರೆ.

ಆಕೆಯ ಕರೆಯನ್ನು ಪ್ರೀತಂ ಎಂಬ ವ್ಯಕ್ತಿ ಸ್ವೀಕರಿಸಿದ್ದು, ಆತ ತನ್ನನ್ನು ಫ್ಲಾಟ್ ಮಾಲೀಕನೆಂದು ಪರಿಚಯಿಸಿಕೊಂಡಿದ್ದಾನೆ. ಜೊತೆಗೆ ಟೆಕ್ಕಿಗೆ ಮನೆಯನ್ನು ಬಾಡಿಗೆಗೆ ನೀಡಲು ಒಪ್ಪಿಕೊಂಡಿದ್ದಾನೆ. ಒಪ್ಪಂದದ ಮುಂದಿನ ಪ್ರಕ್ರಿಯೆಗಳಿಗಾಗಿ ತನ್ನ ಮ್ಯಾನೇಜರ್ ಅನುಪಮ್ ಸಿಂಗ್ ಎಂಬುವರನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾನೆ. ಅದರಂತೆ ಸಿಂಗ್‌ಗೆ ಕರೆ ಮಾಡಿದಾಗ ಠೇವಣಿ ಮತ್ತು ಇತರ ಔಪಚಾರಿಕತೆಗಳಿಗಾಗಿ ಹಣವನ್ನು ಕಳುಹಿಸಲು ಕೇಳಿಕೊಂಡಿದ್ದಾನೆ.

ಇದನ್ನು ನಂಬಿದ ಟೆಕ್ಕಿ ಆತ ಕೇಳಿದ ಹಣವನ್ನು ಕಳುಹಿಸಿಕೊಟ್ಟಿದ್ದಾರೆ. ಆದಾಗ್ಯೂ, ಸ್ವಲ್ಪ ಸಮಯದ ನಂತರ, ಸಿಂಗ್ ಆಕೆಗೆ ಮತ್ತೆ ಕರೆ ಮಾಡಿ, ತಾಂತ್ರಿಕ ದೋಷದಿಂದ ಕೊನೆಯ ಪಾವತಿ ವಿಫಲವಾಗಿದೆ ಎಂದು ಉಲ್ಲೇಖಿಸಿ ಮತ್ತೊಮ್ಮೆ ಹಣವನ್ನು ಕಳುಹಿಸುವಂತೆ ಕೇಳಿಕೊಂಡಿದ್ದಾನೆ. ಈ ವೇಳೆ ಆ ವ್ಯಕ್ತಿ ಮತ್ತೆ ಹಣ ಕೇಳಿದ್ದರಿಂದ ಟೆಕ್ಕಿ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನು ಪ್ರಶ್ನೆ ಮಾಡಿದಾಗ ಆತ ಕರೆ ಕಟ್‌ ಮಾಡಿದ್ದಾನೆ.

ಇದಾದ ನಂತರದಲ್ಲಿ ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ಅರಿತ ಸಂತ್ರಸ್ತೆ ನಂತರ ದೂರು ದಾಖಲು ಮಾಡಲು ಮುಂದಾಗಿದ್ದಾರೆ. ಇನ್ನು ಬೆಂಗಳೂರಿನಂತಹ ಮಹಾನಗರಗಳಲ್ಲಿ ನಕಲಿ ಫ್ಲಾಟ್ ಲಿಸ್ಟ್‌ಗಳು ಮತ್ತು ಠೇವಣಿಗಳ ನೆಪದಲ್ಲಿ ಜನರನ್ನು ವಂಚಿಸುವ ಹಗರಣಗಳು ಹೊಸದೇನಲ್ಲ, ಅಂತಹ ಪ್ರಕರಣಗಳ ಬಗ್ಗೆ ಸದಾ ಜಾಗರೂಕರಾಗಿರುವುದು ಮುಖ್ಯವಾದ ವಿಷಯವಾಗಿದೆ.

ಯಾಕೆಂದರೆ ಸ್ಕ್ಯಾಮರ್‌ಗಳು ಕಾನೂನುಬದ್ಧವಾಗಿ ಕಾಣುವ ಆಸ್ತಿಗಳ ನಕಲಿ ಲಿಸ್ಟ್‌ ಅನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದರಿಂದಾಗಿ ಯಾವುದು ನಕಲಿ? ಅಥವಾ ಯಾವುದು ಅಸಲಿ? ಎಂದು ತಕ್ಷಣಕ್ಕೆ ಕಂಡುಬರುವುದಿಲ್ಲ. ಇದರಿಂದಾಗಿ ಕರೆ ಮಾಡಿ ಹಣ ಕೇಳಿದರೆ ಅಥವಾ ಅನಗತ್ಯ ಮಾಹಿತಿ ಕೇಳಿದರೆ ನೀವು ತಕ್ಷಣಕ್ಕೆ ಎಚ್ಚೆತ್ತುಕೊಳ್ಳಿ, ಇಲ್ಲವಾದರೆ ಇದೇ ರೀತಿಯ ಮೋಸ ನಿಮಗೂ ಆಗಬಹುದು.

