Subscribe to Gizbot

ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ಫ್ರೀ ವೈಫೈ ಹಾಟ್‌ಸ್ಪಾಟ್‌

Posted By:

ಸಿಲಿಕಾನ್‌ಸಿಟಿ ಎಂದೇ ಪ್ರಸಿದ್ದವಾಗಿರುವ ಬೆಂಗಳೂರಿಗೆ ಮತ್ತೊಂದು ಕಿರೀಟ ಸದ್ಯದಲ್ಲೇ ಸಿಗಲಿದೆ.

ನಗರದ ಬ್ರಿಗೇಡ್‌ ರೋಡ್‌ ಮತ್ತು ಎಂಜಿ ರೋಡ್‌ನಲ್ಲಿ ಫ್ರೀ ವೈಫೈ ಹಾಟ್‌ಸ್ಪಾಟ್‌ ನಿರ್ಮಿಸಲು ಯೋಜನೆ ರೂಪಿಸಿದ್ದು, ಈ ಮೂಲಕ ಉಚಿತ ವೈಫೈ ಹಾಟ್‌ಸ್ಪಾಟ್‌ ಸಂಪರ್ಕ ಪಡೆದ ದೇಶದ ಮೊದಲ ನಗರ ಎಂಬ ಪ್ರಖ್ಯಾತಿ ಬೆಂಗಳೂರಿಗೆ ಸಿಗಲಿದೆ.

ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ಫ್ರೀ ವೈಫೈ ಹಾಟ್‌ಸ್ಪಾಟ್‌

ಮುಂದಿನ ತಿಂಗಳಿನಿಂದ ಈ ಹಾಟ್‌ಸ್ಪಾಟ್‌ ಪೈಲಟ್‌ ಯೋಜನೆ ಆರಂಭವಾಗಲಿದ್ದು, 6 ತಿಂಗಳ ಕಾಲ ಈ ಹಾಟ್‌ಸ್ಪಾಟ್‌ ಸಂಪರ್ಕ ಈ ಎರಡು ಕಮರ್ಷಿಯಲ್‌ ನಗರಗಳಲ್ಲಿ ಲಭ್ಯವಿದೆ. ಇನ್ಫೋಸಿಸ್‌ ಮಾಜಿ ನಿರ್ದೆಶಕ ಮೋಹನ್‌ದಾಸ್‌ ಪೈ ನೇತೃತ್ವದಲ್ಲಿ 6 ತಿಂಗಳ ನಂತರ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಮಿತಿ ( Information and Communication Technology panel) ಈ ಹಾಟ್‌ಸ್ಪಾಟ್‌ ಬಗ್ಗೆ ಅಧ್ಯಯನ ನಡೆಸಿ ತನ್ನ ವರದಿ ನೀಡಲಿದೆ.

ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದ್ದರೂ, ಮೊಬೈಲ್‌ ಇಂಟರ್‌ನೆಟ್‌ ಸೌಲಭ್ಯದಲ್ಲಿ ಇನ್ನೂ ಕೆಲ ಸಮಸ್ಯೆಗಳಿವೆ. ಹೀಗಾಗಿ ಐಸಿಟಿ (Information communication Technology) ಗ್ರೂಪ್‌ನವರು ರಾಜ್ಯ ಮುಖ್ಯಮಂತ್ರಿಯವರಿಗೆ ನೀಡಿದ ಶಿಫಾರಸು ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವೈಫೈ ಹಾಟ್‌ಸ್ಪಾಟ್‌ ಯೋಜನೆ ಆರಂಭಗೊಳ್ಳಲಿದೆ. ಬೆಂಗಳೂರು ಮೂಲದ ಇಂಟರ್‌ನೆಟ್‌ ಸರ್ವಿಸ್‌ ನೀಡುವ D-VoiS ಸಂಸ್ಥೆ ಈ ಪೈಲೆಟ್‌ ಯೋಜನೆಯ ನೇತೃತ್ವವನ್ನು ವಹಿಸಿದೆ.

ಲಿಂಕ್‌ : ಮೊಬೈಲ್ ಅಂದ್ರೆ ನೋಕಿಯಾ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot