Subscribe to Gizbot

ಜೆಇಇ ಅಡ್ವಾನ್ಸ್‌ ಪರೀಕ್ಷೆ: ಬೆಂಗಳೂರಿನ ಅನಂತ್‌ ಕಾಮತ್‌ಗೆ 99ನೇ ರ್‍ಯಾಂಕ್‌

Posted By:

ಐಐಟಿ ಎಂಜಿನಿಯರಿಂಗ್‌ ಸೀಟುಗಳ ಪ್ರವೇಶಕ್ಕೆ ನಡೆದಿದ್ದ ಜೆಇಇ ಅಡ್ವಾನ್ಸ್‌ ಪರೀಕ್ಷೆ ಟಾಪ್‌ 100 ರ್‍ಯಾಂಕ್‌ಗಳಲ್ಲಿ ರಾಜ್ಯಕ್ಕೆ ಒಂದು ರ್‍ಯಾಂಕ್ ಲಭ್ಯವಾಗಿದೆ.

ಬೆಂಗಳೂರಿನ ಅನಂತ್‌ ಕಾಮತ್‌ ಆಲ್‌ ಇಂಡಿಯಾ ರ್‍ಯಾಂಕಿಂಗ್‌ನಲ್ಲಿ 99ನೇ ರ್‍ಯಾಂಕ್‌ ಪಡೆಯವ ಮೂಲಕ ರಾಜ್ಯದ ಮೊದಲ ಟಾಪರ್‌ ಆಗಿ ಹೊರ ಹೊಮ್ಮಿದ್ದಾರೆ.ಉಳಿದಂತೆ ರಾಜ್ಯದ ಅಭಿಜಿತ್‌ 238ನೇ ರ್‍ಯಾಂಕ್‌, ಜೆ.ಸುಹಾಸ್‌ 432ನೇ ರ್‍ಯಾಂಕ್‌, ಸುವದೀಪ್‌ ಪಾವುಲ್‌ 513, ಎನ್‌.ಪಿ. ಶ್ರೇಯಸ್‌ 554 ನೇ ರ್‍ಯಾಂಕ್‌ ಮತ್ತು ದೈವಿಕ್‌ ಸ್ವರೂಪ್‌ 789ನೇ ರ್‍ಯಾಂಕ್‌ ಪಡೆದುಕೊಂಡಿದ್ದಾರೆ.

ಜೆಇಇ ಅಡ್ವಾನ್ಸ್‌ ಪರೀಕ್ಷೆ: ಬೆಂಗಳೂರಿನ ಅನಂತ್‌ ಕಾಮತ್‌ಗೆ 99ನೇ ರ್‍ಯಾಂಕ್‌


ದೇಶದ ವಿವಿಧ ಐಐಟಿಗಳಲ್ಲಿರುವ 9,888 ಎಂಜಿನಿಯರಿಂಗ್‌ ಸೀಟುಗಳ ಪ್ರವೇಶಕ್ಕೆ ಏ.7ರಂದು ದೇಶಾವ್ಯಾಪಿ 14 ಲಕ್ಷ ಅಭ್ಯರ್ಥಿಗಳು ಜೆಇಇ ಪರೀಕ್ಷೆ ಬರೆದಿದ್ದರು. ಇವರಲ್ಲಿ ಸುಮಾರು 1.50 ಲಕ್ಷ ಅಭ್ಯರ್ಥಿಗಳು ಮೊದಲ ಸುತ್ತಿನ ಪರೀಕ್ಷೆಯಲ್ಲಿ ಪಾಸಾಗಿ, ಜೂ.2ರಂದು ನಡೆದ ಜೆಇಇ ಅಡ್ವಾನ್ಸ್‌ ಪರೀಕ್ಷೆ ಬರೆದಿದ್ದರು. ಪ್ರಸ್ತುತ ಫ‌ಲಿತಾಂಶದಲ್ಲಿ 14,000 ಅಭ್ಯರ್ಥಿಗಳು ಕೌನ್ಸೆಲಿಂಗ್‌ಗೆ ಅರ್ಹತೆ ಪಡೆದಿದ್ದಾರೆ.

ಇದನ್ನೂ ಓದಿ : ಕೇರಳ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot