Subscribe to Gizbot

ಪ್ರಥಮ ತಂತ್ರಜ್ಞಾನ ಶೃಂಗಸಭೆಗೆ ಬೆಂಗಳೂರು ಸಜ್ಜು!!

Written By:

ಐಟಿ, ಬಿಟಿ ಮಾತ್ರವಲ್ಲದೇ ನ್ಯಾನೊ, ಆನಿಮೇಷನ್ ಮತ್ತು ಗೇಮಿಂಗ್‌ನಲ್ಲಿ ಕರ್ನಾಟಕ ಜಾಗತಿಕವಾಗಿ ಬೆಳೆಯುತ್ತಿರುವುದರಿಂದ ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ನವೆಂಬರ್‌ 16 ರಿಂದ 18 ರವರೆಗೆ ಪ್ರಥಮ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಹಮ್ಮಿಕೊಂಡಿದೆ.!!

ಈ ಬಗ್ಗೆ ಮಾಹಿತಿ ನೀಡಿದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಇಲ್ಲಿಯವರೆಗೆ ಐಟಿ, ಬಿಟಿ ಮತ್ತು ಇತರ ಕ್ಷೇತ್ರಗಳ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತ್ಯೇಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅವೆಲ್ಲವನ್ನೂ ಒಂದುಗೂಡಿಸಿ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರಥಮ ತಂತ್ರಜ್ಞಾನ ಶೃಂಗಸಭೆಗೆ ಬೆಂಗಳೂರು ಸಜ್ಜು!!

ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ದೇಶದ ಅತ್ಯಂತ ಬೃಹತ್‌ ತಂತ್ರಜ್ಞಾನ ಮೇಳವಾಗಿಸಲು ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು. ಬೃಹತ್‌ ತಂತ್ರಜ್ಞಾನ ಶೃಂಗಮೇಳದಲ್ಲಿ 300 ಪ್ರದರ್ಶಕರು ಮತ್ತು 10 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವರು' ಎಂದು ಸಚಿವರು ತಿಳಿಸಿದರು.

ಪ್ರಥಮ ತಂತ್ರಜ್ಞಾನ ಶೃಂಗಸಭೆಗೆ ಬೆಂಗಳೂರು ಸಜ್ಜು!!

ಇನ್ನು ಎಲೆಕ್ಟ್ರಾನಿಕ್ಸ್‌, ಸೈಬರ್ ಸೆಕ್ಯುರಿಟಿ, ರಕ್ಷಣೆ, ದೂರಸಂಪರ್ಕ, ರೋಬಾಟಿಕ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಜೈವಿಕ ತಂತ್ರಜ್ಞಾನ, ವೈದ್ಯಕೀಯ ಮುಂತಾದ ಕ್ಷೇತ್ರಗಳ ಅತ್ಯಾಧುನಿಕತಂತ್ರಜ್ಞಾನಗಳ ಪ್ರದರ್ಶನ ಮತ್ತು ವಿಚಾರಸಂಕಿರಣಗಳು ಶೃಂಗಸಭೆಯಲ್ಲಿ ನಡೆಯಲಿದೆ.!!

ಓದಿರಿ: ಇನ್ನು ಆಧಾರ್ -ಪ್ಯಾನ್‌ ಕಾರ್ಡ್ ಲೀಂಕ್ ಮಾಡಿಲ್ಲವೇ?..ಹಾಗಾದ್ರೆ ಇಲ್ಲಿ ನೋಡಿ!!

English summary
Technology Summit to be step closer to joining more technology.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot