ಬೆಂಗಳೂರಿಗರಿಗಾಗಿ ಡ್ರಾಪ್‌ಕೆಫೆಯಿಂದ ಆನ್‌ಲೈನ್ ಕಾಫಿ

  By Shwetha
  |

  ಇಂದಿನ ಆನ್‌ಲೈನ್ ಯುಗದಲ್ಲಿ ಪ್ರತಿಯೊಂದನ್ನು ನೀವು ಕುಳಿತಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಆಹಾರ ವಸ್ತುಗಳಿಂದ ಹಿಡಿದು ನಿಮ್ಮ ದಿನನಿತ್ಯದ ಹಲವಾರು ಅಗತ್ಯಗಳಿಗೆ ಆನ್‌ಲೈನ್‌ಗಳ ಬಳಕೆಯನ್ನು ನಮಗೆ ಮಾಡಿಕೊಳ್ಳಬಹುದಾಗಿದೆ. ಆದರೆ ಆನ್‌ಲೈನ್‌ನಲ್ಲಿ ಕಾಫಿ ಸಿಗುವುದಿದ್ದರೆ ಇದು ಕಾಫಿ ಪ್ರಿಯರ ಮನದಲ್ಲಿ ಆಹ್ಲಾದವನ್ನೆಬ್ಬಿಸುವುದು ಖಂಡಿತ.

  ಓದಿರಿ: ಅಧಿಕ ಲಾಭ ಗಳಿಸುತ್ತಿರುವ ಕಡಿಮೆ ಬಜೆಟ್‌ನ ಬೆಂಗಳೂರು ಕಂಪೆನಿಗಳು

  ಹೌದು ಇಂದಿನ ಲೇಖನದಲ್ಲಿ ನಾವು ಮಾಹಿತಿ ನೀಡುತ್ತಿರುವುದು ಬೆಂಗಳೂರಿನಲ್ಲಿ ದೊರೆಯುತ್ತಿರುವ ಆನ್‌ಲೈನ್ ಕಾಫಿ ವಿತರಣೆಯ ಕುರಿತಾಗಿದೆ. ಡ್ರಾಪ್‌ಕೆಫೆ ಭಾರತದ ಪ್ರಥಮ ಆನ್‌ಲೈನ್ ಕಾಫಿ ಬ್ರ್ಯಾಂಡ್ ಆಗಿದ್ದು ಕಾಫಿ ಸರಬರಾಜಿನೊಂದಿಗೆ ಇತರ ಪೇಯಗಳನ್ನು ಇವರು ಒದಗಿಸುತ್ತಾರೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಮತ್ತಷ್ಟು ಮಾಹಿತಿಗಳನ್ನು ನಾವು ನೀಡುತ್ತಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಡ್ರಾಪ್‌ಕೆಫೆ

  ಗ್ರಾಹಕರ ಅಭಿರುಚಿಗೆ ತಕ್ಕಂತೆ ಡ್ರಾಪ್‌ಕೆಫೆ ಕಾಫಿ ವಿತರಣೆಯನ್ನು ಕಾಫಿ ಪ್ರಿಯರಿಗಾಗಿ ಮಾಡುತ್ತಿದೆ. ಕಾಫಿ ತಯಾರಿಕಾ ವಿಧಾನದಲ್ಲಿ ಹೊಸ ಅನ್ವೇಷಣೆಯನ್ನು ಮಾಡುತ್ತಾ ಗ್ರಾಹಕರಿಗೆ ವಿಭಿನ್ನವಾದ ಕಾಫಿ ಸ್ವಾದವನ್ನು ಈ ವೆಬ್‌ಸೈಟ್ ಉಣಬಡಿಸುತ್ತಿದೆ.

  ಡ್ರಾಪ್‌ಕೆಫೆ

  ಬೆಂಗಳೂರಿನಲ್ಲೇ 15 ಸ್ಥಳಗಳಲ್ಲಿ ಈ ವೆಬ್‌ಸೈಟ್ ಸೇವೆ ಲಭ್ಯವಿದೆ.

  ಡ್ರಾಪ್‌ಕೆಫೆ

  ಈ ವೆಬ್‌ಸೈಟ್ ಪಾಲುದಾರರಾಗಲು ನಿಮ್ಮ ಹೆಸರು, ಇಮೇಲ್ ವಿಳಾಸ, ಬೆಂಗಳೂರಿನ ನೀವಿರುವ ಸ್ಥಳ ಮತ್ತು ನೀವು ಇನ್ನಿತರ ವಿವರಗಳನ್ನು ನಮೂದಿಸಿದರೆ ಸಾಕು.