ಇದೆಲ್ಲಕ್ಕಿಂತ ಮಿಗಿಲಾಗಿ ಯಾವುದೇ ಪ್ರಾಪರ್ಟಿ ಕುರಿತು ಯಾರನ್ನಾದರೂ ಸಂಪರ್ಕಿಸುವ ಮೊದಲು, ಅದು ಕಾನೂನುಬದ್ಧವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಕೆಲವು ರಿಸರ್ಚ್‌ ಮಾಡಿ. ಬಹು ವೆಬ್‌ಸೈಟ್‌ಗಳಲ್ಲಿ ಆಸ್ತಿ ಪಟ್ಟಿಯನ್ನು ಪರಿಶೀಲಿಸಿ ಮತ್ತು ಅದನ್ನು ಪ್ರತಿಷ್ಠಿತ ರಿಯಲ್ ಎಸ್ಟೇಟ್ ಏಜೆಂಟ್ ಅಥವಾ ಆಸ್ತಿ ನಿರ್ವಹಣಾ ಕಂಪನಿಯಿಂದ ಪಟ್ಟಿ ಮಾಡಲಾಗಿದೆಯೇ ಎಂದು ತಿಳಿದುಕೊಳ್ಳಿ.

ಟೆಕ್ಕಿಗೆ ಪಂಗನಾಮ, ಆನ್‌ಲೈನ್‌ನಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ!

ಜಮೀನುದಾರ ಅಥವಾ ಆಸ್ತಿ ವ್ಯವಸ್ಥಾಪಕರನ್ನು ವೈಯಕ್ತಿಕವಾಗಿ ಭೇಟಿ ಮಾಡುವುದು ಇನ್ನೂ ಉತ್ತಮ. ನೇರ ಭೇಟಿಗೆ ನಿರಾಕರಿಸಿದರೆ ಅಥವಾ ವಾಟ್ಸಾಪ್ ಕರೆ ಹಾಗೂ ಮೆಸೆಜ್‌ ಮೂಲಕವೇ ವ್ಯವಹಾರ ಮಾಡಲು ಮುಂದಾದರೆ ಅದು ನಕಲಿ ಎಂದು ಕಂಡುಕೊಳ್ಳಿ. ಇದರೊಂದಿಗೆ ನೀವು ಯಾವುದೇ ಹಣವನ್ನು ಮುಂಗಡವಾಗಿ ಪಾವತಿಸಬೇಡಿ. ಕಾನೂನುಬದ್ಧ ಭೂಮಾಲೀಕರು ಮತ್ತು ಆಸ್ತಿ ನಿರ್ವಾಹಕರು ನೀವು ಆಸ್ತಿಯನ್ನು ನೋಡುವ ಮೊದಲು ಮತ್ತು ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಠೇವಣಿ ಅಥವಾ ಬಾಡಿಗೆಯಂತಹ ಯಾವುದೇ ಹಣವನ್ನು ಮುಂಗಡವಾಗಿ ಪಾವತಿಸಲು ಕೇಳುವುದಿಲ್ಲ.

ಇದೆಲ್ಲಕ್ಕಿಂತ ಮಿಗಿಲಾಗಿ ಕಾನೂನುಬದ್ಧ ವೆಬ್‌ಸೈಟ್ ನಲ್ಲಿ ಮಾತ್ರ ಈ ಬಗ್ಗೆ ಮಾಹಿತಿ ಜಾಲಾಡಿ. ಬದಲಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ಬಾಡಿಗೆ ಮನೆ, ಪ್ಲಾಟ್‌ ಲಿಸ್ಟ್‌ ಬಗ್ಗೆ ಎಚ್ಚರದಿಂದಿರಿ. ಸ್ಕ್ಯಾಮರ್‌ಗಳು ಸಾಮಾನ್ಯವಾಗಿ ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್ ಅಥವಾ ಕ್ರೇಗ್ಸ್‌ಲಿಸ್ಟ್‌ನಂತಹ ಸಾಮಾಜಿಕ ಮಾಧ್ಯಮದಲ್ಲಿ ಬಾಡಿಗೆ ಲಿಸ್ಟ್‌ಗಳನ್ನು ಪೋಸ್ಟ್ ಮಾಡುತ್ತಾರೆ. ಈ ಪಟ್ಟಿಗಳಿಗೆ ರಿಪ್ಲೇ ಮಾಡುವಾಗ ಎಚ್ಚರಿಕೆ ಅನಿವಾರ್ಯ.

Best Mobiles in India

English summary
In a cyber fraud case, a Bengalure techie lost Rs 64,000 while searching for a house on rent online. He was looking for a house in Whitfield area of the city.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+