15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

By Ashwath
|

ಎಳವೆಯಲ್ಲೇ ತಂದೆ ತಾಯಿಗಳು ತಮ್ಮ ಮಕ್ಕಳ ಪ್ರತಿಭೆ ಗುರುತಿಸಿ ಅದನ್ನು ಪ್ರೋತ್ಸಾಹಿಸಿದ್ರೆ ಮಕ್ಕಳು ಹೇಗೆ ಪ್ರತಿಭಾವಂತರಾಗುತ್ತಾರೆ ಎಂಬುದಕ್ಕೆ ಇಲ್ಲಿರುವ ಬಾಲಕಿಯೇ ಸಾಕ್ಷಿ. ತನ್ನ ಎಂಟನೇ ವರ್ಷ ವಯಸ್ಸಿನಲ್ಲೇ ವೆಬ್ ಡಿಸೈನಿಂಗ್ ಮಾಡಿ ವಿಶ್ವ ದಾಖಲೆ ಬರೆದ ಪೋರಿ ಇವಳು. ಈಗ 27 ಕಂಪೆನಿಗಳಿಗೆ ವೆಬ್‌ಸೈಟ್‌ ರೂಪಿಸಿದ ಬಾಲೆ ಇವಳು.

ಬಾಲ್ಯದಲ್ಲೇ ಕಂಪ್ಯೂಟರ್ ಕಲಿತು ಇಂದು ವಿಶ್ವದ ಎಲ್ಲಾ ಮಾಧ್ಯಮಗಳಲ್ಲಿ ಹೆಸರುವಾಸಿಯಾದ ಶ್ರೀಲಕ್ಷ್ಮೀ ಸುರೇಶ್‌ ಇಂದು ತನ್ನದೆಯಾದ ವೆಬ್‌ಸೈಟ್‌ ತೆರೆದು ಜಗತ್ತಿನ ಕಿರಿಯ ಸಿಇಒ ಎಂಬ ಪಟ್ಟವನ್ನು ಪಡೆದಿದ್ದಾಳೆ. ಈ ಬಾಲಕಿಯ ವಿಶಿಷ್ಟ ಸಾಧನೆಯ ಮಾಹಿತಿ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ಈ ಪ್ರತಿಭಾವಂತ ಬಾಲಕಿಯ ಸಾಧನೆಗಳನ್ನು ಓದಿಕೊಂಡು ಹೋಗಿ.

ಲಿಂಕ್‌ : ಈ ಕಲಾವಿದನ ಪ್ರತಿಭೆಗೆ ಒಂದು ಸಲಾಮ್‌ ಹೇಳಿ

ಟ್ವೀಟರ್‌ನಲ್ಲಿ ಗಿಜ್ಬಾಟ್‌ನ್ನು ಫಾಲೋಮಾಡಿ

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

8 ವರ್ಷವಿದ್ದಾಗ ವೆಬ್‌ಡಿಸೈನಿಂಗ್ ಮಾಡಿ ವಿಶ್ವದಾಖಲೆ ಬರೆದವಳು. ಈಕೆ ಹುಟ್ಟಿದ್ದು 1998ರಲ್ಲಿ ಕೇರಳದ ಕೋಯಿಕೋಡ್‌ನಲ್ಲಿ. ತಂದೆ ಸುರೇಶ್‌ ಮೆನನ್‌, ಕ್ಯಾಲಿಕಟ್‌ನಲ್ಲಿ ವಕೀಲ ವೃತ್ತಿಯಲ್ಲಿದ್ದಾರೆ. ತಾಯಿ ವಿಜು ಸುರೇಶ್‌ ಶಾಲಾ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

ನಾಲ್ಕನೇಯ ವರ್ಷದಲ್ಲೇ ಕಂಪ್ಯೂಟರ್‌ ಕಲಿಕೆ. ಎಲ್‌ಕೆಜಿಯಲ್ಲಿರುವಾಗ ಚಿತ್ರದಲ್ಲಿ ಆಸಕ್ತಿ ಹೊಂದಿದ್ದ ಈಕೆಗೆ ಒಂದು ದಿನ ತಂದೆ ಸುರೇಶ್‌ ಒಬ್ಬ ಹುಡುಗ ವೆಬ್‌ ಡಿಸೈನ್‌ ಮಾಡಿದ್ದ ಸುದ್ದಿಯನ್ನು ತೋರಿಸಿದ್ದರಂತೆ. ಇದೇ ಇವಳಿಗೆ ಪ್ರೇರಣೆ. ತಾನು ಯಾಕೆ ವೆಬ್‌ ಡಿಸೈನ್‌ ಮಾಡಬಾರದು ಎಂದು ಯೋಚಿಸಿ ವೆಬ್‌ ಡಿಸೈನ್‌ ಕಲಿಕೆ ಆರಂಭ.

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

ಆರಂಭದಲ್ಲಿ ತಂದೆಯಿಂದ ವೆಬ್‌ ಡಿಸೈನಿಂಗ್‌ ಪಾಠ. ನಂತರ ವೆಬ್‌ ಡಿಸೈನ್‌ ಬಗ್ಗೆ ಹೆಚ್ಚು ಕಲಿತು ತನ್ನ ನಾಲ್ಕನೆಯ ತರಗತಿಯಲ್ಲಿ ತಾನು ಕಲಿಯಲು ಹೋಗುತ್ತಿದ್ದ ಪ್ರಸೆಂಟೆಷನ್‌ ಹೈಯರ್‌ ಸೆಕೆಂಡರಿ ಸ್ಕೂಲ್‌ ವೆಬ್‌ಸೈಟ್‌ ರೂಪಿಸಿದ ಬುದ್ಧಿವಂತೆ. ತನ್ನ ಎಂಟನೇ ವರ್ಷ ವಯಸ್ಸಿನಲ್ಲೇ ಈ ಶಾಲೆಯ ವೆಬ್ ಡಿಸೈನಿಂಗ್ ಮಾಡಿ ವಿಶ್ವ ದಾಖಲೆ ಬರೆದ ಚತುರೆ ಈಕೆ.