  ಡ್ರಾಪ್‌ಕೆಫೆ

  ಆಧುನಿಕ ವಿಧಾನಗಳನ್ನು ಕಾಫಿ ತಯಾರಿಕೆಯಲ್ಲಿ ಇವರು ಬಳಸಿಕೊಳ್ಳುತ್ತಿದ್ದು ಕಾಫಿ ಪ್ರಿಯರಿಗಾಗಿಯೇ ಈ ವೆಬ್‌ಸೈಟ್ ಆರಂಭಗೊಂಡಿದೆ.

  ಡ್ರಾಪ್‌ಕೆಫೆ

  ಕಾಫಿ ಪ್ರಿಯ ದಂಪತಿಗಳಾದ ಚೈತನ್ಯ ಚಿತ್ತ, ಲಕ್ಷ್ಮೀ ದಂಪತಿ ಆನ್‌ಲೈನ್ ಕಾಫಿ ಉದ್ದಿಮೆಯ ಹರಿಕಾರರಾಗಿದ್ದಾರೆ.

  ಡ್ರಾಪ್‌ಕೆಫೆ

  ಖಾಸಗಿ ಸಂಸ್ಥೆಗಳಲ್ಲಿ ಎಲ್ಲಾ ಸಮಯವೂ ರುಚಿಕರವಾದ ಕಾಫಿ ದೊರೆಯುವುದು ದುಸ್ತರವಾಗಿದೆ. ಕೆಲವರಿಗೆ ಮಿಶನ್ ಕಾಫಿ ಇಷ್ಟವಾಗುವುದಿಲ್ಲ ಮತ್ತು ಹೊರಗಡೆ ಹೋಗಿ ಕಾಫಿ ಕುಡಿದು ಬರುವಷ್ಟು ಸಮಯ ಅವರಲ್ಲಿರುವುದಿಲ್ಲ. ಅದಕ್ಕಾಗಿಯೇ ಈ ವೆಬ್‌ಸೈಟ್ ಅನ್ನು ಆರಂಭಿಸಲಾಗಿದೆ ಎಂಬುದು ದಂಪತಿಗಳ ಮಾತಾಗಿದೆ.

  ಡ್ರಾಪ್‌ಕೆಫೆ

  ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಡ್ರಾಫ್ ಕೆಫೆ ಕಾರ್ಯನಿರ್ವಹಿಸುತ್ತದೆ.

  ಡ್ರಾಪ್‌ಕೆಫೆ

  ಫಿಲ್ಟರ್ ಕಾಫಿಯ ಬೆಲೆ ರೂ 50 ಆಗಿದ್ದರೆ ಇತರೆ ಫ್ಲೇವರ್ ಕಾಫಿಯ ಬೆಲೆ ರೂ 90 ರಿಂದ 120 ರೂಪಾಯಿಗಳಾಗಿವೆ.

  ಡ್ರಾಪ್‌ಕೆಫೆ

  ಫಿಲ್ಟರ್ ಕಾಫಿ, ಕೆಫೆ ಲಾಟ್ಟೆ, ಮಿಲ್ಕ್ ಶೇಕ್, ಸ್ಯಾಂಡ್ ವಿಚ್, ಚಿಲ್ಲಿ ಚಿಕನ್ ಬರ್ಗರ್‌ಗಳು ಇಲ್ಲಿ ದೊರೆಯುತ್ತವೆ.

  ಡ್ರಾಪ್‌ಕೆಫೆ

  ಕಾಫಿ ಆರ್ಡರ್ ಮಾಡಿದ ಒಂದು ಗಂಟೆಯ ಒಳಗೆ ಡೆಲಿವರಿ ಬಾಯ್‌ಗಳು ಕಾಫಿಯನ್ನು ನಿಮಗೆ ತಲುಪಿಸುತ್ತಾರೆ. ವೆಬ್‌ಸೈಟ್ ಲಿಂಕ್ ಇಲ್ಲಿದೆ. http://www.dropkaffe.com/.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  DropKaffe coffees are handcrafted using freshly roasted beans and all natural ingredients with zero preservatives. Enjoy the indulgence of coffee like never before.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more