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

ಶ್ರೀಲಕ್ಮೀ ಸಾಧನೆಯನ್ನು ಗುರುತಿಸಿದ್ದು ಅಮೆರಿಕಾದ ವೆಬ್‌ಮಾಸ್ಟರ್ಸ್ ಅಸೋಸಿಯೇಷನ್. ತನ್ನ ಸದಸ್ಯೆಯನ್ನಾಗಿ ಮಾಡಿಕೊಂಡ ಆ ಸಂಸ್ಥೆಯು ಈಕೆಯೇ ಅತೀ ಕಿರಿಯ ವೆಬ್ ಡಿಸೈನರ್ ಎಂದು ಘೋಷಿಸಿದ ನಂತರ ಶ್ರೀಲಕ್ಮೀ ಅದೆಷ್ಟು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾಳೋ ಅವಳಿಗೇ ನೆನಪಿಲ್ಲ. ಆ ಸಂಸ್ಥೆಯ 18 ವರ್ಷದೊಳಗಿನ ಏಕೈಕ ಸದಸ್ಯೆಯೆಂಬ ಕೀರ್ತಿಯೂ ಶ್ರೀಲಕ್ಷ್ಮಿಯದ್ದು.

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

ಇನ್ಫೋಗ್ರೂಪ್' ಎಂಬ ಮಾಹಿತಿ ತಂತ್ರಜ್ಞಾನ ಕಂಪನಿಗೆ ಶ್ರೀಲಕ್ಷ್ಮಿಯೇ ರಾಯಭಾರಿ. 'ವೈ-ಗ್ಲೋಬ್ಸ್ ಟೆಕ್ನಾಲಜೀಸ್ ಐಎನ್‌ಸಿ' ಎಂಬ ಮತ್ತೊಂದು ಕಂಪನಿಗೆ ಇವಳೇ ನಿರ್ದೇಶಕಿ.

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

ವೆಬ್‌ಸೈಟ್‌ ಸ್ಥಾಪಿಸಿದ ವಿಶ್ವದ ಮಾಧ್ಯಮದಲ್ಲೇ ಸುದ್ದಿಯಾಗಿದ್ದೇ ತಡ ನಂತರ ತನ್ನದೇ ಸಂಸ್ಥೆಯಾದ 'ಇ-ಡಿಸೈನ್‌ ಟೆಕ್ನಾಲಜೀಸ್‌' ಎಂಬ ವೆಬ್‌ಸೈಟ್‌ ಸಂಸ್ಥೆಗೆ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದಾಳೆ.ಅಷ್ಟೇ ಅಲ್ಲದೇ ಈ ವೆಬ್‌ಸೈಟ್‌ ಮೂಲಕ ಕೆರಳ ಸರ್ಕಾರದ stateofkerala.in ವೆಬ್‌ಸೈಟ್‌ನ್ನು ತಯಾರಿಸುತ್ತಿದ್ದಾಳೆ.

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

ವೆಬ್‌ಮಾಸ್ಟರ್ಸ್ ಅಸೋಸಿಯೇಷನ್ ಶ್ರೀಲಕ್ಷ್ಮೀ ಪ್ರತಿಭೆಯನ್ನು ಗುರುತಿಸಿದ್ದೇ ತಡ ನಂತರ ಕೆರಳ ರಾಜ್ಯ ಸರ್ಕಾರದಿಂದ ಗೌರವ, 2009ರಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ ನೀಡಿ ಗೌರವಿಸಿದ ನಂತರ ಇದುವರಗೂ 30ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಶ್ರೀಲಕ್ಷ್ಮೀ ಪಡೆದಿದ್ದಾಳೆ.

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

ಶ್ರೀಲಕ್ಷ್ಮೀ ಇದುವರಗೂ www.kozhikodedeaf.org ಸೇರಿದಂತೆ 27ಕ್ಕೂ ಹೆಚ್ಚು ವೆಬ್‌ಸೈಟ್‌ಗಳನ್ನು ಡಿಸೈನ್‌ ಮಾಡಿದ್ದಾಳೆ.

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

ಈಗ ಶ್ರೀಲಕ್ಷ್ಮೀ ತಾನೇ ವೆಬ್‌ಸೈಟ್‌ ಡಿಸೈನ್‌ ಮಾಡಿಕೊಟ್ದಂತಹ ಪ್ರಸೆಂಟೆಷನ್‌ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ 8ನೇ ತರಗತಿಯನ್ನು ಓದುತ್ತಿದ್ದಾಳೆ.

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

15ರ ಬಾಲಕಿಯಿಂದ ವೆಬ್‌ ಡಿಸೈನಿಂಗ್‌ನಲ್ಲಿ ವಿಶ್ವದಾಖಲೆ

ಇಷ್ಟೆಲ್ಲಾ ಹೇಳಿದ ಮೇಲೆ ನೀವು ಪ್ರತಿಭಾವಂತ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ವಿನ್ಯಾಸ ಮಾಡಿದ ವೆಬ್‌ಸೈಟ್‌ ನೋಡಬೇಕು ತಾನೆ ? ಶ್ರೀಲಕ್ಷ್ಮೀ ವೆಬ್‌ಸೈಟ್‌ಗಾಗಿ ಇಲ್ಲಿ ಭೇಟಿ ನೀಡಿ www.sreekutty.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X